Link copied!
Sign in / Sign up
1
Shares

ಹೋಳಿ ಹಬ್ಬದಂದು ಶಾಂಪೂ ತರಲು ಹೋಗಿ, ದುರದೃಷ್ಟವನ್ನೇ ತಂದುಕೊಂಡಳು 15 ವರ್ಷದ ಹುಡುಗಿ

ಆಕೆಯ ವಯಸ್ಸು ಕೇವಲ 15. ಆ ದಿನ ಆಕೆಯು ತಲೆ ಸ್ನಾನ ಮಾಡಲೆಂದು ನಿರ್ಧರಿಸಿದಳು. ಆದರೆ ಮನೆಯಲ್ಲಿ ಶಾಂಪೂ ಇಲ್ಲದಿದ್ದ ಕಾರಣ, ಆಕೆ ಶಾಂಪೂ ಖರೀದಿಸಲೆಂದು ಅಲ್ಲೇ ಮನೆಯ ಬಳಿಯಲ್ಲೇ ಇದ್ದ ಅಂಗಡಿಯೊಂದಕ್ಕೆ ಹೋದಳು. ಅಲ್ಲಿ ಆಕೆ ಅಂಗಡಿಯವನಿಗೆ ಯಾವೆಲ್ಲಾ ಒಳ್ಳೆ ಕಂಪನಿಯ ಶಾಂಪೂ ಇದೆ ಎಂದು ಕೇಳಿದ್ದಾಳೆ. ಅಂಗಡಿಯವನು ಅಂಗಡಿಯಲ್ಲಿ ಕೆಲವೊಂದಷ್ಟು ಕಂಪನಿಗಳ ಶಾಂಪೂಗಳನ್ನ ಆಕೆಗೆ ತೋರಿಸಿದ್ದಾನೆ. ಆನಂತರ ಆಕೆ ಮತ್ತಷ್ಟು ಆಯ್ಕೆಗಳಿಗೆ ಕೇಳಿದಾಗ, ಅಂಗಡಿಯವನು “ಇನ್ನೂ ಕೆಲವೊಂದು ರೀತಿಯ ಶಾಂಪೂಗಳು ಮೇಲಿನ ಮಹಡಿಯಲ್ಲಿವೆ, ನೀನು ಅಲ್ಲೇ ಬಂದು ಯಾವುದು ಬೇಕೆಂದು ನೋಡು” ಎಂದು ಹೇಳಿದ್ದಾನೆ. ಆಕೆಯ ನೆಮ್ಮದಿಯ ಬದುಕಿನ ಕೊನೆ ಕ್ಷಣಗಳು ಅವೇ ಆಗಿದ್ದವು ಎನ್ನಬಹುದು!


ಈ ಅಂಗಡಿಯ ಮಾಲೀಕನ ಕುಟುಂಬದವರು ಮತ್ತು ಈ ಹುಡುಗಿಯ ಕುಟುಂಬದವರು ಒಳ್ಳೆಯ ಸ್ನೇಹಿತರು. ಆದರೆ, ಆ ದಿನ ಆ ಸ್ನೇಹವೇ ಈ ಹುಡುಗಿಯ ಬದುಕಿಗೆ ಮುಳ್ಳಾಯಿತು. ಈ ಪರಿಚಯದಿಂದಲೇ ಆ ಹುಡುಗಿ ಅವನ ಮಾತನ್ನ ಕೇಳಿದೊಡನೆ ಹಿಂದೆ-ಮುಂದೆ ನೋಡದೆ ಅವನನ್ನ ಹಿಂಬಾಲಿಸಿಕೊಂಡು ಮೇಲಿನ ಮಹಡಿಗೆ ಹೋಗಿದ್ದಾಳೆ. ಆಕೆ ಅಲ್ಲಿಗೆ ಬಂದೊಡನೆ ಆಕೆಯನ್ನ ಒತ್ತಾಯಪೂರ್ವಕವಾಗಿ ಹಿಡಿದು ತನ್ನ ರೂಮಿನೆಡೆಗೆ ಎಳೆದೊಯ್ದಿದ್ದಾನೆ. ನಂತರ ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಮೇಲೆ ಆಕೆಗೆ ಇದರ ಬಗ್ಗೆ ಎಲ್ಲಾದರೂ ಬಾಯ್ಬಿಟ್ಟರೆ ನಿನ್ನ ಕಥೆ ಮುಗೀತು ಎಂದು ಹೆದರಿಸಿದ್ದಾನೆ. ಈ ಪಾಪಿಯ ಹೆಸರು ಅನಿಲ್ ಶರ್ಮ.  


ಅಂದ ಹಾಗೆ ಇದು ನಡೆದದ್ದು ಹೋಳಿ ಹಬ್ಬದ ದಿನದಂದು. ಈ ಹುಡುಗಿಯ ಪೋಷಕರು ಈಕೆಯು ಹೋಳಿಯ ನಂತರ ತುಂಬಾ ಸಪ್ಪಗಾಗಿದ್ದು ಗಮನಿಸಿದ್ದಾರೆ. ಆದರೆ ಭಾನುವಾರದಂದು ಸ್ವತಃ ಆ ಹುಡುಗಿಯೇ ಇನ್ನಷ್ಟು ಹೆಚ್ಚಿನ ಕಾಲ ಈ ವಿಷಯವನ್ನ ತನ್ನಲ್ಲೇ ಮುಚ್ಚಿಟ್ಟುಕೊಂಡು ಬಾಳಲು ಆಗುವುದಿಲ್ಲ ಎಂದು ಅರಿತು, ತುಂಬಾ ಭಾವುಕಳಾಗಿ ಭಾನುವಾರದ ಬೆಳಿಗ್ಗೆ ತನ್ನ ಅಮ್ಮನ ಬಳಿ ಜೋರಾಗಿ ಅಳುತ್ತಾ, ಆಗಿದ್ದನ್ನೆಲ್ಲಾ ವಿವರಿಸಿದ್ದಾಳೆ. ಈ ವಿಷಯವನ್ನ ಕೇಳಿದ ಆ ಹುಡುಗಿಯ ಪೋಷಕರು ಮತ್ತು ಅಕ್ಕ-ಪಕ್ಕದ ಮನೆಯವರ ಕೋಪ ಮುಗಿಲು ಮುಟ್ಟಿತ್ತು. ಪಾಪಿ ಅನಿಲ್ ಶರ್ಮನಿಗೆ ತಾವೇ ಶಿಕ್ಷೆ ಕೊಡಬೇಕೆಂದು ಅವನ ಅಂಗಡಿಯ ಬಳಿಗೆ ಹೋಗುವಷ್ಟರಲ್ಲಿ, ಪೊಲೀಸರು ಮಧ್ಯ ಬಂದಿದ್ದಾರೆ. ಅಂದಹಾಗೆ ಈ ಪಾಪಿ ಅನಿಲ್ ಶರ್ಮನಿಗೆ ಮದುವೆಯಾಗಿ, ಒಂದು ಮಗು ಕೂಡ ಇದೆ.


ಈಗ ಆ ನತದೃಷ್ಟೆ ಹುಡುಗಿಯನ್ನ ವೈದ್ಯಕೀಯ ತಪಾಸಣೆಗೆಂದು ರಾಂಚಿ ಸರ್ದಾರ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪಾಪಿ ಅನಿಲ್ ಶರ್ಮನ ಮೇಲೆ IPC ಸೆಕ್ಷನ್ 376ರ ಅಡಿಯಲ್ಲಿ ಕೇಸು ದಾಖಲಾಗಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon