Link copied!
Sign in / Sign up
19
Shares

ಈ 5 ರಾಶಿಯ ಜೋಡಿಗಳು ಮದುವೆ ಆದರೆ ಸಂಬಂಧ ಬಹಳ ಕಷ್ಟಕರವಾಗಿರುತ್ತದೆ

ನಂಬದೆ ಇರುವವರಿಗೆ ರಾಶಿಯು ಕೇವಲ ನೀವು ಯಾವ ಸಮಯದಲ್ಲಿ ಜನಿಸಿದ್ದು ಎಂಬುದನ್ನ ಮಾತ್ರ ತಿಳಿಸುವಂತದ್ದು. ಆದರೆ ನಂಬುವವರಿಗೆ ಈ ರಾಶಿಯು ತಮ್ಮ ಶಕ್ತಿ ಮತ್ತು ದೌರ್ಬಲ್ಯಗಳು, ತಮ್ಮ ಇಷ್ಟ ಮತ್ತು ಅನಿಷ್ಟಗಳು ಮತ್ತು ಇನ್ನೂ ಹಲವಾರು ವಿಷಯಗಳನ್ನ ತೆರೆದಿಡುತ್ತದೆ. ಇಷ್ಟೇ ಏಕೆ, ನಮ್ಮ ದೇಶದಲ್ಲಿ ಒಂದು ಮದುವೆಯಾಗಬೇಕು ಎಂದರೆ ಅದಕ್ಕೆ ಗಂಡು-ಹೆಣ್ಣು ಇಬ್ಬರದ್ದೂ, ರಾಶಿ, ಜಾತಕ ಎಲ್ಲಾ ಕೂಡಿ ಬರಬೇಕು. ಹಾಗಿದ್ದರೆ, ಜ್ಯೋತಿಷ್ಯವು ಯಾವ ರಾಶಿಯ ಜೋಡಿಗಳ ನಡುವಿನ ಸಂಬಂಧ ಹೆಚ್ಚು ಕಷ್ಟಕರ ಎಂದು ಹೇಳುತ್ತದೆ ಎಂಬುದನ್ನ ಓದೋಣ ಬನ್ನಿ :

ಸಿಂಹ + ಕಟಕ

ಸಿಂಹ ಮತ್ತು ಕಟಕ ರಾಶಿಯವರ ನಡುವೆ ಸ್ವಾಭಾವಿಕ ಅನ್ಯೋನ್ಯತೆ ಇದ್ದರೂ, ವಾಸ್ತವದಲ್ಲಿ ಇವರ ನಡುವಿನ ಸಂಬಂಧ ಕಷ್ಟ. ಇದು ಸಂಬಂಧದಲ್ಲಿ ಯಾವಾಗಲೂ ಭದ್ರತೆಯ ಭಾವನೆಯನ್ನ ಬಯಸುವ ಸಿಂಹ ರಾಶಿಗೂ ಹತಾಶೆ ಮೂಡಿಸುವಂತದ್ದು ಮತ್ತು ತನ್ನ ಸಂಗಾತಿ ಜೊತೆಗೆ ಆಳವಾದ ಮತ್ತು ಎಲ್ಲಿಯೂ ಕಾಣಸಿಗದ ಬಾಂಧವ್ಯ ಬೆಳೆಸಿಕೊಳ್ಳಲು ಇಷ್ಟಪಡುವ ಕಟಕ ರಾಶಿಯವರಿಗೂ ಸಂಕಟ ಮೂಡಿಸುವಂತದ್ದು. ಈ ಒಂದು ಅಪಶ್ರುತಿಯು ಅವರ ಸಂಬಂಧವು ಬಹಳ ಚೆನ್ನಾಗೇ ಅಂದರೆ ಪ್ರಕ್ಷುಬ್ದವಾಗಿ ಇರಿಸಿದರೆ, ಕೆಟ್ಟರೆ ಜೀವಕ್ಕೆ ಕುತ್ತು ತರುವಂತ ಸಮಬಂಧ ಆಗುವಂತೆ ಮಾಡುತ್ತದೆ. ಸಿಂಹ ರಾಶಿಯವರು ಮಾತುಗಳು ಕೆಲವೊಮ್ಮೆ ತುಂಬಾನೇ ಕರುಣಾಮಯ ಮತ್ತು ಸಹೃದಯಿ ಆಗಿದ್ದರೆ, ಇನ್ನೂ ಕೆಲವೊಮ್ಮೆ ವಿನಾಕಾರಣ ದೂಷಿಸುವಂತವು ಆಗಿರುತ್ತವೆ. ಕಟಕ ರಾಶಿಯವರು ಇವೆಲ್ಲವನ್ನೂ ಮನಸ್ಸಿಗೆಯೇ ತೆಗೆದುಕೊಳ್ಳುವರು. ಅದನ್ನು ಅವರು ತೋರಿಸಿಕೊಳ್ಳದೆ ಇರಬಹುದು. ಇದು ಹೀಗೆ ಮುಂದುವರಿದಾಗ ಕಟಕ ರಾಶಿಯವರು ಅಕ್ರಮಣಶಾಲಿ ಭಾವನೆ ಹೊಂದಿ, ಸಂಬಂಧವು ಹಾಳಾಗುವಂತೆ ಆಗುತ್ತದೆ.


ಮಕರ + ಕುಂಭ

ಮಕರ ಮತ್ತು ಕುಂಭ ರಾಶಿಯವರ ನಡುವೆ ಇರುವ ಒಂದು ಸಾಮಾನ್ಯ ಗುಣ ಎಂದರೆ ಅದು ಅವರ ದೃಢಸಂಕಲ್ಪ, ಛಲ. ಆದರೆ ಅವರಲ್ಲಿರುವ ಸಾಮ್ಯತೆ ಹೊಂದದ ಒಂದು ಗುಣ ಎಂದರೆ ಅದು ಅವರು ಅಂದುಕೊಂಡ ಗುರಿಯನ್ನ ತಲುಪಲು ತೆಗೆದುಕೊಳ್ಳುವ ದಾರಿಗಳು. ಮಕರ ರಾಶಿಯವರು ನಿರ್ದಿಷ್ಟತೆ ಮತ್ತು ಸ್ಪಷ್ಟತೆಯನ್ನು ಬಯಸುವರು, ಆದರೆ ಕುಂಭ ರಾಶಿಯವರು ಪ್ರದರ್ಶನ, ನಡೆದುಕೊಳ್ಳುವಿಕೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಕುಂಭ ರಾಶಿಯವರು ತಮ್ಮ ಸಂಬಂಧದಲ್ಲಿ ಹೆಚ್ಚು ಭಾಗವಹಿಸುವುದು, ಅದು ತಮ್ಮನ್ನು ಯಾವುದಾದರು ಒಂದು ರೀತಿಯಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಬಹುದು ಎಂದೇ ಹೊರತಾಗಿ ಮಕರ ರಾಶಿಯವರಂತೆ ಶಿಸ್ತಾಗಿ ಭಾಗವಹಿಸುವುದಿಲ್ಲ. ಕೊನೆಯಲ್ಲಿ ಕುಂಭ ರಾಶಿಯವರು ಪ್ರಾಬಲ್ಯತೆ ಮೆರೆದಾಗ, ಯಾವಾಗಲು ತಮ್ಮ ಸಂಗಾತಿಯ ಪ್ರೀತಿ ಪಡೆಯಲು ಹತಾಶೆಯ ಪ್ರಯತ್ನ ಮಾಡುವ ಮಕರ ರಾಶಿಯವರು ಇದಕ್ಕೆ ಸ್ವಲ್ಪ ಕಾಲ ಬಲಿಯಾಗುವರು. ಆದರೆ ಮಕರ ರಾಶಿಯವರ ನೈಜ್ಯ ಗುಣಗಳಾದ ಸ್ವಾವಲಂಬನೆ ಮತ್ತು ಆತ್ಮಗೌರವ ನೀಡುವಿಕೆ, ಅವರನ್ನು ತಿರುಗಿ ಬೀಳುವಂತೆ ಮಾಡುತ್ತದೆ.


ಕನ್ಯಾ  + ಮಿಥುನ

ಸುಲಭವಾಗಿ ಹೇಳಬೇಕೆಂದರೆ : ಕನ್ಯಾ ರಾಶಿಯವರು ಬಹಳ ಪ್ರಾಯೋಗಿಕ ಮತ್ತು ವ್ಯಾವಹಾರಿಕ ಮನಸ್ಥಿತಿಯವರು , ಆದರೆ ಮಿಥುನ ರಾಶಿಯವರು ಮಹತ್ವಕಾಂಕ್ಷಿಗಳು ಮತ್ತು ಕನಸು ಕಾಣುವವರು. ಈ ಸಮಬಂಧವು ಏಕೆ ಗಟ್ಟಿಯಾಗಿ ನಿಲ್ಲುವುದಿಲ್ಲ ಎಂದರೆ ಈ ಸಂಬಂಧವು ಸರಿ ಹೊಂದದ ಆಕಾಂಕ್ಷೆಗಳು, ಸನ್ನೆಗಳು ಮತ್ತು ಯೋಗಜನೆಗಳಿಂದಲೇ ತುಂಬಿರುತ್ತದೆ. ಕನ್ಯಾ ರಾಶಿಯವರು ವಾಸ್ತವಕ್ಕೆ ಹತ್ತಿರವಾಗಿ ಬದುಕುವವರು, ಅವರ ಗಮನವು ತಮ್ಮ ಗುರಿಯನ್ನು ಕಾರ್ಯರೂಪದಲ್ಲಿ ಹೇಗೆ ತಲುಪುವುದು ಎಂದು ಯೋಚಿಸುತ್ತಾರೆ. ಮಿಥುನ ರಾಶಿಯವರು ದೊಡ್ಡ ದೊಡ್ಡ ಕನಸುಗಳನ್ನ ಕಾಣುತ್ತಾರೆಯೇ ಹೊರತು ಅದನ್ನು ಹೇಗೆ ತಲುಪಬೇಕು ಎಂಬುದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲವೂ ಅವುಗಳ ಪಾಡಿಗೆ ಅವುಗಳೇ ಸರಿ ಹೋಗಿ, ಕನಸು ನನಸಾಗುತ್ತದೆ ಎಂದುಕೊಳ್ಳುವರು. ಹೀಗಾಗಿಯೇ, ಸಂಬಂಧದಲ್ಲಿ ಬಹಳಷ್ಟು ಕೆಲಸ, ಜವಾಬ್ದಾರಿಗಳನ್ನು ಕನ್ಯಾ ರಾಶಿಯವರೇ ವಹಿಸಿಕೊಳ್ಳುವರು. ಇದು ಅವರಿಲ್ಲಿ ಮಿಥುನ ರಾಶಿಯವರ ಬಗ್ಗೆ ಅಸಮಾಧಾನ ಹುಟ್ಟು ಹಾಕುತ್ತದೆ.


ತುಲಾ + ವೃಷಭ

ತುಲಾ ರಾಶಿಯವರು ಮತ್ತು ವೃಷಭ ರಾಶಿಯವರು ಹೆಚ್ಚು ಕಡಿಮೆ ಒಂದೇ ಗುಣಗಳನ್ನು ಹೊಂದಿರುತ್ತಾರೆ, ಈ ಕಾರಣದಿಂದಲೇ ಅವರ ಸಂಬಂಧ ಕಷ್ಟಕರವಾಗುವುದು. ಅವರಿಬ್ಬರೂ ತಮ್ಮ ಸಂಗಾತಿಯಲ್ಲಿ ತಮ್ಮನ್ನ ಹೆಚ್ಚ್ಚಾಗಿ ಕಾಣುತ್ತಾರೆ. ಎರಡೂ ರಾಶಿಯವರು ದೃಢಸಂಕಲ್ಪ ಹೊಂದಿರುತ್ತಾರೆ ಮತ್ತು ಎಲ್ಲಾ ರೀತಿಯ ಸೌಂದರ್ಯ, ಶೃಂಗಾರವನ್ನ ತುಂಬು ಮನಸ್ಸಿನಿಂದ ಸವಿಯುತ್ತಾರೆ. ಆದರೆ ವೃಷಭ ರಾಶಿಯವರಲ್ಲಿ ಅಡಕವಾಗಿರುವ ಅತಿಯಾದ ಪ್ರಾಮಾಣಿಕತೆ ಪಾಲಿಸುವ ಮತ್ತು ಅಪೇಕ್ಷಿಸುವ ಗುಣವು, ಎಲ್ಲರೊಂದಿಗೆ ಒಂದೇ ರೀತಿಯಲ್ಲಿ ಬೆರೆಯಲು ಇಷ್ಟಪಡುವ ತುಲಾ ರಾಶಿಯವರಿಗೆ ಕಟ್ಟಿ ಹಾಕಿದಂತೆ ಅನಿಸುವುದು. ಒಂದು ವೇಳೆ ಇವೆರೆಡೂ ರಾಶಿಯವರು ತುಂಬಾ ಕಾಳಜಿ ವಹಿಸುವ ಯಾವುದಾದರು ಒಂದು ವಿಷಯದಲ್ಲಿ ಭಿನ್ನಮತ ಉಂಟಾದರೆ, ಇವರಿಬ್ಬರೂ ಹೊಂದಿಕೊಳ್ಳದ ಗುಣ ಉಳ್ಳವರಾಗಿರುವುದರಿಂದ, ಅದು ದೊಡ್ಡ ಗಲಾಟೆ ಆಗುತ್ತದೆ. ಇವರಿಬ್ಬರಿಗೂ, ಪ್ರತಿಯೊಂದು ಚಿಕ್ಕ ವಿಷಯವು ಇವರು ಅಂದುಕೊಂಡಂತೆ ಇರಬೇಕು. ಹೀಗಾಗಿಯೇ, ಮನಸ್ತಾಪಗಳು ಸಹಜವಾಗುತ್ತವೆ.


ವೃಶ್ಚಿಕ + ಮೀನಾ

ವೃಶ್ಚಿಕ ಮತ್ತು ಮೀನಾ, ಈ ಎರಡೂ ರಾಶಿಯವರು ತುಂಬಾ ಭಾವನಾತ್ಮಕ ಜೀವಿಗಳು. ಇವರಿಬ್ಬರೂ ತುಂಬಾ ಭಾವನಾತ್ಮಕ ಜೀವಿಗಳಾಗಿದ್ದರೂ, ಅವುಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿ ಬಹಳಷ್ಟು ಭಿನ್ನತೆ ಹೊಂದಿರುತ್ತಾರೆ. ವೃಶ್ಚಿಕ ರಾಶಿಯವರು ಬಹಳ ತೀವ್ರವಾಗಿ ತಮ್ಮ ಭಾವನೆಗಳನ್ನು ಹೊರಹಾಕಿದರೆ, ಮೀನಾ ರಾಶಿಯವರು ಬಹಳ ಮೃದುವಾಗಿ ಹೊರಹಾಕುವರು. ಇಬ್ಬರೂ ಕೂಡ ಮುಕ್ತ ಜೀವಿಗಳು ಮತ್ತು ಹೊಸತನ್ನು ಬಯಸುವರು. ಆದರೆ, ವೃಶ್ಚಿಕ ರಾಶಿಯವರು ತಮ್ಮ ಕಾರ್ಯಗಳಲ್ಲಿ ಸ್ವಲ್ಪ ಬೇಜವಾಬ್ದಾರಿ ತೋರಿಸಿದರೂ, ಮೀನಾ ರಾಶಿಯವರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ. ಈ ವಿರುದ್ಧವಾದ ಗುಣಗಳು ಸಾಕು ಅವರಿಬ್ಬರ ನಡುವೆ ಬಿರುಕು ಮೂಡಿಸಲು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon