Link copied!
Sign in / Sign up
56
Shares

ಶಿಶುಗಳು,ಮಕ್ಕಳು ಮತ್ತು ಗರ್ಭಿಣಿಯರಿಗೆ ಭಾರತ ಸರ್ಕಾರ ಬಿಡುಗಡೆ ಮಾಡಿರುವ ಲಸಿಕೆ ಟೈಮ್-ಟೇಬಲ್

ರಾಷ್ಟ್ರೀಯ ಪ್ರತಿರಕ್ಷಣಾ ವೇಳಾಪಟ್ಟಿ (NIS-National Immunization Schedule)ಇದು ಭಾರತ ಸರ್ಕಾರದ ಅಡಿಯಲ್ಲಿ ಪ್ರತಿ ಗರ್ಭಿಣಿ ಮಹಿಳೆ, ಶಿಶುಗಳು ಮತ್ತು ಮಕ್ಕಳು ಯಾವುದೇ ಪೋಲಿಯೋ ಮತ್ತು ಮುಂತಾದ ತೊಂದರೆಯನ್ನು ಭವಿಷ್ಯದಲ್ಲಿ ಅನುಭವಿಸದಿರಲಿ ಎಂದು ನೀಡಲಾಗುವ ಲಸಿಕೆ. ಇದನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು. ಗರ್ಭಿಣಿಯರಿಗೆ ನೀಡುವ ಲಸಿಕೆ ಜೊತೆಗೆ ಇದನ್ನು ನೀಡುವರು. ಇದರ ಬಗ್ಗೆ ಮಾಹಿತಿ ತಿಳಿಯಲು ಈ ಕೆಳಗಿನ ಕೋಷ್ಟಕ ನಿಮಗೆ ಸಹಾಯ ಮಾಡುತ್ತದೆ.


ಲಸಿಕೆ

ಯಾವಾಗ ನೀಡುವುದು

ಗರ್ಭಿಣಿ ಮಹಿಳೆಗೆ

 

TT-1

ಗರ್ಭಾವಸ್ಥೆಯ ಪ್ರಾರಂಭದಲ್ಲಿ

TT-2

TT-1 ತೆಗೆದುಕೊಂಡ 4 ವಾರಗಳ ನಂತರ

TT-Booster

ಕೊನೆಯ 3 ವರ್ಷದಲ್ಲಿ ಎರಡು TT ಡೋಸೆಜ್ ತೆಗೆದುಕೊಂಡಿದ್ದರೆ

ಶಿಶುಗಳಿಗೆ

 

BCG

ಜನಿಸಿದ ಸಮಯದಲ್ಲಿ ಮತ್ತು ಒಂದು ವರ್ಷದ ಒಳಗೆ ಎಷ್ಟು ಸಾಧ್ಯವೋ ಅಷ್ಟು ಬೇಗ

Hepatitis

ಜನಿಸಿದ ತಕ್ಷಣ, ಅಥವಾ ಜನಿಸಿದ 24 ಗಂಟೆಯೊಳಗೆ ನೀಡಬೇಕು

OPV-O

ಜನಿಸಿದ 15 ಗಂಟೆಯೊಳಗೆ ಇದನ್ನು ನೀಡಬೇಕು

OPV-1,2, 3

6ನೇ ವಾರ, 10ನೇ ವಾರ, ಮತ್ತು 14ನೇ ವಾರಗಳಲ್ಲಿ

DTP-1,2 3

6ನೇ ವಾರದಲ್ಲಿ, 10 ಮತ್ತು 14ನೇ ವಾರದಲ್ಲಿ

Hepatitis B 1,2 3***

6ನೇ ವಾರದಲ್ಲಿ, 10 ಮತ್ತು 14ನೇ ವಾರದಲ್ಲಿ

Measles

9ತಿಂಗಳ ನಂತರ 12ತಿಂಗಳಲ್ಲಿ

ವಿಟಮಿನ್ A(1st Dose)

9ತಿಂಗಳು ಸಂಪೂರ್ಣವಾದ ನಂತರ measles ಜೊತೆಗೆ

ಮಕ್ಕಳಿಗೆ

 

DTP Booster

16-24 ನೇ ತಿಂಗಳು

DTP Booster

5-6ನೇ ವರ್ಷ

ವಿಟಮಿನ್ A***(2nd to 9th dose)

5ವರ್ಷದ ತನಕ 6 ತಿಂಗಳಿಗೊಮ್ಮೆ ಒಂದು ಡೋಸ್


ಮಕ್ಕಳ ಲಸಿಕೆ ಕೆಲವೊಮ್ಮೆ ಬದಲಾಗುತ್ತದೆ, ಶಿಶುವಿನಲ್ಲಿ ಲಸಿಕೆ ನೀಡಿಲ್ಲ ಎಂದರೆ ಮಕ್ಕಳಿಗೆ ಲಸಿಕೆ ನೀಡುವ ಅವಶ್ಯಕತೆ ಇರುತ್ತದೆ, ಇದರಬಗ್ಗೆ ಸಂಪೂರ್ಣ ಮಾಹಿತಿಗೆ ವೈದ್ಯರನ್ನು ಭೇಟಿ ಮಾಡಿ. ಶಿಶುವಿನಲ್ಲಿ ಎಲ್ಲಾ ಲಸಿಕೆ ನೀಡಿದ್ದರೆ ಇದರ ಅವಶ್ಯಕತೆ ಇರುವುದಿಲ್ಲ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon