Link copied!
Sign in / Sign up
6
Shares

ಯೋನಿಯ ಮೇಲಿನ ಕೂದಲನ್ನು ಶೇವ್ ಮಾಡುವುದು ಹೇಗೆ? ಇಲ್ಲಿದೆ ಸವಿವರವಾದ ಸಲಹೆಗಳು

ಗುಪ್ತಾಂಗಗಳ ಕೂದಲ ನಿರ್ಮೂಲನೆಯು ವಯಕ್ತಿಕ ಆದ್ಯತೆ ಆಗಿರುತ್ತದೆ. ಕೆಲವು ಹೆಂಗಸರು ತಮ್ಮ ಗುಪ್ತಾಂಗದ ಮೇಲಿನ ಕೂದಲನ್ನು ಟ್ರಿಮ್ ಮಾಡುತ್ತಾರೆ, ಕೆಲವರು ಹೆಚ್ಚು ಕಡಿಮೆ ಪ್ರತಿದಿನ ಶೇವ್ ಮಾಡುತ್ತಾರೆ ಮತ್ತು ಇನ್ನೂ ಕೆಲವರು ಶೇವ್ ಮಾಡುವುದೇ ಇಲ್ಲ. ನಿಮ್ಮ ದೇಹವನ್ನು ಶುಚಿಯಾಗಿ ಇಡಲು ಈ ಭಾಗದ ಕೂದಲನ್ನು ಶೇವ್ ಮಾಡಲೇ ಬೇಕೆಂದೇನಿಲ್ಲ. ವಾಸ್ತವದಲ್ಲಿ, ಆ ಭಾಗದಲ್ಲಿನ ಕೂದಲನ್ನು ತೆಗೆಯುವುದರಿಂದ ಯಾವುದೇ ಆರೋಗ್ಯಕರ ಲಾಭಗಳಿಲ್ಲ.

ಗುಪ್ತಾಂಗದ ಕೂದಲನ್ನು ಹೋಗಲಾಡಿಸಲು ಅನೇಕ ವಿಧಾನಗಳಿವೆ. ಶೇವಿಂಗ್, ವ್ಯಾಕ್ಸಿಂಗ್, ಲೇಸರ್ ಚಿಕಿತ್ಸೆ ಮತ್ತು ಕೂದಲ ನಿರ್ಮೂಲನ ಕ್ರೀಮ್ ಬಳಕೆ ಹೀಗೆ ಹಲವಾರು ದಾರಿಗಳಿವೆ. ಶೇವಿಂಗ್ ಮಾಡಿದಾಗ ಗುಪ್ತಾಂಗದಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಮತ್ತು ಚರ್ಮವು ಮುಳ್ಳು-ಮುಳ್ಳಾಗಬಹುದು. ಏಕೆಂದೆರೆ, ಈ ಭಾಗದಲ್ಲಿರುವ ಚರ್ಮವು ಬಹಳ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ನಾವು ಗುಪ್ತಾಂಗದ ಕೂದಲನ್ನು ಶೇವ್ ಮಾಡುವಾಗ ಕೆಲವು ಸುರಕ್ಷತಾ ಕ್ರಮಗಳನ್ನ ಪಾಲಿಸಬೇಕು. ಅವುಗಳು ಯಾವೆಂದು ಇಲ್ಲಿ ತಿಳಿಸಿದ್ದೇವೆ ಓದಿರಿ :


೧. ಕೈಗನ್ನಡಿ ಬಳಸಿರಿ

ಶೇವ್ ಮಾಡುವಾಗ ಒಂದು ಸಣ್ಣ ಕೈಗನ್ನಡಿ ಬಳಸಿ. ಇದು ನೀವು ಶೇವ್ ಮಾಡಬೇಕೆಂದಿರುವ ಭಾಗವನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಸಹಕಾರಿ ಆಗುತ್ತದೆ.


೨. ಟ್ರಿಮ್ ಮಾಡಿ

ನೀವು ಶೇವ್ ಮಾಡಲು ಶುರು ಮಾಡುವ ಮುನ್ನ ಎಷ್ಟು ಸಾಧ್ಯವೋ, ಅಷ್ಟು ಕೂದಲನ್ನು ಕತ್ತರಿ ಬಳಸಿ ಟ್ರಿಮ್ ಮಾಡಿಕೊಳ್ಳಿ. ಮೊಂಡಾದ ಕತ್ತರಿಗಳನ್ನ ಬಳಸಲೇಬಾರದು.


೩. ಕೂದಲನ್ನು ನೆನೆಸಿ

ಒಂದು ವೇಳೆ ನಿಮ್ಮ ಮನೆಯಲ್ಲಿ ಬಾತ್ ಟಬ್ ಇದ್ದರೆ, ಅದರಲ್ಲಿ ಒಂದು 5 ನಿಮಿಷಗಳ ಕಾಲ ಕೂತುಕೊಳ್ಳಿ. ಟಬ್ ಇಲ್ಲದಿದ್ದರೆ, ಸಹಜವಾಗಿಯೇ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಬಿಸಿ ನೀರು ಕೂದಲಿನ ಕೋಶಕಗಳನ್ನು ಮತ್ತು ಚರ್ಮವನ್ನು ಮೃದು ಮಾಡುತ್ತದೆ.


೪. ಕ್ರೀಮ್ ಬಳಸಿ

ಶೇವಿಂಗ್ ಕ್ರೀಮ್ ಹಚ್ಚಿಕೊಳ್ಳಿ ಅಥವಾ ಆಲೋ ವೆರಾ ಅಥವಾ ಇನ್ನ್ಯಾವುದಾದರೂ ಹಿತಕರ ಸಾಮಗ್ರಿಯಿಂದ ಮಾಡಿದ ಜೆಲ್ ಅನ್ನು ಹಚ್ಚಿಕೊಳ್ಳಿ. ಅದನ್ನು ನೀವು ಶೇವ್ ಮಾಡಬೇಕೆಂದಿರುವ ಎಲ್ಲಾ ಭಾಗಗಳ ಮೇಲೆ ಸರಿಯಾಗಿ ಲೇಪಿಸಿಕೊಳ್ಳಿ. ಶೇವ್ ಮಾಡುವಾಗ ಇನ್ನೊಮ್ಮೆ ಲೇಪಿಸಬೇಕಿದ್ದರೆ ಪುನಃ ಲೇಪಿಸಿ.


೫. ಹೊಸದಾದ, ಚೂಪಾದ ರೇಜರ್ ಬಳಸಿ

ಮೊಂಡಾದ ಬ್ಲೇಡ್ ಅಥವಾ ರೇಜರ್ ಅನ್ನು ಬಳಸಬೇಡಿ. ಮಾಯಿಶ್ಚರೈಸಿಂಗ್ - ಕ್ರೀಮ್  ಸ್ಟ್ರಿಪ್ ಹೊಂದಿರುವ ರೇಜರ್ ಅನ್ನೇ ಬಳಸಿ.


೬. ಎರಡೂ ಕೈಗಳನ್ನ ಬಳಸಿ

ಒಂದು ಕೈಯಲ್ಲಿ ಚರ್ಮವನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ಇನ್ನೊಂದು ಕೈಯಲ್ಲಿ ಶೇವ್ ಮಾಡಿ. ಅತಿಯಾಗಿ ಒತ್ತಡವನ್ನು ಹಾಕಬೇಡಿ.


೭. ಕೂದಲು ಬೆಳೆಯುವ ದಿಕ್ಕಿನಲ್ಲೇ ಶೇವ್ ಮಾಡಿ

ಮೆಲ್ಲನೆ ಒಂದೇ ನಿರ್ದಿಷ್ಟ ದಿಕ್ಕಿನಲ್ಲಿ - ಅಂದರೆ ಕೂದಲು ಬೆಳೆದಿರುವ ದಿಕ್ಕಿನಲ್ಲೇ ಮೃದುವಾಗಿ ಸವರುವಂತೆ ಶೇವ್ ಮಾಡುತ್ತಾ ಹೋಗಿ.


೮. ಬೆಚ್ಚನೆ ನೀರಿನಲ್ಲಿ ತೊಳೆಯಿರಿ

ನೀವು ಶೇವ್ ಮಾಡಿಕೊಂಡ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ಗುಪ್ತಾಂಗವನ್ನು ತೊಳೆದುಕೊಳ್ಳಿ. ನಂತರ ಒಣ ಬಟ್ಟೆಯೆಂದು ಆ ಭಾಗವನ್ನು ಮೆಲ್ಲನೆ ತಟ್ಟುತ್ತಾ ಒಣಗಿಸಿಕೊಳ್ಳಿ.


೯. ಬೇಬಿ ಆಯಿಲ್ ಅಥವಾ ಆಲೋ ವೆರಾ ಲೋಷನ್ ಬಳಸಿ

ಶೇವ್ ಮಾಡಿಕೊಂಡ ನಂತರ, ಶೇವ್ ಮಾಡಿದ ನಂತರ ಆ ಭಾಗಕ್ಕೆ ಬೇಬಿ ಆಯಿಲ್ ಅಥವಾ ಆಲೋ ವೆರಾ ಲೋಷನ್ ಬಳಸಿ. ಸುಗಂಧ ಭರಿತ ಉತ್ಪನ್ನಗಳನ್ನು ಹಚ್ಚಬೇಡಿ, ಅವುಗಳು ಉರಿತ ಉಂಟು ಮಾಡಬಹುದು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon