Link copied!
Sign in / Sign up
12
Shares

ಅದನ್ನ ಮಾಡುವಾಗ ಶಿಶ್ನ ಮುರಿದೀತು ಜೋಕೆ !

ಇದು ಕೇವಲ ಅಂತೇ ಕಂತೆ ಅಲ್ಲ, ನಿಜವಾಗಿಯೂ ಶಿಶ್ನವು ಮುರಿಯಬಹುದು. ಆದರೆ ಶಿಶ್ನದಲ್ಲಿ ಮೂಳೆಗಳು ಇಲ್ಲದ ಕಾರಣ, ಇದು ನೀವು ಕೈ ಮುರಿದುಕೊಂಡಾಗ ಆಗುವಂತೆ ಅಲ್ಲ.

ಇದನ್ನು ಶಿಶ್ನ ಮುರಿತ ಅಥವಾ ಪೆನೈಲ್ ಫ್ರಾಕ್ಟ್ಚರ್ ಎನ್ನುತ್ತಾರೆ. ಇದು ನೆಟ್ಟಗೆ ನಿಂತ ಶಿಶ್ನದ ಮೇಲೆ ಒತ್ತಡ ಬಿದ್ದಾಗ ಅಥವಾ ಬಲಪ್ರಯೋಗ ಆದಾಗ ಆಗುವಂತ್ತದು. ಮೊದಲಿಗೆ ಶಿಶ್ನವು ಹೇಗೆ ರೂಪುಗೊಂಡಿರುತ್ತದೆ ಎಂಬುದನ್ನ ನೋಡೋಣ. ಶಿಶ್ನವು ಮೂರು ಸಿಲಿಂಡ್ರಿಕಲ್ ಟ್ಯೂಬ್ ಗಳಿಂದ ಮಾಡಲಾಗಿರುತ್ತದೆ. ಅವುಗಳಲ್ಲಿ ಎರಡು ದೊಡ್ಡ ಟ್ಯೂಬ್ ಗಳನ್ನ ಕಾರ್ಪೋರಿಯಲ್ ಬಾಡೀಸ್ ಎಂದು ಕರೆಯಲಾಗುತ್ತದೆ.

ಗಂಡಸರು ಉದ್ರೇಕಕ್ಕೆ ಒಳಗಾದಾಗ ರಕ್ತವು ಈ ಎರಡು ದೊಡ್ಡ ಬಲೂನ್ ರೀತಿಯ ಟ್ಯೂಬ್ ಗಳಿಗೆ ನುಗ್ಗುತ್ತದೆ ಮತ್ತು ಅವುಗಳಲ್ಲಿ ಒತ್ತಡ ಹೆಚ್ಚುತ್ತದೆ. ಇದು ಶಿಶ್ನವನ್ನ ಗಟ್ಟಿ ಮತ್ತು ನೆಟ್ಟಗೆ ನಿಲ್ಲುವಂತೆ ಮಾಡುತ್ತದೆ. ಹೀಗಾಗಿ  ನೆಟ್ಟಗೆ ನಿಂತ ಶಿಶ್ನವನ್ನ ಬಾಗಿಸುವುದು ಕಷ್ಟ. ಹೀಗಾಗಿ ಅದರ ಮೇಲೆ ಆಗಲೇ ಒತ್ತಡ ಬಿದ್ದಿರುತ್ತದೆ. ಹೀಗಾಗಿ ಸಂಭೋಗದ ಸಮಯದಲ್ಲಿ ಶಿಶ್ನವು ಸಂಗಾತಿಯ ಮೂಲಾಧಾರಕ್ಕೆ (ಯೋನಿ ಹಾಗು ಗುದದ್ವಾರದ ನಡುವಿನ ಜಾಗ) ರಭಸವಾಗಿ ಡಿಕ್ಕಿ ಹೊಡೆದರೆ ಅಥವಾ ಸಂಭೋಗದ ಯಾವುದಾದರೂ ಭಂಗಿಯಲ್ಲಿ ಶಿಶ್ನವನ್ನ ತುಂಬಾನೇ ವಾಲಿಸಿದರೆ, ಮುರಿತ ಉಂಟಾಗಬಹುದು.

“ಶಿಶ್ನದ ಒಳಗೆ ಒತ್ತಡ ಹಿಡಿದಿಟ್ಟುಕೊಂಡಿರುವ ಸುತ್ತುವರಿದ ಅಂಗಾಂಶಗಳಿಗೆ ಇನ್ನಷ್ಟು ಒತ್ತಡ ತಡೆಯಲಾಗುವುದಿಲ್ಲ” ಎಂದು ಹೇಳುತ್ತಾರೆ ಲೈಂಗಿಕ ತಜ್ಞರಾದ ಡಾ ।। ರಾಜಫರ್. ಈ ರೀತಿಯ ಶಿಶ್ನದ ಮುರಿತ ಕೇವಲ ಶಿಶ್ನವು ನೆಟ್ಟಗೆ ನಿಂತಾಗ ಮಾತ್ರ ಆಗುವಂತದ್ದು. ಅದು ಸಾಧಾರಣ ಸ್ಥಿತಿಯಲ್ಲಿ ಇದ್ದಾಗ, ಅದರೊಳಗಿನ ಒತ್ತಡ ಹೆಚ್ಚ್ಚಾಗಿ ಇರುವುದಿಲ್ಲ, ಹೀಗಾಗಿ ಅದನ್ನ ಬಗ್ಗಿಸಬಹುದು ಮತ್ತು ಅದು ಅನಿರೀಕ್ಷಿತ ಒತ್ತಡವನ್ನ ಸಹಿಸಿಕೊಳ್ಳಬಹುದು.

ಶಿಶ್ನ ಮುರಿತದ ಲಕ್ಷಣಗಳು

ಶಿಶ್ನ ಮುರಿತಕ್ಕೆ ಆಗಿದೊಡನೆ ಗಂಡಸರಿಗೆ ಅದು ಗೊತ್ತಾಗಿ ಬಿಡುತ್ತದೆ. ಗೋಚರವಾಗುವ ಒಂದು ಲಕ್ಷಣ ಎಂದರೆ ಅದು ಸೀಳುತ್ತಿರುವ ಅಥವಾ ಕಾದ ಎಣ್ಣೆ ಸಿಡಿಯುತ್ತಿರುವಂತ ಶಬ್ದ ಬರುವುದು. ಈ ಶಬ್ದವು ಅಂಗಾಂಶಗಳು ಹರಿಯುತ್ತಿರುವ ಶಬ್ದ.

ಶಿಶ್ನವು ಆಗ ನೆಟ್ಟಗೆ ನಿಲ್ಲುವ ಶಕ್ತಿ ಕಳೆದುಕೊಳ್ಳುತ್ತದೆ ಮತ್ತು ತೀವ್ರ ನೋವು ಉಂಟಾಗುತ್ತದೆ. ಇದು ಮೂತ್ರನಾಳಕ್ಕೂ  ಹಾನಿ ಉಂಟು ಮಾಡಿದ್ದರೆ, ಮೂತ್ರವಿಸರ್ಜನೆ ಮಾಡುವ ವೇಳೆ ರಕ್ತಸ್ರಾವ ಆಗಬಹುದು. ಹೀಗೆ ಆದರೆ ಮೂತ್ರನಾಳವು ಕೂಡ ಹರಿದಿದೆ ಎಂದರ್ಥ ಎನ್ನುತ್ತಾರೆ ಡಾ ।। ರಾಜಫರ್.

ಹೀಗೆ ಆದಲ್ಲಿ ನೀವು ಕೂಡಲೇ ವೈದ್ಯರನ್ನ ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ಆದರೆ, ಹೆದರಬೇಡಿ ಇದು ತುಂಬಾ ವಿರಳವಾಗಿ ಉಂಟಾಗುವ ಸಂದರ್ಭ. ಹೀಗಾಗಿ ನೀವು ಪ್ರತಿದಿನ ಆ ಕಾರ್ಯದಲ್ಲಿ ತೊಡಗಿಕೊಳ್ಳಬೇಕಾದರೆ ಇದನ್ನ ತಲೆಯಲ್ಲಿ ಇಟ್ಟುಕೊಂಡು ಚಿಂತಿಸಬೇಕಿಲ್ಲ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon