100% ವೈಜ್ಞಾನಿಕವಾಗಿ ಸತ್ಯವಾದ ಗರ್ಭಧಾರಣೆಯ ಬಗೆಗಿನ 3 ಮೂಢನಂಬಿಕೆಗಳು!
ಈ ಹಳೆಯಕಾಲದ ಅಜ್ಜಿಯರು ತಾಯಿ ಆಗುತ್ತಿರುವವರಿಗೆ ಕೊಡುವ ಎಷ್ಟೊಂದು ಸಲಹೆಗಳನ್ನ ನಾವು ನಿರ್ಲಕ್ಷಿಸಬಹುದು. ಹೊಟ್ಟೆಯ ಕೆಳಭಾಗದಲ್ಲಿ ಮಗು ಇದ್ದರೆ ಅದು ಗಂಡು ಮಗು, ಅಥವಾ ಹೆಣ್ಣು ಮಗು ಅಥವಾ ಇನ್ನೇನೋ ಒಂದು ಎಂದು ಹೇಳುತ್ತಾರೆ. ಆದರೆ ನಿಮ್ಮ ಉದರದ ಸ್ನಾಯುಗಳು ಹಿಗ್ಗಿವೆ ಎಂದು ಸರಿಯಾದ ಕಾರಣ ಒಂದು ಬಿಟ್ಟು! ನಿಮ್ಮ ತಿನ್ನುವ ಬಯಕೆಗಳು ನಿಮ್ಮ ಮಗುವಿನ ದೇಹದ ಮೇಲೆ ಮಚ್ಚೆಯಾಗಿ ಉಳಿಯುವುದಿಲ್ಲ ಹಾಗು ಅಮಾವಾಸ್ಯೆ, ಹುಣ್ಣಿಮೆ ನಿಮ್ಮ ಹೆರಿಗೆಯ ಸಮಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಆದರೆ ಇತ್ತೀಚಿನ ಕಾಲದಲ್ಲಿ ನಡೆದ ಕೆಲವು ಅಧ್ಯಯನಗಳು ಹಾಗು ಸಮೀಕ್ಷೆಗಳು ನಾವು ತಲೆ ಬುಡವಿಲ್ಲ ಅಂದುಕೊಂಡಿದ್ದ ಎಷ್ಟೋ ನಂಬಿಕೆಗಳು ವೈಜ್ಞಾನಿಕವಾಗಿಯೂ ಸತ್ಯ ಎಂದು ತಿಳಿಸಿವೆ. ಅವು ಯಾವುದು ಎಂದು ಕೇಳಿದರೆ ನೀವು ಕೂಡ ಚಕಿತರಾಗುತ್ತೀರಿ. ತಿಳಿದುಕೊಳ್ಳಲು ಮುಂದೆ ಓದಿ :
೧. ದೀರ್ಘಕಾಲದ, ಕ್ಲಿಷ್ಟಕರ ಹೆರಿಗೆ ನೋವು ಅಂದರೆ ಮಗು ಗಂಡು
ಸಂಶೋಧಕರಿಗೆ ಇದು ಹೇಗೆ ಸತ್ಯವಾಗಿದೆ ಎಂಬುದಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, 2003 ಅಲ್ಲಿ ಐರ್ಲೆಂಡ್ ದೇಶದಲ್ಲಿ, ವೈದ್ಯರು ಒಂದು ಗುಂಪು, ಒಂದು ಹೆರಿಗೆಯ ಆಸ್ಪತ್ರೆಯಲ್ಲಿ 1997 ರಿಂದ 2000 ವರೆಗೆ ಸಂಭವಿಸಿದ ಎಲ್ಲಾ ಹೆರಿಗೆಗಳ ಪರಿಶೀಲನೆ ನಡೆಸಿದರು. ಇದರಲ್ಲಿ ಅಕಾಲಿಕ ಹೆರಿಗೆ ಆದವರನ್ನ ಹಾಗು ಪ್ರೇರಿತ ಹೆರಿಗೆ ನೋವು ಆದವರನ್ನ ಪರಿಗಣಿಸಿರಲಿಲ್ಲ. ಆ ಎಲ್ಲಾ ಸಂಖ್ಯೆಗಳನ್ನ ಅವರು ಅಧ್ಯಯನ ಮಾಡಿದ ಮೇಲೆ, ತಿಳಿದು ಬಂದದ್ದು ಏನು ಅಂದರೆ ಲಿಂಗಗಳ ನಡುವಿನ ಅಂತರವು ಸಣ್ಣದಾಗಿದ್ದರೂ ಗಮನಾರ್ಹ ಆಗಿತ್ತು ಎಂದು.
ಗಂಡು ಮಗು ಹೆತ್ತ ತಾಯಂದಿರ ಹೆರಿಗೆ ನೋವು 6 ಘಂಟೆಗಳಿಗಿಂತ ಸ್ವಲ್ಪ ಹೆಚ್ಚು ಇತ್ತು ಹಾಗು ಹೆಣ್ಣು ಮಗು ಹೆತ್ತ ತಾಯಂದಿರ ಹೆರಿಗೆ ನೋವು 6 ಘಂಟೆಗಳಿಗಿಂತ ಸ್ವಲ್ಪ ಕಮ್ಮಿ ಇತ್ತು. ಅಲ್ಲದೆ, ಗಂಡು ಮಗುವಿಗೆ ಜನನ ನೀಡುವ ತಾಯಂದಿರ ಹೆರಿಗೆಯು ಕ್ಲಿಷ್ಟಕರವಾಗುವ ಸಾಧ್ಯತೆಗಳು(6% ಅಷ್ಟು ಹೆರಿಗೆಗಳು C-ಸೆಕ್ಷನ್) ಹೆಚ್ಚು ಎಂದು ತಿಳಿದು ಬಂದಿದೆ. ಹೆಣ್ಣು ಶಿಶುಗಳ ವಿಷಯದಲ್ಲಿ ಇದು ಕೇವಲ 4% ಇದೆ.
ಕಾರಣ ಏನಿರಬಹುದು : ಹೆಣ್ಣು ಶಿಶುಗಳಿಗಿಂತ ಗಂಡು ಶಿಶುಗಳು ಸರಾಸರಿ ಸುಮಾರು 1 ಕಿಲೋಗ್ರಾಮ್ ಅಷ್ಟು ಹೆಚ್ಚು ತೂಕ ಹೊಂದಿರುತ್ತಾರೆ. ಅಲ್ಲದೆ, 2003 ಅಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಗಂಡು ಮಗು ಹೊರುವ ತಾಯಂದಿರು ಗರ್ಭಧಾರಣೆ ವೇಳೆ ಹೆಚ್ಚು ಕ್ಯಾಲೊರಿಗಳನ್ನ ಸೇವಿಸುತ್ತಾರೆ ಎಂಬುದು ತಿಳಿದು ಬಂದಿದೆ.
೨. ಹೆಣ್ಣು ಮಗು ಬೇಕೆಂದರೆ ಬಾಳೆಹಣ್ಣು ತಿನ್ನಬಾರದು
2008ರಲ್ಲಿ, “ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿ ಬಿ” ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ 740 ಹೆಂಗಸರಿಗೆ ಅವರು ಗರ್ಭತಾಳುವ ಮುನ್ನ ಪಾಲಿಸುತ್ತಿದ್ದ ಆಹಾರಪದ್ದತಿಯನ್ನ ವಿಶ್ಲೇಷಿಸಲು ಕೇಳಿ, ನಂತರ ಅವರ ಕ್ಯಾಲೊರಿ ಸೇವನೆಯ ಆಧಾರದ ಮೇಲೆ ಅವರನ್ನ ಮೂರು ಭಾಗಗಳಾಗಿ ವಿಂಗಡಿಸಲಾಯಿತು. ಮೊದಲ ಗುಂಪು ಅಂದರೆ ಹೆಚ್ಚು ಕ್ಯಾಲೊರಿ ಸೇವಿಸುತ್ತಿದ್ದ ತಾಯಂದಿರಲ್ಲಿ 56% ಜನರಿಗೆ ಗಂಡು ಮಗು ಆಗಿತ್ತು. ಕೊನೆಯ ಗುಂಪು ಅಂದರೆ ಅಲ್ಪ ಕ್ಯಾಲೊರಿ ಸೇವಿಸುತ್ತಿದ್ದ ತಾಯಂದಿರಲ್ಲಿ 55% ಜನರಿಗೆ ಹೆಣ್ಣು ಮಗು ಆಗಿತ್ತು.
ಇಲ್ಲಿಯೇ “ಬಾಳೆಹಣ್ಣು ತಿಂದರೆ ಗಂಡು ಮಗು ಆಗುತ್ತದೆ” ಎಂಬ ಮಾತು ಬರುವುದು. ಈ ಅಧ್ಯಯನ ನಡೆಸಿದ ಸಂಶೋಧಕರು ಕಂಡು ಹಿಡಿದದ್ದು ಏನು ಅಂದರೆ, ಮಗುವಿನ ಲಿಂಗದ ಮೇಲೆ ಪ್ರಭಾವ ಬೀರುವುದು ಕೇವಲ ಕ್ಯಾಲೊರಿ ಸೇವನೆ ಅಷ್ಟೇ ಅಲ್ಲ, ಅದರೊಂದಿಗೆ ಕೆಲವು ನಿಗದಿತ ಪೋಷಕಾಂಶಗಳು ಪ್ರಭಾವ ಬೀರುತ್ತವೆ ಎಂದು. ತುಂಬಾನೇ ಪೊಟ್ಯಾಸಿಯಂ ಸೇವಿಸುವುದು (ಬಾಳೆಹಣ್ಣಿನ ತುಂಬಾ ಇದೆ ಇರುತ್ತದೆ) ಮತ್ತು ಸೋಡಿಯಂ, ಕ್ಯಾಲ್ಸಿಯಂ ಒಳಗೊಂಡ ಆಹಾರವು ಗಂಡು ಶಿಶುವಿಗೆ ದಾರಿ ಮಾಡಿಕೊಡುತ್ತದೆ. ಆದರೆ ನಿಮ್ಮ ಮಗುವಿನ ಲಿಂಗವನ್ನ ನೀವು ನಿರ್ಧರಿಸಬೇಕೆಂದು ಆಹಾರಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಪಾಯಕಾರಿ. ಕೇವಲ ಕೆಲವಷ್ಟು ಪೋಷಕಾಂಶಗಳನ್ನು ಸೇವಿಸಿ, ಇನ್ನೂ ಕೆಲವನ್ನ ಕಡೆಗಣಿಸಿದರೆ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.
೩. ಗರ್ಭಧಾರಣೆ ವೇಳೆ ಎದೆಯುರಿ ಆದರೆ ಮಗುವಿಗೆ ಕೂದಲು ಜಾಸ್ತಿ ಇರುತ್ತದೆ
ಇಲ್ಲಿ ನಿಮಗೆ ಗೊತ್ತಿರದ ಒಂದು ವಿಷಯ ಹೇಳುತ್ತೇವೆ - ನಿಮ್ಮ ಗರ್ಭಧಾರಣೆಯ ಎರಡನೇ ತ್ರೈಮಾಸಿಕದಲ್ಲಿ ಶಿಶುವು ತನ್ನ ಮೈಮೇಲೆ ಚಿಕ್ಕ ಚಿಕ್ಕ ಕೂದಲುಗಳು ಬೆಳೆಯುತ್ತವೆ ಮತ್ತು ಮೂರನೇ ತ್ರೈಮಾಸಿಕದಲ್ಲಿ ಆ ಕೂದಲುಗಳು ಉದುರುತ್ತವೆ ಮತ್ತು ಆ ಕೂದಲುಗಳನ್ನ ನಿಮ್ಮ ಮಗುವು ಸೇವಿಸುತ್ತದೆ !
2004ರಲ್ಲಿ ಬರ್ತ್ ಎಂಬ ಪತ್ರಿಕೆಗೆಗಾಗಿ ನಡೆದ ಒಂದು ಸಮೀಕ್ಷೆಯಲ್ಲಿ ಜಾನ್ ಹಾಪ್ಕಿನ್ಸ್ ಕಾಲೇಜಿನ ವಿದ್ಯಾರ್ಥಿಗಳು 64 ಗರ್ಭಿಣಿಯರನ್ನ ಅವರ ಗರ್ಭಧಾರಣೆಯ ಪೂರ್ತಿ ಸಮಯದವರೆಗೆ ಅಧ್ಯಯನ ಮಾಡಿದರು. ಅದರಲ್ಲಿ 28 ಮಹಿಳೆಯರು ಮಧ್ಯಮ ಅಥವಾ ತುಂಬಾ ಜಾಸ್ತಿ ಎದೆಯುರಿ ಅನುಭವಿಸಿದಾಗಿ ತಿಳಿಸಿದ್ದಾರೆ. ಆ 28 ಹೆಂಗಸರ ಗುಂಪಿನಲ್ಲಿ 23 ಹೆಂಗಸರಿಗೆ ಸಾಧಾರಣ ಪ್ರಮಾಣದ ಹಾಗು ಸಾಧಾರಣಕ್ಕಿಂತ ಹೆಚ್ಚು ಪ್ರಮಾಣದ ಕೂದಲುಗಳು ಉಳ್ಳ ಮಕ್ಕಳು ಜನಿಸಿದವು. ಆದರೆ ಎದೆಯುರಿ ಆಗೇ ಇಲ್ಲವೆಂದು ತಿಳಿಸಿದ 12 ಹೆಂಗಸರಲ್ಲಿ, 10 ಹೆಂಗಸರಿಗೆ ಸಾಧಾರಣ ಪ್ರಮಾಣಕ್ಕಿಂತ ಕಮ್ಮಿ ಕೂದಲು ಉಳ್ಳ ಮಕ್ಕಳು ಜನಿಸಿದರು.
ಆದರೆ ಸಂಶೋಧಕರು ಹೇಳುವ ಪ್ರಕಾರ ಇದೆಲ್ಲವೂ ಹಾರ್ಮೋನ್ ಬದಲಾವಣೆ ಇಂದ ಆದದ್ದು ಎಂದು. ಕೂದಲು ಬೆಳವಣಿಗೆಗೆ ಕಾರಣ ಆಗುವ ಹಾರ್ಮೋನ್ ಹೊಟ್ಟೆಯಲ್ಲಿನ ಆಮ್ಲವನ್ನ ಹೊಟ್ಟೆಯಲ್ಲಿಯೇ ಹಿಡಿದಿಟ್ಟುಕೊಳ್ಳಲು ಕೂಡ ಕೆಲಸ ಮಾಡುತ್ತದೆ. ಇದರಿಂದ ಇವೆರೆಡರ ನಡುವೆ ಸಂಬಂಧ ಇರುವುದು ಎಂದು ಹೇಳುತ್ತಾರೆ.
