Link copied!
Sign in / Sign up
1
Shares

ಸಂಭೋಗದ ನಂತರ ನೀವು ರಕ್ತ ಸ್ರಾವವನ್ನು ಅನುಭವಿಸುವಿರಾ?

ನೀವು ಮೊದಲ ಬಾರಿಗೆ ಸಂಭೋಗದಲ್ಲಿ ಭಾಗಿಯಾಗಿದ್ದಾರೆ, ಸಂಭೋಗದ ನಂತರ ರಕ್ತಸ್ರಾವ ಆಗುವುದು ಸಾಮಾನ್ಯ ಅಥವಾ ಸಂಭೋಗ ಆದ ಒಂದೆರಡು ನಂತರದ ದಿನಗಳಲ್ಲೂ ನೀವು ರಕ್ತಸ್ರಾವವನ್ನು ನಿರೀಕ್ಷಿಸಬಹುದು. ಆದರೆ ನೀವು ಮೊದಲೇ ಸುಮಾರು ದಿನಗಳ ಕೆಳಗಡೆ ಸಂಭೋಗದಲ್ಲಿ ಭಾಗಿಯಾಗಿದ್ದು, ಈಗ ಪುನಃ ಸಂಭೋಗ ಮಾಡಿದ ನಂತರ ರಕ್ತಸ್ರಾವ ಆಗುತ್ತಿದ್ದರೆ ನೀವು ಇದನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

ಲೈಂಗಿಕ ಕ್ರಿಯೆಯ ನಂತರ ರಕ್ತಸ್ರಾವ ಆಗುವುದು ಕೆಲವೊಮ್ಮೆ ಸಾಮಾನ್ಯ ಇರಬಹುದು, ಆದರೆ ಲೈಂಗಿಕ ಕ್ರಿಯೆ ನಂತರ ರಕ್ತ ಬರುವುದು ದೊಡ್ಡ ಸಮಸ್ಯೆಯ ಸೂಚನೆ ಇರಬಹುದು. ನೀವು ಸಣ್ಣ ರಕ್ತ ಕಲೆಯನ್ನು ಗಮನಿಸಿದರು ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

ಲೈಂಗಿಕತೆ ನಂತರ ರಕ್ತಸ್ರಾವ ಆಗಲು ಕೆಳಗಿನವುಗಳು ಕಾರಣ ಇರಬಹುದು,

೧.ಋತುಚಕ್ರ

ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡುವ ಮುನ್ನ ಇದು ನಿಮ್ಮ ಮುಟ್ಟಾಗುವ ಸಮಯವೇ ಎಂದು ನೋಡಿಕೊಳ್ಳಿ. ನೀವು ಮುಟ್ಟಾಗುವ ಸಮಯದಲ್ಲಿ ಅಥವಾ ಮುಟ್ಟಾದ ಒಂದೆರಡು ದಿನದ ನಂತರ ಸಂಭೋಗ ಮಾಡಿದ್ದರೆ ರಕ್ತಸ್ರಾವ ಆಗುವುದು ಸಾಮಾನ್ಯ.

೨.ಯೋನಿಯ ಕ್ಷೀಣತೆ ಅಥವಾ ಶುಷ್ಕತೆ

ಇದಕ್ಕೆ ಕಾರಣ ಈಸ್ಟ್ರೋಜೆನ್ ಮಟ್ಟ ತೀರಾ ಕಡಿಮೆ ಇರುವುದು(ಋತುಮತಿಯಾದ ನಂತರ ಇದು ನಿಮ್ಮ ಅನುಭವಕ್ಕೆ ಬರಬಹುದು), ನಿಮ್ಮ ಯೋನಿ ಹೆಚ್ಚು ಶುಷ್ಕತೆಯನ್ನು ಹೊಂದಿದ್ದರೆ ಸಂಭೋಗ ಮಾಡುವಾಗ ಆಗುವ ಘರ್ಷಣೆ ಇಂದ ರಕ್ತಸ್ರಾವ ಆಗಬಹುದು.

ಪರಿಹಾರ : ಸಂಭೋಗ ಮಾಡುವಾಗ ತೈಲಲೇಪನ ಮಾಡಿಕೊಳ್ಳುವುದು ಸಹಾಯವಾಗುತ್ತದೆ. ಅಥವಾ ಇದಕ್ಕೆ ಈಸ್ಟ್ರೋಜೆನ್ ಕಾರಣವಾದರೆ ವೈದ್ಯರು ಮಾತ್ರೆಗಳ ಮೂಲಕ ಅದನ್ನು ಸರಿಪಡಿಸುವ ಸಲಹೆಯನ್ನು ನೀಡುವರು.

೩.ಸರ್ವಿಸಿಟಿಸ್

ಇದು ಗರ್ಭಕಂಠದ ಉರಿಯೂತ ಅಥವಾ ಸೋಂಕು ಆಗಿರಬಹುದು. ಇದು ರಕ್ತಸ್ರಾವ ಅಥವಾ ನಿಮ್ಮ ವಿಸರ್ಜನೆಯಲ್ಲಿ ಬದಲಾವಣೆಯನ್ನು ಉಂಟುಮಾಡಬಹುದು. ಸಂಭವನೀಯ ಕಾರಣಗಳು

ಲೈಂಗಿಕತೆ ಇಂದ ಹರಡಿದ ರೋಗ, ಉದಾಹರಣೆಗೆ ಕ್ಲಾಮೈಡಿಯಾ.

ಬ್ಯಾಕ್ಟೀರಿಯಾ ಯೋನಿಯತೆ, ಅಥವಾ ನಿಮ್ಮ ಯೋನಿಯಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾಗಳಲ್ಲಿ ಅಸಮತೋಲತೆ.

ಟ್ರೈಕೊಮೊನಿಯಾಸಿಸ್ ಅಥವಾ ಪರಾವಲಂಬಿ ಇಂದ ಲೈಂಗಿಕವಾಗಿ ಹರಡುವ ಸೋಂಕು.

ಸಲಹೆ : ವೈದ್ಯರನ್ನು ಭೇಟಿಮಾಡಿ.

೪.ಸರ್ವಿಕಲ್ ಎಕ್ಟ್ರೋಪಿಯಾನ್

ಗರ್ಭಕಂಠದ ಕಾಲುವೆಯ ಒಳಭಾಗದಲ್ಲಿ ಗರ್ಭಾಶಯದ ಕೋಶಗಳು ಗರ್ಭಕಂಠದ ಹೊರ ಭಾಗದಲ್ಲಿ ಮೃದುವಾಗಿ ವಿಸ್ತರಿಸುತ್ತವೆ (ಅಲ್ಲಿ ಕೋಶಗಳು ಸಾಮಾನ್ಯವಾಗಿ ಗಟ್ಟಿಯಾಗುತ್ತವೆ).

ಸಲಹೆ : ಇದು ಅನೇಕ ಮಹಿಳೆಯರಲ್ಲಿ ಸಾಮಾನ್ಯ, ಆದರೆ ಹೆಚ್ಚು ರಕ್ತಸ್ರಾವ ಅಥವಾ ವಿಸರ್ಜನೆಯಂತಹ ಗುಣಲಕ್ಷಣಗಳನ್ನು ಗಮನಿಸಿದರೆ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

೫.ಗರ್ಭಕಂಠದ ಸಂಯುಕ್ತಗಳು

ಗರ್ಭಾಶಯದ ಮುಂಭಾಗದಲ್ಲಿನ ಬೆಳವಣಿಗೆಗಳು, ಇವುಗಳು ಕೆಲವೊಮ್ಮೆ ತೀವ್ರವಾದ ಉರಿಯೂತ ಅಥವಾ ಹಾರ್ಮೋನ್ ಬದಲಾವಣೆಯಿಂದ ಉಂಟಾಗುತ್ತವೆ.

ಸಲಹೆ : ಎಲ್ಲಾ ತರಹದ ಗರ್ಭಕಂಠದ ಸಂಯುಕ್ತಗಳು ಹಾನಿಕಾರಕ, ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

೬.ಗರ್ಭಾಶಯದ ಸಡಿಲತೆ

ಒಂದು ವೇಳೆ ಗರ್ಭಾಶಯವು ತಾನು ಸಾಮಾನ್ಯವಾಗಿರುವ ಜಾಗದಿಂದ ಹೊರಬಂದರೆ, ಗರ್ಭಕಂಠ ಮತ್ತು ಇತರೆ ಸ್ನಾಯುಗಳು ಕೆಲವೊಮ್ಮೆ ತೆರೆದುಕೊಳ್ಳುತ್ತವೆ. ಇದರ ಸ್ಥಿತಿ ತೀವ್ರವಾಗಿದ್ದರೆ ಮಾತ್ರ ರಕ್ತಸ್ರಾವ ಆಗುವುದು.

ಸಲಹೆ : ನಿಮ್ಮ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ಕೆಜೆಲ್ ವ್ಯಾಯಾಮವನ್ನು ಮಾಡುವುದು ಉತ್ತಮ. ತೀವ್ರ ತೊಂದರೆ ಇದ್ದರೆ ವೈದ್ಯರು ಸ್ನಾಯುವು ಗಟ್ಟಿಯಾಗಿ ಕೂರಲು ಸುರುಳಿಯನ್ನು ಬೆಂಬಲವಾಗಿ ಕೊಡಬಹುದು.

೭.ಗಾಯಗಳು

ಗರ್ಭಕಾಲುವೆಯಲ್ಲಿನ ಗಾಯಗಳು ನಿಮಗೆ ಹಾನಿಕಾರಕ, ಇದು ನಿಮ್ಮ ಸಂಭೋಗದ ನಂತರ ರಕ್ತಸ್ರಾವ ಆಗಲು ಕಾರಣವಾಗುತ್ತದೆ.

ಸಲಹೆ : ವೈದ್ಯರನ್ನು ಭೇಟಿ ಮಾಡಿ.

೮.ಗರ್ಭಕಂಠದ ಕ್ಯಾನ್ಸರ್

ಗರ್ಭಕಂಠದ ಕ್ಯಾನ್ಸರ್ ಹೊಂದಿರುವ ಮಹಿಳೆಯರಲ್ಲಿ ಸುಮಾರು ೧೧ ಪ್ರತಿಶತದಷ್ಟು ಮಂದಿ ರಕ್ತಸ್ರಾವದಿಂದ ಬಳಲುತ್ತಿದ್ದಾರೆ. ಇದು ಸಾಮಾನ್ಯವಾಗಿ ಕ್ಯಾನ್ಸರ್ ನ ಮೊದಲ ರೋಗಲಕ್ಷಣವಾಗಿದೆ.

ಸಲಹೆ : ವೈದ್ಯರನ್ನು ಭೇಟಿ ಮಾಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon