Link copied!
Sign in / Sign up
106
Shares

ಹೆಣ್ಣಿನ ಜನನಾಂಗದ (ಯೋನಿಯ) ಅದ್ಭುತ ಶಕ್ತಿ ತೋರಿಸುವ ವಿಶಿಷ್ಟ, ಅಪರೂಪದ ಫೋಟೋಗಳು

ಒಂದು ಹೊಸ ಜೀವಕ್ಕೆ ಜನ್ಮ ನೀಡುವುದೇ ಒಂದು ಅದ್ಭುತ. ಈ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ. ಆದರೆ ಇದು ಸಾಕಾರವಾಗಬೇಕಿದ್ದರೆ, ಅಲ್ಲಿ ಮುಖ್ಯ ಪಾತ್ರವಹಿಸುವುದೇ ಹೆಣ್ಣಿನ ಜನನಾಂಗ. ಹೆಣ್ಣಿನ ಜನನಾಂಗಕ್ಕೆ ಎಷ್ಟೊಂದು ಸಾಮರ್ಥ್ಯ ಮತ್ತು ಸಮೃದ್ಧತೆ ಹೊಂದಿದೆ ಎಂದು ಅರಿತಷ್ಟು ಕಡಿಮೆಯೇ. ಗರ್ಭಧಾರಣೆ ಮತ್ತು ಹೆರಿಗೆ ಸಮಯದಲ್ಲಿ ಯೋನಿಯು ಹೊಂದುವ ಬದಲಾವಣೆಗಳು ನಿಜಕ್ಕೂ ಚಿತ್ತಾಕರ್ಷಕ. ಅಂತಹ ಯೋನಿಯ ಅದ್ಭುತ ಶಕ್ತಿಯನ್ನು ತೆರೆದಿಡುವ ಈ ಅಪರೂಪದ, ಅಮೋಘವಾದ ಚಿತ್ರಗಳನ್ನ ನೀವೂ ನೋಡಿ.


ಈ ಅದ್ಭುತ ಫೋಟೋ ಹೆರಿಗೆ ಸಮಯದಲ್ಲಿ ಮಗುವು ಆಚೆ ಬರಲು ಯೋನಿಯು ಎಷ್ಟೊಂದು ಹಿಗ್ಗಬೇಕು ಎಂಬುದನ್ನು ತೋರಿಸುತ್ತದೆ.

 


ಇದು ಗರ್ಭಧಾರಣೆಯ ಅಂತ್ಯದ ಆರಂಭ! ಅಮ್ಮನು ತನ್ನ ಮಗುವನ್ನು ಹೊರತಳ್ಳಲಿಕ್ಕೆ ತಯಾರಾಗುತ್ತಿದ್ದಾಳೆ. ಮಗುವಿನ ತಲೆಯು ಕ್ರೌನಿಂಗ್ ಪ್ರಕ್ರಿಯೆಗೆ ಸಿದ್ಧವಾಗುತ್ತಿರುವುದನ್ನು ಕಾಣಬಹುದು.

 

ಮಗುವಿನ ಮುಖವನು ಮೊದಲ ಬಾರಿಗೆ ನೋಡುವುದಕ್ಕಿಂತ ಬೇರೆ ಖುಷಿಯ ವಿಷಯವಿಲ್ಲ. ತಲೆ ತುಂಬಾ ಕೂದಲಿರುವ ಈ ಮಗುವಿನ ತಲೆಯು ಹೊರಬಂದಿರುವುದನ್ನು ನೀವು ಕಾಣಬಹುದು. ಕುತ್ತಿಗೆಯು ಕೂಡ ಇನ್ನು ಕೆಲವೇ ಕ್ಷಣಗಳಲ್ಲಿ ಹೊರಬರಲಿದೆ.

 

ಇದು ಫೇಸ್ ಪ್ರೆಸೆಂಟೇಷನ್ - ಅಂದರೆ ಮುಖವು ಮೊದಲು ಮುಂದೆ ಮಾಡಿ ಆಚೆ ಬರುವುದು. ಇದೊಂದು ಬಹಳ ವಿರಳವಾದ ತೊಡಕಾಗಿದ್ದು, ಇದು ಸುಮಾರು 600-800 ಹೆರಿಗೆಗಳಲ್ಲಿ ಕೇವಲ ಒಮ್ಮೆ ಮಾತ್ರ ಆಗುವಂತದ್ದು. ಹೀಗಾಗಿ ತುಂಬಾನೇ ವಿರಳ.

 

ಈ ಫೋಟೋ, ಜನ್ಮ ನೀಡುವುದರ ನೋವು ಮತ್ತು ಸೌಂದರ್ಯ ಎರಡನ್ನೂ ಮನಮುಟ್ಟುವಂತೆ ಸೆರೆಹಿಡಿದಿದೆ. ಈ ಅಮ್ಮನು ತನ್ನ ಮಗುವನ್ನು ಹೊರತಳ್ಳುತ್ತಿದ್ದಾಳೆ, ತನ್ನ ಮಗುವನ್ನು ಈ ಜಗತ್ತಿಗೆ ಬರಮಾಡಿಕೊಳ್ಳಲು. ಆದರೆ ಆಕೆಯ ಮುಖದಲ್ಲಿನ ನೋವು ನೀವು ಕಾಣಬಹುದು.

 

ಇದು ಒಬ್ಬಳು ಛಾಯಾಗ್ರಾಹಕಿಯದ್ದೇ ಫೋಟೋ. ಇದೊಂದು ತುಂಬಾ ತೊಡಕುಗಳುಳ್ಳ ಹೆರಿಗೆ ಆಗಿತ್ತು. ಈಕೆಯ ದೇಹದಲ್ಲಿ ಪ್ಲೇಟೆಲೆಟ್ಸ್ ಸಂಖ್ಯೆ ಕಡಿಮೆ ಇದ್ದ ಕಾರಣ, ಹೆರಿಗೆ ಆದೊಡನೆ ಈಕೆಗೆ ತೀವ್ರ ರಕ್ತಸ್ರಾವವಾಗುವ ಸಂಭವವಿತ್ತು. ಆದರೆ ವೈದ್ಯರ ಕೃಪೆಯಿಂದ ಹಾಗೆ ಆಗಲಿಲ್ಲ.

 

ಈ ಅಮ್ಮನು ಆಗಲೇ ಕಷ್ಟದ ಕೆಲಸವನ್ನು ಮುಗಿಸಿದ್ದಾಳೆ - ಅದು ಭುಜಗಳನ್ನು ಹೊರತಳ್ಳುವುದು. ಈಗ ನೀವು ಆ ಮಗುವಿನ ಸಿಹಿಯಾದ, ಮುದ್ದಾದ, ಪುಟ್ಟ ಅಂಟಂಟು ಮುಖವನ್ನು ನೋಡಬಹುದು. ಭೂಮಿಗೆ ಅರ್ಧ ಕಾಲಿಟ್ಟಿದೆ ಈ ಮಗು.

 

ನಿಮಗೆ ಗೊತ್ತೇ ಈ ರೀತಿ ಮಗುವಿನ ತಲೆಯು ಹಿಗ್ಗಿ ಹೊರಬರುವುದು ಸಂಪೂರ್ಣ ಸಹಜ ಎಂದು?! ಇದು ಹೆರಿಗೆ ಸಮಯದಲ್ಲಿ ಮಗುವಿನ ತಲೆಯ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿರುವ ಎರಡು ಮೃದು ಪ್ರದೇಶಗಳ ಮೇಲೆ ಒತ್ತಡ ಬೀಳುವುದರಿಂದ ಆಗುವುದು.

 

ಇದು ಮನೆಯಲ್ಲೇ ನಡೆದ ಒಂದು ಹೆರಿಗೆಯ ಚಿತ್ರ. ಇಲ್ಲಿ ಮಗುವು ತನ್ನ ಕಾಲುಗಳನ್ನು ಹೊರಹಾಕಿ ಆಚೆ ಬರುತ್ತಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon