Link copied!
Sign in / Sign up
2
Shares

ಗರ್ಭದರಿಸುವ ಮೊದಲು, ನೀವು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಲೇಬೇಕಾದ ವಿಷಯಗಳು!

ಮುದ್ದು ಮಕ್ಕಳು ದೇವರ ವರವೆಂದರೆ ತಪ್ಪಾಗುವುದ್ದಿಲ್ಲ. ನೀವೇ ಸೃಷ್ಟಿಸಿದ ಮಗುವಿನ ನಗು ನೋಡುತ್ತಿದ್ದರೆ, ಕೆಲವೊಂದು ಬಾರಿ ನಿಮಗೆ ಹೆಮ್ಮೆ ಅನ್ನಿಸುತ್ತದೆ. ನಿಮ್ಮ ಕರುಳ ಕುಡಿಯ ತೊದಲು ನುಡಿ, ಪುಟ್ಟ ಹೆಜ್ಜೆಗಳು, ಒತ್ತಡದ ಮನಸ್ಸನ್ನು ಕೆಲವೇ ಕ್ಷಣಗಳ್ಳಲ್ಲಿ ತಿಳಿಗೊಳಿಸುತ್ತದೆ. ತನ್ನ ಬೆಳವಣಿಗೆಗೆ ತಾಯಿಯನ್ನೇ ಸಂಪೂರ್ಣವಾಗಿ ಅವಲಂಭಿಸಿರುವ ಮಗುವಿನ ಮುದ್ದು ಮುಖ ನೋಡುತ್ತಿದ್ದರೆ, ಸಮಯ ಕಳೆದುಹೋಗುವುದೇ ತಿಳಿಯುವುದಿಲ್ಲ. ಮಗುವಿನ ನಿರೀಕ್ಷೆಯಲ್ಲಿರುವ, ಭಾವಿ ತಂದೆ ತಾಯಿಗಳೇ! ಬನ್ನಿ ಹಾಗಾದರೆ ನೀವು ನಿಮ್ಮ  ಬಾಳಸಂಗಾತಿಯೊಂದಿಗೆ ಚರ್ಚಿಸಬೇಕಾದ ವಿಷಯಗಳೇನೆಂದು ವೈದ್ಯರಿಂದ ತಿಳಿಯೋಣ.

೧. ಎಷ್ಟು ಮಕ್ಕಳು ನಿಮಗೆ ಬೇಕು?

ಹೌದು! ಇದನ್ನು ಈಗಲೇ ಚರ್ಚಿಸುವ ಅಗತ್ಯವೇನಿತ್ತು ಎಂದು ನೀವು ಯೋಚಿಸುತ್ತಿರಬಹುದು? ಆದರೆ, ನೀವು ನಿಮ್ಮ ಸಂಗಾತಿಯೊಂದಿಗೆ, ಒಂದು ಮಗು ಬೇಕೇ ಅಥವಾ ಹೆಚ್ಚು ಮಕ್ಕಳು ಬೇಕೆಂದು ತಿಳಿದುಕೊಳ್ಳುವುದರಿಂದ, ಆರ್ಥಿಕವಾಗಿ ನೀವು ಎಷ್ಟು ಶಕ್ತರಾಗಿದ್ದೀರ ಎಂಬುದು ತಿಳಿಯುತ್ತದೆ. ನಿಮ್ಮ ಹಾಗು ನಿಮ್ಮ ಪತಿಯ ವ್ರುತ್ತಿಜೀವನದ ಮೇಲೆ ಯಾವ ಪರಿಣಾಮಗಳಾಗುತ್ತದೆ ಎಂಬುದ್ದನ್ನು ಮುಕ್ತವಾಗಿ ಚರ್ಚಿಸುವುದರಿಂದ, ನಾಳೆಯ ದಿನ ಇಬ್ಬರ ಮಧ್ಯೆ ಮನಸ್ತಾಪ ಬಾರದ ಹಾಗೆ ಸಂತೋಷದಿಂದ ಜೀವನವನ್ನು ನಡೆಸಬಹುದು.

೨. ಜವಾಬ್ಧಾರಿಯನ್ನು ಹಂಚಿಕೊಳ್ಳುವಿಕೆ

ಮಗು ಜನಿಸಿದ ನಂತರ ಪೋಷಕರ ಜೀವನದ್ದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಹೆಚ್ಚಿದ ಸಂತೋಷದೊಂದಿಗೆ, ಜವಾಬ್ಧಾರಿಗಳು ಸಹ ಹೆಚ್ಚಾಗುತ್ತವೆ. ದಿನಚರಿಯಲ್ಲಿ ಬದಲಾವಣೆ, ಮನಸ್ಸಿನ್ನ ಒತ್ತಡ, ಏಕಾಂತಕ್ಕೆ ಸಮಯವಿಲ್ಲದಿರುವುದು, ಮಗುವಿನ ಪಾಲನೆ ಪೋಷಣೆ ಹೀಗೆ ಹತ್ತು ಹಲವು ಜವಾಬ್ಧರಿಗಳು ಹೆಚ್ಚಾಗುತ್ತದೆ. ಅದ್ದರಿಂದ ಮಗುವಿನ ಪಾಲನೆ ಪೋಷಣೆ, ಮನೆಯ ಕೆಲಸಗಳ ಬಗ್ಗೆ ಮಾತನಾಡಿದರೆ, ಮುಂದೊಂದು ದಿನ ಆಗುವ ಜಗಳವನ್ನು ತಡೆಯಬಹುದು.

೩. ಮಗುವಿಗೆ ಚುಚ್ಚುಮದ್ದು ಹಾಕಿಸುವ ಬಗ್ಗೆ

ಹಲವಾರು ವೈದ್ಯಕೀಯ ಸಮೀಕ್ಷೆಗಳ ಪ್ರಕಾರ, ಚುಚ್ಚುಮದ್ದುಗಳು ಮಗುವನ್ನು ರೋಗಬಾರದಂತೆ ತಡೆಯುವುದ್ದಿಲ್ಲ ಎಂದು ವಾದಿಸುತ್ತದೆ. ಇನ್ನು ಕೆಲವರು ಚುಚ್ಚುಮದ್ದು ನೀಡದೆ ಹೋದರೆ, ಮಕ್ಕಳಿಗೆ ಹಲವಾರು ಖಾಯಿಲೆಗಳು ಬರುತ್ತವೆ ಎಂದು ಹೇಳುತ್ತಾರೆ. ನಿಮ್ಮಿಬರ ನಡುವೆ ಮಗುವಿಗೆ ಚುಚ್ಚುಮದ್ದು ಹಾಕಿಸಬೇಕು/ಹಾಕಿಸಬಾರದು ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ, ನಿಮ್ಮ ಹತ್ತಿರದ ವೈದ್ಯರ ಸಲಹೆ ಪಡೆಯಿರಿ. ಹೀಗೆ ಮಾಡುವುದರಿಂದ, ಇಬ್ಬರ ಅಭಿಪ್ರಾಯಗಳಿಗೆ, ಬೆಲೆ ಕೊಟ್ಟಂತಾಗುತ್ತದೆ.

೪. ಕಿವಿ ಚುಚ್ಚಿಸವುದು ಬೇಕೇ/ಬೇಡವೇ?

ದಂಪತಿಗಳ ಮಧ್ಯೆ ವಾಗ್ವಾದಕ್ಕೆ ಇದೊಂದು ಮುಖ್ಯ ಕಾರಣವಾಗಿದೆ. ನಿಮ್ಮ ಪತಿ/ಪತ್ನಿ ಇದಕ್ಕೆ ವಿರುದ್ಧವಾಗಿದ್ದರೆ ಹೀಗೆ ಮಾಡಿ. ಮಗುವಿಗೆ ಕಿವಿಚುಚ್ಚಿಸುವದರಿಂದ ಆಗುವ ಪರಿಣಾಮ/ದುಷ್ಪರಿಣಾಮಗಳ್ಳನ್ನು ಒಂದೆಡೆ ಪಟ್ಟಿ ಮಾಡಿ, ವೈದ್ಯರ ಅಭಿಪ್ರಾಯವನ್ನು ಪಡೆಯಿರಿ. ಹೌದು! ಹಲವು ಬಾರಿ ಮಕ್ಕಳಿಗೆ ಅವರ ಬೇಕು/ಬೇಡ ಎಂಬುದರ ಅರಿವಿರುವುದ್ದಿಲ್ಲ. ಕಿವಿ ಚುಚ್ಚಿಸುವುದರಿಂದ ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ಇಷ್ಟವಿಲ್ಲದೆ ಹೋಗಬಹುದು ಅಥವಾ ಕಿವಿಯ ಸೋಂಕಿಗೆ ಕಾರಣವಾಗಬಹುದು. ಇವೆಲ್ಲವನ್ನು ಮನಸ್ಸಿನ್ನಲ್ಲಿ ಇರಿಸಿಕೊಂಡು ಸೂಕ್ತ ನಿರ್ಧಾರಕ್ಕೆ ಬರಬೇಕು.

೫. ವಿದ್ಯಾಭ್ಯಾಸದ ಸಾಲ?

ಹುಟ್ಟಿದ ಮಗು ಬೆಳೆದು, ಕಣ್ಣು ಬಿಡುವಷ್ಟರಲ್ಲಿ ಶಾಲೆಗೆ ಹೋಗುತ್ತದೆ. ಅದರ ಉತ್ತಮ ಶಿಕ್ಷಣಕ್ಕಾಗಿ ನೀವು ಮೊದಲಿನಿಂದಲು ಹಣವನ್ನು ಕೂಡಿಡುತ್ತಾ ಬರಬೇಕು. ಅ೦ದರೆ ನಿಮ್ಮ ಖರ್ಚು ವೆಚ್ಚದ ಬಗ್ಗೆ ಗಮನವಹಿಸಬೇಕು. ಹೀಗೆ ಮೊದಲೇ ನೀವು ಇದರ ಬಗ್ಗೆ ಯೋಚಿಸದಿದ್ದರೆ, ನಾಳೆಯ ದಿನ ನಿಮ್ಮ ಸಂಸಾರ ಹಾಗು ಮಗುವಿನ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಗುವಿನ ಜೀವನದ ಬಗ್ಗೆ, ಜವಾಬ್ಧಾರಿಗಳ ಬಗ್ಗೆ, ವೃತ್ತಿ ಜೀವನದ ಬಗ್ಗೆ ದಂಪತಿಗಳು ಒಬ್ಬರಿಗೊಬ್ಬರು ಮುಕ್ತವಾಗಿ ತಮ್ಮ ತಮ್ಮ ಅಭಿಪ್ರಾಯಗಳ್ಳನ್ನು ಹಂಚಿಕೊಂಡರೆ, ನಿಮ್ಮ ಬದುಕು ಸುಖಮಯವಾಗಿರುತ್ತದೆ.  

ಲೇಖನ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon