Link copied!
Sign in / Sign up
15
Shares

ಸಂಭೋಗದ ಬಗೆಗಿನ ಕೆಲವು ಕಟ್ಟುಕಥೆಗಳು

ಸಾರ್ವಜನಿಕವಾಗಿ ಮಾತನಾಡದ, ಆದರೆ ಪ್ರಪಂಚದಲ್ಲಿ ಅತಿ ಹೆಚ್ಚು ಮಾತನಾಡುವ ವಿಷಯವೆಂದರೆ ಲೈಂಗಿಕ ಕ್ರಿಯೆ. ಹಾಗೆಯೆ ಅದರ ಬಗ್ಗೆ ಇರುವ ಕೆಲವು ಕಟ್ಟುಕಥೆಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಅಥವಾ ಅದರ ನಿಜವಾದ ಅರ್ಥ ಏನು ಎಂಬುದನ್ನು ಈ ಲೇಖನ ನಿಮಗೆ ತಿಳಿಸುತ್ತದೆ.

೧.ಮಹಿಳೆಗಿಂತ ಹೆಚ್ಚು ಪುರುಷರು ಇದರ ಬಗ್ಗೆ ಯೋಚಿಸುತ್ತಾರೆ

ಅಧ್ಯಯನದ ಪ್ರಕಾರ ಹೆಚ್ಚು ಪುರುಷರು ಒಂದು ಗಂಟೆಗೆ ಒಂದು ಬಾರಿ ಲೈಂಗಿಕತೆ ಬಗ್ಗೆ ಯೋಚಿಸಿದರೆ, ಮಹಿಳೆಯರು, ಎರಡು ಗಂಟೆಗೆ ಒಂದು ಬಾರಿ ಇದರ ಬಗ್ಗೆ ಚಿಂತಿಸುತ್ತಾರೆ, ಮತ್ತು ಅವರು ನಿರಂತರವಾಗಿ ಆಗಾಗ್ಗೆ ಕೂಡ ಇದರ ಬಗ್ಗೆ ಚಿಂತಿಸಬಹುದು.

೨.ಅವಳು ಶಬ್ದ ಮಾಡದಿದ್ದರೆ ಸುಖಕರವಾಗಿ ಅನುಭವಿಸುತ್ತಿಲ್ಲ!

ಕ್ರಿಯೆ ಮಾಡುವಾಗ ಮಹಿಳೆ ಶಬ್ದ ಮಾಡುವುದು ಸಂತೋಷಕರ ಮತ್ತು ಇಬ್ಬರಲ್ಲೂ ಆಸಕ್ತಿಯನ್ನು ಹೆಚ್ಚಿಸುತ್ತದೆ. ಇದರ ಒರೆತು ಆಕೆ ಶಬ್ದ ಮಾಡಲಿಲ್ಲ ಎಂದರೆ, ಸಂತೋಷ ಅನುಭವಿಸುತ್ತಿಲ್ಲ ಎಂದು ಅರ್ಥವಲ್ಲ. ಅವಳು ಕಡಿಮೆ ದ್ವನಿಯಲ್ಲೇ ಅದನ್ನು ಸುಖಕರವಾಗಿ ಅನಿಭವಿಸುತ್ತಿರುತ್ತಾಳೆ.

೩.ಅವಳ ಋತುಚಕ್ರದಲ್ಲಿ ಸಂಭೋಗ ಮಾಡಿದರೆ ಅವಳು ಗರ್ಭಿಣಿ ಆಗುವುದಿಲ್ಲ

ಈ ಅವಧಿಯಲ್ಲಿ ಗರ್ಭಿಣಿಯಾಗುವುದರ ಸಾಧ್ಯತೆಯು ಕಡಿಮೆಯಾಗಿದ್ದರೂ, ಮುಟ್ಟಿನ ಸಮಯದಲ್ಲಿ ಲೈಂಗಿಕತೆಯು ಸಂಪೂರ್ಣವಾಗಿ ಹೆದರಿಕೆಯಿಂದ ಕೂಡಿರುತ್ತದೆ. ಈ ಅವಧಿಯಲ್ಲಿ ಅವರು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದರೆ, ಗರ್ಭಿಣಿಯಾಗುವುದಕ್ಕಿಂತ ಚಿಂತೆಗೆ ಬೇಗನೆ ಒಳಗಾಗುತ್ತಾರೆ.

೪.ದ್ರವ ಹೊರಬರುವ ಮುನ್ನ ಆಚೆಗೆ ಎಳೆದುಕೊಂಡರೆ ಗರ್ಭಿಣಿ ಆಗುವುದಿಲ್ಲ

ನಿಮ್ಮ ಶಿಶ್ನ ನಿಮಿರುವಿಕೆ ಆದ ತಕ್ಷಣವೇ ವೀರ್ಯ ಉತ್ಪತ್ತಿಯಾಗಲು ಪ್ರಾರಂಭಿಸುತ್ತದೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಅದು ಹೊರಬರುವ ಮುನ್ನವೇ ವೀರ್ಯ ಯೋನಿಯನ್ನು ಪ್ರವೇಶಿಸಿರಬಹುದು, ಗರ್ಭ ಬೇಡ ಎಂದರೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

೫.ಅದನ್ನು ಮಾಡಿದರೆ ಸುಸ್ತಾಗುತ್ತದೆ

ನಿಮ್ಮ ಸಂಗಾತಿ ಇದನ್ನು ಹೇಳಿದರೆ, ಅವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ. ಲೈಂಗಿಕತೆ ನಿಮ್ಮನ್ನು ದಣಿಸುವುದಿಲ್ಲ, ಇದು ನಿಮಗೆ ಶಾಂತಿ ಮತ್ತು ಶಕ್ತಿಯನ್ನು ಕೊಡುತ್ತದೆ. ನಿಮಗೆ ತಲೆನೋವು ಇದ್ದು, ಕ್ರಿಯೆ ಮಾಡಿದ ೨೦ ನಿಮಿಷಗಳ ನಂತರ ನಿಮ್ಮ ತಲೆನೋವು ಗಣನೀಯವಾಗಿ ಕಡಿಮೆಯಾಗಿರುತ್ತದೆ. ಸಿನಿಮಾಗಳಲ್ಲಿ ನೋಡಿದಂತೆ ಲೈಂಗಿಕತೆ ಇರುತ್ತದೆ, ಎನ್ನುವುದು ಸುಳ್ಳು ಸಿನಿಮಾವೇ ಬೇರೆ ನಿಜ ಜೀವನವೇ ಬೇರೆ. ಅವರು ನನಗೆ ಸುಸ್ತಾಗಿದೆ ಎಂದು ಹೇಳಿದರೆ, ಈಗ ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಆಸಕ್ತಿ ಇಲ್ಲ ಎಂದು ಅರ್ಥ ಅಷ್ಟೇ. ಏಕೆಂದರೆ ಇದನ್ನು ಮಾಡುವುದರಿಂದ ಶಕ್ತಿ ಮತ್ತು ವಿಶ್ರಾಂತಿ ಸಿಗುತ್ತದೆ ಒರೆತು ಆಯಾಸವಾಗುವುದಿಲ್ಲ.

ಸಂಭೋಗ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳಿ

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon