Link copied!
Sign in / Sign up
29
Shares

ಸಂಕಷ್ಟ ಚತುರ್ಥಿ ಮಹತ್ವ. ಹೇಗೆ ಮತ್ತು ಏಕೆ ಆಚರಿಸಬೇಕು?

 
● :-ಸಂಕಟ ಹರ ಚತುರ್ಥಿ ಯು ಗಣಪತಿಗೆ ಅರ್ಪಿಸಿ ದ ಮಂಗಳಕರ ದಿನವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪೂರ್ಣ ಹುಣ್ಣಿಮೆಯ ಅಥವಾ ಕೃಷ್ಣ ಪಕ್ಷದ ನಾಲ್ಕನೆಯ ದಿನದಂದು ಇದನ್ನು ಆಚರಿಸಲಾಗುತ್ತದೆ. ಸಂಕಷ್ಟಿ ಚತುರ್ಥಿಯ ವ್ರತದವರು ತಮ್ಮ ಕುಟುಂಬದ  ಕಲ್ಯಾಣಕ್ಕಾಗಿ ಹೆಚ್ಚಿನ ಮಹಿಳೆಯರಿಂದ ಮಾಡಲ್ಪಟ್ಟ  ಅತ್ಯಂತ ಪ್ರಸಿದ್ಧ ವಾದ  ಉಪವಾಸವಾಗಿದೆ.  ಸಂಕಷ್ಟಹರ ಎಂಬುದು " ತೊಂದರೆಗೊಳಗಾದ ಕಾಲದಿಂದ ವಿಮೋಚನೆ " ಎಂದರ್ಥ.
 
ಹೀಗಾಗಿ , ಈ ವ್ರತವನ್ನು ಮಾಡುವುದರಿಂದ ಒಬ್ಬ   ವ್ಯಕ್ತಿಯ ಜೀವನದಲ್ಲಿ ಎಲ್ಲ ಸಮಸ್ಯೆಗಳನ್ನು  ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಏಕೆಂದರೆ ಗಣೇಶನು ಎಲ್ಲಾ ಅಡೆತಡೆಗಳನ್ನು ಮತ್ತು ಸಮಸ್ಯೆಗಳನ್ನು ಹೋಗಲಾಡಿಸುವವನು. ಜನರು ಸಂಕಷ್ಟಿ  ದಿನದಂದು ಕಟ್ಟುನಿಟ್ಟಿನ ಉಪವಾಸವನ್ನು ಮಾಡುತ್ತಾರೆ ಮತ್ತು ಚಂದ್ರನನ್ನು ನೋಡಿದ ನಂತರ ರಾತ್ರಿ  ಉಪವಾಸವನ್ನು ಮುರಿಯುತ್ತಾರೆ.
 
 
  ● :- ಸಂಕಷ್ಟ ಹರ ಚತುರ್ಥಿ ಯ ಮತ್ತೊಂದು ವಿಶೇಷವೇನೆಂದರೆ  ಮಂಗಳವಾರದಂದು  ಸಂಕಷ್ಟಹರ ಚತುರ್ಥಿ ಬಂದರೆ  ಆ ವ್ರತಕ್ಕೆ ಮತ್ತಷ್ಟು  ಹೆಚ್ಚಿನ  ಮಹತ್ವವಿದ್ದು , ಅದನ್ನು ಅಂಗಾರಕ ( ಮಂಗಳ ) ಚತುರ್ಥಿ ಎಂಬ ಹೆಸರಿನಲ್ಲಿ ಆಚರಣೆ  ಮಾಡಲಾಗುತ್ತದೆ. ಸಂಕಷ್ಟ ಚತುರ್ಥಿಯ ಆಚರಣೆಗಳಿಗೆ ಸನಾತನ ಧರ್ಮದಲ್ಲಿ ಎರಡು ಪ್ರಮುಖ ಹಿನ್ನೆಲೆಗಳಿವೆ. ಮೊದಲನೆಯದ್ದು ಚತುರ್ಥಿಯ  ದಿನದಂದು ಅಂದರೆ ಯಾವ ದಿನ ಸಂಕಷ್ಟ ಚತುರ್ಥಿಯ ಆಚರಣೆ ನಡೆಸಲಾಗುತ್ತದೆಯೋ ಆ ದಿನದಂದು ಗಣೇಶನನ್ನು ಸರ್ವೋಚ್ಚ ದೇವ ಎಂದು ಘೋಷಿಸಲಾಯಿತು. ಎಂಬುದು ಒಂದು ನಂಬಿಕೆಯಾದರೆ , ಈ ದಿನದಂದು ಗಣೇಶ ಸ್ವತಃ ಧರೆಗಿಳಿದು ಭಕ್ತರ ಪ್ರಾರ್ಥನೆಗಳನ್ನು ಆಲಿಸುತ್ತಾನೆ. ಆದ್ದರಿಂದ ಚತುರ್ಥಿಯ ದಿನದಂದು ಪ್ರಾರ್ಥಿಸುವವರ ಸಂಕಷ್ಟಗಳು ಸುಲಭವಾಗಿ ಬಗೆ ಹರಿಯುತ್ತದೆ ಎಂಬುದು ಮತ್ತೊಂದು ನಂಬಿಕೆಯಾಗಿದೆ. 
 
 
● :- ಅಂಗಾರಕ ಸಂಕಷ್ಟಿಯಂದು ಮುಖ್ಯವಾಗಿ ಗಣೇಶ ಹಾಗೂ ಚಂದ್ರನ ಪೂಜೆ ಮಾಡುವುದು ಶ್ರೇಷ್ಠ. ಸಮಸ್ತ ದೇವತೆಗಳಲ್ಲಿ ಮೊದಲು ಪೂಜೆ ಸಲ್ಲುವುದು ಗಣೇಶನಿಗೆ. ಇಷ್ಟಾರ್ಥ ಸಿದ್ದಿಗೆ ನಾಲ್ಕು ಭುಜಗಳುಳ್ಳ ಗಣೇಶನನ್ನು ಪೂಜೆ ಮಾಡುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಪ್ರತಿ ಸಂಕಷ್ಟಿಯಂದು ಅನೇಕರು ವ್ರತವನ್ನು ಆಚರಣೆ ಮಾಡುತ್ತಾರೆ. 
 
 
● :- ಆತ್ಮ ವಿಶ್ವಾಸ ಕಡಿಮೆ ಇರುವ ವ್ಯಕ್ತಿ ಗಣೇಶನ ಚತುರ್ಥಿ ಯಂದು ಎಳ್ಳಿನಿಂದ ಮಾಡಿದ ಸಿಹಿ ತಿಂಡಿ  ಅಥವಾ ಕಾಕಂಬಿಯಿಂದ ಮಾಡಿದ ಉಂಡೆಯನ್ನು 
ಅರ್ಪಿಸಬೇಕು. 
ಅಂಗಾರಕ ಸಂಕಷ್ಟಿಯಂದು ಬೆಚ್ಚಗಿನ ಬಟ್ಟೆ , ಕಂಬಳಿ ಅಥವಾ ಬಟ್ಟೆಯನ್ನು ದಾನ ಮಾಡುವುದು ಒಳ್ಳೆಯದು. ಅರ್ಧಕ್ಕೆ ನಿಂತ ಕೆಲಸ ಪೂರ್ತಿಯಾಗಬೇಕೆಂದಾದಲ್ಲಿ ಗಣೇಶ ಚತುರ್ಥಿಯಂದು  ಗಣೇಶ ಸ್ತೋತ್ರವನ್ನು ಜಪಿಸಿ ಪ್ರತಿ
ಬುಧವಾರ ಹಾಗೂ ಚತುರ್ಥಿ ಯಂದು ಗಣೇಶ ಮಂತ್ರ ಪಠಣೆ ಮಾಡಬೇಕು.
 
 
● :- ಶೀಘ್ರ ಫಲಕ್ಕಾಗಿ ಪ್ರತಿ  ಬುಧವಾರ ಅಥವಾ  ಚತುರ್ಥಿಯ ದಿನದಂದು ವ್ರತವನ್ನು ಆಚರಿಸಬೇಕು. ದಿನಪೂರ್ತಿ ಉಪವಾಸವಿದ್ದು , ಶ್ರದ್ದೆಯಿಂದ ಗಣೇಶನ ಮಂತ್ರ ಪಠಿಸಿ , ಪೂಜೆ ಮಾಡಿ ರಾತ್ರಿ ಚಂದ್ರನನ್ನು ನೋಡಿದ ಬಳಿಕ ಆಹಾರ ಸೇವನೆ ಮಾಡಬೇಕು.
 
● :- ಆಚರಣೆ :-
 
 
ಸಾದ್ಯವಾದಲ್ಲಿ ದಿನಪೂರ್ತಿ ಉಪವಾಸವಿದ್ದು , ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ     ಅರ್ಗ್ಯವನ್ನು  ಕೊಟ್ಟು , ಹೂವು , ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು. ಪೂಜೆ ಸಮಾಪ್ತಿಯಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯ ವನ್ನು ಅರ್ಪಿಸಿ ನಂತರ ಭೋಜನ ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ ಮನಸ್ಸಿನ ಇಚ್ಚೆಗಳು ಈಡೇರಿ , ಸಂ
Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon