Link copied!
Sign in / Sign up
24
Shares

ಹೆಂಗಸರೇ, ಗಂಡಸರು ಸಂಬಂಧದಲ್ಲಿ ಬೇಸರ ಪಟ್ಟುಕೊಳ್ಳುವುದು ಈ 7 ವಿಷಯಗಳಿಗೆ

ಮದುವೆಯ ಸಂಬಂಧವು ಗಂಡು ಮತ್ತು ಹೆಣ್ಣು ಇಬ್ಬರ ಸಹಕಾರ ಮತ್ತು ಹೊಂದಾಣಿಕೆಯ ಮೇಲೆ ಅವಲಂಬಿಸಿರುತ್ತದೆ. ಆದರೆ ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ನಾವು ಮಾಡುವ ಕೆಲವೊಂದು ತಪ್ಪುಗಳು, ಸಂಬಂಧದಲ್ಲಿ ಇಬ್ಬರಲ್ಲಿ ಒಬ್ಬರಿಗೆ ಬೇಸರ ಅಥವಾ ಅಸಮಾಧಾನ ಮೂಡಿಸುತ್ತವೆ. ವಿವಾಹ ತಜ್ಞರ ಪ್ರಕಾರ ಅತ್ಯಂತ ಅನ್ಯೋನ್ಯವಾದ, ಆನಂದ ತುಂಬಿದ ವೈವಾಹಿಕ ಸಂಬಂಧಗಳಲ್ಲಿಯೂ ಕೆಲವೊಮ್ಮೆ ಭಿನ್ನಾಭಿಪ್ರಾಯ ಮತ್ತು ಏಕತಾನತೆಯಿಂದ ದಂಪತಿಯಲ್ಲಿ ಬೇಸರ ಮೂಡಬಹುದು. ಗಂಡಸರು ತಮ್ಮ ವೈವಾಹಿಕ ಜೀವನದ ಬಗ್ಗೆ ಬೇಸರ ಹೊಂದಲು ಸಾಮಾನ್ಯವಾದ ಕಾರಣಗಳು ಯಾವೆಂದು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ, ಓದಿ :


೧. ಪ್ರಶಂಸೆ ಇಲ್ಲದಿರುವುದು

ಒಬ್ಬರ ಜೊತೆ ಇನ್ನೊಬ್ಬರು ಬಹಳ ದಿನಗಳಿಂದ ಇದ್ದರೆ, ಅಲ್ಲಿ ಅವರಿಬ್ಬರು ಎಲ್ಲವನ್ನೂ ಆರಾಮಾಗಿ ತೆಗೆದುಕೊಳ್ಳುತ್ತಾರೆ. ಆದರೆ ನಿಜವಾಗಿ ಒಬ್ಬರ ಕಾರ್ಯಕ್ಕೆ ಇನ್ನೊಬ್ಬರು “ಭೇಷ್” ಎಂದು ಹೇಳಿ ಪ್ರಶಂಸೆ ನೀಡುವ ಅಗತ್ಯ ಉದ್ಭವವಾಗುವುದು ಆಗಲೇ. ಕೆಲಸದಿಂದ ಸುಸ್ತಾಗಿ ಮನೆಗೆ ಬಂದೊಡನೆ ನೀವು ಅವರಿಗೆ “ನೀವು ಅದನ್ನ ಮಾಡಿಲ್ಲ”, “ಇದನ್ನ ತಂದಿಲ್ಲ” ಎಂದು ಪೀಡಿಸಿದರೆ, ಅವರಲ್ಲಿ ತಾವು ಮನೆಗಾಗಿ ಮಾಡುತ್ತಿರುವ ತ್ಯಾಗಕ್ಕೆ ಸ್ವಲ್ಪವೂ ಬೆಲೆ ಇಲ್ಲ ಎಂಬ ಭಾವನೆ ಹುಟ್ಟುತ್ತದೆ. ಇಂತಹ ಚಿಕ್ಕ ಚಿಕ್ಕ ವಿಷಯಗಳು ಅವರು ತೋರಿಸಿಕೊಳ್ಳುವುದಕ್ಕಿಂತ ಜಾಸ್ತಿ ಅವರಿಗೆ ನೋವು ಮಾಡುತ್ತವೆ. ಅವರು ಸರಿಯಾಗಿ ಮಾಡಿರುವ ಕೆಲಸಗಳನ್ನ ಪ್ರಶಂಸಿಸಿ. ಪ್ರಶ್ನೆಗಳನ್ನ ಕೇಳಲಿಕ್ಕೆ ದಿನದ ಉಳಿದೆಲ್ಲಾ ಸಮಯವಿದೆ.


೨. ಒಟ್ಟಿಗೆ ಮಜಾ ಮಾಡದೆ ಇರುವುದು

ಮದುವೆಗೆ ಮುನ್ನ ಅಥವಾ ಮದುವೆಯ ಹೊಸತರಲ್ಲಿ ಏನೇ ಮಜಾ ನೀಡುವ ಯಾವುದೇ ಚಟುವಟಿಕೆಗಳು ಇದ್ದರೂ ಅದನ್ನ ಒಟ್ಟಿಗೆ ಮಾಡುತ್ತೀವಿ. ಆ ಸಮಯದಲ್ಲಿ ಮಜಾ, ಖುಷಿ ನೀಡುವ ಎಲ್ಲಾ ಅಂಶಗಳು ಸಂಬಂಧದಲ್ಲಿ ಇರುತ್ತವೆ. ಆದರೆ ಸಮಯ ಕಳೆದಂತೆ ಒಬ್ಬರ ಸಾನಿಧ್ಯವನ್ನ ಇನ್ನೊಬ್ಬರು ಖುಷಿಪಡುವುದು ಕಡಿಮೆ ಆಗುತ್ತದೆ. ನಿಮ್ಮ ಮನೆಗೆಲಸ, ಅಡುಗೆ ಕೆಲಸದ ಹೊರತಾಗಿ ಇತರೆ ಮಜಭರಿತ ಚಟುವಟಿಕೆಗಳಲ್ಲಿ ನಿಮ್ಮ ಪತಿಯನ್ನೂ ಸೇರಿಸಿಕೊಳ್ಳಿ. ಅದು ನಿಮ್ಮ ಬಟ್ಟೆ ಖರೀದಿಗೆ ಆಗಿರಲಿ ಅಥವಾ ಯಾರದ್ದಾದರೂ ಮನೆಗೆ ಹೋಗುವುದಿರಲಿ ಅಥವಾ ಇನ್ನೊಬ್ಬರ ಬಗ್ಗೆ ಗಾಸಿಪ್, ತುಂಟ ಜೋಕ್ಸ್ ಹೇಳುವುದರಲ್ಲೇ ಆಗಲಿ.


೩. ಯಾವಾಗಲೂ ಮಕ್ಕಳ ಬಗ್ಗೆಯೇ ಮಾತಾಡುವುದು

ಹೌದು, ಇವಾಗ ನಿಮ್ಮ ಬದುಕಿನ ಮುಖ್ಯ ವಿಷಯಗಳಲ್ಲಿ ನಿಮ್ಮ ಮಕ್ಕಳಿಗೇ ಅಗ್ರಸ್ಥಾನ. ಆದರೆ ದಿನದ 24 ಗಂಟೆಯೂ ಅವರ ಬಗ್ಗೆಯೇ ಮಾತಾಡುವುದನ್ನ ಕೇಳುವುದಕ್ಕೆ ಹಿಂಸೆ ಆಗುತ್ತದೆ. ನಿಮ್ಮ ಮಕ್ಕಳಿಗೆ ನೀವು ತಾಯಿ ಎನ್ನುವುದು ಎಷ್ಟು ಸತ್ಯವೋ, ನಿಮ್ಮ ಪತಿಗೆ ನೀವು ಪತ್ನಿ ಅನ್ನುವುದು ಕೂಡ ಅಷ್ಟೇ ಸತ್ಯ, ಮುಖ್ಯ. ಒಳ್ಳೆ ತಾಯಿ ಆಗುವ ಭರದಲ್ಲಿ ಒಳ್ಳೆಯ ಹೆಂಡತಿ ಆಗುವುದನ್ನ ಮರೆಯಬಿಡಿ. ಮಕ್ಕಳ ಹೊರತಾಗಿ, ನೀವು ಈಗಲೂ ದಂಪತಿಯೇ. ಮಕ್ಕಳು ಒಮ್ಮೆ ನಿದ್ರೆಗೆ ಜಾರಿದ ಮೇಲೆ, ಅಲ್ಲಿ ಪ್ರಸ್ತಾಪಕ್ಕೆ ಬರಬೇಕಾಗಿರುವುದು ಕೇವಲ ನೀವು ಮತ್ತು ನಿಮ್ಮ ಪತಿ. ಮಾತಾಡಲು ಬೇಕಾದಷ್ಟು ವಿಷಯಗಳಿವೆ !


೪. ಪ್ರಣಯದ (ರೋಮ್ಯಾನ್ಸ್) ಬಗ್ಗೆ ಗಮನವೇ ಕೊಡದಿರುವುದು

ಪ್ರಣಯವು ಯಾವುದೇ ಮದುವೆಯ ಬಹುಮುಖ್ಯ ವಿಷಯಗಳಲ್ಲಿ ಒಂದು. ಪ್ರಣಯ ಎಂದರೆ ಕೇವಲ ಸೆಕ್ಸ್ ಅಲ್ಲ. ಪ್ರಣಯವು ನೀವು ಪ್ರತಿಯೊಂದು ವಿಷಯದಲ್ಲೂ ನಿಮ್ಮ ಸಂಗಾತಿಯನ್ನ ಹೇಗೆ ಆರಾಧಿಸುತ್ತೀರಾ, ಪ್ರೀತಿಸುತ್ತೀರಾ ಎಂದು ತೋರಿಸುವುದು. ನಿಮ್ಮ ಮದುವೆ ಆಗಿ ಎಷ್ಟೇ ವರ್ಷಗಳಾಗಿರಲಿ, ಅದರಲ್ಲಿ ಪ್ರೀತಿ-ಪ್ರಣಯ ಸಾಯಬಾರದು. ಬಹಳಷ್ಟು ಗಂಡಸರು ಮದುವೆ ಆದ ಕೆಲವು ವರ್ಷಗಳ ನಂತರ ತಮ್ಮ ಪತ್ನಿಯರು ಮೊದಲಿನಂತೆ ಪ್ರಣಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ನೀವು ನಿಮ್ಮ ಜೀವನದಲ್ಲಿ ಮುಂಚಿಗಿಂತ ಹೆಚ್ಚು ತೊಂದರೆಗಳನ್ನ, ತೊಡಕುಗಳನ್ನ ಎದುರಿಸುತ್ತಿದ್ದೀರ ಎನ್ನುವುದು ನಿಜವೇ. ಆದರೆ ಜಂಜಾಟದ ಜೀವನದಿಂದ ಕೆಲವೊಮ್ಮೆ ಬಿಡುವು ಮಾಡಿಕೊಂಡು ಒಣಗಿರುವ ನಿಮ್ಮ ಪ್ರಣಯದ ಮೇಲೆ ಸ್ವಲ್ಪ ನೀರು ಸಿಂಪಡಿಸಿ.


೫. ಸೆಕ್ಸ್ ಅಲ್ಲಿ ಎಂದಿಗೂ ತೊಡಗದೆ ಇರುವುದು

ದಂಪತಿಗಳು ಮದುವೆಯ ಹೊಸತರಲ್ಲಿ ಪದೇ ಪದೇ ತೊಡಗಿಕೊಳ್ಳುವ ಈ ಕಾರ್ಯವು ಒಂದು ವರ್ಷ ಆಗುತ್ತಿದ್ದಂತೆ ವಾರಕ್ಕೊಮ್ಮೆ ಮಾಡುವಂತಹ ಕಾರ್ಯ ಆಗುವುದು ಸಹಜ. ಆದರೆ ಇದು ನಿಮ್ಮ ಸಂಬಂಧದಲ್ಲೂ ಆಗದೆ ಇರಲಿ. ನೀವು ಒಪ್ಪುತ್ತೀರೋ, ಬಿಡುತ್ತೀರೋ, ಸೆಕ್ಸ್ ಎನ್ನುವುದು ಒಂದು ವೈವಾಹಿಕ ಸಂಬಂಧದಲ್ಲಿ ಸೆಕ್ಸ್ ಎನ್ನುವುದು ತುಂಬಾನೇ ಅತ್ಯಗತ್ಯ. ನಿಮ್ಮ ಪತಿಗೆ ಇದನ್ನ ನೀಡದೆ ದೂರವಿಡುವುದು ಒಂದು ರೀತಿಯಲ್ಲಿ ಅಪರಾಧವೇ.


೬. ಬಾಯ್ಬಿಟ್ಟು ಮಾತಾಡದೆ ಇರುವುದು

ಒಂದು ವೇಳೆ ನಿಮಗೆ ನಿಮ್ಮ ಪತಿಯ ಬಗ್ಗೆ ಯಾವುದಾದರು ವಿಷಯದಲ್ಲಿ ಅಸಮಾಧಾನ ಇದ್ದರೆ, ಅದನ್ನ ಅವರ ಬಳಿ ಬಾಯ್ಬಿಟ್ಟು ಮಾತನಾಡಿ. ಹೆಂಡತಿಯರು ತಮ್ಮ ಬಗ್ಗೆ ಯಾವ ವಿಷಯವನ್ನ ಇಷ್ಟಪಡುವುದಿಲ್ಲ ಎಂಬುದನ್ನ ಬಾಯ್ಬಿಟ್ಟು ಹೇಳುವುದಿಲ್ಲ ಎಂಬುದೇ ಬಹಳಷ್ಟು ಗಂಡಸರ ದೂರು ಆಗಿದೆ. ಮಾತನಾಡುವುದು ತುಂಬಾನೇ ಮುಖ್ಯ. ಸಹಾಯ ಬೇಕಿದ್ದಾಗ ಕೇಳಿ ಪಡೆದುಕೊಳ್ಳಿ.


೭. ಅನಗತ್ಯ ಭಿನ್ನಾಭಿಪ್ರಾಯಗಳನ್ನ ಹುಟ್ಟು ಹಾಕುವುದು

ಸಂಬಂಧದಲ್ಲಿ, ವ್ಯತ್ಯಾಸಗಳನ್ನ ನಾವು ಆಚರಿಸಬೇಕು. ಆದರೆ, ಸಂಪೂರ್ಣ ಹೊಸತಾದ ಜೀವನ ಶೈಲಿಯನ್ನೇ ಹುಟ್ಟು ಹಾಕುವುದು, ಮನಸ್ತಾಪಗಳಿಗೆ ಆಹ್ವಾನ ನೀಡಿದಂತೆ. ಇಬ್ಬರು ಒಂದೇ ಮನಸ್ಥಿತಿಯಲ್ಲಿ ಇರಲು, ಇಬ್ಬರೂ ಶ್ರಮವಹಿಸಬೇಕು. ನಿಮ್ಮ ಯಾವುದಾದರು ಅಭ್ಯಾಸಗಳು ನಿಮ್ಮ ಸಂಬಂಧಕ್ಕೆ ತೊಂದರೆ ಉಂಟು ಮಾಡುತ್ತಿದ್ದರೆ, ಅದನ್ನ ಆಗಲೇ ಬಿಟ್ಟುಬಿಡಿ.

ನಮ್ಮ ಲೇಖನವನ್ನ ಓದಿದ ಸೂಪರ್ ಅಮ್ಮ ಆದ ನಿಮಗೆ ಥ್ಯಾಂಕ್ಸ್ !
ಇದೇ ಖುಷಿಯಲ್ಲಿ ನೀವು ಅಮೆಜಾನ್ ಇಂದ ಏನೇ ಖರೀದಿಸಿದರು ನಾವು ನಿಮಗೆ ವಿಶೇಷ ಡಿಸ್ಕೌಂಟ್ ಕೊಡುತ್ತಿದ್ದೇವೆ, ಹಾಗಿದ್ದರೆ ಇನ್ನೇಕೆ ತಡ? ಇಲ್ಲಿ ಕ್ಲಿಕ್ ಮಾಡಿ, ಡಿಸ್ಕೌಂಟ್ ಪಡೆಯಿರಿ, ಖರೀದಿಸಿ !

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon