Link copied!
Sign in / Sign up
15
Shares

ಪ್ರಶ್ನೆ : ಸಂಭೋಗ ನಡೆಸುವಾಗ ತುಂಬಾನೇ ನೋವಾಗುತ್ತದೆ, ಏನು ಮಾಡಬೇಕು?

ಸಂಭೋಗ ನಡೆಸುವುದು ತೃಪ್ತಿಕರವಾಗಿರುತ್ತದೆ ಮತ್ತು ಹಿತವಾಗಿರುತ್ತದೆ ಎಂದು ಹೆಚ್ಚಾಗಿ ಭಾವಿಸುತ್ತಾರೆ. ಆದರೆ, ನಿಜ ಜೀವನದಲ್ಲಿ ನೀವು ಅಂದುಕೊಂಡಂತೆ ಅದು ಇರುವುದಿಲ್ಲ. ಆ ಸಮಯ ನೀವು ನೋಡಿರಬಹುದು, ಸಂಭೋಗ ಮಾಡುವಾಗ ನೋವು ಮಾಡಿ ನಿಮ್ಮ ತರಲೆ, ತಮಾಷೆ ಆಟವನ್ನು ನಾಶಮಾಡಿ, ನಿಮ್ಮ ಅಂದುಕೊಂಡಂತೆ ಸಂಭೋಗವನ್ನು ಪೂರ್ತಿಮಾಡಲು ಸಾಧ್ಯವಾಗದೆ ಇರಬಹುದು. ನಿಮಗೆ ಸಂಭೋಗ ಮಾಡುವಾಗ ಶಿಶ್ನ ನೋವು ಬರಲು ಕೆಲವು ಕಾರಣಗಳನ್ನು ಮತ್ತು ಅದನ್ನು ಸರಿಪಡಿಸಿಕೊಳ್ಳಲು ಉಪಾಯಗಳನ್ನು ಇಲ್ಲಿ ನೀಡಲಾಗಿದೆ.

೧.ಪೆರೊನಿಸ್ ಕಾಯಿಲೆ

ಸಾಮಾನ್ಯವಾಗಿ ಇದನ್ನು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ (erectile dysfunction ಅಥವಾ ED) ಎಂದು ಕರೆಯುತ್ತೇವೆ. ಹಲವು ಪುರುಷರಲ್ಲಿ ಸಂಭೋಗ ಮಾಡುವಾಗ ನೋವು ಉಂಟಾಗಲು ಇದು ಸಾಮಾನ್ಯ ಕಾರಣವಾಗಿದೆ. ಶಿಶ್ನದ ಉದ್ದಕ್ಕೂ ಹಾದುಹೋಗುವ ಒಂದು ಅಂಗಾಂಶ ಅದನ್ನು ಬಾಗುವಂತೆ ಮಾಡುತ್ತದೆ, ಇದು ಸಂಭೋಗ ಕಷ್ಟಕರ ಮತ್ತು ನೋವಾಗುವಂತೆ ಮಾಡುತ್ತದೆ. ನಿಮ್ಮ ಶಿಶ್ನದಲ್ಲಿ ಇರುವ ಗಾಯದ ಅಥವಾ ನಿಮ್ಮ ಶಿಶ್ನದಲ್ಲಿ ಆಗಿರುವ ಹಾನಿಯಿಂದ ಅಥವಾ ಅನುವಂಶಿಕ ತೊಂದರೆಯು ಇದಕ್ಕೆ ಕಾರಣ.

ನೀವು ಏನು ಮಾಡಬಹುದು

ಇದು ವೈದ್ಯಕೀಯ ತೊಂದರೆಯಾಗಿದ್ದು ನುರಿತ ತಜ್ಞರ ಸಲಹೆ ಪಡೆಯುವುದು ಒಳಿತು. ಆದಾಗ್ಯೂ, ನಿಮ್ಮ ಕೆಲವು ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದರ ಮೂಲಕ ಕೂಡ ಇದನ್ನು ಕಡಿಮೆ ಮಾಡಿಕೊಳ್ಳಬಹುದು ಅವುಗಳೆಂದರೆ, ತೂಕ ಕಳೆದುಕೊಳ್ಳುವುದು, ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು, ಮದ್ಯಪಾನದಿಂದ ದೂರವಿರುವುದು ಈ ಸಮಸ್ಯೆಗೆ ಪರಿಹಾರವಾಗುತ್ತದೆ.

೨.ಮುಂದೊಗಲು ಚರ್ಮ ಬಿಗಿಯಾಗಿರುವುದು

ಈ ಸ್ಥಿತಿಯನ್ನು ಫಿಮೊಸಿಸ್ ಎಂದು ಕರೆಯಲಾಗುತ್ತದೆ, ಶಿಶ್ನದ ಮುಂಭಾಗದ ಚರ್ಮ ತೀರಾ ಬಿಗಿಯಾಗಿ ಹಿಂತೆಗೆದುಕೊಳ್ಳಲು ಕಷ್ಟವಾಗುವುದು. ಮತ್ತೊಂದು ಸ್ಥಿತಿ ಎಂದರೆ ಪ್ಯಾರಾಫಿಮೊಸಿಸ್, ಶಿಶ್ನದ ಮುಂಭಾಗ ಚರ್ಮವು ಶಿಶ್ನ ತಲೆಯ ಹಿಂದೆ ಮಡಚಿಕೊಂಡು ಅಥವಾ ಅದರಿಂದ ಮುಂದೆ ಬಾರದಿರುವುದು, ಇದು ನಿಮ್ಮ ಸಂಭೋಗ ಅಹಿತಕರವಾಗುವಂತೆ ಮಾಡಬಹುದು.

ನೀವು ಏನು ಮಾಡಬಹುದು

ಶೋಚನೀಯವೆಂದರೆ, ಇದಕ್ಕೆ ಅಷ್ಟು ಸೂಕ್ತ ಪರಿಹಾರ ಯಾವುದು ಇಲ್ಲ, ನೀವು ವೈದ್ಯರನ್ನು ಭೇಟಿ ಮಾಡುವುದು ಸೂಕ್ತ ಮತ್ತು ನಿಮ್ಮ ಸಂಭೋಗದ ಮದ್ಯೆ ವಿಶ್ರಾಂತಿ ಪಡೆಯುವುದು ಒಳ್ಳೆಯದು.

೩.ಪ್ರೊಸ್ಟೇಟಿಟಿಸ್

ಇದು ಪ್ರಾಸ್ಟೇಟ್ ಗ್ರಂಥಿಯ ಉರಿಯೂತದಿಂದ ಗುರುತಿಸಲ್ಪಟ್ಟ ಒಂದು ಸ್ಥಿತಿಯಾಗಿದೆ, ಇದು ಮೂತ್ರ ವಿಸರ್ಜನೆಯ ಸಮಯದಲ್ಲಿ ಊತ, ನೋವು ಅಥವಾ ಉರಿಯುವ ಸಂವೇದನೆಗೆ ಕಾರಣವಾಗುತ್ತದೆ. ನಾಳದ ಹಿಂದೆ ಇರುವ ಗ್ರಂಥಿಯು ಕೂಡ ನಿಮ್ಮ ಸಂಭೋಗದ ಸಮಯದಲ್ಲಿ ನೋವನ್ನು ಉಂಟುಮಾಡುತ್ತದೆ.

ನೀವು ಏನು ಮಾಡಬಹುದು

ಉರಿಯೂತದ ಪ್ರಾಸ್ಟೇಟ್ ಗ್ರಂಥಿ ಸಮಸ್ಯೆಗೆ ಸಾಮಾನ್ಯವಾಗಿ ಕೆಲವು ಪ್ರತಿಜೀವಕಗಳ ಮತ್ತು ಮೂತ್ರಶಾಸ್ತ್ರಜ್ಞ ಶಿಫಾರಸು ಮಾಡುವ ಇತರ ಔಷಧಿಗಳೊಂದಿಗೆ ಚಿಕಿತ್ಸೆ ಇದೆ. ಆದಾಗ್ಯೂ, ನೀವು ಸಂಭೋಗ ಮಾಡುವ ಮೊದಲು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ ನಂತರ ತೊಡಗಿಕೊಳ್ಳುವುದು, ಅಥವಾ ನಿಮ್ಮ ಸೊಂಟದ ಕೆಳಗಿನ ಭಾಗವನ್ನು ಸಂಪೂರ್ಣ ಬೆಚ್ಚನೆಯ ನೀರಿನಲ್ಲಿ ಸ್ವಲ್ಪ ಸಮಯ ಮುಳುಗಿಸಿ. ಹೆಚ್ಚು ನೀರನ್ನು ಕುಡಿಯಿರಿ. ನೀವು ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಕೂರಬೇಡಿ, ಇದು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚುಮಾಡುತ್ತದೆ.

೪.ಮೂತ್ರನಾಳದ ಸೋಂಕುಗಳು

ಇದು ಮಹಿಳೆಯರಲ್ಲಿ ಸಾಮಾನ್ಯ ಎಂದು ನೀವು ಅಂದುಕೊಂಡಿರಬಹುದು, ಆದರೆ ಇದರಿಂದ ಪುರುಷರು ಸಹ ತೊಂದರೆಗಳನ್ನು ಎದುರಿಸುತ್ತಾರೆ. ಇದರಿಂದ ಬಳಲುತ್ತಿರುವ ಪುರುಷರು, ಮೂತ್ರ ಮಾಡುವಾಗ ಶಿಶ್ನದಲ್ಲಿ ಉರಿ ಮತ್ತು ನೋವನ್ನು ಅನುಭವಿಸುತ್ತಾರೆ. ಮತ್ತು ಶಿಶ್ನ ದುರ್ವಾಸನೆಯನ್ನು ಹೊಂದಿರುತ್ತದೆ ಮತ್ತು ಸಂಭೋಗದ ಸಮಯದಲ್ಲಿ ದ್ರವ ಬರುವಾಗ ನೋವನ್ನು ಉಂಟುಮಾಡುತ್ತದೆ. ಯೀಸ್ಟ್ ಸೋಂಕು ಆಗಿದ್ದರೆ, ಶಿಶ್ನದ ತುದಿಯಲ್ಲಿ ಕಡಿತ ಮತ್ತು ಕಿರಿಕಿರಿ ಆಗುತ್ತದೆ.

ನೀವು ಏನು ಮಾಡಬಹುದು

ನೀವು ಸೋಂಕಿನಿಂದ ಬಳಲುತ್ತಿದ್ದರೆ ನಿಮ್ಮ ಸಂಭೋಗದ ಸಮಯದಲ್ಲಿ ಕಾಂಡೋಮ್ ಬಳಸುವುದನ್ನು ಮರೆಯದಿರಿ, ಏಕೆಂದರೆ ನಿಮ್ಮ ಸಂಗಾತಿಗೆ ಸೋಂಕು ಹರಡುವ ಅವಕಾಶ ಹೆಚ್ಚಿರುತ್ತದೆ. ನಿಮ್ಮ ಕ್ರಿಯೆ ಮಾಡುವ ಮುನ್ನ ಮತ್ತು ಆದ ನಂತರ ಶಿಶ್ನವನ್ನು ಚೆನ್ನಾಗಿ ನೀರಿನಿಂದ ತೊಳೆದುಕೊಳ್ಳಿ. ಹೆಚ್ಚು ನೀರನ್ನು ಕುಡಿಯಿರಿ. ಇದು ಕಡಿಮೆ ಆಗದಿದ್ದರೆ ವೈದ್ಯರನ್ನು ಭೇಟಿ ಮಾಡಿ.

೫.ಅಲರ್ಜಿ

ಕೆಲವು ಪುರುಷರಿಗೆ ಅದು ಸೂಕ್ಷ್ಮವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅಲ್ಲಿಗೆ ನೀವು ಬಳಸುವ ಸೋಪು, ಕ್ರೀಮು, ಸುವಾಸನೆ ದ್ರವದಲ್ಲಿರುವ ರಾಸಾಯನಿಕಗಳು ನಿಮ್ಮ ಶಿಶ್ನವನ್ನು ಕಿರಿಕಿರಿ ಆಗುವಂತೆ ಮತ್ತು ಉರಿಯೂತ ಕಾಣಿಸಿಕೊಳ್ಳುವಂತೆ ಮಾಡುತ್ತವೆ.

ನೀವು ಏನು ಮಾಡಬಹುದು

ಸಂಭೋಗದ ಮೊದಲು ನಿಮ್ಮ ಶಿಶ್ನಕ್ಕೆ ಬಳಸುವ ಹೊಸ ದ್ರವ ಅಥವಾ ಕ್ರೀಮುಗಳನ್ನು ತಪ್ಪಿಸಿ. ವೈದ್ಯರ ಬಳಿ ಸಮಾಲೋಚಿಸಿ. ನಿಮ್ಮ ಮನಸ್ಥಿತಿಯನ್ನು ಸಂಭೋಗಕ್ಕೂ ಮೊದಲೇ ಇದು ಹಾಳು ಮಾಡಿದರೆ, ಸ್ವಲ್ಪ ಸಮಯದ ನಂತರ ನಿಮ್ಮ ಸಂಭೋಗವನ್ನು ಪ್ರಯತ್ನಿಸಿ.

೬.ಜನನಾಂಗದ ಹೆರ್ಪ್ಸ್(Genital herpes)

ಇದು ಲೈಂಗಿಕವಾಗಿ ಹರಡುವ ಒಂದು ವಿಧವಾಗಿದ್ದು, ಅದು ಸಂಭೋಗವನ್ನು ನೋವಿನಿಂದ ಆಗುವಂತೆ ಮಾಡುತ್ತದೆ ಮತ್ತು ಸೋಂಕನ್ನು ತ್ವರಿತವಾಗಿ ಹರಡುತ್ತದೆ. ಇದು ಶಿಶ್ನವನ್ನು ನೋವು ತರಿಸುವ ಶಿಶ್ನದ ಮೇಲೆ ನೋಯ್ಯುವ ಮೊಡವೆ ಅಥವಾ ಗುಳ್ಳೆಗಳನ್ನು ಹೊಂದುವ ಗುಣಲಕ್ಷಣಗಳನ್ನು ಹೊಂದಿದೆ.

ನೀವು ಏನು ಮಾಡಬಹುದು

ನೀವು ಇದನ್ನು ಅನುಭವಿಸುತ್ತಿದ್ದರೆ, ಲೈಂಗಿಕ ಕ್ರಿಯೆಯನ್ನು ಮಾಡದೇ ಇರುವುದು ಒಳ್ಳೆಯದು, ಕಾಂಡೋಮ್ ಅನ್ನು ಬಳಸಿ ಕೂಡ ಸಂಭೋಗ ಮಾಡದಿರುವುದು ಒಳಿತು. ಲೈಂಗಿಕ ತಜ್ಞರಿಂದ ಮತ್ತು ಮೂತ್ರ ತಜ್ಞರಿಂದ ಸರಿಯಾದ ಚಿಕಿತ್ಸೆ ಪಡೆದು ಪೂರ್ತಿ ಗುಣವಾಗುವ ತನಕ ನೀವು ಸಂಭೋಗ ಮಾಡದಿರುವುದು ತುಂಬಾ ಒಳ್ಳೆಯದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon