Link copied!
Sign in / Sign up
0
Shares

ಸಸ್ಯಾಹಾರಿಗಳಿಗೆ ಮತ್ತು ಹಾಲಿನ ಅಲರ್ಜಿ ಇರುವವರಿಗೇನೇ ಇವೆ ಈ ಕಾಂಡೋಮುಗಳು!

ನೀವು ಎಲ್ಲದರ ಎಲ್ಲೆ ಮೀರಿ ರಸಮಯ ಮೌಖಿಕ ಲೈಂಗಿಕತೆಯನ್ನು ಒಳಗೊಂಡ ಮಿಲನದಲ್ಲಿ ತೊಡಗುವುದನ್ನು ಈಗ ಯಾವುದರಿಂದಲೂ ಸಾಧ್ಯವಿಲ್ಲ, ನಿಮ್ಮ ಆಹಾರಪದ್ದತಿ ಆಗಲಿ ಅಥವಾ ಅಲರ್ಜಿಗಳು ಕೂಡ ಈಗ ಅಡ್ಡ ಬರುವುದಿಲ್ಲ!

ಕಾಂಡೋಮ್ಸ್ ಜಗತ್ತಿನಾದ್ಯಂತ ಅತ್ಯಂತ ಹೆಚ್ಚಾಗಿ ಬಳಸಲ್ಪಡುವ ಜನನ ನಿಯಂತ್ರಣ ವಿಧಾನ. ಆದರೆ ಲ್ಯಾಟೆಕ್ಸ್ ಅಥವಾ ಹಾಲಿಗೆ ಅಲರ್ಜಿ ಹೊಂದಿರುವವರು ಅವರಿಗೆ ಸೂಕ್ತವಾದ ರೀತಿಯ, ಫ್ಲೇವರಿನ ಕಾಂಡೊಮ್ ಅನ್ನು ಹುಡುಕಬೇಕೆಂದರೆ ಬಹಳ ಕಷ್ಟ ಪಡುತ್ತಾರೆ. ಪರಿಸರ ಕಾಳಜಿ ಹೊಂದಿರುವವರ ಕಥೆಯೂ ಇದೆ. ಅವರಿಗೆ ರಬ್ಬರಿನ ಲ್ಯಾಟೆಕ್ಸ್ ಕಾಂಡೊಮ್ ಸರಿ ಅನಿಸುವುದಿಲ್ಲ. ಇದು ಅವರ ಒಳ್ಳೆಯ ಮೂಡ್ ಅನ್ನು ಹಾಳು ಮಾಡಬಹುದು.

ಆದರೆ “ವೇಗನ್ ಕಾಂಡೋಮ್ಸ್” ಈಗ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇನ್ನುಮುಂದೆ ಇವುಗಳು ಸಾಮಾನ್ಯವಾದರೂ ಅಚ್ಚರಿ ಇಲ್ಲ. ಅಂತಹ ಕಾಂಡೋಮ್ಸ್ ಯಾವುದು ಎಂದು ಇಲ್ಲಿವೆ ನೋಡಿ :

ಎಲ್. ರಿಚರ್ಡ್ಸ್ ಸಂಸ್ಥೆಯ ಈ ಕಾಂಡೊಮ್ ಅಲ್ಲಿ ಗ್ಲಿಸೆರಿನ್, ಪರಾಬೆನ್ಸ್, ಪೆಟ್ರೋಕೆಮಿಕಲ್ಸ್ ಆಗಲಿ ಯಾವುದೂ ಇರುವುದಿಲ್ಲ. ಇದು ಪ್ರಾಣಿಗಳ ಹಕ್ಕುಗಳ ರಕ್ಷಣೆಯ ಸಂಸ್ಥೆಯಾದ PETA ಇಂದ ಸಮ್ಮತಿ ಪಡೆದಿದೆ.

ಗ್ಲೈಡ್ ಕಂಪನಿಯ ಈ ಕಾಂಡೊಮ್ ಅನ್ನು ತಯಾರಿಸಲಿಕ್ಕೆ ಬಳಸಿರುವ ವಸ್ತುಗಳೆಲ್ಲವೂ ನೈಸರ್ಗಿಕವಾದವು. ಇದನ್ನು ಗಿಡಗಳ ಮಿಶ್ರಣದಿಂದ ತಯಾರಿಸಲಾಗಿದೆ.

ಇದು ಸಸ್ಟೇನ್ ಕಂಪನಿಯ ಕಾಂಡೊಮ್ ಆಗಿದ್ದು, ಇದು ಕೂಡ ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು.

ಡ್ಯೂರೆಕ್ಸ್ ಕಂಪನಿಯು ವೇಗನ್ ಜನರಿಗೆ ಹಲವಾರು ಫ್ಲೇವರಿನ ಕಾಂಡೊಮುಗಳನ್ನು ಹೊರತಂದಿದ್ದಾರೆ. ಉದಾಹರಣೆಗೆ ಅವಂತಿ ಅಲ್ಟಿಮ, ಫೆಥೆರ್ಲೈಟ್ ಅಲ್ಟ್ರಾ, ಮತ್ತು ಡೀಲಕ್ಸ್.


ಎಲ್. ಕಾಂಡೋಮ್ಸ್ ಅವರು ತಮ್ಮ ಕಾಂಡೋಮ್ಸ್ ತಯಾರಿಕೆಯಲ್ಲಿ ಬಹಳಷ್ಟು ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಂಡಿದ್ದು, ಇವರ ಕಾಂಡೋಮುಗಳು ಕಡಿಮೆ ವಾಸನೆ ಹೊಂದಿರುತ್ತವೆ, ಚರ್ಮಕ್ಕೆ ಸೂಕ್ಷ್ಮವಾಗಿರುತ್ತವೆ ಮತ್ತು ಅತ್ಯುನ್ನತ ಗುಣಮಟ್ಟದ ಸಾಮಗ್ರಿಗಳನ್ನ ಬಳಸಿ ಮಾಡಲಾಗುತ್ತದೆ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon