Link copied!
Sign in / Sign up
11
Shares

ಸಾಸಿವೆ ಎಣ್ಣೆ: ಇದು ನಿಮ್ಮ ಆರೋಗ್ಯಕ್ಕೆ ನಿಜವಾಗಿಯೂ ಉತ್ತಮವಾದದ್ದೇ? (Mustard Oil: Is It Really Good For Your Health in Kannada)

ಸಾಸಿವೆ ಎಣ್ಣೆಯ ಉಪಯೋಗಗಳು ಸಾಸಿವೆ ಬೀಜದಿಂದ ಪ್ರಾರಂಭಗೊಂಡು, ಎಣ್ಣೆಯ ರೂಪದಲ್ಲಿ ಮುಕ್ತಾಯಗೊಳ್ಳುತ್ತದೆ. ಸಾಸಿವೆ ಕಾಳಿನ ಮೂಲ ಗ್ರೀಸ್, ರೋಮ್ ಮತ್ತು ಭಾರತದ ಪ್ರಾಚೀನ ಸಂಸ್ಕೃತಿಯಷ್ಟು ಹಳೆಯದ್ದು. ಸುಮಾರು ೧೭೦೦ ದಶಕದ ಕಾಲಕ್ಕೆ ಸಾಸಿವೆ ಕಾಳಿನಿಂದ ಅದರ ಎಣ್ಣೆಯನ್ನು ಹಿಂಡಿ ತೆಗೆಯುವ ತಂತ್ರ ಬೆಳಕಿಗೆ ಬಂದಿದೆ. ಅದರ ನಂತರ, ಈ ಎಣ್ಣೆಯನ್ನು ವಿವಿಧ ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತಿದೆ. ಸಾಸಿವೆ ಎಣ್ಣೆಯ ಔಷಧೀಯ ಲಾಭಗಳ ಕಾರಣದಿಂದ ಅದು ಆಯುರ್ವೇದದಲ್ಲಿ ಜನಪ್ರಿಯಗೊಂಡಿದೆ. ಅದರ ಕ್ಲೆನ್ಸಿಂಗ್, ಪುನುರುಜ್ಜೀವನಗೊಳಿಸುವ ಗುಣ, ಪ್ರಚೋದಿಸುವ ಗುಣದಿಂದಾಗಿ ಅದರ ಜನಪ್ರಿಯತೆ ಇನ್ನೂ ಹೆಚ್ಚಿದೆ. ಈ ಲೇಖನದಲ್ಲಿ ಸಾಸಿವೆ ಎಣ್ಣೆಯ ಬಗ್ಗೆ ಎಲ್ಲಾ ತಿಳಿದುಕೊಂಡು, ಅದು ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತದೆ ಎನ್ನುವುದನ್ನು ಪರಿಶೀಲಿಸೋಣ. 

ಪರಿವಿಡಿ:

೧. ಸಾಸಿವೆ ಎಣ್ಣೆ ಎಂದರೇನು? (What Is Mustard Oil? in Kannada)

೨. ಸಾಸಿವೆ ಎಣ್ಣೆಯನ್ನು ಹೇಗೆ ಬೇರ್ಪಡಿಸಲಾಗುತ್ತದೆ? (How Is Mustard Oil Extracted? in Kannada)

೩. ಸಾಸಿವೆ ಎಣ್ಣೆಯ ಪೌಷ್ಟಿಕ ಮೌಲ್ಯ (Nutritional Value Of Mustard Oil in Kannada)

೪. ಕೂದಲಿಗೆ ಸಾಸಿವೆ ಎಣ್ಣೆ (Mustard Oil For Hair in Kannada)

೫. ಚರ್ಮಕ್ಕೆ ಸಾಸಿವೆ ಎಣ್ಣೆ (Mustard Oil For Skin in Kannada)

೬. ಬಾಯಿಯ ಆರೋಗ್ಯಕ್ಕೆ ಸಾಸಿವೆ ಎಣ್ಣೆ (Mustard Oil For Oral Care in Kannada)

೭. ಅಡುಗೆಗೆ ಸಾಸಿವೆ ಎಣ್ಣೆ (Mustard Oil For Cooking in Kannada)

೮. ಮಗುವಿಗೆ ಸಾಸಿವೆ ಎಣ್ಣೆ (Mustard Oil For Babies in Kannada)

೯. ಔಷಧೀಯ ಬಳಕೆಗೆ ಸಾಸಿವೆ ಎಣ್ಣೆ (Mustard Oil For Medicinal Use in Kannada)

೧೦. ಸಾಸಿವೆ ಎಣ್ಣೆಯ ಸಂಭವನೀಯ ಅಡ್ಡಪರಿಣಾಮಗಳು (Potential Mustard Oil Side Effects in Kannada)

೧. ಸಾಸಿವೆ ಎಣ್ಣೆ ಎಂದರೇನು? (What Is Mustard Oil? in Kannada)

ಭಾರತದಲ್ಲಿ ಸಾಮಾನ್ಯವಾಗಿ ಸಾಸಿವೆ ಎಣ್ಣೆಯನ್ನು ಸರ್ಸೋ ಕಾ ತೇಲ್ ಅಥವಾ ಕಚ್ಚಿ ಘನೀ ಕಾ ತೇಲ್ ಎಂದು ಕರೆಯಲಾಗುತ್ತದೆ. 

‣ ಸಾಸಿವೆ ಎಣ್ಣೆಯನ್ನು ಅಡುಗೆಗೆ ಬಳಸಲು ಪ್ರಮುಖ ಕಾರಣ ಅದರ ವಾಸನೆ. ಇದರಿಂದಾಗಿ ಅದು ಮನುಷ್ಯನ ಹಸಿವನ್ನು ಪ್ರಚೋದಿಸುತ್ತದೆ. ಸಾಸಿವೆಯ ಗಿಡ ಬ್ರಸ್ಸಿಕಾ ಎನ್ನುವ ಸಸ್ಯ ಗುಂಪಿಗೆ ಸೇರಿದ್ದು. 

‣ ಸಾಸಿವೆಯ ಸುಗ್ಗಿ ಕಾಲ ಸೆಪ್ಟೆಂಬರ್ ನಲ್ಲಿ ಇರುತ್ತದೆ. ಆದರೆ, ಅದರ ಉಳುಮೆ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಪ್ರಾರಂಭವಾಗುತ್ತದೆ. ಸಾಸಿವೆ ಕಾಲುಗಳು ಪ್ರಾಯಶಃ ೮೫ ರಿಂದ ೯೦ ದಿನಗಳಷ್ಟು ಸಮಯವನ್ನು  ತೆಗೆದುಕೊಳ್ಳುತ್ತದೆ. 

‣ ಸಾಸಿವೆ ಕಾಳಿನ ಹಳದಿ ಬಣ್ಣದ ಹೂವುಗಳು ಸಾಸಿವೆ ಕಾಳಿನ ಬೆಳವಣಿಗೆಯನ್ನು ಸೂಚಿಸುತ್ತವೆ. ಸಾಸಿವೆ ಕಾಳುಗಳು ಗಿಡದ ಬಗೆಯ ಅನುಸಾರ ಕಪ್ಪು, ಕಂದು ಅಥವಾ ತೆಳುವಾದ ಬಿಳಿ ಬಣ್ಣವನ್ನು ಹೊಂದಿರುತ್ತವೆ. 

‣ ಸಾಸಿವೆ ಕಾಳುಗಳ ಬೆಳವಣಿಗೆಯನ್ನು ಭಾರತ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ ಮತ್ತು ಕೆನಡಾ ಗಳಲ್ಲಿ ಕಂಡುಬರುತ್ತದೆ. 

೨. ಸಾಸಿವೆ ಎಣ್ಣೆಯನ್ನು ಹೇಗೆ ಬೇರ್ಪಡಿಸಲಾಗುತ್ತದೆ? (How Is Mustard Oil Extracted? in Kannada)

ಸಾಸಿವೆ ಕಾಳುಗಳು ಪ್ರಬುದ್ಧವಾಗುವ ಮುನ್ನವೇ ಸಾಸಿವೆ ಗಿಡಗಳಿಂದ ಉತ್ಪತ್ತಿಯಾಗುತ್ತವೆ. ಅದಕ್ಕೆ ಕಾರಣ ಅವು ಸ್ವತಃ ತಾವೇ ಹೊರಗೆ ಬರುತ್ತದೆ. 

‣ ಸಾಸಿವೆ ಎಣ್ಣೆಯನ್ನು ಎರಡು ಬಗೆಗಳಲ್ಲಿ ಬೇರ್ಪಡಿಸಬಹುದು: ಸಾಸಿವೆ ಬೀಜಗಳನ್ನು ಹಿಂಡಿ ಎಣ್ಣೆಯನ್ನು ಬೇರ್ಪಡಿಸುವುದು ಅಥವಾ ಸಾಸಿವೆ ಬೀಜವನ್ನು ಅರೆದು ಎಣ್ಣೆಯನ್ನು ಬೇರ್ಪಡಿಸುವುದು.ಈ ಎಣ್ಣೆ ಬೇರ್ಪಡಿಸುವ ಬಗೆಗಳ ಮೇಲೆ ಎನ್ನಯ ಪ್ರಯೋಜನಗಳು ಮತ್ತು ಅದರ ಉಪಯೋಗಗಳು ಅವಲಂಬಿತವಾಗಿರುತ್ತದೆ. 

‣ ಗ್ರೇಡ್ ೧ ಸಾಸೇವೆ ಎಣ್ಣೆ ಅಥವಾ ಕಚ್ಚಿ ಘನಿ ಕಾ ತೇಲ್ ಸಾಸಿವೆ ಬೀಜಗಳನ್ನು ಅರೆಯುವ ಮೂಲಕ ಪಡೆಯಬಹುದು. ಇದರಿಂದಾಗಿ ಈ ಎಣ್ಣೆಯ ನೈಸರ್ಗಿಕ ಗುಣಗಳಿಗೆ ಯಾವುದೇ ತೊಂದರೆ ಉಂಟಾಗದೇ, ಅವು ತಿನ್ನಲು ಸಹ ಸೂಕ್ತವಾಗಿರುತ್ತದೆ. 

‣ ಗ್ರೇಡ್ ೨ ಸಾಸಿವೆ ಎಣ್ಣೆ:ಈ ಎಣ್ಣೆಯನ್ನು ಸಾಸಿವೆ ಬೀಜಗಳನ್ನು ಹಿಂಡಿ ತೆಗೆಯಲಾಗುತ್ತದೆ. ಈ ರೀತಿ ಬೇರ್ಪಡಿಸಲಾದ ಎಣ್ಣೆ ತಿನ್ನಲು ಸೂಕ್ತವಲ್ಲದ್ದು. ಆದರೆ ಈ ಎಣ್ಣೆಯನ್ನು ಕೂದಲಿಗೆ ಅಥವಾ ಚರ್ಮಕ್ಕೆ ಬಳಸಿ, ಅದರ ಲಾಭಗಳನ್ನು ಅನುಭವಿಸಬಹುದು. 

[Back To Top]

೩. ಸಾಸಿವೆ ಎಣ್ಣೆಯ ಪೌಷ್ಟಿಕ ಮೌಲ್ಯ (Nutritional Value Of Mustard Oil in Kannada)

ಸಾಸಿವೆ ಎಣ್ಣೆಯ ಲಾಭಗಳನ್ನು ಅನುಭವಿಸುವ ಮುನ್ನ, ಅದರ ಒಳ ಸತ್ವವನ್ನು ತಿಳಿದುಕೊಳ್ಳೋಣ. 

‣ ಪೌಷ್ಟಿಕ ಸತ್ಯಾಂಶ: ಒಟ್ಟಾರೆ ಕೊಬ್ಬು = ೧೪ ಗ್ರಾಂ (ಅನ್ಸ್ಯಾಚುರೇಟೆಡ್ ಕೊಬ್ಬು ೧೨ ಗ್ರಾಂ + ಸ್ಯಾಚುರೇಟೆಡ್ ಕೊಬ್ಬು ೨ ಗ್ರಾಂ)

‣ ಶೇಕಡಾ ೫೦% ಮೋನೊಸ್ಯಾಚುರೇಟೆಡ್ ಕೊಬ್ಬು ಏರುಚಿಕ್ ಆಮ್ಲದಿಂದ ಬರುತ್ತದೆ. 

‣ ಏರುಚಿಕ್ ಆಮ್ಲದ ಮಿಷಕಾರಿ ಮತ್ತು ಅನಾರೋಗ್ಯಕರ ಗುಣದಿಂದಾಗಿ, ಸಾಸಿವೆ ಎಣ್ಣೆಯನ್ನು ಅಮೇರಿಕಾ/ಕೆನಡಾ ಮತ್ತು ಕೆಲವು ಯುರೋಪಿಯನ್ ದೇಶಗಳಲ್ಲಿ ಅಡುಗೆಗೆ ಬಳಸುವುದನ್ನು ಬಹಿಷ್ಕರಿಸಲಾಗಿದೆ. ಈ ದೇಶಗಳಲ್ಲಿ ಸಾಸಿವೆ ಎನ್ನಯನ್ನು ಕೇವಲ ಬಾಹ್ಯವಾಗಿ ಬಳಸಬಹುದು. 

‣ ಅಲ್ಲ್ಯ್ಲ್ ಐಸೊಥಿಯೊಸೈನೇಟ್ -  ಇದು ಎಣ್ಣೆಗೆ ವಾಸನೆ ಮತ್ತು ಬಲವಾದ ಸ್ವಾದ ನೀಡುತ್ತವೆ. 

‣ ಸಾಸಿವೆ ಎಣ್ಣೆಯಲ್ಲಿರುವ ಒಲಿಕ್ ಆಮ್ಲ/ಒಮೇಗಾ-೬ ಲಿನೋಲಿಕ್ ಆಮ್ಲ ಮತ್ತು ಒಮೇಗಾ ೩ ಅಲ್ಫಾ-ಲಿನೊಲೆನಿವ್ ಆಮ್ಲ ನಿಮ್ಮ ಕೂದಲಿಗೆ ಮತ್ತು ಚರ್ಮಕ್ಕೆ ಲಾಭದಾಯಕ. 

೪. ಕೂದಲಿಗೆ ಸಾಸಿವೆ ಎಣ್ಣೆ (Mustard Oil For Hair in Kannada):

ಸಾಸಿವೆ ಎಣ್ಣೆಯಲ್ಲಿರುವ ಲಿನೋಲಿಕ್ ಆಮ್ಲ, ಒಲಿಕ್ ಆಮ್ಲ, ಒಮೇಗಾ ೩ ಅಲ್ಫಾ-ಲಿನೋಲಿಕ್ ಆಮ್ಲ ದಂತಹ ಅಗತ್ಯವಿರುವ ಫ್ಯಾಟಿ ಆಸಿಡ್ಸ್ ನಿಮ್ಮ ಕೂದಲಿನ ಬಳವಣಿಗೆ ಮತ್ತು ಅದರ ಸ್ವಸ್ಥತೆಗೆ ಸಹಾಯ ಮಾಡುತ್ತದೆ. 

‣ ಅವಧಿಗೆ ಮೊದಲೇ ನಿಮ್ಮ ಕೂದಲಿನ ಬಣ್ಣ ಬೆಳ್ಳಗಾಗುವುದನ್ನು ತಡೆದು, ನಿಮ್ಮ ಕೂದಲು ಮತ್ತು ನಿಮ್ಮ ನೆತ್ತಿಯನ್ನು ಪುನರುಜ್ಜೆವನಗೊಳಿಸುತ್ತದೆ. ಇದರಿಂದಾಗಿ ನಿಮ್ಮ ಕೂದಲಿನ ನೈಸರ್ಗಿಕ ಕಪ್ಪು ಬಣ್ಣ ಹಾಗೆಯೆ ಉಳಿದುಕೊಳ್ಳುತ್ತದೆ. 

‣ ಇದು ನಿಮ್ಮ ಕೂದಲನ್ನು ಕಂಡೀಷನಿಂಗ್ ಮಾಡಿ, ನಿಮ್ಮ ಕೂದಲಿನ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. 

‣ ನಿಮ್ಮ ಕೂದಲಿಗೆ ಸಾಸಿವೆ ಎಣ್ಣೆಯಿಂದ ಆಗುವ ಲಾಭಗಳನ್ನು ಆಳವಾದ ಮತ್ತು ದೀರ್ಘಕಾಲದ ಮಸಾಜ್ ಮೂಲಕ ಅನುಭವಿಸಬಹುದು. ಇದು ನಿಮ್ಮ ಕೂದಲಿಗೆ ಮತ್ತು ನಿಮ್ಮ ನೆತ್ತಿಗೆ ರಕ್ತ ಸಂಚಲನವನ್ನು ಸುಧಾರಿಸಿ, ನಿಮ್ಮ ಕೂದಲಿನ ಕಿರುಚೀಲಗಳನ್ನು ಬಲಿಷ್ಠಗೊಳಿಸುತ್ತವೆ. ಇದರಿಂದ ಕೂದಲುದುರುವಿಕೆಯನ್ನು ನಿಯಂತ್ರಿಸಬಹುದು. 

‣  ಸಾಸಿವೆ ಎಣ್ಣೆಯ ಶಿಲೀಂಧ್ರಗಳ ವಿರೋಧಿ ಗುಣ ಮತ್ತು ಆಂಟಿ-ಬ್ಯಾಕ್ಟೀರಿಯಲ್ ಗುಣಗಳಿಂದಾಗಿ ನಿಮ್ಮ ತಲೆಹೊಟ್ಟನ್ನು ನಿವಾರಿಸಿ, ನಿಮ್ಮ ನೆವೆ ಉಂಟಾಗುವ ನೆತ್ತಿಗೆ ನಿವಾರಣೆ ನೀಡಬಹುದು. 

[Back To Top]

೫. ಚರ್ಮಕ್ಕೆ ಸಾಸಿವೆ ಎಣ್ಣೆ (Mustard Oil For Skin in Kannada):

ಸಾಸಿವೆ ಎಣ್ಣೆಯ ಔಷಧೀಯ ಗುಣಗಳಿಗೆ ಪ್ರಮುಖ ಕಾರಣ ಅದರ ಆಂಟಿ-ಬ್ಯಾಕ್ಟೀರಿಯಲ್, ಆಂಟಿ-ಫಂಗಲ್ ಮತ್ತು ಪರಾವಲಂಬಿ ವಿರೋಧಿ ಗುಣಗಳು. ಇದು ನಿಮ್ಮ ಚರ್ಮಕ್ಕೆ ಉಂಟಾಗಬಹುದಾದ್ ಎಲ್ಲಾ ಬಗೆಯ ಸೋಂಕುಗಳನ್ನು ಕಡಿಮೆಗೊಳಿಸುತ್ತದೆ. ಇದು ಸೋರಿಯಾಸಿಸ್ ತರಹದ ಚರ್ಮ ಸಮಸ್ಯೆಗಳನ್ನೂ ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಅನೇಕರು ಸಾಸಿವೆ ಎಣ್ಣೆಯನ್ನು ಸೌಂದರ್ಯವರ್ಧಕ ಅಜೇಂಟ್ ಆಗಿ ಸಹ ಬಳಸುತ್ತಾರೆ. ಅದಾಕೆ ಕಾರಣ ಈ ಎಣ್ಣೆಯಲ್ಲಿರುವ ವಿಟಮಿನ್ ಎ, ವಿಟಮಿನ್ ಬಿ-ಕಾಂಪ್ಲೆಕ್ಸ್ ಮತ್ತು ವಿಟಮಿನ್ ಇ. ಇವುಗಳು ನಿಮ್ಮ ಚರ್ಮವನ್ನು ಚೈತನ್ಯಭರಿತವಾಗಿಸುತ್ತವೆ. 

ಸಾಸಿವೆ ಎಣ್ಣೆಯನ್ನು ನಿಮ್ಮ ಚರ್ಮಕ್ಕೆ ಹೇಗೆ ಬಳಸಬೇಕು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ. 

‣ ಟಾನ್ ತೆಗೆಯಲು: ಸಾಸಿವೆ ಎಣ್ಣೆಯಲ್ಲಿರುವ ವಿಟಮಿನ್ ಇ ನೈಸರ್ಗಿಕ ಸನ್-ಸ್ಕ್ರೀನ್ ಆಗಿ ಪಾತ್ರ ನಿರ್ವಹಿಸುತ್ತದೆ. ಸಾಸಿವೆ ಎಣ್ಣೆಯನ್ನು ಕಡಲೆ ಹಿಟ್ಟು, ಮೊಸರು, ನಿಂಬೆ ರಸದಲ್ಲಿ ಸೇರಿಸಿ, ಅದನ್ನು ಪ್ಯಾಕ್ ಮಾಡಿ ನಿಮ್ಮ ಹಾನಿಗೊಳಗಾಗಿರುವ ಚರ್ಮಕ್ಕೆ ಹಚ್ಚಿ. ೨೦ ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. 

‣ ಚರ್ಮ ಶುಭ್ರಕ: ಬೆಚ್ಚಗಿನ ಸಾಸಿವೆ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಕಳಿಸಿ, ಸ್ನಾನಕ್ಕಿಂತ ಮೊದಲು ಮಸಾಜ್ ಮಾಡಿಕೊಳ್ಳಿ. ಇದು ನಿಮ್ಮ ದೇಹದ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ, ನಿಮ್ಮ ಚರ್ಮ ಹೊಳೆಯುವಂತೆ ಮಾಡುತ್ತದೆ ಮತ್ತು ನಿಮ್ಮ ಚರ್ಮದಲ್ಲಿ ಎಲ್ಲಾ ಕಲ್ಮಶಗಳನ್ನು ತೆಗೆದುಹಾಕುತ್ತದೆ. 

‣ ಚರ್ಮವನ್ನು ಬಿಗಿಯಾಗಿಸುತ್ತದೆ: ಸಾಸಿವೆ ಎಣ್ಣೆ ಮತ್ತು ಎಳ್ಳಿನ ಎಣ್ಣೆಯನ್ನು ಕಳಿಸಿ, ನಿಮ್ಮ ಚರ್ಮ ಅದನ್ನು ಹೀರಿಕೊಳ್ಳುವವರೆಗೂ ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಿ. ನಂತರ ಒಂದು ಬೆಚ್ಚಗಿನ ಒದ್ದೆ ಬಟ್ಟೆಯನ್ನು  ನಿಮ್ಮ ಚರ್ಮದ ಮೇಲೆ ಇಟ್ಟುಕೊಂಡು, ವಿಶ್ರಾಂತಿಸಿ.

‣ ತುಟಿಗಳಿಗೆ ಬಾಮ್: ಸಾಸಿವೆ ಎಣ್ಣೆ ಮತ್ತು ಪೆಟ್ರೋಲಿಯಂ ಜೆಲ್ಲಿಯನ್ನು ಬೆರೆಸಿ, ಬಾಮ್ ತಯಾರಿಸಿ. ಇದನ್ನು ನಿಮ್ಮ ತುಟಿಗೆ ಹಚ್ಚಿ. ಇದರಿಂದ ನಿಮ್ಮ ತುಟಿ ಅರ್ಧ್ರೀಕೃತಗೊಂಡು, ಹೊಳೆಯುತ್ತದೆ. 

‣ ಚರ್ಮದ ಸೋಂಕು: ಸಾಸಿವೆ ಎಣ್ಣೆ ಚರ್ಮದ ಸೋಂಕುಗಳಾದ ಮೊಡವೆಗಳು, ಫಂಗಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ೨-೪ ಸ್ಯಾಫ್ರನ್ ಎಳೆಗಳು, ಕಡಲೆ ಹಿಟ್ಟು ಗಂಧದ ಪುಡಿ, ಅರಿಶಿನ ಪುಡಿ, ಸಾಸಿವೆ ಬೀಜಗಳು ಮತ್ತು ಸಾಸಿವೆ ಎಣ್ಣೆಯನ್ನು ಬಳಸಬೇಕಾಗುತ್ತದೆ. ಇದನ್ನು ನಿಮ್ಮ ಚರ್ಮದ ಸ್ಕ್ರಬ್ಬರ್ ಆಗಿ ಬಳಸಬಹುದು. 

೬. ಬಾಯಿಯ ಆರೋಗ್ಯಕ್ಕೆ ಸಾಸಿವೆ ಎಣ್ಣೆ (Mustard Oil For Oral Care in Kannada):

ಸಾಸಿವೆ ಎಣ್ಣೆ ನಿಮ್ಮ ಮೌಖಿಕ ಸ್ವಸ್ಥತೆಗೂ ಸಹಾಯ ಮಾಡುತ್ತದೆ. ಇದು ಅಗ್ಗದ, ಸುಲಭವಾಗಿ ಬಳಸಬಹುದಾದ ಆಯ್ಕೆ.

‣ ವಸಡಿನ ಚಿಕಿತ್ಸೆ: ವಸಡಿನ ತೊಂದರೆಯಿಂದಾಗಿ ಬಾಯಿಯ ಕೆಟ್ಟ ವಾಸನೆ, ವಸಡಿನ ಉರಿಯೂತ ಮತ್ತು ವಸಡಿನಿಂದ ರಕ್ತಸ್ರಾವ ದಂತಹ ಸಮಸ್ಯೆಗಳು ಕಾಡಬಹುದು. ಇದನ್ನು ನಿಯಮಿತವಾಗಿ ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ನಿವಾರಿಸಬಹುದು. ನಿಮ್ಮ ವಸಡನ್ನು ಸಾಸಿವೆ ಎಣ್ಣೆ ಮತ್ತು ಒಂದು ಚಿಟಿಕೆ ಉಪ್ಪಿನಿಂದ ಹಲ್ಲುಜ್ಜಿದ ನಂತರ ಮಸಾಜ್ ಮಾಡಿಕೊಳ್ಳಿ. 

‣ ಬೆಳ್ಳಗಿನ ಮತ್ತು ಹೊಳೆಯುವ ಹಲ್ಲುಗಳಿಗಾಗಿ - ಹಲ್ಲುಜ್ಜಿದ ನಂತರ, ಸಾಸಿವೆ ಎಣ್ಣೆಯನ್ನು ನಿಂಬೆ ರಸ ಮತ್ತು ಉಪ್ಪಿನೊಂದಿಗೆ ಬೆರೆಸಿ ಹಲ್ಲುಗಳಿಗೆ ಹಚ್ಹುವುದರಿಂದ ನಿಮ್ಮ ಹಲ್ಲುಗಳು ಬೆಳ್ಳಗಾಗಿ, ಹೋಳೆಯುತ್ತವೆ. 

‣ ಮೌತ್ವಾಶ್ - ಕೆಲವು ಹನಿ ಸಾಸಿವೆ ಎಣ್ಣೆಯನ್ನು ಬಚ್ಚಗಿನ ನೀರಿನಲ್ಲಿ ಬೆರೆಸಿ, ನಿಮ್ಮ ಬಾಯಿಯನ್ನು ಹಲ್ಲುಜ್ಜಿದ ನಂತರ ಈ ಮಿಶ್ರಣದಿಂದ ಮುಕ್ಕಳಿಸಿ. ಇದನ್ನು ವಾರದಲ್ಲಿ ೪ ದಿನ, ೫ ನಿಮಿಷದ ವ್ಯಾಯಾಮದ ಬಗೆಯಲ್ಲಿ ಮಾಡಿದರೆ, ನಿಮ್ಮ ಉಸಿರು ಸ್ವಚ್ಛವಾಗುತ್ತದೆ. 

[Back To Top]

೭. ಅಡುಗೆಗೆ ಸಾಸಿವೆ ಎಣ್ಣೆ (Mustard Oil For Cooking in Kannada)

ಸಾಸಿವೆ ಎಣ್ಣೆಯನ್ನು ನಿಮ್ಮ ಅಡುಗೆಯಲ್ಲಿ ಬಳಸಬೇಕೇ ಅಥವಾ ಬೇಡವೇ ಎನ್ನುವುದನ್ನು ನಿಮ್ಮ ಅನುಕೂಲಗಳಿಗೆ ಬಿಟ್ಟಿರುವಂತದ್ದು. ಅದಕ್ಕೆ ಕಾರಣ ಹಲವಾರು ದೇಶಗಳಲ್ಲಿ ಸಾಸಿವೆ ಎಣ್ಣೆಯನ್ನು ಬಹಿಷ್ಕರಿಸಲಾಗಿದೆ. ಅದರಲ್ಲಿರುವ ರುಚಿಕ್ ಆಮ್ಲ ಅನಾರೋಗ್ಯಕರ ಹೃದಯ ಸ್ನಾಯುಗಳಿಗೆ ಕಾರಣವಾಗಿ ಅದರಿಂದ ಹೃದಯ ಸಂಬಂಧಿತ ತೊಂದರೆಗಳು ಉಂಟಾಗಬಹುದು. 

‣ ವಾಸನೆ - ಸಾಸಿವೆ ಎಣ್ಣೆಯ ವಾಸನೆ ಮತ್ತು ಕುಟುಕುವ ಸ್ವಾದ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದೆ ಕಾರಣದಿಂದಾಗಿ ಭಾರತದಲ್ಲಿ ಈ ಎಣ್ಣೆಯನ್ನು ದಿನಬಳಕೆಯ ಅಡುಗೆ ಸಾಮಗ್ರಿಯಾಗಿ ಬಳಸುತ್ತಾರೆ. 

‣ ಕರೆಯುವುದು - ಉತ್ತರ ಭಾರತೀಯ ಪಾಕಪದ್ಧತಿಯಲ್ಲಿ ಸಾಸಿವೆ ಎಣ್ಣೆಯನ್ನು ಪ್ರಧಾನವಾಗಿ ಕರಿಯಲು ಅಥವಾ ವಗ್ಗರಣೆಗೆ ನೀಡಲಾಗುತ್ತದೆ. ಇದು ಆಹಾರದ ಸ್ವಾದವನ್ನು ಹೆಚ್ಚಿಸುತ್ತದೆ. 

೮. ಮಗುವಿಗೆ ಸಾಸಿವೆ ಎಣ್ಣೆ (Mustard Oil For Babies in Kannada):

ಮಗುವಿಗೆ ಸಾಸಿವೆ ಎಣ್ಣೆಯನ್ನು ಕೇವಲ ಬಾಹ್ಯವಾಗಿ ಉಪಯೋಗಿಸುವುದು ಒಳಿತು. ಆದರೆ ಅದನ್ನು ಬಳಸುವ ಮುನ್ನ ನಿಮ್ಮ ಮಗುವಿನ ಮೇಲೆ ಪ್ಯಾಚ್ ಟೆಸ್ಟ್ ಮಾಡಿ, ಅದರಿಂದ ಯಾವುದೇ ಬಗೆಯ ಅಡ್ಡಪರಿಣಾಮಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

‣ ಮಸಾಜ್ ಎಣ್ಣೆ - ಸಾಸಿವೆ ಎಣ್ಣೆ ಮೂಳೆಗಳನ್ನು ಬಲಿಷ್ಠಗೊಳಿಸಿ, ರಕ್ತ ಸಂಚಲನವನ್ನು ಸುಧಾರಿಸುತ್ತದೆ. ಅದು ದೇಹವನ್ನು ಬೆಚ್ಚಗಿರಿಸಿ, ದೇಹದ ಕಲ್ಮಶಗಳನ್ನು ಕಿತ್ತೊಗೆಯುತ್ತದೆ. 

‣ ಚರ್ಮದ ಸೋಂಕು - ಸಾಸಿವೆ ಎಣ್ಣೆಯ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣದಿಂದಾಗಿ ಚರ್ಮದ ಸೋಂಕುಗಳನ್ನು ನಿವಾರಿಸಬಹುದು. 

‣ ಶೀತ ಮತ್ತು ಕೆಮ್ಮಿನ ಚಿಕಿತ್ಸೆ - ಸಾಸಿವೆ ಎಣ್ಣೆಯಲ್ಲಿ ಕೆಲವು ಲವಂಗಗಳನ್ನು ಸೇರಿಸಿ, ಬಿಸಿ ಮಾಡಿ. ಅದನ್ನು ಬೆಚ್ಚಗಾಗಿಸಿ, ಎದೆಗೆ ಮಸಾಜ್ ಮಾಡಿ. ಇದು ಎದೆಯ ಬಿಗಿತವನ್ನು ಕಡಿಮೆಗೊಳಿಸಿ, ಕೆಮ್ಮು ಮತ್ತು ಶೀತವನ್ನು ನಿವಾರಿಸುತ್ತದೆ. 

‣ ಆಸ್ತಮಾ - ಕೆಲವು ಹನಿ ಸಾಸಿವೆ ಎಣ್ಣೆಯನ್ನು ಕರ್ಪೂರದೊಂದಿಗೆ ಸೇರಿಸಿ, ಬಿಸಿ ಮಾಡಿ. ಅದು ಬೆಚ್ಚಗಾದ ನಂತರ, ಅದನ್ನು ಎದೆಗೆ ಮಸಾಜ್ ಮಾಡಿಕೊಳ್ಳುವುದರಿಂದ ಅಸ್ತಮಾ ನಿಯಂತ್ರಿಸಬಹುದು. 

[Back To Top]

೯. ಔಷಧೀಯ ಬಳಕೆಗೆ ಸಾಸಿವೆ ಎಣ್ಣೆ (Mustard Oil For Medicinal Use in Kannada)

ಸಾಸಿವೆ ಎಣ್ಣೆ ಉಪಯೋಗಗಳನ್ನು ಹಲವಾರು ಆಯುರ್ವೇದದ ಚಿಕಿತ್ಸೆಯಲ್ಲಿ ಉಪಯೋಗಿಸಬಹುದು. ಸಾಸಿವೆ ಎಣ್ಣೆಯನ್ನು ತಾಂತ್ರಿಕ ರೀತಿಯಲ್ಲಿ ಏಜೆಂಟ್ಸ್ ಅಥವಾ ಸಾಮಗ್ರಿಗಳನ್ನು ಉಪಯೋಗಿಸಿ ಸಮತೋಲಿಸುತ್ತದೆ. 

‣ ಉಸಿರಾಟದ ಸೋಂಕುಗಳು - ಸಾಸಿವೆ ಎಣ್ಣೆ ಕೆಮ್ಮು, ಶೀತ, ಸೈನಸ್, ಅಸ್ತಮಾ ರೀತಿಯ ತೊಂದರೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಟ್ಯೂಬರ್ಕ್ಯುಲೋಸಿಸ್ ನಂತಹ ಅರೋಗ್ಯ ಸಮಸ್ಯೆಯನ್ನು ಸಹ ನಿವಾರಿಸುವಲ್ಲಿ ಸಾಸಿವೆ ಎಣ್ಣೆ ಸಹಾಯ ಮಾಡುತ್ತದೆ. ಸಾಸಿವೆ ಎಣ್ಣೆಯನ್ನು ಕೊಬ್ಬರಿ ಎಣ್ಣೆಯೊಂದಿಯೇ ಸೇರಿಸಿ, ಬಿಸಿ ಮಾಡಿ ಮತ್ತು ಅದನ್ನು ಎದೆಯ ಮೇಲೆ ಮಸ್ಸಾಜ್ ಮಾಡಿಕೊಳ್ಳಿ. ಇದು ಎದೆಯ ಬಿಗಿತವನ್ನು ಕಡಿಮೆಗೊಳಿಸಿ, ಕೆಮ್ಮು ಮತ್ತು ಶೀತವನ್ನು ನಿವಾರಿಸುತ್ತದೆ. 

‣ ದೇಹವನ್ನು ಪುನರುಜ್ಜೀವನಹೋಲಿಸುತ್ತದೆ - ಸಾಸಿವೆ ಎಣ್ಣೆಯನ್ನು ಬಿಸಿ ನೀರಿನಲ್ಲಿ ಸೇರಿಸಿ, ಸ್ನಾನ ಮಾಡುವುದರಿಂದ ದೇಹವನ್ನು ಪುನರುಜ್ಜೀವನಗೊಳಿಸಬಹುದು. ಸಾಸಿವೆ ಎಣ್ಣೆ ಮತ್ತು ಎಳ್ಳಿನ ಎಣ್ಣೆಯನ್ನು ಹೊಟ್ಟೆಯ ಮೇಲೆ ಸವರುವುದರಿಂದ ದೇಹದ ಅತಿಯಾದ ಕೊಬ್ಬಿನಂಶವನ್ನು ನಿಯಂತ್ರಿಸಿ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. 

೧೦. ಸಾಸಿವೆ ಎಣ್ಣೆಯ ಸಂಭವನೀಯ ಅಡ್ಡಪರಿಣಾಮಗಳು (Potential Mustard Oil Side Effects in Kannada):

ತಪ್ಪಾದ ಬಗೆಯ ಸಾಸಿಎ ಎಣ್ಣೆಯನ್ನು ತಪ್ಪಾದ ಬಳಕೆಗೆ ಉಪಯೋಗಿಸಿದಾಗ ಅಡ್ಡಪರಿಣಾಮಗಳು ಸಂಭವಿಸುತ್ತದೆ. ಹಾಗಾಗಿ, ಸಾಸಿವೆ ಎಣ್ಣೆಯ ಬಗೆಗಳ ಬಳಕೆಯ ಬಗ್ಗೆ ಅರಿತು ಸೂಕ್ತ ರೀತಿಯಲ್ಲಿ ಉಪಯೋಗಿಸುವುದು ಅತ್ಯಗತ್ಯ. ಉತ್ತಮ ಗುಣಮಟ್ಟದ ಸಾಸಿವೆ ಎಣ್ಣೆಯಿಂದ ಅದರ ಲಾಭಗಳನ್ನು ಸುಲಭವಾಗಿ ಅನುಭವಿಸಬಹುದು. 

‣ ಎಸ್ಸೆನ್ಶಿಯಲ್ ಸಾಸಿವೆ ಎಣ್ಣೆ ತಿನ್ನಲು ಸೂಕ್ತವಾಗದ್ದು. ಎಸ್ಸೆನ್ಶಿಯಲ್ ಎಣ್ಣೆ ಕೇಂದ್ರೀಕರಿಸಿದ ರೂಪದಲ್ಲಿದ್ದು, ಅದರಿಂದ ಅಡ್ಡಪರಿಣಾಮಗಳು ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ. 

‣ ಸಾಸಿವೆ ಎಣ್ಣೆಗೆ ಬೇರೆ ಸಾಮಗ್ರಿಗಳನ್ನು ಸೇರಿಸುವುದರಿಂದ ಸಾರಗುಂದಿಸಿ, ಉಪಯೋಗಿಸಬೇಕು. 

‣ ಪ್ಯಾಚ್ ಟೆಸ್ಟ್ ತಪ್ಪದೇ ಮಾಡಿ. ನೆವೆ ಅಥವಾ ಯಾವುದಾದರೂ ಅಡ್ಡಪರಿಣಾಮಗಳು ಕಂಡುಬಂದಲ್ಲಿ, ತಕ್ಷಣವೇ ಅದರ ಬಳಕೆಯನ್ನು ನಿಲ್ಲಿಸಿ. 

‣ ಸಾಸಿವೆ ಎಣ್ಣೆಯಲ್ಲಿರುವ ರುಚಿಕ್ ಆಮ್ಲ ಹೃದಯ ಮತ್ತು ಶ್ವಾಸಕೋಧಗಳಿಗೆ ಹಾನಿಕಾರಕ. ಹಾಗಾಗಿ, ಅಡುಗೆಯಲ್ಲಿ ಅದರ ಬಳಕೆಯನ್ನು ಮಾಡದೇ ಇರುವುದು ಉತ್ತಮ. 

‣ ದೆಹಲಿಯಲ್ಲಿ ೧೯೮೮ ನೇ ಇಸವಿಯಲ್ಲಿ ಸಾಸಿವೆ ಎಣ್ಣೆಯ ಬಳಕೆಯನ್ನು ಬಹಿಷ್ಕರಿಸಲಾಗಿತ್ತು. ಅದಕ್ಕೆ ಕಾರಣ ಕಲುಷಿತಗೊಂಡಿರುವ ಸಾಸಿವೆ ಎಣ್ಣೆಯಿಂದ ಉಂಟಾಗುವ ಡ್ರಾಪ್ಸ್ಯ ಎನ್ನುವ ಅರೋಗ್ಯ ಸಮಸ್ಯೆ. 

‣ ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಸಾಸಿವೆ ಎಣ್ಣೆಯನ್ನು ಸೇವಿಸದೇ ಇರುವುದು ಒಳಿತು.

[Back To Top]

ನಿರ್ಣಯ:

ಸಾಸಿವೆ ಎಣ್ಣೆಯ ಜನಪ್ರಿಯತೆಯಿಂದಾಗಿ ಅದನ್ನು ಭಾರತೀಯಿಯ ಬಂಗಾರದ ಎಣ್ಣೆ ಎಂದು ಕರೆಯಲಾಗುತ್ತದೆ. ಸಾಸಿವೆ ಎಣ್ಣೆಯ ಲಾಭಗಳು ಮತ್ತು ಅಡ್ಡಪರಿಣಾಮಗಳನ್ನು ಸವೀಕ್ಷೀಸಿದ ನಂತರ, ಸಾಸಿವೆ ಎಣ್ಣೆಯ ಬಳಕೆಯನ್ನು ನಿಯಂತ್ರಿಸಬೇಕು ಎನ್ನುವುದು ನಮ್ಮ ಅಭಿಪ್ರಾಯ. ಆದರೆ ಅದರಿಂದ ಸಾಸಿವೆ ಎಣ್ಣೆಯನ್ನು ನಿಯಂತ್ರಿತ ರೀತಿಯಲ್ಲಿ ಬಳಸುವುದರಿಂದ ಅದರಿಂದಾಗುವ ಅರೋಗ್ಯ ಪ್ರಯೋಜನಗಳನ್ನು ಸಹ ಅನುಭವಿಸಿರಿ. ಸದ್ಯಕ್ಕೆ ತಿಳಿದಿರುವಂತೆ ಸಾಸಿವೆ ಎಣ್ಣೆಯ ರುಚಿಗೆ ಮಾರುಹೋಗದೇ, ಅದನ್ನು ಅಡುಗೆಯಲ್ಲಿ ಬಳಸುವುದನ್ನು ಕಡಿತಗೊಳಿಸುವುದು ಸೂಕ್ತ. ಆದರೆ ಸಾಸಿವೆ ಎಣ್ಣೆಯನ್ನು ಬಾಹ್ಯವಾಗಿ ಬಳಸಬಹುದು. ಇದರಿಂದ ನಿಮ್ಮ ಕೂದಲು ಮತ್ತು ಚರ್ಮಕ್ಕೆ ಒಳಿತಾಗುತ್ತದೆ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon