Link copied!
Sign in / Sign up
17
Shares

ಶಿಶ್ನದ ಬಗ್ಗೆ ನೀವು ಹಿಂದೆಂದೂ ಕೇಳಿರದ 8 ಚಿತ್ತಾಕರ್ಷಕ ಸಂಗತಿಗಳು!

ನಿಮಗೆ ಈಗಾಗಲೇ ಜನನಾಂಗಳ ಬಗ್ಗೆ  ಕೆಲವೊಂದು ವಿಷಯಗಳು ತಿಳಿದಿರಬಹುದು. ಆದರೆ ಶಿಶ್ನದ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರದ, ಆದರೆ ತಿಳಿದಿರಬೇಕಾದ ವಿಷಯಗಳು ಬಹಳಷ್ಟಿವೆ. ನೀವು ಶಿಶ್ನದ ಅನಾಟಮಿ ಅಥವಾ ಅಂಗರಚನಾಶಾಸ್ತ್ರ ಗಮನಿಸಿದರೆ, ನಮಗೆ ದೊರಕುವ ಸಂಗತಿಗಳು ಹೆಚೆಚ್ಚು ವಿಚಿತ್ರವಾಗುತ್ತಾ ಹೋಗುತ್ತವೆ. ಆ ವಿಚಿತ್ರ ಸಂಗತಿಗಳಲ್ಲಿ ಕೆಲವೊಂದನ್ನು ನಿಮ್ಮ ಮುಂದೆ ನಾವು ಈಗ ಇಡುತ್ತಿದ್ದೇವೆ ಓದಿರಿ :

೧. ಇದನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸಲು ಆಗುವುದಿಲ್ಲ

ಎಷ್ಟೇ ಪ್ರಮಾಣದ ಉದ್ದೇಶಪೂರ್ವಕ ಏಕಾಗ್ರತೆಯು ಕೂಡ ಅದು ನಿಮಿರುವಂತೆ ಮಾಡಲು ಅಥವಾ ನಿಮಿರುವುದು ಪುನಃ ಕೆಳಗೆ ಇಳಿಯುವಂತೆ ಮಾಡಲು ಸಾಧ್ಯವಿಲ್ಲ. ಶಿಶ್ನವು ಮಾನವನ ಸ್ವಯಂಚಾಲಿತ ನರಮಂಡಲದಿಂದ ನಿಯಂತ್ರಿಸಲ್ಪಡುತ್ತದೆ. ಈ ನರಮಂಡಲವೇ ನಮ್ಮ ನಾಡಿ ಮಿಡಿತ, ಜೀರ್ಣಕ್ರಿಯೆ ಮತ್ತು ಹಲವು ಪ್ರಜ್ಞೆಯಿಲ್ಲದ ಕಾರ್ಯಗಳನ್ನ ನಿಯಂತ್ರಿಸುವುದು.

೨. ಅವು ಮುರಿತಕ್ಕೆ ಒಳಗಾಗಬಹುದು

ಶಿಶ್ನವು ಮುರಿಯಲು ಸಾಧ್ಯವಾಗದಂತಹ ಅಂಗ ಅಲ್ಲ. ಒರಟು ಸಂಭೋಗ ಕಾರ್ಯದ ವೇಳೆ ಅಥವಾ ಕೆಲವೊಮ್ಮೆ ನಿಮಿರಿದಾಗ ನೆಲೆದ ಮೇಲೆ ಎಡವಿ ಬಿದ್ದಾಗ ಅಥವಾ ಗೋಡೆಗೆ ಬಡಿಸಿಕೊಂಡಾಗ, ಅದು ಮುರಿತಕ್ಕೆ ಒಳಗಾಗಬಹುದು. ಈ ಮುರಿತದ ನಂತರ ಕೆಲವೊಮ್ಮೆ ಮುರಿಯುವ ಸದ್ದು ಕೇಳಿಬರಬಹುದು ಮತ್ತು ಇದರಿಂದ ವಾರಗಟ್ಟಲೆ ನೋವು ಅನುಭವಿಸಬಹುದು. ಇದೊಂದು ಗಂಭೀರ ಪ್ರಕರಣ ಆಗಿದ್ದು, ಕೂಡಲೇ ವೈದ್ಯರನ್ನ ಭೇಟಿ ಮಾಡಬೇಕು.

೩. ಅವುಗಳು ಶರ ವೇಗದಲ್ಲಿ ಹೊರಸೂಸುತ್ತವೆ

ಗಂಡಸಿನ ವೀರ್ಯವು ನೀವು ನಂಬಲಾರದ ಶರ ವೇಗದಲ್ಲಿ ದೇಹದಿಂದ ಹೊರಬರುತ್ತದೆ. ವಾಸ್ತವವಾಗಿ, ಗಂಡಸರು ಸರಾಸರಿ ಘಂಟೆಗೆ 45km ವೇಗದಲ್ಲಿ ವೀರ್ಯವನ್ನು ಹೊರಹಾಕುವರು.

೪. ಸುಟ್ಟ ಗಾಯಗಳಿಗೆ ಇವು ಸಹಾಯ ಮಾಡುತ್ತವೆ

ಇದನ್ನು ಸಂಶೋಧಕರು ಮೊದಲ ಬಾರಿಗೆ ಹೇಗೆ ಕಂಡು ಹಿಡಿದರೋ ಗೊತ್ತಿಲ್ಲ. ಆದರೆ, ಸುಟ್ಟ ಗಾಯ ಆದವರಿಗೆ ಶಿಶ್ನದ ತುದಿಯ ಚರ್ಮವು ಬಹಳಷ್ಟು ಉಪಯೋಗಕ್ಕೆ ಬರುತ್ತದೆ. ಚರ್ಮ ಸುಟ್ಟ ಜಾಗಕ್ಕೆ ಶಿಶ್ನದ ತುದಿಯ ಚರ್ಮವನ್ನ ನಾಟಿ ಮಾಡಬಹುದು.

೫. ಅವುಗಳಿಗೂ ಸ್ಟ್ಯಾಂಡರ್ಡ್ ಸೈಜ್ ಇದೆ

ನೀವು ಅದು ಕೆಲವರಲ್ಲಿ ಅಷ್ಟು ಉದ್ದವಿರುತ್ತದೆ, ಅಷ್ಟು ದೊಡ್ಡದು ಇರುತ್ತದೆ ಎಂಬ ವದಂತಿಗಳನ್ನ ಕೈಬಿಡಬಹುದು. ಏಕೆಂದರೆ, ಸಾಮಾನ್ಯವಾಗಿ, ಬಹುತೇಕ ಶಿಶ್ನಗಳು ನಿಮಿರಿದಾಗ 6-7 ಇಂಚುಗಳಷ್ಟು ಉದ್ದವಿರುತ್ತವೆ. ಕೆಲಸ ಆಗುವುದಿಕ್ಕೆ ಇಷ್ಟಿದ್ದರೆ ಸಾಕು. ಏಕೆಂದರೆ, ಯೋನಿಯು ಸಹಜವಾಗಿ 3-4 ಇಂಚುಗಳಷ್ಟು ಆಳ ಹೊಂದಿರುತ್ತದೆ.

೬. ಅವುಗಳಿಗೆ ಬಾಗುವ ಶಕ್ತಿ ಜಾಸ್ತಿ ಇರುತ್ತದೆ

ಹೌದು ಅದು ಮುಟ್ಟಲಿಕ್ಕೆ ಗಟ್ಟಿಯಾದ ಕೋಲು ರೀತಿ ಇದ್ದರು, ಸಂಭೋಗದ ವೇಳೆ ಅದು ತಿರುಗುಬಾಣದ ಆಕಾರಕ್ಕೂ ಕೂಡ ಬಾಗಬಹುದು. ಹೌದು, ಇವುಗಳು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಫ್ಲೆಕ್ಸಿಬಲ್ ಆಗಿರುತ್ತವೆ.

೭. ಒಬ್ಬರಿಗೆ ಎರಡು ಶಿಶ್ನ ಇರಲು ಸಾಧ್ಯವಿದೆ

ಹೌದು ಇದು ಯಾರೂ ಕೂಡ ಅಪೇಕ್ಷಿಸದ ಡಬಲ್ ಡೀಲ್. 50 ಲಕ್ಷ ಗಂಡಸರಲ್ಲಿ ಒಬ್ಬರು ಡೈಫಲ್ಲಿಯ ಎಂದರೆ ಎರಡು ಶಿಶ್ನಗಳನ್ನ ಹೊಂದಿರುತ್ತಾರೆ.

೮. ಶರವೇಗದ ಬೆಳವಣಿಗೆ

ನಿಮಿರಿಲ್ಲದ ಶಿಶ್ನವು ನಿಮಿರಿದಾಗ ತನ್ನ ಗಾತ್ರ ಬದಲಾಯಿಸಿಕೊಳ್ಳುತ್ತದೆ. ವಾಸ್ತವದಲ್ಲಿ ಶಿಶ್ನವು ಸುಮಾರು ತನ್ನ ನೈಜ್ಯ ಗಾತ್ರಕ್ಕಿಂತ 3 ಪಟ್ಟು ಹೆಚ್ಚು ಗಾತ್ರವನ್ನ ನಿಮಿರಿಕೊಂಡಾಗ ಪಡೆದುಕೊಳ್ಳುತ್ತದೆ. ಸಣ್ಣ ಬದಲಾವಣೆ ಅಲ್ಲವೇ ಅಲ್ಲ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon