Link copied!
Sign in / Sign up
41
Shares

ಸೆಕ್ಸ್ ಬಗ್ಗೆ ನಿಮಗೆ ಗೊತ್ತಿರದ 10 ವಿಚಿತ್ರ ಹಾಗು ವಿಭಿನ್ನ ಸಂಗತಿಗಳು

ನಿಮಗೆ ನಿಮ್ಮ ಶಾಲೆಯಲ್ಲಿ ಹಾಗು ಶಾಲೆ ಆಚೆಯಿಂದ ಸೆಕ್ಸ್ ಬಗ್ಗೆ ಕೆಲವು ಸಂಗತಿಗಳು ತಿಳಿದಿರುತ್ತದೆ. ಆದರೆ ಇಲ್ಲಿ ನಾವು ಕಲೆ ಹಾಕಿರುವ ಸಂಗತಿಗಳ ಬಗ್ಗೆ ನಿಮಗೆ ಖಂಡಿತವಾಗಿಯೂ ತಿಳಿದಿರುವುದಿಲ್ಲ ಎಂದು ಭಾವಿಸುತ್ತೇನೆ. ಇವುಗಳನ್ನ ನೀವೇ ಕೇಳಿರದೆ ಇದ್ದರೂ, ಇವುಗಳು ಗಾಳಿ, ಬೆಳಕಷ್ಟೇ ಸತ್ಯ. ನೀವು ಹುಬ್ಬು ಏರಿಸುವಂತೆ ಮಾಡುವ ಸೆಕ್ಸ್ ಬಗೆಗಿನ 15 ಸಂಗತಿಗಳನ್ನ ನಾವು ಇಲ್ಲಿ ಕಲೆ ಹಾಕಿದ್ದೇವೆ, ಓದಿ :

೧. ವಾರದಲ್ಲಿ ಎರಡು ಬಾರಿಯಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಗಂಡಸರಲ್ಲಿ ಹೃದಯ ರೋಗಗಳು ಉಂಟಾಗುವ ಸಾಧ್ಯತೆಗಳು ಸುಮಾರು 50% ಕಮ್ಮಿ ಇರುತ್ತದೆ.

೨. ಒಬ್ಬ ಗಂಡಸಿನಲ್ಲಿ, ಜಗತ್ತಿನಲ್ಲಿ ಇರುವ ಅಷ್ಟೂ ಹೆಂಗಸರನ್ನ ಗರ್ಭತಾಳುವಂತೆ ಮಾಡುವಷ್ಟು ವೀರ್ಯ ಇರುತ್ತದೆ.

೩. ಲೈಂಗಿಕ ಕ್ರಿಯೆ ನಡೆಸಿದಾಗ ಗಂಡಸರಲ್ಲಿ ಸರಾಸರಿ 100 ರಿಂದ 200 ಕ್ಯಾಲೊರಿ ಖರ್ಚಾಗುತ್ತದೆ, ಆದರೆ ಹೆಂಗಸರ ವಿಷಯದಲ್ಲಿ ಕೇವಲ ಸುಮಾರು 69 ಕ್ಯಾಲೊರಿಗಳು ಖರ್ಚಾಗುತ್ತದೆ.

೪. ಹಸ್ತಮೈಥುನವು ಮಾನಸಿಕ ಖಿನ್ನತೆಯನ್ನ ದೂರ ಮಾಡುವುದೆಂದು ತಿಳಿದು ಬಂದಿದೆ. ಇದಕ್ಕೆ ಕಾರಣ ನೀವು ಲೈಂಗಿಕ ಪರಾಕಾಷ್ಟೆ ಹೊಂದಿದಾಗ ಬಿಡುಗಡೆಯಾಗುವ ಭಾವನೆಗಳು ಮತ್ತು ಹಾರ್ಮೋನ್ ಗಳು.

೫. ಸಂಭೋಗದ ವೇಳೆ ನಿಮ್ಮ ಸ್ತನಗಳು ಹಾಗು ಗುಪ್ತಾಂಗವು ಹಿಗ್ಗುವಂತೆ ನಿಮ್ಮ ಮೂಗಿನ ಒಳಭಾಗವು ಕೂಡ ಹಿಗ್ಗುವುದು. ಇದಕ್ಕೆ ಕಾರಣ ರಕ್ತ ಸಂಚಾರದಲ್ಲಿ ಆಗುವ ಏರಿಕೆ ಇರಬಹುದು.

೬. ಗಂಡಸರು ಹೊರಸೂಸುವ ರೇತಸ್ಸು/ವೀರ್ಯ (semen)ಅಲ್ಲಿ ಮನಸ್ಸು ತಿಳಿ ಮಾಡುವಂತ, ಅಕ್ಕರೆ ಹೆಚ್ಚಿಸುವಂತ, ನಿದ್ದೆ ಬರಿಸುವಂತ ರಾಸಾಯನಿಕಗಳು ಇರುತ್ತದೆ. ಇದಲ್ಲದೇ, ಅದರಲ್ಲಿ ಕಾರ್ಟಿಸೋಲ್ ಎಂಬ ವಸ್ತು ಇದ್ದು, ಇದು ಮೆದುಳಿನಲ್ಲಿ ಪ್ರೀತಿ ಹುಟ್ಟಿಸುವಂತ ಭಾವನೆಗಳನ್ನ ಹೆಚ್ಚಿಸುವಂತೆ ಮಾಡುತ್ತದೆ. ಹೀಗಾಗಿ ವೀರ್ಯವು ಖಿನ್ನತೆಯನ್ನ ಕಮ್ಮಿ ಮಾಡುವ ಶಕ್ತಿ ಹೊಂದಿರುತ್ತದೆ.

೭. ಯೋನಿಯು ಗಾತ್ರದಲ್ಲಿ 3 ರಿಂದ 4 ಇಂಚು ಇದ್ದರೂ, ಲೈಂಗಿಕವಾಗಿ ಪ್ರಚೋದಿತರಾದಾಗ ಅದು ಗಾತ್ರದಲ್ಲಿ ದುಪ್ಪಟ್ಟುಗೊಳ್ಳುತ್ತದೆ.

೮. ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ, ಇಂಗ್ಲೆಂಡಿನ ಗುಪ್ತಚರ ಸಂಸ್ಥೆಯಾದ MI6 ವೀರ್ಯವನ್ನ ಅಗೋಚರ ಶಾಯಿ ಅಂದರೆ ಅಗೋಚರ ಇಂಕ್ ಆಗಿ ಬಳಸುತ್ತಿದ್ದರು.

೯.  ಮೌಖಿಕ ಲೈಂಗಿಕತೆ(oral sex) ಅಲ್ಲಿ ತೊಡಗಿಕೊಳ್ಳುವುದು ಕೇವಲ ಮಾನವರಷ್ಟೇ ಅಲ್ಲ! ತೋಳಗಳು, ಕರಡಿಗಳು ಹಾಗು ಬಾವಲಿಗಳಲ್ಲಿ ಕೂಡ ನಾವು ಇದನ್ನ ಕಾಣಬಹುದು.

೧೦.  ಹೆಂಗಸರು ಉದ್ವೇಗಕ್ಕೆ ಒಳಗಾದಾಗ ಆಗುವಂತೆಯೇ, ಶೇಕಡಾ 60 ರಷ್ಟು ಗಂಡಸರು ಉದ್ವೇಗಕ್ಕೆ ಒಳಗಾದಾಗ ಅವರ ತೊಟ್ಟುಗಳು ನೆಟ್ಟಗೆ ನಿಲ್ಲುತ್ತವೆ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon