Link copied!
Sign in / Sign up
5
Shares

ನಿಮಗೂ ಸೆಕ್ಸ್ ಮಾಡಿದ ಮೇಲೆ ತಲೆ ನೋವು ಬರುತ್ತದೆಯೇ ? ಹಾಗಾದರೆ ಯಾಕೆಂದು ತಿಳಿಯಿರಿ..

ತಲೆ ನೋವು  ಅಥವಾ ಮೈಗ್ರೇನ್  ತುಂಬಾ ಕಾರಣಗಳಿಗೆ ಬರುತ್ತದೆ  ಆದರೆ ಕೆಲವರಿಗೆ ಸೆಕ್ಸ್ ಆದ ನಂತರ ಬರುತ್ತದೆ ಮತ್ತು ಸೆಕ್ಸ್ ಮಾಡುವಾಗ ಬರುತ್ತದೆ , ಇದು ಸಾಮಾನ್ಯ ಸಮಸ್ಯೆ ಆದರೂ  ಹಲವಾರು ದಂಪತಿಗಳನ್ನು ಈ ಸಮಸ್ಯೆ ಕಾಡುತ್ತದೆ. ನೀವು ಸೆಕ್ಸ್ ಅನ್ನು ಸಂಪೂರ್ಣವಾಗಿ ಅನುಭವಿಸಲಾಗದಂತೆ ತಲೆನೋವು ಕಾಡುತ್ತದೆ, ಇದರಿಂದ ನಿಮಗೆ ಹಾಗು ನಿಮ್ಮ ಸಂಗಾತಿಗೆ ಇಬ್ಬರಿಗೂ ಮೂಡ್ ಆಫ್ ಆಗಬಹುದು. ಇನ್ನು ಕೆಲವರಿಗೆ ತಲೆ ನೋವು ಹೆಚ್ಚಾಗಿ ವಾಂತಿ ಕೂಡ ಉಂಟಾಗಬಹುದು.

ಯಾಕೆ ಹೀಗಾಗುತ್ತದೆ ?

ಕೆಲವು ಅನಾಲಿಸಿಸ್ ತಲೆ ನೋವಿಗೂ ಬೆಡ್ ರೂಮ್ ಗು ನಂಟಿದೆ ಯಾಕೆಂದರೆ ಹಲವಾರು ಮಹಿಳೆಯರ ಪ್ರಕಾರ ಸೆಕ್ಸ್ ಮಾಡುವ ಸಮಯದಲ್ಲಿ ಅವರು ಹೆಚ್ಚು ತಲೆ ನೋವನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ. ಆದರೆ ಕೆಲವು ಮಹಿಳೆಯರ ಪ್ರಕಾರ ಸೆಕ್ಸ್ ಮಾಡಿದ್ದರಿಂದ ತಲೆ ನೋವು ಹೋಯಿತೆಂದು ಹೇಳುತ್ತಾರೆ, ಇದಕ್ಕೆ ಕಾರಣ ಇಂತೆ ಎಂದು ಹೇಳಲು ಸಾಧ್ಯವಿಲ್ಲ. ಒತ್ತಡದಿಂದಲೂ ಸೆಕ್ಸ್ ಸಮಯದಲ್ಲಿ ತಲೆನೋವುಂಟಾಗಬಹುದು.

ತಲೆ ನೋವನ್ನು ಹೋಗಲಾಡಿಸಿ

ಕೆಲವರಿಗೆ ಈ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ ಆದರೆ ಇನ್ನು ಕೆಲವರಿಗೆ ಸೆಕ್ಸ್ ಮಾಡಿದಾಗಲೆಲ್ಲ ಅಥವಾ ಮಡಿದ ಸ್ವಲ್ಪ ಸಮಯದ ನಂತರ ತಲೆನೋವು ಕಾಣಿಸಿಕೊಳ್ಳುತ್ತದೆ. ತಲೆ ನೋವು ತುಂಬ ಜಾಸ್ತಿ ಆಗಿ ಕಾಡುತ್ತಿದ್ದರೆ ನೀವು ವೈದ್ಯರನ್ನು ಭೇಟಿ ಮಾಡಿದಾಗ ಸಮಸ್ಯೆ ಹೇಳಿ. ನಿಮಗೆ ತುಂಬಾ  ತಲೆ ನೋವಿನ ಸಮಸ್ಯೆ ಇದ್ದರೆ ಅದಕ್ಕೆ ಕಾರಣ ಡಿಪ್ರೆಶನ್ ಅಥವಾ ಮಾನಸಿಕ ಒತ್ತಡ, ಖಿನ್ನತೆಯೂ ಕೂಡ ಕಾರಣವಾಗ ಬಹುದು.   ನಿಮಗೆ ಸಮಸ್ಯೆ ಮಾನಸಿಕವಾಗಿಯೂ ಕಾಡಬಹುದು. ಹೀಗಿದ್ದಲ್ಲಿ ನೀವು ಚಿಕಿಸ್ತೆ ಪಡೆಯುವ ಅಗತ್ಯತೆ ಇರುತ್ತದೆ. ಕೆಲವರು  ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಾರೆ ಅದರಿಂದ ತಲೆ ನೋವು ಕಡಿಮೆಯಾಗಬಹುದೆಂದು ಅವರು ಭಾವಿಸುತ್ತಾರೆ, ಆದರೆ ಕೆಲವರಿಗೂ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡಮೇಲೆಯೂ ತಲೆನೋವು ಇನ್ನು ಹೆಚ್ಚಾಗಿರುವ ಉದಾಹರಣೆಗಳಿವೆ.

ಪರಿಹಾರವೇನು ?

ತಲೆ ನೋವಿಗೆ ಜೀವನ ಶೈಲಿಯೂ ಕೂಡ ಕಾರಣವಾಗಬಹುದು, ಸಮಯಕ್ಕೆ ಸರಿಯಾಗಿ ಊಟ-ನಿದ್ದೆ ಮಾಡದೇ ಇದ್ದಲ್ಲಿ, ಅಥವಾ ಮನಸ್ಸಿಗೆ ಏನೇನೋ ಬೇಡ ವಿಷಯಗಳನ್ನು ಚಿಂತಿಸುತ್ತಿದ್ದರೂ ಕೂಡ ತಲೆ ನೋವು ಬರಬಹುದು. ಆದ್ದರಿಂದ ಸರಿಯಾದ ಸಮಯಕ್ಕೆ ಊಟ, ಅಗತ್ಯಕ್ಕೆ ಟ್ಟಕ್ಕಂತೆ ನಿದ್ದೆ, ದಿನವೂ ವ್ಯಾಯಾಮ ಮಾಡುವುದನ್ನು ರೂಡಿಸಿಕೊಳ್ಳಿ. ಯಾರದೋ ಒತ್ತಡಕ್ಕೆ ಸೆಕ್ಸ್ ನಲ್ಲಿ  ತೊಡಗಿದರು ಹೀಗೆ ಆಗಬಹುದು, ಆದ್ದರಿಂದ ಸೆಕ್ಸ್ ಸಮಯದಲ್ಲಿ ಯಾವುದೇ ಬೇರೆ ಚಿಂತೆಗಳನ್ನ ಬಿಟ್ಟು ಸೆಸ್ನಲ್ಲಿ ತೊಡಗಿಕೊಳ್ಳಿ.

ಸಾಮಾನ್ಯವಾಗಿ ತಲೆನೋವನ್ನು ಹೆಚ್ಚಿಸುವ ವಸ್ತುಗಳು ಇವು.

ರೆಡ್ ವೈನ್ , ಚೊಕೊಲೇಟ್ಸ್, ಅತಿಯಾದ ಸುಗಂಧ ಬರಿತ ಸೆಂಟ್ ಅಥವಾ ವಾಸನೆ, ಪ್ರಕಾಶಮಾನವಾದ ಬೆಳಕು ,ವಾತಾವರಣದಲ್ಲಿ ಅತೀ ಬದಲಾವಣೆ ಇವು ತಲೆನೋವುಂಟು ಮಾಡುವ ಕೆಲವು ವಸ್ತು ಹಾಗು ಸನ್ನಿವೇಶಗಳು.





 
Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon