ನೆಗಡಿ ಮತ್ತು ಕೆಮ್ಮು ನಮ್ಮೆಲ್ಲರಿಗೂ ಕಿರಿಕಿರಿ ಮತ್ತು ಅಹಿತಕರವನ್ನುಂಟುಮಾಡುತ್ತದೆ. ಹಾಗಿದ್ದಲ್ಲಿ ನಿಮ್ಮ ಮಗುವಿಗೆ ಅದು ಹೇಗೆ ಕಿರಿಕಿರಿ ಮತ್ತು ತೊಂದರೆಯನ್ನುಂಟುಮಾಡುತ್ತಿದೆ ಎಂದು ಕಲ್ಪಿಸಿಕೊಳ್ಳಿ. ಮೂಗು ಕಟ್ಟಿಕೊಳ್ಳುವುದು, ಕೆಮ್ಮು ಮತ್ತು ಉಸಿರಾಟದ ತೊಂದರೆ ಇತ್ಯಾದಿಗಳಿಂದ ಮಗುವಿಗೆ ಬಹಳಷ್ಟು ತೊಂದರೆಯಾಗುತ್ತದೆ. ದುಃಖಕರವೆಂದರೆ, ನಿಮ್ಮ ಮನೆಯಲ್ಲಿರುವ ನೈರ್ಮಲ್ಯದಿಂದ ಮಗುವು ಸೋಂಕಿಗೊಳಗಾಗದಂತೆ ನೋಡಿಕೊಳ್ಳುವುದನ್ನು ಬಿಟ್ಟು ಬೇರೆ ಏನು ಮಾಡಲಾಗುವುದಿಲ್ಲ.
ಶತಮಾನಗಳಿಂದಲೂ, ದೇಶದಾದ್ಯಂತ ತಾಯಿಯಂದಿರು ತಮ್ಮ ಮಕ್ಕಳಿಗೆ ಇದರಿಂದ ಮುಕ್ತಿಕೊಡಲು ವಿವಿಧ ಬಗೆಯ ಮನೆ ಔಷದಗಳನ್ನು ಉಪಯೋಗಿಸುತ್ತಾ ಬಂದಿದ್ದಾರೆ. ಅದರಲ್ಲಿ ಪರಿಣಾಮಕಾರಿಯಾದುದ್ದನ್ನು ಈ ಕೆಳಗೆ ನೀಡಲಾಗಿದೆ.
೧. ಬೆಚ್ಚಗಿರಿಸಿ
(೬ ತಿಂಗಳ ವರೆಗೂ)ನಿಮ್ಮ ಮಗುವು ಯಾವಾಗಲೂ ಬೆಚ್ಚಗಿನ ವಾತವರಣದಲ್ಲಿದೆಯೊ ಇಲ್ಲವೊ ಎಂಬುದನ್ನು ಖಾತರಿಮಾಡಿಕೊಳ್ಳಿ. ಅದರಲ್ಲೂ ವಾತಾವರಣ ಶೀತದಿಂದ ಕೂಡಿದ್ದರೆ, ಮಗುವಿಗೆ ಬೆಚ್ಚನೆಯ ನೀರು ಮುಂತಾದ ದ್ರವ್ಯಗಳನ್ನು ನೀಡಿ.
೨.ಜೀರಿಗೆ ಮತ್ತು ಬೆಳ್ಳುಳ್ಳಿ
ಬಾಣಲೆಯಲ್ಲಿ ಒಣಗಿದ ಜೀರಿಗೆ ಮತ್ತು ಬೆಳ್ಳುಳ್ಳಿಯನ್ನು ಹುರಿದುಕೊಳ್ಳಿ. ಅದನ್ನು ಒಂದು ತೆಳು ಬಟ್ಟೆಯಲ್ಲಿ ಕಟ್ಟಿ ಮಗುವಿನ ಎದೆಯ ಭಾಗದಲ್ಲಿ ಮೃದುವಾಗಿ ತಿಕ್ಕಿ ಅಥವಾ ಸವರಿ. ೬ ತಿಂಗಳಿಗಿಂತ ಕಡಿಮೆ ವಯಸ್ಸಿನವರಾದರೆ ಅದನ್ನು ಅವರ ಬಟ್ಟೆಗೆ ಕಟ್ಟಿ ಆಗ ಅದು ಅದರ ವಾಸನೆಯನ್ನು ಸೇವಿಸುತ್ತದೆ.
೩.ತೇವಾಂಶಯುಳ್ಳ ವಾತಾವರಣ
ಮೂಗಿನ ಲೋಳೆಯ ಮಾರ್ಗಗಳು ಕಟ್ಟಿಕೊಳ್ಳುವುದನ್ನು ನಿವಾರಿಸಲು, ತೇವಾಂಶದ ಗಾಳಿಯಲ್ಲಿ ಉಸಿರಾಡುವುದು ಒಳ್ಳೆಯದು. ವಯಸ್ಕ ಮಕ್ಕಳು ಒಣಗಾಳಿಯಿದ್ದರು ಉಸಿರಾಟವನ್ನು ಸುಲಭವಾಗಿ ಮಾಡುತ್ತವೆ, ಶಿಶುಗಳಿಗೆ ಅದು ಕಷ್ಟವಾಗಬಹುದು.ಮಗುವಿಗೆ ಆವಿ ಸ್ನಾನದ ಕೋಣೆಯಲ್ಲಿ ಬೆಚ್ಚಗಿನ ಜಳಕ ಮಾಡಿಸಿ.
೪.ಶಿಶುವಿಗೆ ಅಂಗಮರ್ಧನ ಮಾಡಿ
ಶೀತವನ್ನು ಶಮನಗೊಳಿಸುವ ಮತ್ತೊಂದು ವಿಧಾನವೆಂದರೆ, ಬೆಚ್ಚಗಿನ ತೈಲದೊಂದಿಗೆ, ಸಾಸಿವೆ ಮತ್ತು ಬೆಳ್ಳುಳ್ಳಿಯನ್ನು ಬೆರೆಸುವ ಮೂಲಕ ತಕ್ಷಣದ ಪರಿಹಾರಕ್ಕಾಗಿ ಅಂಗಮರ್ಧನ ಮಾಡುವುದು.
೫.ಹಬೆ ಶಾಖ ನೀಡಿ
೬ ರಿಂದ ೮ ತಿಂಗಳ ವಯಸ್ಸಿನ ಮಕ್ಕಳ ಕಾಲುಗಳನ್ನು ಬೆಚ್ಚನೆಯ ಹಬೆಯಿಂದ ಶಾಖ ನೀಡಿ ಕಾಲುಚೀಲ ಹಾಕಿರಿ.
೬.ಮಗುವಿನ ತಲೆಯನ್ನು ಎತ್ತರಿಸಿ(ತಲೆದಿಂಬು ಕೊಡಿ)
(೬ ತಿಂಗಳು ಮೇಲಿನ ಮಕ್ಕಳಿಗೆ ಮಾತ್ರ) ಮಗು ಮಲಗುವಾಗ ಅದರ ತಲೆಯನ್ನು ತಲೆದಿಂಬು ಮೇಲೆ ಇಡಿ ಇದರಿಂದ ತಲೆಯ ಭಾಗವನ್ನು ಸ್ವಲ್ಪ ಮೇಲಕ್ಕೆ ಇರಿಸಿದಂತ್ತಾಗುತ್ತದೆ.
೭.ಅರಿಶಿಣ
ಮಗುವಿನ ತಲೆಗೆ ಅರಿಶಿಣ ಮತ್ತು ನೀರು ಮಿಶ್ರಿಸಿದ ದ್ರವ್ಯವನ್ನು ಸವರಿ. ಕೆಮ್ಮು ಇದ್ದರೆ ಮಗುವಿಗೆ ಸ್ವಲ್ಪ ಅರಿಶಿಣದ ಪುಡಿಯನ್ನು ಬೆಚ್ಚನೆಯ ಹಾಲಿನೊಂದಿಗೆ ಮಿಶ್ರಣ ಮಾಡಿ ಕುಡಿಸಿರಿ.
೮.ಜೇನು
(ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ)ಕೆಮ್ಮಿಗೆ ಜೇನುತುಪ್ಪ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಉತ್ಪನ್ನಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಬೆಚ್ಚನೆಯ ನೀರಿನೊಂದಿಗೆ ಮಕರಂದ ಸೇರಿಸಿ ದಿನನಿತ್ಯ ಸೇವಿಸುವುದು. ಒಂದು ಚಮಚ ಮಕರಂದಕ್ಕೆ ಕಾಲು ಚಮಚ ದಾಲ್ಚಿನ್ನಿ(ಚಕ್ಕೆ) ಸೇರಿಸಿ ದಿನಕ್ಕೆ ಎರಡು ಬಾರಿ ಕೊಡುವುದರಿಂದ ಕೆಮ್ಮಿನಿಂದ ಪರಿಹಾರಹೊಂದಬಹುದು.
೯.ಕರ್ಪೂರ
ಬೆಚ್ಚಗಿನ ತೆಂಗಿನ ಎಣ್ಣೆಯಲ್ಲಿ ಸಣ್ಣ ಪ್ರಮಾಣದ ಕರ್ಪೂರ ಸೇರಿಸಿ, ಮಗುವಿನ ಎದೆಯ ಮೇಲೆ ಕೆಲವು ಹನಿಗಳನ್ನು ಹಾಕಿ ಎದೆ ಸವರಿ.
೧೦.ಬೆಂಡೆಕಾಯಿ
೬ ತಿಂಗಳ ನಂತರದ ಶಿಶುಗಳಿಗೆ, ಬೆಂಡೆಕಾಯಿಯನ್ನು ನೀರಿನಲ್ಲಿ ಕುದಿಸಿ, ಆರಿಸಿ ಸಣ್ಣ ಪ್ರಮಾಣದಲ್ಲಿ ಮಗುವಿಗೆ ಕೊಡಿ.
