Link copied!
Sign in / Sign up
31
Shares

ಸೇರಲು ಸರಿಯಾದ ಸಮಯ … !

ಮಗುವನ್ನು ಸೃಷ್ಟಿಸಲು, ಮೊಟ್ಟೆ ಮತ್ತು ವೀರ್ಯ ಸರಿಯಾದ ಸಮಯದಲ್ಲಿ ಸೇರಬೇಕು. ಆ ಸಮಯ ಯಾವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನೀವು ಮಗುವನ್ನು ಪಡೆಯಲು ಪ್ರಯತ್ನಿಸುವಾಗ ಸಮಯವು ಬಹಳ ಮುಖ್ಯವಾಗುತ್ತದೆ. ಪರಿಪೂರ್ಣ ಮೊಟ್ಟೆ ಮತ್ತು ದೋಷರಹಿತ ವೀರ್ಯವು ಅನುಪಯುಕ್ತ ಸಮಯದಲ್ಲಿ ಸೇರಿದರೆ ನಿಷ್ಪ್ರಯೋಜಕವಾಗುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ಸೇರಿಸಿದಾಗ ಗರ್ಭ ನಿಲ್ಲುವುದು. ಇದನ್ನು ಮಾಡಲು ನೀವು ಅಂಡೋತ್ಪತ್ತಿಯಾದ ೨೪ ಗಂಟೆಯೊಳಗೆ ಸಂಭೋಗ ಮಾಡಬೇಕು. ತಜ್ಞರ ನೀವು ಅಂಡೋತ್ಪತ್ತಿ ಹೊಂದುವ ಒಂದು ದಿನದ ಮೊದಲು ಒಂದು ದಿನ ಬಿಟ್ಟು ಒಂದು ದಿನ ಸಂಭೋಗದಲ್ಲಿ ತೊಡಗಿಕೊಳ್ಳಲು ಸಲಹೆ ನೀಡುತ್ತಾರೆ.

ನಿಮಗೆ ತಿಳಿದಿರಬೇಕಾದುದು ನೀವು ಯಾವಾಗ ಅಂಡೋತ್ಪತ್ತಿ ಮಾಡುವಿರಿ ಎಂದು ಅದನ್ನು ತಿಳಿಯಲು ಮುಂದೆ ಓದಿ. ಆ ಸಮಯದಲ್ಲಿ ನೀವು ಸಂಭೋಗ ಮಾಡುವುದರಿಂದ ಬೇಗನೆ ಗರ್ಭಧರಿಸಬಹುದು.

೧.ನಿಮ್ಮ ಋತುಚಕ್ರವನ್ನು ಗುರುತು ಮಾಡಿ

ಫಲವತ್ತತೆಯ ಬಗ್ಗೆ ಅನೇಕರಲ್ಲಿ ಇರುವ ಒಂದು ಸಾಮಾನ್ಯ ತಪ್ಪು ಮಾಹಿತಿ ಎಂದರೆ ಅದು, ಎಲ್ಲಾ ಮಹಿಳೆಯರು ತಮ್ಮ ಋತುಚಕ್ರದ ನಂತರ ೧೪ ದಿನದಲ್ಲಿ ಅಂಡೋತ್ಪತ್ತಿ ಮಾಡುವರು ಎಂದು. ಆದರೆ ಅದು ಯಾವ ಮಹಿಳೆಯರು ೨೮ ದಿನಗಳಿಗೆ ಸರಿಯಾಗಿ ತಮ್ಮ ಮುಟ್ಟಿನ ದಿನವನ್ನು ಅನುಭವಿಸುವರು ಅವರಿಗೆ ಮಾತ್ರ ಅದು ಹೊಂದುತ್ತದೆ. ಸತ್ಯವೇನೆಂದರೆ ಅಂಡೋತ್ಪತ್ತಿಯು ಮುಟ್ಟಾದ ನಂತರದ ೧೪ನೇ ದಿನದಲ್ಲಿ ಪ್ರಾರಂಭವಾಗುವುದಿಲ್ಲ ಅದು ಮುಟ್ಟಾಗುವ ಹಿಂದಿನ ೧೪ ನೇ ದಿನದಲ್ಲಿ ಶುರುವಾಗುತ್ತದೆ. ನಿಮಗೆ ನಿಯಮಿತವಾಗಿ ಮುಟ್ಟು ಆಗುತ್ತಿದ್ದರೆ ನೀವು ಅಂಡೋತ್ಪತ್ತಿ ಯಾವಾಗ ಆಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.

೨.ಬೆಳಗ್ಗೆ ಎಚ್ಚರವಾದಾಗ ನಿಮ್ಮ ತಾಪಮಾನವನ್ನು ಗಮನಿಸಿ

ಬೆಳಗಿನ ನಿಮ್ಮ ತಾಪಮಾನವನ್ನು ನೋಡುವುದು ನಿಮ್ಮ ಅಂಡೋತ್ಪತ್ತಿಯ ದಿನವನ್ನು ಪತ್ತೆಹಚ್ಚಲು ಇರುವ ಮತ್ತೊಂದು ವಿಧಾನ. ಇದಕ್ಕೆ ವಿಶೇಷ ಥರ್ಮೋಮೀಟರ್ ನ ಅವಶ್ಯಕತೆ ಇದೆ ಇದು ಔಷಧಿ ಅಂಗಡಿಗಳಲ್ಲಿ ದೊರೆಯುತ್ತದೆ. ಇದು ಬೇಸಲ್ ಬಾಡಿ ಟೆಂಪರೇಚರ್ (BBT) ಪರೀಕ್ಷಿಸುತ್ತದೆ. ಸಾಮಾನ್ಯ ಮಹಿಳೆಯ BBT ಅಂಡೋತ್ಪತ್ತಿ ಆಗುವ ಮೊದಲು 96*F - 99*F ಇರುತ್ತದೆ, ಆದರೆ ಮೊಟ್ಟೆ ಬಿಡುಗಡೆ ಆದ ನಂತರ ಇದು ಅದರ ಅರ್ಧದಷ್ಟು ಹೆಚ್ಚುತ್ತದೆ.

೩.ಗರ್ಭಕಂಠದ ಲೋಳೆಯನ್ನು ಪರೀಕ್ಷಿಸಿ

ಯಾವುದೇ ಉಪಕರಣಗಳ ಅಗತ್ಯ ಇಲ್ಲದೆ, ನಿಮ್ಮ ಪಲವತ್ತತೆಯ ಹಂತವನ್ನು ಕಂಡುಹಿಡಿಯಲು ಗರ್ಭಕಂಠದ ಲೋಳೆಯಲ್ಲಿನ ಬದಲಾವಣೆ ಸಹಾಯ ಮಾಡುತ್ತದೆ. ನೀವು ಮುಟ್ಟಾದ ಕೆಲವು ನಂತರದ ದಿನಗಳವರೆಗೆ ನಿಮ್ಮ ಗರ್ಭಕಂಠದ ದ್ರವ ಒಣ ಅಥವಾ ಅಂಟು ರೂಪದಲ್ಲಿರುತ್ತದೆ. ನಂತರ ಇದು ತೇವವಾಗುತ್ತದೆ. ಇದು ಮೊಟ್ಟೆಯಾ ಬಿಳಿ ಭಾಗದ ರೀತಿಯಲ್ಲಿ ಇದ್ದರೆ ನೀವು ಬಹುತೇಕ ಫಲವತ್ತತೆಯನ್ನು ಪಡೆದಿರುವಿರಿ ಎಂದರ್ಥ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon