Link copied!
Sign in / Sign up
1
Shares

ಸ್ಕೂಲ್ ಫೀಸ್ ಕಟ್ಟಿಲ್ಲ ಎಂದು ಪುಟ್ಟ ಹುಡುಗಿಯರಿಗೆ ಈ ಶಾಲೆ ಕೊಟ್ಟ ಶಿಕ್ಷೆ ಎಂತದ್ದು ಗೊತ್ತಾ?

ಒಂದು ಶಾಲೆಯ ಭಾವಶೂನ್ಯ ಮತ್ತು ಕಠೋರ ಧೋರಣೆಯು ಕೊನೆಗೂ ಒಂದು ಮತಿಭ್ರಮಣೆ ಹೊಂದಿದುವರು ಮಾಡುವಂತಹ ಕೆಲಸದಿಂದ ಹೊರಬಂದಿದೆ. ಅಂದಹಾಗೆ ಇಲ್ಲಿ ನಡೆದದ್ದು ಏನೆಂದು ಕೇಳಿದರೆ ನೀವು ಗಾಬರಿ ಆಗುತ್ತೀರಿ. ಒಂದು ಖಾಸಗಿ ವಿದ್ಯಾಸಂಸ್ಥೆಯು ಪೋಷಕರು ತಮ್ಮ ಮಕ್ಕಳ ಶಾಲೆಯ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿಲ್ಲವೆಂದು ಅವರ ಮಕ್ಕಳನೆಲ್ಲಾ ದೆಹಲಿಯ ಸುಡು ಬಿಸಿಲನ್ನೂ ಲೆಕ್ಕಿಸದೆ, ಶಾಲೆಯ ನೆಲಮಾಳಿಗೆಯಲ್ಲಿ 5 ಗಂಟೆಗಳಿಗೂ ಹೆಚ್ಚು ಕಾಲ ಬಂಧಿಸಿ ಇಟ್ಟಿದೆ.

ಇಂತಹ ವಿಪರೀತ ಕ್ರಮವನ್ನು ತೆಗೆದುಕೊಳ್ಳಲು ಕಾರಣ ಈ ಮಕ್ಕಳ ಪೋಷಕರು ಡೆಡ್ಲೈನ್ ಒಳಗಡೆ ಶಾಲೆಯ ಶುಲ್ಕವನ್ನು ಪಾವತಿಸದೇ ಇರುವುದು. ದೆಹಲಿ ಪೊಲೀಸರು ಮಂಗಳವಾರದಂದು ಶಾಲೆಯ ಆಡಳಿತದ ಮೇಲೆ IPC ಸೆಕ್ಷನ್ 342 ಮತ್ತು ಜುವೆನೈಲ್ ಜಸ್ಟಿಸ್ 75 ನೇ ಸೆಕ್ಷನ್ ಅಡಿಗೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮಾಡುತ್ತಿದೆ.

ಪೋಷಕರ ಪ್ರಕಾರ, ಈ ಘಟನೆಯು ನಡೆದದ್ದು ಸೋಮವಾರದ ಮಧ್ಯಾಹ್ನ ಮತ್ತು ಈ ಘಟನೆಯ ಬಗ್ಗೆ ದೆಹಲಿ ಪೊಲೀಸರಿಗೂ ತಿಳಿಸಲಾಗಿತ್ತು . ಸುಮಾರು 40 ಡಿಗ್ರಿ ಅಷ್ಟು ತಾಪಮಾನ ಹೊಂದಿರುವ ಶಾಲೆಯ ನೆಲಮಾಳಿಗೆಯಲ್ಲಿ ಮಕ್ಕಳನ್ನು 5 ಗಂಟೆಗಳಿಗೂ ಹೆಚ್ಚು ಹೊತ್ತು ಕೂಡಿ ಹಾಕಿದ್ದಾರೆ!

FIR ಅಲ್ಲಿ ದಾಖಲು ಮಾಡಿದಂತೆ ದೂರುದಾರಳ ಪ್ರಕಾರ, ಆಕೆ ಮತ್ತು ಆಕೆಯೊಂದಿಗೆ ಇತರೆ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಸೋಮವಾರದ ಬೆಳಗ್ಗೆ ಗಾಲಿ ಕ್ವಾಸಿಮ್ ಜಾನ್ ಅಲ್ಲಿರುವ ರಬಿಯಾ ಗರ್ಲ್ಸ್ ಪಬ್ಲಿಕ್ ಸ್ಕೂಲಿಗೆ ಬಿಟ್ಟು ಬಂದಿದ್ದಾರೆ. ಅವರ ಮಾತಿನಲ್ಲೇ ಮುಂದುವರೆಸಿದರೆ “ನಮ್ಮ ಮಕ್ಕಳು ರಬಿಯಾ ಸ್ಕೂಲಿನ ಪ್ರೈಮರಿ ಸೆಕ್ಷನ್ ಅಲ್ಲಿ ಓದುತ್ತಿದ್ದಾರೆ. ಎಂದಿನಂತೆ ನಾವು ಮಕ್ಕಳನ್ನು ಶಾಲೆಯ ಬಳಿ ಸೋಮವಾರ, ಅಂದರೆ ಜೂಲೈ 9 ರಂದು, ಬೆಳಗ್ಗೆ 7 ಗಂಟೆಗೆ ಇಳಿಸಿ, ಮನೆಗೆ ವಾಪಸ್ ಆದೆವು. ಸುಮಾರು 12:30 ಅಷ್ಟೊತ್ತಿಗೆ ಮಕ್ಕಳನ್ನು ವಾಪಸ್ ಕರೆತರಲೆಂದು ಶಾಲೆಗೆ ಹೋದೆವು. ಅಲ್ಲಿ ನೋಡಿದರೆ ಮಕ್ಕಳು ತಮ್ಮ ಕ್ಲಾಸಿನ ಕೊಠಡಿಯಲ್ಲಿ ಇರಲೇ ಇಲ್ಲ. ಆ ನಂತರ ಶಾಲೆಯ ಸಿಬ್ಬಂದಿ ಬಳಿ ಈ ಬಗ್ಗೆ ವಿಚಾರಿಸಿದಾಗ ಅವರು ನಮ್ಮ ಮಕ್ಕಳು ನೆಲಮಾಳಿಗೆಯಲ್ಲಿ ಇರುವುದಾಗಿಯೂ ಮತ್ತು ಅವರನ್ನು ಬೆಳಗ್ಗೆ 7 ಗಂಟೆಯಿಂದ ಅಲ್ಲೇ ಬಂಧಿಸಿ ಇಟ್ಟಿರುವುದಾಗಿ ತಿಳಿಸಿದರು. ಇದನ್ನು ಕೇಳಿದ ನಮಗೆ ಸಿಟ್ಟು ನೆತ್ತಿಗೇರಿತು. ನೆಲಮಾಳಿಗೆಯ ಬಾಗಿಲನ್ನು ಗುದ್ದಿ ತೆಗೆದೆವು. ಒಳಗೆ ನೋಡಿದರೆ ನೆಲದ ಮೇಲೆ ನಮ್ಮ ಹೆಣ್ಣು ಮಕ್ಕಳು ಮಲಗಿದ್ದವು. ಆ ದೃಶ್ಯವನ್ನು ನೋಡಿಯೇ ನಾವು ಗಾಬರಿ ಆಗಿಬಿಟ್ಟೆವು. ಹುಡುಗಿಯರು ಆ ಸುಡು ಬಿಸಿಯಲ್ಲಿ ನೆಲದ ಮೇಲೆ ಬಿದ್ದಿದ್ದರು, ಊಟ-ನೀರು ಏನೂ ಇಲ್ಲದೆ. ಕೆಲವು ಹುಡುಗಿಯರು ನಿರ್ಜಲೀಕರಣ ಹೊಂದುಬಿಟ್ಟಿದ್ದರು” ಎಂದು ತಿಳಿಸುತ್ತಾರೆ.

ಅಲ್ಲದೆ ಪೋಷಕರು ಈ ಬಗ್ಗೆ ಕೇಳಲು ಶಾಲೆಯ ಮುಖ್ಯಶಿಕ್ಷಕಿ ಫರ್ಹಾ ದೀಬಾ ಖಾನ್ ಬಳಿಗೆ ಹೋದರೆ, ಆಕೆ ಪೋಷಕರಿಗೇನೇ ಅವಮಾನ ಮಾಡಿ ಕಳುಹಿಸಿದ್ದಾಳೆ. “ಈಗಲೇ ಶಾಲೆಯ ಆವರಣದಿಂದ ಹೊರಹೋಗಬೇಕು” ಎಂದು ನಮಗೆ ಹೇಳಿದರೆಂದು ಪೋಷಕರು ಹೇಳುತ್ತಾರೆ.

 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon