Link copied!
Sign in / Sign up
5
Shares

ದಂಪತಿಗಳು ಎದುರಿಸುವ 5 ಸಾಮಾನ್ಯ ಸೆಕ್ಸ್ ತೊಂದರೆಗಳು ಮತ್ತು ಅವುಗಳಿಗೆ ಪರಿಹಾರಗಳು

ಬಹುಷಃ ನಿಮಗೆ ಲೈಂಗಿಕ ಕ್ರಿಯೆ ಅನ್ನುವುದೇ ಬೋರಿಂಗ್ ಆಗಿರಬಹುದು, ಅಥವಾ ನಿಮಗೆ ಈಗಷ್ಟೇ ಮಗುವಾಗಿದ್ದು ನಿಮಗೆ ಸದ್ಯಕ್ಕೆ ಮಗುವನ್ನು ನೋಡಿಕೊಳ್ಳುವುದಕ್ಕೆ ಸಮಯ ಇಲ್ಲದಂತೆ ಆಗಿರಬಹುದು, ಅಥವಾ ಮನೆಗೆಲಸ, ಕಚೇರಿ ಕೆಲಸವೆಲ್ಲಾ ಮುಗಿಸಿ ನಿಮಗೆ ಸುಸ್ತಾಗಿ ನಿದ್ದೆ ಮಾಡಿದರೆ ಸಾಕು ಎನಿಸುವಂತೆ ಆಗಿರಬಹುದು. ಹೀಗೆಂದ ಮಾತ್ರಕ್ಕೆ ನಿಮ್ಮ ಜೀವನವಿಡೀ ಸತ್ವವಿಲ್ಲದ, ರಸವಿಲ್ಲದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡೇ ಇರಬೇಕು ಎಂದರ್ಥವಲ್ಲ.

“ಮೇಬಿ ಇಟ್ಸ್ ಯು” ಎಂಬ ಪುಸ್ತಕದ ಲೇಖಕರು ಮತ್ತು ತಜ್ಞರು ಆದ ಲಾರೆನ್ ಅವರ ಬಳಿ ನಾವು ಚರ್ಚಿಸಿದಾಗ ಅವರು ತಿಳಿಸಿದ್ದು - “ಪ್ರತಿಯೊಂದು ದಂಪತಿಯು ಲೈಂಗಿಕ ಕ್ರಿಯೆಯಲ್ಲಿ ಯಾವುದೊ ಒಂದು ಕಾರಣಕ್ಕೆ ನಿರಾಸಕ್ತಿ ಮೂಡಿಸಿಕೊಳ್ಳುವ ಹಂತವನ್ನು ಕಳೆದೇ ಇರುತ್ತಾರೆ. ಇದು ಸಾಮಾನ್ಯವಾದದ್ದು. ಆದರೆ ಒಂದೊಳ್ಳೆ ವಿಷಯ ಎಂದರೆ ನೀವು ಮುಕ್ತವಾಗಿ, ಪ್ರಾಮಾಣಿಕವಾಗಿ ಇದ್ದರೆ ಮತ್ತು ನಿಮ್ಮ ಲೈಂಗಿಕ ಜೀವನವನ್ನು ಪುನಃ ಸರಿಯಾದ ಹಾದಿಗೆ ತರಬೇಕೆಂಬ ಆಸೆ ನಿಮಗಿದ್ದರೆ, ಇದಕ್ಕೆ ಪರಿಹಾರ ಕಂಡುಕೊಳ್ಳುವುದು ತುಂಬಾನೇ ಸುಲಭ”.

ಇಲ್ಲಿವೆ ನೋಡಿ ದಂಪತಿಗಳು ಸಾಮಾನ್ಯವಾಗಿ ಎದುರಿಸುವ 6 ಲೈಂಗಿಕ ತೊಂದರೆಗಳು ಮತ್ತು ಅವಗಳಿಗೆ ಪರಿಹಾರಗಳು :

೧. “ತುಂಬಾ ಸುಸ್ತಾಗಿದೆ”

ಕೆಲವೊಂದು ಸಂದರ್ಭಗಳಲ್ಲಿ ನಿಮಗೆ ನಿಜವಾಗಿಯೂ ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿವಾಗಿರುತ್ತದೆ. ಆದರೆ ಬಹುತೇಕ ಜನರಿಗೆ, ಈ “ಸುಸ್ತು” ಎನ್ನುವುದು ಕೇವಲ ತಮ್ಮ ಸೋಮಾರಿತನವನ್ನು ಮುಚ್ಚಿಕೊಳ್ಳಲು ಒಂದು ನೆಪ ಎನ್ನುತ್ತಾರೆ ತಜ್ಞರು.

ಇಂತಹ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಲಾರೆನ್ ಹೇಳುವ ಪ್ರಕಾರ ಗಂಡ-ಹೆಂಡತಿ ಕೂತುಕೊಂಡು ವಾರದಲ್ಲಿ ಅವರಿಬ್ಬರು ಎಷ್ಟು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂದು ಚರ್ಚಿಸಬೇಕು. ಒಂದು ಸಲ ನೀವು ಇಬ್ಬರು ಸೇರಿ ಇಂತಿಷ್ಟು ಬಾರಿ ತೊಡಗಿಕೊಳ್ಳಬೇಕು ಎಂದು ನಿರ್ಧರಿಸಿದ ಮೇಲೆ, ಇಬ್ಬರು ಕೂಡ ಕಾರಣಗಳನ್ನು ಹುಡುಕದೆ ಅದಕ್ಕೆ ಒಗ್ಗಿಕೊಳ್ಳಲು ಪ್ರಯತ್ನಿಸುವರು ಎನ್ನುತ್ತಾರೆ ಲಾರೆನ್.


೨. “ನಾವು ಸೆಕ್ಸ್ ಅಲ್ಲಿ ರೆಗ್ಯುಲರ್ ಆಗಿ ತೊಡಗಿಕೊಳ್ಳುತ್ತೇವೆ, ಆದರೂ ನನಗೆ ಮಾನಸಿಕವಾಗಿ ಹೊಂದಿಕೊಳ್ಳಲು ಆಗುತ್ತಿಲ್ಲ”

ಸೆಕ್ಸ್ ಅನ್ನು ಆರೋಗ್ಯಕರ ಸಂಬಂಧದ ಒಂದು ಆಧಾರ ಸ್ತಂಭ ಆಗಿದ್ದರೂ, ಕೇವಲ ಸೆಕ್ಸ್ ಮಾಡಬೇಕೆಂದು ಸೆಕ್ಸ್ ಮಾಡಿದರೆ, ಅಂತಹ ಖಾಸಗಿ ಮತ್ತು ವಯಕ್ತಿಕ ವಿಷಯದಿಂದ ಹುಟ್ಟಬೇಕಿದ್ದ ಮಾನಸಿಕ ಅನ್ಯೋನ್ಯತೆಯು ಹೆಚ್ಚಾಗುವ ಬದಲು ಕಡಿಮೆ ಆಗುತ್ತದೆ. ಆದರೆ ಅದೃಷ್ಟವಶಾತ್ ಇದಕ್ಕೊಂದು ಸುಲಭ ಪರಿಹಾರ ಇದೆ. ಸೆಕ್ಸ್ ಅಲ್ಲಿ ತೊಡಗಿಸಿಕೊಂಡಿದ್ದಾಗ ಒಬ್ಬರ ಕಣ್ಣಲ್ಲಿ ಇನ್ನೊಬ್ಬರ ಕಣ್ಣಿಟ್ಟು ನೋಡಿರಿ.

ಇದು ಕೇಳಲಿಕ್ಕೆ ಎಷ್ಟು ಸರಳ ಅನಿಸಬಹುದು, ಆದರೆ ಬಹುತೇಕ ದಂಪತಿಗಳು ಇದನ್ನು ಮಾಡುವುದೇ ಇಲ್ಲ. ಬಹಳಷ್ಟು ಬಾರಿ ನಾವು ಸೆಕ್ಸ್ ಅಲ್ಲಿ ತೊಡಗಿಕೊಂಡಿದ್ದಾಗ, ಆ ಕ್ಷಣದಲ್ಲಿ ಮಗ್ನರಾಗುವುದನ್ನು ಬಿಟ್ಟು ಬೇರೆ ಏನೋ ಯೋಚನೆ ಮಾಡುತ್ತಿರುತ್ತೇವೆ. ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ನಮ್ಮನ್ನು ಈ ಕ್ಷಣದಲ್ಲಿ ಮಗ್ನರಾಗುವಂತೆ ಮಾಡುತ್ತದೆ. ಅಲ್ಲದೆ ನೀವು ಸೆಕ್ಸ್ ವೇಳೆ ನಿಮ್ಮ ಸಂಗಾತಿಯ ಮೊದಲ ಹೆಸರನ್ನು (ಮನೆಯಲ್ಲಿ ಕರೆಯುವ ಹೆಸರಲ್ಲ)ಕರೆಯಬಹುದು. ಏಕೆಂದರೆ ನಮ್ಮ ಮೊದಲ ಹೆಸರು ನಮ್ಮ ಮೆದುಳಿನಲ್ಲಿ ಅಚ್ಚಾಗಿದ್ದು, ಇದು ಆತ್ಮೀಯತೆಯೊಂದಿಗೆ ಗುರುತಿಸಿಕೊಂಡಿದೆ. ಈ ಭಾವನೆಯನ್ನು ಮಂಚದ ಮೇಲೆ ನೀವು ಹೊರತರವುದು ನಿಮ್ಮಿಬ್ಬರ ನಡುವಿನ ಅನ್ಯೋನ್ಯತೆ ಹೆಚ್ಚುವಂತೆ ಮಾಡುತ್ತದೆ.


೩. “ಮೌಖಿಕ (ಓರಲ್) ಸೆಕ್ಸ್ ಎಂದರೆ ನನ್ನ ಸಂಗಾತಿಗೆ ಇಷ್ಟವಾಗುವುದಿಲ್ಲ”

ಒಂದು ವೇಳೆ ನೀವು ಮೌಖಿಕ ಲೈಂಗಿಕ ಸುಖವನ್ನು ನೀಡಲು ಮತ್ತು ಪಡೆಯಲು ಇಷ್ಟಪಡುವವರು ಆಗಿದ್ದು, ನಿಮ್ಮ ಸಂಗಾತಿಗೆ ಅದು ಇಷ್ಟವಿಲ್ಲ ಎಂದರೆ, ನಿಮ್ಮ ದಾರಿ ಸ್ವಲ್ಪ ಕಷ್ಟದ್ದೆ ಸರಿ.

“ನಿಮ್ಮ ಸಂಗಾತಿಗೆ ಮೌಖಿಕ ಸೆಕ್ಸ್ ಹೆಚ್ಚು ಹಿತಕರ ಮಾಡಲು ಮತ್ತು ನಿಮ್ಮ ಸುಖವನ್ನು ಹೆಚ್ಚಿಸುವಂತಹ ವಸ್ತುಗಳ ಬಳಕೆ ಮಾಡುವುದರ ಮೂಲಕ ನೀವು ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು” ಎನ್ನುತ್ತಾರೆ ತಜ್ಞರಾದ ವಾಲ್ಫಿಶ್. “ಉದಾಹರಣೆಗೆ ನಿಮ್ಮ ಸಂಗಾತಿಗೆ ಅವರ ದೇಹದ ಆ ಭಾಗಗಳು ದುರ್ವಾಸನೆ ಹೊರಹಾಕುತ್ತವೆ ಎಂಬ ಭಯವಿದ್ದು, ಅದು ಅವರನ್ನು ಮೌಖಿಕ ಲೈಂಗಿಕತೆಯಿಂದ ದೂರ ಇರಿಸುತ್ತಿದ್ದರೆ, ನೀವು ಸಂಭೋಗದಲ್ಲಿ ತೊಡಗುವ ಮುನ್ನ ಒಟ್ಟಿಗೆ ಸ್ನಾನ ಮಾಡಬಹುದು” ಎನ್ನುತ್ತಾರೆ ವಾಲ್ಫಿಶ್.


೪. “ನಮ್ಮಿಬ್ಬರ ಲೈಂಗಿಕ ಆಸಕ್ತಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ”

ಸಂಬಂಧದಲ್ಲಿ ಒಬ್ಬರು ಯಾವಾಗಲು ಲೈಂಗಿಕ ಕ್ರಿಯೆಗೆ ಕಾತುರದಿಂದ ಕಾಯುತ್ತಿದ್ದು, ಇನ್ನೊಬ್ಬರು ಅದರ ಬಗ್ಗೆ ಅಷ್ಟಾಗಿ ಗಮನವೂ ಕೊಡುವುದಿಲ್ಲ ಎಂದರೆ, ಅದೊಂದು ಬಿಡಿಸಲಾಗದ ಗಂಟು ಆಗಿಬಿಡುತ್ತದೆ. ಆದರೆ ಇದನ್ನು ಕೂಡ ನೀವು ಪರಿಹರಿಸಿಕೊಳ್ಳಬಹುದು. ಇದಕ್ಕೆ ಮೊದಲು ಮಾಡಬೇಕಿರುವುದು ನೀವು ಅನ್ಯೋನ್ಯತೆಯನ್ನು ಆಸೆಗಿಂತ, ಆಸಕ್ತಿಯಿಂದ ಬೆಳೆಸಿಕೊಳ್ಳಬೇಕು.

ಒಂದು ವೇಳೆ ನಿಮಗೆ ಸುಸ್ತಾಗಿದ್ದು, ನಿಮ್ಮ ಸಂಗಾತಿಯು ಲೈಂಗಿಕ ಕ್ರಿಯೆಯನ್ನು ಬಯಸುತ್ತಿದ್ದರೆ, ಇಲ್ಲವೆಂದು ಹೇಳಿ ಅವರನ್ನು ಒಂದೇ ಸಮನೆ ಜರಿಯಬೇಡಿ. ನಿಮಗೆ ಸೆಕ್ಸ್ ಅಲ್ಲಿ ತೊಡಗಲು ಇಷ್ಟವಿಲ್ಲದಿದ್ದಾಗಲೂ, ನಿಮ್ಮ ಸಂಗಾತಿಯ ಹಿಂಬಾಲಿಸಿಕೊಂಡು ಅವರ ಹಿಂದೆಯೇ ರೂಮಿಗೆ ಹೋಗಿ, ಈ ಕ್ರಿಯೆಯನ್ನು ಶುರು ಮಾಡುವ ಮುಂದಾಳತ್ವ ಅವರಿಗೇ ನೀಡಿ, ಅವರು ಏನು ಮಾಡುತ್ತಾರೆಂದು ನೋಡಿ, ನಿಮ್ಮ ಕ್ರಿಯೆಯು ಎಲ್ಲಿಗೆ ಹೋಗುತ್ತದೆಂದು ನೋಡಿರಿ. ಆಗ ನಿಮಗೆ ಮುಂಚೆ ಇಷ್ಟವಿಲ್ಲ ಎನಿಸಿದ ಸೆಕ್ಸ್ ಇವಾಗ ಇಷ್ಟ ಆಗುತ್ತದೆ. ಅದು ನಿಮಗೆ ಹಿತ ನೀಡುತ್ತದೆ ಮತ್ತು ಹೋದಂತೆ ಇನ್ನೂ ಹೆಚ್ಚು ಉತ್ಸಾಹ ನಿಮಗೆ ಗೊತ್ತಿಲ್ಲದೇ ನಿಮ್ಮಲ್ಲಿ ತರುತ್ತದೆ ಎನ್ನುತ್ತಾರೆ ವಾಲ್ಫಿಶ್.


೫. “ನಮಗೆ ಒಂದು ಮಗುವಾಯಿತು, ಅಮೇಲಿನಿಂದ ನಮ್ಮ ಲೈಂಗಿಕ ಜೀವನವು ನಿಂತು ಹೋಯಿತು”

ನಮ್ಮ ಜೀವನದಲ್ಲಿ ನಮ್ಮ ಅಷ್ಟೂ ಗಮನ ಮತ್ತು ಪರಿಶ್ರಮವನ್ನು ಬೇಡುವ ಒಂದು ಹೊಸ, ಪುಟ್ಟ ಜೀವ ಒಂದು ಬಂದಮೇಲೆ ನಿಮ್ಮ ಮುಂಚಿನ ಅಭ್ಯಾಸಗಳೆಲ್ಲವೂ ಮೂಲೆಗುಂಪಾಗುವುದು ಸಹಜವೇ. ಹೆಂಗಸರ ವಿಷಯದಲ್ಲಂತೂ ಇದು ತುಂಬಾನೇ ಹೆಚ್ಚು. ಸ್ವಾಭಾವಿಕ ಹೆರಿಗೆ ಅಥವಾ ಸಿಸೇರಿಯನ್ ಇಂದ ಆದ ದೈಹಿಕ ಗಾಯಗಳು ಮತ್ತು ಪ್ರಸವನಂತರದ ಖಿನ್ನತೆ, ಇವೆಲ್ಲವೂ ಹೆಣ್ಣಿನ ಕಿಚ್ಚನ್ನು ಆರಿಸಿ ಬಿಡಬಹುದು.

ನಿಮ್ಮ ಹೊಸಜೀವನದಲ್ಲಿ ಪುನಃ ನಿಮ್ಮ ಕಿಚ್ಚನ್ನು ಹಚ್ಚಬೇಕು ಎಂದರೆ ನಿಮ್ಮ ಮಗುವನ್ನು ನೋಡಿಕೊಳ್ಳಲು ಒಂದು ಸೂಕ್ತ ವ್ಯಕ್ತಿಯನ್ನು ಹುಡುಕಿ. ಅದು ಕೇವಲ ಎರಡು ಗಂಟೆಗಳಿಗೆ ಆಗಿರಬಹುದು. ನಿಮ್ಮ ತಂದೆ-ತಾಯಿ ಅಥವಾ ಸಂಬಂಧಿಕರು ಅಥವಾ ಇನ್ನ್ಯರಾದರು ಆಪ್ತರು ಆಗಿರಲಿ. ನವಪೋಷಕರಾದ ನಿಮಗೆ ನಿಮ್ಮದೇ ಆದ ಏಕಾಂತದ ಸಮಯ ಬಹಳ ಮುಖ್ಯವಾಗುತ್ತದೆ. ನೀವಿಬ್ಬರೇ ಒಂದೊಳ್ಳೆ ರೋಮ್ಯಾಂಟಿಕ್ ಡಿನ್ನರ್ ಮಾಡಿ ಅಥವಾ ಒಳ್ಳೆ ರೆಸಾರ್ಟ್ ಅಲ್ಲಿ ತಂಗಿ ಬನ್ನಿ.   

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon