Link copied!
Sign in / Sign up
14
Shares

ಸಾಯುತ್ತಿರುವ ಮಗುವನ್ನ ಅದರ ತಂಗಿ ಪಕ್ಕ ಮಲಗಿಸಿದರು,ಆಮೇಲೆ ಆಗಿದ್ದು ಪವಾಡವೇ!

ನಾವೆಲ್ಲರೂ ಕಥೆಗಳಲ್ಲಿ ಪ್ರೀತಿಯ ಮಾಂತ್ರಿಕ ಶಕ್ತಿ ಎಂತದ್ದು ಎಂಬುದರ ಬಗ್ಗೆ ಕೇಳಿರುತ್ತೀವಿ. ಹೇಗೆ ಹೆಂಡತಿಯು ತನ್ನ ಪ್ರೀತಿಯಿಂದ ಮರಣ ಹೊಂದಿದ ಪತಿಯ ಜೀವವನ್ನೇ ದೇವರಿಂದ ವಾಪಸ್ ತಂದಳು ಎಂಬ ಕಥೆ, ಹೇಗೆ ಹ್ಯಾರಿ ಪಾಟರ್ ಕಥೆಯಲ್ಲಿ ಹ್ಯಾರಿ ಪಾಟರ್ ತಾಯಿ ಲಿಲ್ಲಿ ಪಾಟರ್  ಪ್ರೀತಿಯ ಶಕ್ತಿಯಿಂದ ಹ್ಯಾರಿ ಪಾಟರ್ ಅನ್ನು ಅತ್ಯಂತ ದುಷ್ಟ, ಶಕ್ತಿಶಾಲಿ ಮಾಂತ್ರಿಕ ಕೂಡ ಏನು ಮಾಡಲು ಆಗುವುದಿಲ್ಲ ಎಂಬ ಕಥೆ, ಹೀಗೆ ಹಲವಾರು. ಆದರೆ ಇದು ಕೇವಲ ಕಥೆಗಳಿಗಷ್ಟೇ ಸೀಮಿತವಾಗಿಲ್ಲ!

ಅಮೆರಿಕಾದಲ್ಲಿ ಮಾನವ ಸ್ಪರ್ಶ ಮತ್ತು ಪ್ರೀತಿಯನ್ನು ವಾಸ್ತವದಲ್ಲಿಯೂ ಔಷಧಿಯಾಗಿ ಬಳಸುವುದಲ್ಲದೆ, 1995 ರಲ್ಲಿ ಅಕಾಲಿಕವಾಗಿ ಜನಿಸಿದ ಮಗು (ಪ್ರೇಮೆಚೂರ್ ಬೇಬಿ) ಜೀವ ಕೂಡ ಉಳಿಸಿದೆ!

ಅಮೆರಿಕಾದ ವರ್ಚೆಸ್ಟರ್ ಅಲ್ಲಿ ಪಾಲ್ ಜ್ಯಾಕ್ಸನ್ ಎಂಬ ತಂದೆಗೆ ಯು-ಮಾಸ್ ಆಸ್ಪತ್ರೆಯಲ್ಲಿ ಅವಳಿ ಜವಳಿ ಮಕ್ಕಳಾದವು. ಆದರೆ ಆ ಮಕ್ಕಳು ತಮ್ಮ ನಿಗದಿತ ಹೆರಿಗೆಯ ಸಮಯಕ್ಕಿಂತ ಬರೋಬ್ಬರಿ 12 ವಾರಗಳಷ್ಟು ಮುಂಚಿತವಾಗಿ ಜನಿಸಿದ್ದವು. ಆಗ ಅಲ್ಲಿದ್ದ ನರ್ಸ್ಗಳು ಈಗ ಮಕ್ಕಳ ಸ್ಥಿತಿಯು ಪರವಾಗಿಲ್ಲ ಎನ್ನುವಂತೆ ಇದ್ದರೂ, ಮುಂದಿನ 48-72 ಗಂಟೆಗಳಲ್ಲಿ ಏನು ಬೇಕಾದರೂ ಆಗಬಹುದು ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು.

ಈ ಅವಳಿ ಜವಳಿ ಮಕ್ಕಳಿಗೆ ಮೂರು ವಾರಗಳು ತುಂಬುತ್ತಿದ್ದಂತೆ, ಅದರಲ್ಲಿ ಒಂದು ಹೆಣ್ಣು ಮಗುವಾದ ಬ್ರಿಯೆನ್ನಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಆಕೆಯ ದೇಹದಲ್ಲಿನ ಆಮ್ಲಜನಕ ಪ್ರಮಾಣ ಕುಸಿಯಿತು, ಆಕೆಯ ನಾಡಿಮಿಡಿತ ಜೋರಾಗಿತ್ತು, ಆಕೆಯ ಮೈಬಣ್ಣ ನೀಲಿಗೆ ತಿರುಗುತ್ತಿತ್ತು. ಆಗಲೇ ಅಲ್ಲಿನ ತೀವ್ರ ನಿಗಾ ಘಟಕದ ನರ್ಸ್ ಆಗಿದ್ದ ಗೇಯ್ಲ್ ಕಾಸ್ಪರಿಅನ್ ಆ ಮಕ್ಕಳ ಪೋಷಕರಿಗೆ ತಾವು ಹಿಂದೆಂದೂ ನೋಡಿರದ ಒಂದು ವಿಧಾನವೊಂದನ್ನ  ಪ್ರಯತ್ನಿಸಲೇ ಎಂದು ಕೇಳಿದಳು. ಪೋಷಕರು ಒಪ್ಪಿಗೆ ಕೊಟ್ಟೊಡನೆ, ಅಲ್ಲಿ ನಡೆದದ್ದು ಒಂದು ಪವಾಡವೇ ಸರಿ!


ಬ್ರಿಯೆನ್ನಳನ್ನ ಆಕೆಯ ಆರೋಗ್ಯಕರವಾಗಿದ್ದ ಅವಳಿ ಸಹೋದರಿ ಕೈರಿ ಅನ್ನು ಮಲಗಿಸಿದ್ದ ಇನ್ಕ್ಯುಬೇಟರ್ ಅಲ್ಲೇ ಮಲಗಿಸಿದರು. ಇದರ ಹಿಂದಿನ ಕಾರಣ, ಅವಳಿ ಜವಳಿ ಮಕ್ಕಳ ನಡುವೆ ಚರ್ಮದ ಸ್ಪರ್ಶ ಉಂಟಾಗಲಿ ಎಂದು. ಇದನ್ನು “ಕಾಂಗರೂ ಕೇರ್” ಎಂದು ಕರೆಯಲಾಗುವುದು. ಇದು ಈಗ ಜಗತ್ತಿನೆಲ್ಲೆಡೆ ಬಳಕೆಯಾಗುತ್ತಿದೆ.

ಹಾಗೆ ಒಟ್ಟಿಗೆ ಮಲಗಿಸಿದ ಕೆಲವೇ ಕ್ಷಣಗಳಲ್ಲಿ ಕೈರಿಯು ತನ್ನ ಪುಟ್ಟ ಕೈಯನ್ನು ತನ್ನ ಸಹೋದರಿಯ ಮೇಲೆ ಹಾಕಿದಳು, ಇದುವೇ ಆಕೆಯ ಸಹೋದರಿಯ ಜೀವವನ್ನು ಉಳಿಸಿತು ಎಂದು ಹೇಳಬಹುದು. ಬ್ರಿಯೆನ್ನಳ ಮುಖ್ಯ ಜೀವಕಾರ್ಯಗಳು ಮತ್ತು ಉಸಿರಾಟವು ಇದ್ದಕ್ಕಿದ್ದಂತೆ ಸರಿಯಾದ ಗತಿಗೆ ಮರಳಿದವು! ನರ್ಸ್ ಕಾಸ್ಪರಿಅನ್ ಪ್ರಕಾರ ಬ್ರಿಯೆನ್ನ ತನ್ನ ಸಹೋದರಿಯ ಸ್ಪರ್ಶ ಹೊಂದಿದೊಡನೆ ಶಾಂತವಾದಳು, ಆಕೆಯ ನಾಡಿಮಿಡಿತ ಹಿಡಿತಕ್ಕೆ ಬಂದಿತು ಮತ್ತು ಆಕೆಯ ಮೈಬಣ್ಣ ಬದಲಾಯಿತು ಎನ್ನುತ್ತಾರೆ.

ಈ ಮುಂಚೆ ವೈದ್ಯರು ಅವಳಿ ಜವಳಿ ಮಕ್ಕಳನ್ನು, ತ್ರಿವಳಿ ಮಕ್ಕಳನ್ನು ಕಿವಿಯ ಸೋಂಕು ಉಂಟಾಗಬಹುದು ಎಂಬ ಭಯದಿಂದ ಬೇರೆ ಬೇರೆಯಾಗಿ ಇಡುತ್ತಿದ್ದರು, ಆದರೆ ಈ ಪ್ರಕರಣದ ನಂತರ ಆ ವಾಡಿಕೆಯೇ ಬದಲಾಗಿ ಹೋಯಿತು!


ಈ ಎರಡು ಸಹೋದರಿಯರು ಆರೋಗ್ಯವಾಗಿ ಬೆಳೆದರು ಮತ್ತು ಅವರ ನಡುವೆ ಈಗ ಹಿಂದೆಂದಿಗಿಂತಲೂ ಗಟ್ಟಿಯಾದ ಬಂಧವಿದೆ. ಅವರ ನಡೆಗಳು, ನುಡಿಗಳು ಒಂದೇ ಆಗಿದೆ. ಇದೇ ಅಲ್ಲವೇ ಪ್ರಕೃತಿಯ ಪವಾಡ ಎನ್ನುವುದು! ಇಲ್ಲಿ ನೀವು ಈ ಸಹೋದರಿಯರ ಇತ್ತೀಚಿಗಿನ ಫೋಟೋವನ್ನ ನೋಡಬಹುದು.   

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon