Link copied!
Sign in / Sign up
2
Shares

ಸಂತಾನಹರಣದ ನಂತರ ಮತ್ತೆ ಗರ್ಭಧರಿಸಲು ಸಾಧ್ಯವೇ ?

ಇತ್ತಿಚ್ಚಿನ ದಿನಗಳಲ್ಲಿ ಹಲವು ದಂಪತಿಗಳು ಜನನ ನಿಯಂತ್ರಣದ ಮಾರ್ಗವಾಗಿ ಸಂತಾನಹರಣದ ಮಾರ್ಗದ ಕಡೆಗೆ ತಮ್ಮ ಒಲವನ್ನು ತೋರುತ್ತಿದ್ದಾರೆ. ಈ ವಿಧಾನವು ಮಹಿಳೆಯ ಕೊಳವೆಯ ಬಂಧನದ ಪ್ರತಿಕೃತಿ ವಿಧಾನವಾಗಿದೆ, ಇದರಲ್ಲಿ ಫಾಲೋಪಿಯನ್ ಕೊಳವೆಯನ್ನು ಕತ್ತರಿಸಿ ಗಂಟು ಹಾಕುವರು, ಇದರಿಂದ ಬೇಡವಾದ ಗರ್ಭವಾಸ್ಥೆಯನ್ನು ತಡೆಯಬಹುದು. ಮತ್ತು ಪುರುಷರಲ್ಲಿ ಇದು ಒಂದು ಸಂಪೂರ್ಣ ಜನನ ನಿಯಂತ್ರಣದ ವಿಧಾನವಾಗಿದೆ ಎಂದು ಭಾವಿಸಲಾಗಿದೆ, ಆದರೆ ಇದನ್ನು ಮಾಡಿಸಿಕೊಂಡ ನಂತರವೂ ಗರ್ಭತಾಳಿರುವರು ಎಂದರೆ ಅಚ್ಚರಿ ಪುರುಷರು ಅಚ್ಚರಿಗೆ ಒಳಗಾಗುವುದರಲ್ಲಿ ಆಶ್ಚರ್ಯವಿಲ್ಲ.

ಸಂತಾನಹರಣವನ್ನು ಹೇಗೆ ಮಾಡುತ್ತಾರೆ?

ಯಾರಾದರೂ ಸಂತಾನಹರಣವನ್ನು ಆಯ್ಕೆ ಮಾಡಿಕೊಂಡರೆ ಅವರು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು, ಮತ್ತು ಎರಡು ವೃಷಣಗಳಲ್ಲಿ ಇದು, ಬೇರ್ಪಡಿಸುವುದು, ಕತ್ತರಿಸುವುದು, ಕಟ್ಟಿಹಾಕುವುದನ್ನು ಮಾಡಲಾಗುತ್ತದೆ. ಈ ಛೇದನವು ಪುರುಷನ ಶಿಶ್ನದಿಂದ ಹೊರಬರುವ ವೀರ್ಯದ ಜೊತೆ ವೀರ್ಯಾಣುಗಳನ್ನು ಬೇರ್ಪಡಿಸುತ್ತದೆ, ಅಥವಾ ಇವುಗಳು ಮಿಶ್ರಣವಾಗದಂತೆ ನೋಡಿಕೊಳುತ್ತದೆ. ಆದ್ದರಿಂದ ಪುರುಷನು ಮಹಿಳೆಯ ಜೊತೆ ಸೇರಿದರು ಅವಳು ಗರ್ಭಧರಿಸಲು ಸಾಧ್ಯವಾಗುವುದಿಲ್ಲ.

ಆದರೂ, ವೃಷಣಗಳು ವೀರ್ಯಾಣುಗಳನ್ನು ಬಿಡುಗಡೆ ಮಾಡುತ್ತವೆ, ಮತ್ತು ಇವುಗಳನ್ನು ದೇಹವು ಮತ್ತೆ ತಾನೇ ತನ್ನಲ್ಲಿ ಸೇರಿಸಿಕೊಳ್ಳುತ್ತದೆ. ಮೂಲ ಕೋಶಕಗಳು ಮತ್ತು ಪ್ರಾಸ್ಟೇಟ್ ಗಳ ಬಲಭಾಗದಲ್ಲಿ ಕೊಳವೆಯನ್ನು ಬಂದಿಸುವುದರಿಂದ, ಶಿಶ್ನದಿಂದ ಅದೇ ಪ್ರಮಾಣದ ದ್ರವವು ಹೊರಬರುತ್ತದೆ, ಆದರೆ ಇದರಲ್ಲಿ ವೀರ್ಯಾಣುಗಳು ಇರುವುದಿಲ್ಲ, ಆದ್ದರಿಂದ ಗರ್ಭಧರಿಸುವ ಅವಕಾಶ ಇರುವುದಿಲ್ಲ.

ಸಂತಾನಹರಣ ಆದ ನಂತರವೂ ಗರ್ಭಧರಿಸಲು ಸಾಧ್ಯತೆಗಳಿವೆ?

ಸಂತಾನಹರಣವನ್ನು ಪುರುಷರು ಆಯ್ಕೆ ಮಾಡಿಕೊಂಡರೆ ಅವರು ಯಾವಾಗಲು ಮಗುವಿನ ತಂದೆಯಾಗಲು ಇಚ್ಛಿಸುವುದಿಲ್ಲ ಮತ್ತು ಮುಂದೆ ಅವರು ಎಂದು ಮಗುವಿನ ತಂದೆ ಆಗಲು ಸಾಧ್ಯವಿಲ್ಲ. ಇದರಲ್ಲಿ ಸಂತಾನಹರಣ ಆದ ಒಂದು ವರ್ಷದ ನಂತರ ೧೦೦೦ರಲ್ಲಿ ಒಬ್ಬರು ಯಶಸ್ವಿಯಾಗಿ ತಂದೆಯಾಗಬಹುದು, ಅದೇ ೬ವರ್ಷ ಆದ ನಂತರ ೧೦೦೦ದಲ್ಲಿ ೬-೧೦ಜನ ಮಾತ್ರ ಮಗು ಪಡೆಯುವಲ್ಲಿ ಸಫಲವಾಗಬಹುದು. ಅದು ಏನೇ ಆದರೂ, ಪುರುಷರು ಸಂತಾನಹರಣ ಮಾಡಿಸಿಕೊಂಡ ನಂತರ ಅವರ ವೀರ್ಯವನ್ನು ಪರೀಕ್ಷಿಸುವುದು ಒಳ್ಳೆಯದು ಇದರಿಂದ ಶೇಕಡಾ ೧೦೦ರಷ್ಟು ಖಾತ್ರಿ ಮಾಡಿಕೊಳ್ಳಬಹುದು.

ಇದಲ್ಲದೆ, ಸಂತಾನಹರಣದ ನಂತರ ಕೊಳವೆ ಬೆಳೆದು, ವೀರ್ಯದ ಜೊತೆ ಮಿಶ್ರಣವಾಗಿ ವೀರ್ಯಾಣು ಕೂಡ ವೀರ್ಯದ ಜೊತೆ ಹೊರ ಬರುವ ಸಾಧ್ಯತೆ ಇದೆ, ಇದು ಸಂಭವಿಸಿದರೆ, ಅವರ ಸಂಗಾತಿಯು ಗರ್ಭತಾಳುವಲ್ಲಿ ಯಶಸ್ವಿಯಾಗಬಹುದು. ಹಾಗಾಗಿ ಸಂತಾನಹರಣದ ನಂತರವೂ ಗರ್ಭತಾಳುವ ಸಾಧ್ಯತೆಗಳಿವೆ.

ಸಂತಾನಹರಣದ ನಂತರ ಮಹಿಳೆಯು ಹೇಗೆ ಗರ್ಭತಾಳುತ್ತಾಳೆ ?

ಸಂತಾನಹರಣ, ಜನನ ನಿಯಂತ್ರಣದ ಶಾಶ್ವತ ಪರಿಹಾರವಾಗಿದೆ. ಮಹಿಳೆಯರಿಗೆ ಮಾಡುವ ಪುನರಾವರ್ತಿತ ಕೊಳವೆ ಬಂಧನದಂತೆ, ಪುರುಷನು ಕೂಡ ಪುನರಾವರ್ತಿತ ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನು ಆಯ್ದುಕೊಳ್ಳಬಹುದು. ಈ ವಿಧಾನವನ್ನು ಆಯ್ಕೆ ಮಾಡಿಕೊಂಡರೆ ಮಹಿಳೆಯು ಗರ್ಭತಾಳುವ ಅವಕಾಶಗಳು ಇರುತ್ತವೆ.

ಸಂತಾನಹರಣದ ನಂತರ ವೀರ್ಯಾಣುಗಳನ್ನು ದೇಹ ಪುನಃ ಸಂಪೂರ್ಣವಾಗಿ ಹೀರಿಕೊಂಡು, ವೀರ್ಯದ ಜೊತೆ ಹೊರಹಾಕಲು ಕೆಲವು ತಿಂಗಳುಗಳು ಬೇಕು. ನೀವು ಲೈಂಗಿಕ ಕ್ರಿಯೆ ಅಥವಾ ಸಂಭೋಗ ಮಾಡುವಾಗ ಇತರ ಜನನ ನಿಯಂತ್ರಣ ವಿಧಾನವನ್ನು ಅನುಸರಿಸಲಿಲ್ಲ ಎಂದರೆ, ನಿಮ್ಮ ಸಂಗಾತಿಯು ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಸಂತಾನಹರಣದ ನಂತರ ಮಹಿಳೆ ಗರ್ಭತಾಳಲು ಮತ್ತೊಂದು ಕಾರಣವೆಂದರೆ,

ಸಂತಾನಹರಣ ಮಾಡಿಸಿಕೊಂಡ ನಂತರ ಮಹಿಳೆ ಗರ್ಭಿಣಿಯಾಗಲು ಮತ್ತೊಂದು ಕಾರಣವೆಂದರೆ, ಸಂತಾನಹರಣದ ನೈಸರ್ಗಿಕ ಪುನರಾವರ್ತಿತ ಪ್ರಕ್ರಿಯೆ, ಇದರಲ್ಲಿ ವೀರ್ಯಾಣುಗಳು ಬಂಧನದ ತುದಿಯಿಂದ ತಪ್ಪಿಸಿಕೊಂಡು ವೀರ್ಯದ ಜೊತೆ ಸೇರಿಕೊಂಡು ನಿಮ್ಮ ಮೊಟ್ಟೆಯನ್ನು ಸೇರುವುದರಿಂದ ನೀವು ಗರ್ಭಧರಿಸುವ ಅವಕಾಶ ಇರುತ್ತದೆ.

ಮತ್ತು ಶಸ್ತ್ರ ಚಿಕಿತ್ಸೆಯ ದೋಷ, ಇದು ಸಂಭವಿಸುವುದು ತುಂಬಾ ಅಪರೂಪ ಆದರೆ ನೀವು ವೀರ್ಯದ ಪರೀಕ್ಷೆ ಮಾಡಿಸದೇ ಸಂಭೋಗದಲ್ಲಿ ತೊಡಗಿಕೊಳ್ಳುವುದರಿಂದ ನೀವು ಗರ್ಭಿಣಿ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon