Link copied!
Sign in / Sign up
161
Shares

ಸೀರೆಗೆ ಸುಂದರ ಕುಚ್ಚು : ಮನೆಯಲ್ಲೇ ಮಾಡಲು ಸರಳ, ವಿವರವಾದ ಮಾರ್ಗದರ್ಶಿ

ಸೀರೆ ಒಂದು ಹೊಸ ನೋಟವನ್ನು ರಚಿಸುವ ಪ್ರತಿಭೆಯಾಗಿರುತ್ತದೆ , ಪ್ರತಿ ಭಾರಿ ಧರಿಸಲಾಗುವುದು ಮತ್ತು ಈಗಾಗಲೇ ಬಹುಕಾಂತಿಯ ಉಡುಪನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಲು ಬಂದಾಗ , ಎಂದಿಗೂ ದೂರವಿರುವ ಒಂದು ಕಲ್ಪನೆ ಇರುತ್ತದೆ . ಸಾಮಾನ್ಯವಾಗಿ ಸೀರೆಯ ಒಂದು ಆತ್ಮ ಎಂದು ಕರೆಯಲ್ಪಡುವ ಪಲ್ಲುವನ್ನು ಅಸಂಖ್ಯಾತ ರೀತಿಯಲ್ಲಿ ವಿನ್ಯಾಸಗೊಳಿಸಬಹುದು . ಇದನ್ನು ವಿಭಿನ್ನ ವಾಗಿ ಧರಿಸಲಾಗುತ್ತದೆ . ಆದರೂ , ಕುಚ್ಚುವಿನ ವಿನ್ಯಾಸಗಳು ಹೆಚ್ಚು ಬಣ್ಣವನ್ನು ಸೇರಿಸುತ್ತವೆ ಮತ್ತು ಪ್ರಸ್ತುತ ಇರುವ ಸೀರೆಯ ವಿನ್ಯಾಸಕ್ಕೆ ಚೈತನ್ಯದ ಭಾವನೆಯಂತಹ ಅಲಂಕರಣಗಳೊಂದಿಗೆ ಮತ್ತಷ್ಟೂ ನೋಟವನ್ನು ವರ್ಧಿಸುವ ಸಾಮರ್ಥ್ಯ ವನ್ನು ಅಂತರ್ಗತವಾಗಿ ಹೊಂದಿದೆ . ಇದು ಸೀರೆಯ ಸೌಂದರ್ಯ ಕ್ಕೆ ಮತ್ತೊಂದು ಆಯಾಮವನ್ನು ಸೇರಿಸುವುದು . ನಿಮ್ಮ ಕೈಯಲ್ಲಿ ಪ್ರಯತ್ನಿಸುವಾಗ ನೀವು ಪ್ರಾರಂಭಿಸಬಹುದಾದ ಸರಳವಾದ ವಿನ್ಯಾಸಗಳು ಇಲ್ಲಿದೆ . 

ಈ ಸೃಜನಾತ್ಮಕ ಯೋಜನೆಯನ್ನು ಪ್ರಾರಂಭಿಸಲು ಕುಚ್ಚು ವಿನ್ಯಾಸವು ನಿಮಗೆ ಅಗತ್ಯವಿರುತ್ತದೆ .

ಇದರಲ್ಲಿ ನಿಮ್ಮ ದಾರದ ಆಯ್ಕೆಯ ಬಣ್ಣಗಳು ಮುಖ್ಯ , ಮೊದಲಿಗೆ ಸೀರೆಯ ಪಲ್ಲುವಿನ ಅಂಚನ್ನು ಹೊಲಿದುಕೊಳ್ಳಬೇಕು .

 
ಇದಕ್ಕೆ ಬೇಕಾಗಿರುವ ವಸ್ತುಗಳು 
 
ಸಿಲ್ಕ್ ಥ್ರೆಡ್ , ದೊಡ್ಡ ಕಣ್ಣಿನ ಸೂಜಿ , ಸಣ್ಣ ಕಣ್ಣಿನ ಸೂಜಿ , ಕ್ರೋಶ { 14 ನೆ ನಂ } , ಗೋಲ್ಡನ್ ಝರಿ ಥ್ರೆಡ್ , ಗೋಲ್ಡನ್ ಬೀಡ್ಸ್ , ಕತ್ತರಿ , ಮತ್ತು ಟ್ರಿಮ್ಮರ್ .
 
 
ಕುಚ್ಚು ಹಾಕುವ ವಿಧಾನ
 
ಮೊದಲಿಗೆ ಕಾರ್ಡ್ಬೋರ್ಡ್ ತೆಗೆದುಕೊಂಡು 50 ಎಳೆಗಳುಳ್ಳ ಸಿಲ್ಕ್ ದಾರವನ್ನು ಸುತ್ತಿಕೊಳ್ಳಬೇಕು.
 
 
 
ನಂತರ ದಾರದ ಒಂದು ತುದಿಯನ್ನು ಕಟ್ ಮಾಡಿ ಆ ತುದಿಗೆ ನೀರು ಅಥವಾ ಫಾಬ್ರಿಕ್ ಗ್ಲೂ ಬಳಸಿ ಒಂದು ತುದಿಗೆ ಸವರಿ ,ಇದರಿಂದ ನಿಮಗೆ ಸೂಜಿಗೆ ದಾರ ಸೇರಿಸುವುದು ಸುಲಭವಾಗುತ್ತದೆ.  
 
 
 
ದಪ್ಪ ಕಣ್ಣಿನ ಸೂಜಿಗೆ ದಾರವನ್ನು ಸೇರಿಸಿಕೊಂಡು ನಂತರ ಸೀರೆಯ ಪಲ್ಲುವಿನ ಅಂಚಿನ ತುದಿಗೆ ಮೇಲಿಂದ ಸೇರಿಸಿ , ಮರಳಿ ಹಿಂದಿನಿಂದ ಎಳೆದುಕೊಂಡು ನಂತರ ಎರಡು ಕಡೆಯ ದಾರವನ್ನು ಹಿಡಿದು ನಿಮಗೆ ಎಷ್ಟು ಉದ್ದ ಬೇಕೋ ಅಷ್ಟು ಉದ್ದಕ್ಕೆ ಕಟ್ ಮಾಡಿಕೊಳ್ಳಿ ,
 
 
 
ನಂತರ ಗೋಲ್ಡನ್ ಝರಿ ಥ್ರೆಡ್ ಎರಡು ಎಳೆಯಾಗಿ ತೆಗೆದುಕೊಂಡು , ಸೀರೆಯ ಕುಚ್ಚಿಗೆ ಗಂಟನ್ನು ಹಾಕಬೇಕು ,ಗಮನಿಸಿ ಗಂಟನ್ನು ಗಟ್ಟಿಯಾಗಿ ಹಾಕಬೇಕು ,ನಂತರ ಟ್ರಿಮ್ಮರ್ ತೆಗೆದುಕೊಂಡು ಕಟ್ಟಿರುವ ಸೀರೆಯ ಕುಚ್ಚುವನ್ನು ಟ್ರಿಮ್ ಮಾಡಿಕೂಳ್ಳಬೇಕು .
 
 
 
ಹೀಗೆ ಒಂದಾದ ನಂತರ ಒಂದು ಸ್ವಲ್ಪ ಅಂತರವಿಟ್ಟುಕೂಂಡು ಸೀರೆಯ ಪಲ್ಲುವಿನ ಕೊನೆಯ ಅಂಚಿನ ತನಕ ಕುಚ್ಚು ಹಾಕುತ್ತಾ  ಹೋಗಬೇಕು . ಕೊನೆಗೆ ನಿಮ್ಮ ಸೀರೆಯ ಕುಚ್ಚು ರೆಡಿ . ಇದು ನಿಮ್ಮ ಸೀರೆಗೆ ಸಂಪೂರ್ಣ ಹೊಸ ನೋಟವನ್ನು ನೀಡುತ್ತದೆ .

 
ಇದೇ ರೀತಿಯಲ್ಲಿ ಗೋಲ್ಡನ್ ಬೀಡ್ಸ್ ಗಳನ್ನು ಬಳಸಿ ಕುಚ್ಚುಗಳನ್ನು ಹಾಕಬಹುದು
ಮೊದಲಿಗೆ 40 ಎಳೆಗಳುಳ್ಳ ಸಿಲ್ಕ್ ಥ್ರೆಡ್ ತೆಗೆದುಕೊಂಡು ಸೂಜಿಗೆ ಸೇರಿಸಿ ನಂತರ ಗೋಲ್ಡನ್ ಬೀಡ್ಸ್ ಅದಕ್ಕೆ ಸೇರಿಸಿ ಕೊಳ್ಳಬೇಕು ನಂತರ ಸೀರೆಯ ಪಲ್ಲುವಿನ ಅಂಚಿಗೆ ಮೇಲಿಂದ ಸೇರಿಸಿ , ಮರಳಿ ಅದನ್ನು ಹಿಂದೆಯಿಂದ ಎಳೆದು ಕೊಳ್ಳಬೇಕು ,ಗೋಲ್ಡನ್ ಬೀಡ್ಸ್ ಮುಂದೆ ಇರುತ್ತದೆ .
 

ನಂತರ ಎರಡು ಕಡೆಯ ದಾರವನ್ನು ಸೇರಿದಂತೆ ಹಿಡಿದು ಅದಕ್ಕೆ ಝರಿಯ ದಾರದಿಂದ ಗಂಟನ್ನು ಹಾಕಬೇಕು , ನಂತರ ಕೊನೆಗೆ ಕುಚ್ಚವಿನ ದಾರವನ್ನು ಟ್ರಿಮ್ ಮಾಡಿಕೊಳ್ಳಬೇಕು.
 
 
 


ಕ್ರೋಶ ಕೂಡ ಬಳಸಿ ಕುಚ್ಚುಗಳನ್ನು ಹಾಕಬಹುದು . ಕ್ರೋಶ ಹೆಣೆಯುವ ರೂಡಿಯಲ್ಲಿರುವವರಿಗೆ ಇದು ಸುಲಭ , ಹೀಗೆ ನಮ್ಮ ಕರಕುಶಲತೆಯನ್ನು ಉಪಯೋಗಿಸಿ ಅನೇಕ ತರಹದ ಡೀಸೈನ್ ಕುಚ್ಚುಗಳನ್ನು ಸೀರೆಗೆ ಹಾಕಬಹುದು ,ನಮ್ಮ ಸೀರೆಯ ಅಂದವನ್ನು ಹೆಚ್ಚಿಸುತ್ತದೆ, ಇದರಿಂದ ಸೀರೆಗಳು.ಹೆಚ್ಚು ಸುಂದರವಾಗಿ ಹಾಗೂ ಗ್ರಾಂಡ್ ಲುಕ್ ನಿಂದ ಕಾಣಿಸುವಂತೆ ಮಾಡುತ್ತದೆ .
 
 
Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon