Link copied!
Sign in / Sign up
3
Shares

ನಿಮ್ಮ ಹೆರಿಗೆಯು ಸಣ್ಣ ಅವಧಿಯದ್ದಾಗಿರುತ್ತದೆ ಎಂದು ಸೂಚಿಸುವ 6 ವಿಷಯಗಳು!

ನನ್ನ ಅನುಭವದ ಪ್ರಕಾರ ಅಲ್ಪಾವಧಿಯ ಹೆರಿಗೆಯು ಲಾಟರಿ ಹೊಡೆದಂತೆ. ಅದು ನಿಮ್ಮ ಜೀವನದಲ್ಲಿ ಆಗುವ ಅತ್ಯಂತ ಅದೃಷ್ಟಕರ ವಿಷಯಗಳಲ್ಲಿ ಒಂದು. ಕೆಲವು ಹೆಂಗಸರ ಹೆರಿಗೆಯು ಮುಗಿಯುವುದೇ ಇಲ್ಲವೇನೋ ಎನಿಸುವಷ್ಟು ದಿರ್ಘವಧಿಯದ್ದು ಆಗಿದ್ದರೆ, ಇನ್ನೂ ಕೆಲವರದ್ದು ಗೊತ್ತಾಗುವ ಮುನ್ನವೇ ಮುಗಿದು ಹೋಗಿಬಿಡುತ್ತದೆ. ಕುತೂಹಲಕಾರಿ ವಿಷಯ ಏನು ಎಂದರೆ, ಮೊದಲೇ ತಿಳಿಯಬಹುದಾದಂತಹ 6 ಸೂಚನೆಗಳಿಂದ ನಿಮ್ಮ ಹೆರಿಗೆಯು ಅಲ್ಪಾವಧಿಯದ್ದು (ಅಂದರೆ 5 ಗಂಟೆಗಳಿಗಿಂತ ಕಡಿಮೆ ಸಮಯದ ಹೆರಿಗೆ ನೋವು ಮತ್ತು ಪ್ರಕ್ರಿಯೆ) ಆಗಿರುತ್ತದೆ ಎಂಬುದನ್ನ ತಿಳಿಯಬಹುದು.

ಹಾಗಿದ್ದರೆ ಬನ್ನಿ ಆ ಸೂಚನೆಗಳು ಯಾವುದೆಂದು ತಿಳಿಯೋಣ :


೧. ಇದು ನಿಮ್ಮ ಮೊದಲ ಮಗುವಲ್ಲ

ಸಾಮಾನ್ಯವಾಗಿ ಮೊದಲ ಬಾರಿಗೆ ತಾಯಿ ಆಗುತ್ತಿರುವವರಲ್ಲಿ ಹೆರಿಗೆ ನೋವು ಮತ್ತು ಪ್ರಕ್ರಿಯೆಯು ದೀರ್ಘಕಾಲದ್ದು ಆಗಿರುತ್ತದೆ. ನೀವು ಈಗಾಗಲೇ ಒಮ್ಮೆ ಸ್ವಾಭಾವಿಕ ಹೆರಿಗೆ ಹೊಂದಿದ್ದರೆ, ನಿಮ್ಮ ಮುಂದಿನ ಹೆರಿಗೆಯು ಚಿಕ್ಕ ಅವಧಿಯದ್ದು ಆಗಿರುತ್ತದೆ. ಆದರೆ ಪ್ರತಿಬಾರಿಯೂ ಇದು ನಿಜವಲ್ಲ. ಹಲವಾರು ಕಾರಣಗಳಿಂದ ಕೆಲವೊಮ್ಮೆ ನಿಮ್ಮ ಮೊದಲನೇ ಹೆರಿಗೆಗಿಂತ, ಎರಡನೇ ಹೆರಿಗೆಯೇ ದೀರ್ಘಾವಧಿಯದ್ದು ಆಗಬಹುದು. ಆದರೆ ಸಹಜವಾಗಿ ಎರಡನೇ ಹೆರಿಗೆ ಅಲ್ಪಾವಧಿಯದ್ದು ಆಗಿರುತ್ತದೆ.


೨. ನಿಮ್ಮ ಅಮ್ಮನ ಹೆರಿಗೆಯು ಕೂಡ ಅಲ್ಪಾವಧಿಯ ಹೆರಿಗೆಯಾಗಿದ್ದರೆ

“ನನ್ನ ಬಳಿ ಬರುವ ಗರ್ಭಿಣಿಯರಿಗೆ ನಾನು ಮೊದಲು ಕೇಳುವ ಪ್ರಶ್ನೆ ಎಂದರೆ ನಿಮ್ಮ ವಂಶದಲ್ಲಿ ಅಲ್ಪಾವಧಿಯ ಹೆರಿಗೆ ಆಗಿವೆಯೇ ಎಂದು” ಎಂದು ಹೇಳುತ್ತಾರೆ ವೈದ್ಯರಾದ ಮಾರಿಸ್. ದುರದೃಷ್ಟವಶಾತ್, ಈ ದೀರ್ಘಾವಧಿಯ ಹೆರಿಗೆಯು ಅನುವಂಶಿಕವಾಗಿ ಬರುವುದು. ಅಂದರೆ ನಿಮ್ಮ ತಾಯಿ, ಅಜ್ಜಿ , ಮುತ್ತಜ್ಜಿ ಅಥವಾ ಇನ್ನ್ಯಾರಿಗಾದರು ದೀರ್ಘಾವಧಿಯ ಹೆರಿಗೆಗಳು ಆಗಿದ್ದರೆ, ಅದು ನಿಮಗೂ ಆಗಬಹುದು. ನಿಮ್ಮ ಅಮ್ಮನಿಗೆ ಅಲ್ಪಾವಧಿಯ ಹೆರಿಗೆ ಆದರೆ, ನಿಮಗೂ ಅಲ್ಪಾವಧಿಯ ಹೆರಿಗೆ ಆಗುವುದು ಯಾವುದೊ ವಿಶಿಷ್ಟ ಜೀನ್ ಇಂದ ಅಲ್ಲ. ಅದಕ್ಕೆ ಕಾರಣ ಬಹುಷಃ ನಿಮ್ಮ ಅಮ್ಮನ ದೇಹದ ಶ್ರೋಣಿಯ ಆಕಾರದ ರೀತಿಯಲ್ಲೇ ನಿಮ್ಮ ಶ್ರೋಣಿಯು ಇರುತ್ತದೆ ಎಂಬುದರಿಂದ ಮತ್ತು ಮಗುವಿನ ಗಾತ್ರವು ಅಷ್ಟೇ ಇರಬಹುದು ಎಂಬುದರಿಂದ ಅಷ್ಟೇ.


೩. ನಿಮ್ಮ ಮೊದಲನೇ ಹೆರಿಗೆಯು ಅಲ್ಪಾವಧಿಯದ್ದು ಆಗಿತ್ತು

ಹೌದು, ಇತಿಹಾಸವು ಮರುಕಳಿಸಬಹುದು. ಹಿಂದೆ ನಿಮ್ಮ ಹೆರಿಗೆಯು ಬೇಗನೆ ಆಗಿದ್ದರೆ, ನೀವು ಪುನಃ ಅಲ್ಪಾವಧಿಯ ಹೆರಿಗೆ ಹೊಂದುವ ಸಾಧ್ಯತೆಗಳು ಹೆಚ್ಚಿರುತ್ತವೆ. ವೈದ್ಯರು ಹೇಳುವ ಪ್ರಕಾರ ಪ್ರತಿಯೊಂದು ಹೆರಿಗೆಯು ಬೇರೆಯದ್ದೇ ಆಗಿದ್ದರೂ, ಒಂದು ಹೆಣ್ಣಿನ ಹೆರಿಗೆಗಳು ಒಂದೇ ನಮೂನೆ ಆಗಿರುತ್ತವೆ.


೪. ನಿಮ್ಮ ಕಾಂಟ್ರಕ್ಷನ್ (ಸಂಕೋಚನಗಳು) ತೀವ್ರವಾಗಿರುತ್ತವೆ

ಅಲ್ಪಾವಧಿಯ ಹೆರಿಗೆಯ ಮೊದಲ ಸೂಚನೆ ಎಂದರೆ ಅದು ಮೇಲಿಂದ ಮೇಲೆ ಆಗುವ ಮತ್ತು ತೀವ್ರವಾದ ಸಂಕೋಚನಗಳು. ಹೆರಿಗೆ ನೋವಿನ ಮೊದಲಿನಲ್ಲಿ ಸಂಕೋಚನಗಳು ಮೊದಲಿಗೆ 15 ರಿಂದ 30 ನಿಮಿಷಗಳಷ್ಟು ಅಂತರ ಹೊಂದಿರುತ್ತವೆ. ಒಂದು ವೇಳೆ ಮೊದಲಲ್ಲೇ ನಿಮಗೆ ಕೇವಲ 3-4 ನಿಮಿಷಗಳ ಅಂತರವುಳ್ಳ ಸಂಕೋಚನಗಳು ಕಾಣಿಸಿಕೊಂಡರೆ, ಇದು ಅಲ್ಪಾವಧಿಯ ಹೆರಿಗೆಯನ್ನ ಸೂಚಿಸುತ್ತದೆ.


೫. ನೀವು ಇನ್ನೂ ಚಿಕ್ಕ ವಯಸ್ಸಿನ ತಾಯಿ

ಅದರಲ್ಲೂ ನೀವು 18-20 ವಯಸ್ಸಿನ ತಾಯಿ ಆಗಿದ್ದರೆ. ಜರ್ನಲ್ ಆಫ್ ಕ್ಲಿನಿಕಲ್ ಮೆಡಿಸಿನ್ ರಿಸರ್ಚ್ ಅವರು ನಡೆಸಿದ ಅಧ್ಯಯನದಲ್ಲಿ ಮಧ್ಯ ವಯಸ್ಕರ ಹೆಂಗಸರಿಗಿಂತ ಹೆಚ್ಚು ಹರೆಯದಲ್ಲಿನ ಹೆಂಗಸರಿಗೆ ಅಲ್ಪಾವಧಿಯ ಹೆರಿಗೆ ಮತ್ತು ಅಕಾಲಿಕ ಹೆರಿಗೆ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬುದು ತಿಳಿದು ಬಂದಿದೆ.

 

೬. ನಿಮ್ಮ ಹೆರಿಗೆ ನೋವು ನೈಸರ್ಗಿಕವಾಗಿಯೇ ಶುರುವಾದರೆ

ನೀವು ನಂಬುತ್ತೀರೋ ಬಿಡುತ್ತೀರೋ, ಆಸ್ಪತ್ರೆಯಲ್ಲಿ ಔಷಧಿ ನೀಡಿ, ಉತ್ತೇಜಿಸಿ, ಶುರು ಮಾಡಿಸುವ ಹೆರಿಗೆ ನೋವು ನೈಸರ್ಗಿಕವಾಗಿ ಶುರುವಾಗುವ ಹೆರಿಗೆ ನೋವಿಗಿಂತ ಹೆಚ್ಚಿನ ಅವಧಿಯದ್ದಾಗಿರುತ್ತದೆ. ಒಂದು ವೇಳೆ ನಿಮಗೆ ಅಲ್ಪಾವಧಿಯ ಹೆರಿಗೆ ಬೇಕು ಎಂದರೆ ಗರ್ಭಿಣಿಯರು ತಾವಾಗಿಯೇ ಹೆರಿಗೆ ನೋವಿಗೆ ಜಾರುವುವರೆಗೂ ಮನೆಯಲ್ಲೇ ಕೂತು, ನಿಯಮಿತವಾದ ಕಾಂಟ್ರಕ್ಷನ್ಸ್ ಅನುಭವಿಸಬೇಕು ಎಂದು ತಿಳಿಸುತ್ತಾರೆ ವೈದ್ಯರಾದ ಮಾರಿಸ್.  

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon