Link copied!
Sign in / Sign up
2
Shares

ಅನುಭವವುಳ್ಳ ಮಹಿಳೆ ಸಂಸಾರದಲ್ಲಿ ಮಾಡುವ 7 ಕೆಲಸಗಳು

ಗಂಡ ಹೆಂಡತಿಯ ಸಂಬಂಧ ಎಷ್ಟು ಸುಂದರೆವೆಂದರೆ, ಒಬ್ಬರನ್ನು ಒಬ್ಬರು ಬಿಟ್ಟು ಬಾಳಲು ಅಸಾಧ್ಯವೆಂಬಂತೆ ಹೊಂದಿಕೊಂಡು ಬದುಕುತ್ತಾರೆ. ಗಂಡ ಹೆಂಡತಿ ಇಬ್ಬರು ಒಬ್ಬರಿಗೊಬ್ಬರು, ಒಳ್ಳೆಯ ಸ್ನೇಹಿತರು ಎಂದರೆ ತಪ್ಪಾಗುವುದಿಲ್ಲ. ಆದರೆ ಕೆಲವು ಸಂದರ್ಭದಲ್ಲಿ, ಕೆಲಸದ ಒತ್ತಡದಿಂದ ಇಬ್ಬರ ಮಧ್ಯೆ ಮನಸ್ತಾಪ, ಜಗಳಗಳು ಮೂಡುವುದು ಸಹಜ. ಆದರೆ ಇದೆಲ್ಲವನ್ನು ಮರೆತು ಸುಖ ಸಂಸಾರ ನಡೆಸುವ ಹೆಂಗಸರ ಗುಣ ಲಕ್ಷಣಗಳೇನೆಂದು ತಿಳಿಯೇಬೇಕೇ? ಮುಂದೆ ಓದಿ.

೧. ಕಲ್ಪಿತ ಕಥೆಗಳಿಂದ ದೂರ ಉಳಿದಿರುತ್ತಾರೆ

ಹೌದು, ಎಲ್ಲಾ ಹೆಣ್ಣು ಮಕ್ಕಳಿಗೆ ತಮ್ಮದೇ ಹುಚ್ಚು ಕನಸುಗಳಿರುತ್ತವೆ. ಆದರೆ ಎಲ್ಲವು ನಿಜವಾಗಲು ಸಾಧ್ಯವೇ? ನೀವೇ ಯೋಚಿಸಿ. ಸಿನಿಮಾ, ದಾರವಾಹಿಗಳ್ಳಲ್ಲಿ ಬರುವ ಕಾಲ್ಪನಿಕ ವ್ಯಕ್ತಿತ್ವವವನ್ನು, ನಿಜವೆಂದು ನಂಬದೆ ಅವಳು ಸಂಸಾರವನ್ನು ಮುನ್ನಡೆಸುತ್ತಾಳೆ. ಸಂಸಾರವೆಂದರೆ ಕೇವಲ ಸುಖವಿರುತ್ತದೆ ಎಂಬ ತಪ್ಪು ಕಲ್ಪನೆಯನ್ನು ಮೀರಿ ಯೋಚಿಸುವ ವ್ಯಕ್ತಿತ್ವದವರಾಗಿರುತ್ತಾರೆ.

೨. ಹೊಂದಾಣಿಕೆಯ ಸೂತ್ರ

ಪ್ರಪಂಚದಲ್ಲಿ ಯಾರು ಸರಿಯಾದ ವ್ಯಕ್ತಿತ್ವವನ್ನು ಹೊಂದಿದವರಿಲ್ಲ. ಎಲ್ಲರಲ್ಲಿಯು ಒಂದಲ್ಲಾ ಒಂದು ಕುಂದು ಕೊರತೆಗಳಿರುತ್ತದೆ. ತಪ್ಪು ಮಾಡುವುದು ಸಹಜ, ಆದನ್ನು ಮರೆತು ಮುಂದೆ ನಡೆಯುವ ವ್ಯಕ್ತಿತ್ವ ಇರುವುದು ಕೆಲವರಲ್ಲಿ ಮಾತ್ರ. ಆದ್ದರಿಂದ ಸಿಟ್ಟು, ಹಠ ಎಲ್ಲವನ್ನು ಬಿಟ್ಟು ನಡೆಯುವ ವ್ಯಕ್ತಿತ್ವ ಈ ರೀತಿಯ ಹೆಂಗಸರಲ್ಲಿ ಇರುತ್ತದೆ.

೩. ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ

ಮದುವೆಯಾದ ಹೊಸತರಲ್ಲಿ ಕೇಳಲು ಮುಜುಗರವೆನಿಸಿದರೂ, ಇದನ್ನು ನೀವು ಮಾತನಾಡುವುದು ಸೂಕ್ತ. ನಿಮ್ಮ ಮನೆಯ ಖರ್ಚು ವೆಚ್ಚಗಳು, ಅದನ್ನು ಸರಿದೂಗಿಸುವ ಬಗ್ಗೆ, ಮುಂದಿನ ಭವಿಷ್ಯಕ್ಕಾಗಿ ಉಳಿತಾಯ ಮಾಡುವ ವಿಧಾನಗಳನ್ನು ಮುಕ್ತವಾಗಿ ಮಾತನಾಡುವ ವ್ಯಕ್ತಿತ್ವದವರು ಇವರು.

೪. ಒಬರನ್ನು ಒಬ್ಬರು ಗೌರವಿಸುತ್ತಾರೆ

ನೀವು ಹೇಗೆ ನಿಮ್ಮ ಪತಿಯೊಂದಿಗೆ ನಡೆದುಕೊಳ್ಳುತ್ತೀರ, ಅವರು ಕೂಡ ನಿಮ್ಮೊಂದಿಗೆ ಅಷ್ಟೇ ಪ್ರೀತಿ, ಗೌರವದಿಂದ ವರ್ತಿಸುತ್ತಾರೆ. ಅವರ ಸಾಧನೆಗಳನ್ನು ಹೊಗಳಿ, ಅವರ ಪರಿಶ್ರಮಕ್ಕೆ ಬೆನ್ನು ತಟ್ಟುವ ವ್ಯಕ್ತಿತ್ವವುಳ್ಳವರಾಗಿರುತ್ತಾರೆ.

೫. ತಪ್ಪನ್ನು ಗಂಡನ ಮೇಲೆ ಹೊರಿಸುವುದಿಲ್ಲ

ನಿಮ್ಮ ಸಂತೋಷಕ್ಕೆ ಯಾರು ಕಾರಣರಲ್ಲ, ಹಾಗೆಯೇ ನಿಮ್ಮ ದುಖಕ್ಕೂ ಸಹ ನಿಮ್ಮ ಪತಿ ಕಾರಣರಲ್ಲ. ಅದು ನಿಮ್ಮ ಮನಸ್ಥಿತಿಯ ಮೇಲೆ ಅವಲಂಭಿತವಾಗಿದೆ.  ಅನುಭವವುಳ್ಳ ಮಹಿಳೆ ತಪ್ಪುಗಳನ್ನು ತನ್ನ ಗಂಡನ ಮೇಲೆ ಹೊರಿಸುವುದಿಲ್ಲ

೬. ಜವಾಬ್ಧಾರಿಯನ್ನು ಹಂಚಿಕೊಳ್ಳುತ್ತಾರೆ

ಎಲ್ಲಾ ವಿಚಾರದಲ್ಲಿ ಗಂಡನಿಗೆ ಜವಾಬ್ಧಾರಿ ಹೊರಿಸುವುದನ್ನು ಕಡಿಮೆ ಮಾಡಿ. ನಿಮಗೆ ಮಾಡಲು ಸಾಧ್ಯವಾಗುವ ಕೆಲಸಗಳನ್ನು ನೀವೇ ಮಾಡಿ. ಬಲಿಷ್ಠಮನಸ್ಸಿನ ಮಹಿಳೆ ಆದಷ್ಟು ಜವಾಬ್ಧಾರಿಯನ್ನು ತಾನೇ ವಹಿಸಿಕೊಂಡು, ಸಂಸಾರವನ್ನು ಮುನ್ನಡೆಸುತ್ತಾಳೆ.

೭. ಮುಖ್ಯವಾದ ಕೆಲಸಗಳಿಗೆ ಆಧ್ಯತೆ ನೀಡುತ್ತಾಳೆ

ಮಗುವಾದ ನಂತರ ಸಂಸಾರದಲ್ಲಿ ಜವಾಬ್ಧಾರಿಗಳು ಹೆಚ್ಚಾಗುತ್ತದೆ. ಯಾವ ಕೆಲಸಗಳಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು, ಮುಖ್ಯವಲ್ಲದ ಕೆಲಸಗಳನ್ನು ಹೇಗೆ ನಿಭಾಯಿಸಬೇಕು ಎಂಬ ಕಲೆ, ಪ್ರಬುದ್ಧ ಮಹಿಳೆಯರಿಗೆ ತಿಳಿದಿರುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon