Link copied!
Sign in / Sign up
11
Shares

ನಿಮ್ಮ ಸಂಗಾತಿ ನಿಮ್ಮಿಂದ ಏನನ್ನು ಬಯಸುವರು ಗೊತ್ತೇ? ನೀವು ತಿಳಿದರಲೇ ಬೇಕಾದ ವಿಷಯಗಳು

ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ನಿಜಕ್ಕೂ ಕಷ್ಟಕರವಾದ ಸಂಗತಿ, ನಮ್ಮ ಹಿರಿಯರು ಹೇಳಿರುವ ಪ್ರಕಾರ ಮೀನಿನ ಹೆಜ್ಜೆ ಕಂಡು ಹಿಡಿತಬಹುದು ಆದರೆ ಹೆಣ್ಣಿನ ಮನಸ್ಸಿನ ಆಳವನ್ನು ತಿಳಿಯಲು ಸಾಧ್ಯವಿಲ್ಲ, ಅದು ನಿಜ ಆದರೆ ಕೆಲವು ಮಹಿಳೆಯರೇ ಹೇಳುವ ಪ್ರಕಾರ ಶೇಕಡಾ ೯೫ರಷ್ಟು ಮಹಿಳೆಯರು ತಮ್ಮ ಗಂಡನಿಂದ ಇದನ್ನು ಬಯಸುವರಂತೆ. ತನ್ನ ಪತಿ ತನ್ನನ್ನೇ ಪ್ರೀತಿಸಬೇಕು ಎಂಬುದು ಎಲ್ಲರ ಬಯಕೆ ಇದು ಸಾಮಾನ್ಯ ಮತ್ತು ಇದು ಎಲ್ಲರಿಗು ತಿಳಿದಿರುವ ವಿಷಯ. ಆದರೆ ಇದರ ಜೊತೆಗೆ ತನ್ನ ಪತಿಯಿಂದ ಮತ್ತಷ್ಟು ಸಂಗತಿಗಳನ್ನು ಆಕೆ ಬಯಸುವಳು ಅದು ಏನೆಂಬುದನ್ನು ಮುಂದೆ ತಿಳಿಯುವ ಬನ್ನಿ.

ಮಹಿಳೆಯು ತನ್ನ ಪತಿಯಿಂದ ಬಯಸುವ ಕೆಲವು ವಿಷಯಗಳು

ಒಬ್ಬರಿಗಿಂತ ಒಬ್ಬ ಮಹಿಳೆಯರು ಭಿನ್ನವಾಗಿ ಯೋಚಿಸುವರು, ಮತ್ತು ಅವರ ನಿರೀಕ್ಷೆಗಳು ಕೂಡ ಭಿನ್ನವಾಗಿರುತ್ತದೆ. ಆದರೆ ಕೆಲವು ವಿಷಯಗಳು ಪ್ರತಿ ಹೆಣ್ಣು ತನ್ನ ಮದುವೆಯ ನಂತರ ತನ್ನ ಸಂಗಾತಿಯಿಂದ ಬಯಸುವ ಕೆಲವು ವಿಷಯಗಳು ಇಲ್ಲಿವೆ.

೧.ಪ್ರೀತಿ, ವಿಶ್ವಾಸ ಮತ್ತು ವಾತ್ಸಲ್ಯ ಅಡಿಪಾಯ

ಅವರು ಹೊಸದಾಗಿ ಮದುವೆ ಆಗಿರಲಿ ಅಥವಾ ಮದುವೆ ಆಗಿ ಸುಮಾರು ಸಮಯವೇ ಕಳೆದಿರಲಿ, ದೀರ್ಘಕಾಲದ ಎಂದು ಅಳಿಯದ ಪ್ರೀತಿಯನ್ನು ಅವರು ಬಯಸುವರು. ತಮ್ಮ ಪತಿ ನಮ್ಮನ್ನು ಪ್ರೀತಿಸುವರು ಎಂಬುದನ್ನು ತಿಳಿದುಕೊಳ್ಳಲು ಅವರು ತುಂಬಾ ಉತ್ಸುಕರಾಗಿರುತ್ತಾರೆ, ಮತ್ತು ಅದು ಅವರನ್ನು ಹೆಚ್ಚು ಖುಷಿಯಾಗಿರಿಸುತ್ತದೆ. ನಮ್ಮ ಮಾತಿಗೆ ಅವರು ಗೌರವ ನೀಡುವರು, ನಮ್ಮನ್ನು ಪ್ರೀತಿಯಿಂದ ಕಾಣುವರು ಎಂದರೆ ಅವರ ಖುಷಿಗೆ ಪಾರವೇ ಇಲ್ಲ.

ಒಬ್ಬ ಆದರ್ಶ ಗಂಡನಾಗಿ, ನೀವು ಅವರ ಜೊತೆ ಪ್ರತಿದಿನ ಕೆಲ ಅರ್ಥವುಳ್ಳ ಮೌಲ್ಯವುತ ಪ್ರೀತಿಯ ಕ್ಷಣ ಕಳೆಯುವುದು ಉತ್ತಮ. ಅವಳ ಚಿಕ್ಕ ಮಾತುಗಳನ್ನು ಆಲಿಸಿ, ಅವಳ ಜೊತೆ ಪ್ರೀತಿಯಿಂದ ಇರುವುದು ನಿಮ್ಮ ಕರ್ತವ್ಯವಾಗಿರುತ್ತದೆ. ನೀವು ಅವಳನ್ನು ಪ್ರೀತಿಸುವೆ ಎಂದು ತೋರಿಸಿಕೊಳ್ಳಿ, ಅವಳ ಮೇಲೆ ರೇಗಬೇಡಿ, ಹಲವು ಪುರುಷರು ತಮ್ಮ ಸಂಗಾತಿಯ ಮೇಲೆ ಪ್ರೀತಿ ಇದ್ದರು, ಒತ್ತಡದ ಜೀವನ ಶೈಲಿ ಅಥವಾ ಕೆಲಸದ ಒತ್ತಡದಿಂದ ಅವರ ಮೇಲೆ ಕೋಪಿಸಿಕೊಳ್ಳಬಹುದು ಅಥವಾ ಅವರ ಮಾತಿಗೆ ಕಿವಿಕೊಡದೆ ಇರಬಹುದು, ಅವರ ಜೊತೆ ನೀವು ಸ್ವಲ್ಪ ಸಮಯ ಪ್ರೀತಿಯ ಕ್ಷಣವನ್ನು ಕಳೆಯುವುದರಿಂದ ನಿಮ್ಮ ಒತ್ತಡವು ಕಡಿಮೆ ಆಗುತ್ತದೆ, ನಿಮ್ಮ ದಾಂಪತ್ಯ ಕೂಡ ಗಟ್ಟಿಯಾಗುತ್ತದೆ.

೨.ಒಂದೆರಡು ಮೆಚ್ಚುಗೆ ಮಾತುಗಳು ನಿಮ್ಮ ಜೀವನದಲ್ಲಿ ಅದ್ಭುತವನ್ನು ಉಂಟುಮಾಡುತ್ತದೆ

ನಿನ್ನ ಒಂದು ನಗು ನನ್ನ ದಿನವನ್ನು ಖುಷಿಯಾಗಿಸುತ್ತದೆ ಎಂದು ಹೇಳಿ ಅವಳ ಮನಸ್ಸನ್ನು ಗೆಲ್ಲಿ. ಮತ್ತು ಅದು ಅವಳ ಸಂಪೂರ್ಣ ದಿನವನ್ನು ಖುಷಿಯ ದಿನವನ್ನಾಗಿ ಮಾಡುತ್ತದೆ ಮತ್ತು ಅವಳ ಮನಸ್ಸನ್ನು ಸಂತೋಷಗೊಳಿಸುತ್ತದೆ. ಅವಳ ಗುಣವನ್ನು ಹೊಗಳಿ, ಅವಳು ಒಳ್ಳೆ ಅಡುಗೆ ಮಾಡಬಹುದು, ಅಥವಾ ನಿಮ್ಮ ಬಗ್ಗೆ ತಾಯಿಯ ಹಾಗೆ ಕಾಳಜಿವಹಿಸಬಹುದು. ಯಾವುದೇ ಇರಲಿ ಅವಳ ಮುಗ್ದ ಮನಸ್ಸಿನ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿ.

೩.ಅವಳನ್ನು ಅವಳಂತೆ ನೀವು ಪ್ರೀತಿಸಲು ಬಯಸುವಳು

ನೀವು ಅವಳನ್ನು ಅವಳಂತೆ ಪ್ರೀತಿಸಲು ಬಯಸುವಳು, ಅವಳು ತವರು ಮನೆ ಅಥವಾ ಯಾವುದಾದರು ಸಮಾರಂಭಕ್ಕೆ ಹೋಗಿದ್ದರು, ನಿಮ್ಮನ್ನು ನೆನೆಪಿಸಿಕೊಳ್ಳುವಳು ಮತ್ತು ನಿಮ್ಮನ್ನು ಮಿಸ್ ಮಾಡಿಕೊಳ್ಳುವಳು, ಹಾಗೆಯೆ ನೀವು ಕೂಡ ಅವಳನ್ನು ಮಿಸ್ ಮಾಡಿಕೊಳ್ಳಲು ಮತ್ತು ದಿನದಲ್ಲಿ ಕೆಲವು ಬಾರಿ ದೂರವಾಣಿ ಮೂಲಕವಾದರೂ ಮಾತನಾಡಲು ಬಯಸುವಳು, ನೀವು ಇದನ್ನು ಮಾಡುವುದರಿಂದ ಆಕೆ ನಿಮ್ಮ ಮೇಲೆ ಮತ್ತಷ್ಟು ಪ್ರೀತಿಯನ್ನು ತೋರಿಸವಳು. ಪ್ರತಿ ಮಹಿಳೆಯು ತನ್ನ ಪತಿ ಹೆಚ್ಚು ಸಮಯ ನನ್ನ ಜೊತೆಯಲ್ಲೇ ಕಳೆಯಬೇಕು ಎಂದು ಬಯಸುವಳು.

೪.ನೀವು ಅವಳನ್ನು ಗಮನಿಸುವುದನ್ನು ಅವಳು ಬಯಸುವಳು

ಇತ್ತೀಚಿನ ದಿನಗಳಲ್ಲಿ ಎಲ್ಲರು ಮೊಬೈಲ್ ಫೋನ್ ನಲ್ಲಿ ನಿರತವಾಗಿರುವರು, ನೀವು ಫೋನ್ ಅನ್ನು ಬಳಸಿದಷ್ಟು ಅವಳ ಜೊತೆ ಸಮಯ ಕಳೆದಿರುವುದಿಲ್ಲ, ಅದು ಅವಳ ಮನಸ್ಸಿನಲ್ಲಿ ಬೇಸರವನ್ನು ಉಂಟು ಮಾಡಬಹುದು. ನೀವು ಅವಳ ಸಣ್ಣ ಪುಟ್ಟ ಚಟುವಟಿಕೆಯನ್ನು ಗಮನಿಸುವುದು ಅವಳು ನನ್ನ ಮೇಲೆ ಪ್ರೀತಿ ಕಾಳಜಿ ಇದೆ ಎಂಬ ನಂಬಿಕೆಯನ್ನು ಭದ್ರ ಪಡಿಸಿಕೊಳ್ಳುವಲ್ಲಿ ಸಫಲವಾಗುತ್ತದೆ ಮತ್ತು ಅವಳ ಮನಸ್ಸನ್ನು ಖುಷಿಯಾಗಿಸುವಲ್ಲಿ ನೀವು ಯಶಸ್ವಿಯಾಗಬಹುದು. ಅವಳು ನಿಮ್ಮ ಜೊತೆ ಪ್ರತಿದಿನ ಏನಾದರು ಮಾತನಾಡಲು ಬಯಸುವಳು ನೀವು ಅದನ್ನು ಅರಿತುಕೊಂಡು ಅವಳಿಗೆ ಸಮಯವನ್ನು ನೀಡಿ. ನಿಮ್ಮ ಪ್ರೀತಿಯನ್ನು ತೋರಿಸಿ ಮತ್ತು ಅವಳು ನಿಮ್ಮ ಮೇಲೆ ಪ್ರೀತಿಯನ್ನು ವ್ಯಕ್ತಪಡಿಸಿದಾಗ, ಅದನ್ನು ಕನ್ನಡಿಯಂತೆ ಅವಳ ಬಳಿ ನೀವು ವ್ಯಕ್ತಪಡಿಸಿ ಇದರಿಂದ ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ.

೫.ಅವಳ ಕನಸ್ಸನ್ನು ಪ್ರೋತ್ಸಾಹಿಸಿ

ಪ್ರತಿ ಮನುಷ್ಯನಿಗೂ ಅವನದೇ ಆದ ಕನಸು ಇರುವುದು ಸಹಜ, ಅಂತೆಯೇ ಅವಳಿಗೂ ತನ್ನದೇ ಆದ ಕನಸು ಇರುತ್ತದೆ, ಅವಳ ಅಪ್ಪ ಅಮ್ಮ ಎಲ್ಲರನ್ನು ಬಿಟ್ಟು ನಿಮ್ಮ ಸಂಗಾತಿಯಾಗಿ ನಿಮ್ಮ ಜೊತೆ ಜೀವನ ಸಾಗಿಸುತ್ತಿರುವ ಅವಳ ಕನಸನ್ನು ನೀವು ಗೌರವಿಸಿ ತಾಳ್ಮೆಯಿಂದ ಕೇಳುವುದು ತುಂಬಾ ಮುಖ್ಯವಾಗುತ್ತದೆ. ಎಲ್ಲಾ ಕನಸನ್ನು ನನಸು ಮಾಡಲು ಸಾಧ್ಯವಿಲ್ಲ, ಆದರೆ ಹಾಗೆಂದು ಅವಳ ಕನಸನ್ನು ಕೇಳದೆ ಇರುವುದು ತರವಲ್ಲ, ಅವಳ ಕನಸನ್ನು ಸಂಪೂರ್ಣವಾಗಿ ಆಲಿಸಿ, ಅದರ ಮಿಥ್ಯಗಳನ್ನು ಅವಳಿಗೆ ಅರ್ಥ ಮಾಡಿಸಲು ಪ್ರಯತ್ನಿಸಿ. ಅವಳ ಮಾತನ್ನು ನೀವು ತಾಳ್ಮೆಯಿಂದ ಕೇಳುವಿರಿ ಎಂದರೆ ಖಂಡಿತ ಅವಳು ನಿಮ್ಮ ಮಾತನ್ನು ಗೌರವಿಸುವಳು.

ಅವಳನ್ನು ನೀವು ಸಂಗಾತಿ ಅಥವಾ ಪತ್ನಿ ಎಂದು ನೋಡದೆ, ಅವಳನ್ನು ನಿಮ್ಮ ಆಪ್ತ ಸ್ನೇಹಿತೆಯಂತೆ ನೋಡಿಕೊಳ್ಳಿ. ಅವಳಿಗೆ ಆಶ್ಚರ್ಯವಾಗುವಂತೆ ಅವಳ ಜನುಮದಿನಕ್ಕೆ ಶುಭಕೋರುವುದು ಮುಂತಾದವುಗಳನ್ನು ಮಾಡುವುದು ಅವಳ ಮನಸನ್ನು ನೀವು ಅರ್ಥ ಮಾಡಿಕೊಂಡಿರುವೆ ಎಂದು ತಿಳಿದುಕೊಳ್ಳಬಹುದು. ಅವಳ ಮನಸ್ಸನ್ನ ನೀವು ಅರ್ಥಮಾಡಿಕೊಳ್ಳುವುದು ನೀವು ಅವಳ ಪತಿಯಾಗಿ ಮಾಡಬೇಕಾದ ಮೊದಲ ಕೆಲಸ.

೬.ಲೈಂಗಿಕವಾಗಿ ತೃಪ್ತಿ ನೀಡಿ

ಪುರುಷರಿಗೆ ಮುಖ್ಯವಾದಷ್ಟೇ ಮಹಿಳೆಯರಿಗೆ ಕೂಡ ಲೈಂಗಿಕ ಕ್ರಿಯೆ ಮುಖ್ಯವಾದದ್ದು, ಅವಳು ನಿಮ್ಮಂತೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಯಸುವಳು, ಅವಳು ಲೈಂಗಿಕತೆ ಮಾಡುವಾಗ ಹೆಚ್ಚು ಸಕ್ರಿಯವಾಗಿ, ತನ್ನನ್ನು ತೃಪ್ತಿಪಡಿಸಲು ಬಯಸುವಳು, ಅದನ್ನು ಅರಿತುಕೊಂಡು ಅವಳ ಲೈಂಗಿಕ ಸುಖವನ್ನು ರಸಮಯವಾಗಿಸಿ. ಅವಳು ಅವಳ ಪ್ರತಿ ಕನಸಿನಲ್ಲೂ ನಿಮ್ಮ ತೋಳಿನ ಮೇಲೆ ಇರಲು ಬಯಸುವಳು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon