Link copied!
Sign in / Sign up
10
Shares

ಅದ್ಭುತ ಸೆಕ್ಸ್ ಎಂದರೆ ಹೇಗಿರುತ್ತದೆ ಗೊತ್ತಾ?!! : ನೈಜ್ಯ ಅನುಭವಗಳ ಆಧಾರಿತ!

ಲೈಂಗಿಕ ಕ್ರಿಯೆ ಎನ್ನುವುದು ಅದ್ಭುತ ವಿಷಯವೇ ಸರಿ. ಆದರೆ, ಎಲ್ಲಾ ಸಮಯದಲ್ಲೂ ಈ ಅನುಭವ ಅದ್ಭುತವಾಗಿಯೇ ಇರಬೇಕೆಂದಿಲ್ಲ. ನೀವು ಸುಮ್ಮನೆ ಹಿತ ಅನುಭವಿಸುವುದಕ್ಕು ಮತ್ತು ನಿಮ್ಮ ಜೀವನದ ಅತ್ಯಂತ ರಮಣೀಯ ಕ್ಷಣಗಳನ್ನ ಅನುಭವಿಸುವುದಕ್ಕೂ ತುಂಬಾನೇ ವ್ಯತ್ಯಾಸ ಇದೆ. ಆದರೆ, ನೀವು ಒಮ್ಮೆ ಈ ವ್ಯತ್ಯಾಸಗಳನ್ನ ತಿಳಿದರೆ, ನಿಮಗೆ ಪ್ರತಿ ಬಾರಿಯೂ ಅದ್ಭುತ ಅನುಭವ ಪಡೆಯಲಿಕ್ಕೆ ಸುಲಭವಾಗಬಹುದು. ಹಾಗಾಗಿ, ನಿಮಗೆ ಈಗ ನಾವು ಅಂತಹ ವ್ಯತ್ಯಾಸಗಳು ಯಾವು ಎಂದು ಹೇಳುತ್ತೇವೆ ಕೇಳಿಸಿಕೊಳ್ಳಿ !

೧. ನಿಮ್ಮ ಸಂಗಾತಿ

ನಿಮ್ಮ ಸಂಗಾತಿಯು ಈ ಅನುಭವವನ್ನ ತುಂಬಾ ರಸಮಯ ಮಾಡಬಹುದು ಅಥವಾ ತುಂಬಾ ಕಳಪೆ ಮಾಡಬಹುದು. ಅವರು ಉತ್ಸಾಹಿ, ಭಾವೋದ್ರಿಕ್ತ ಹಾಗು ರಸಮಯವಾಗಿದ್ದರೆ, ನೀವು ಅದ್ಭುತ ಸಮಯ ಕಳೆಯುವುದರಲ್ಲಿ ಸಂಶಯ ಇಲ್ಲ. ಆದರೆ ಅವರು ಆಯಾಸದಿಂದ ಕೂಡಿ, ಸೋಮಾರಿಯಾಗಿ, ಜಡತ್ವ ತುಂಬಿಕೊಂಡಿದ್ದರೆ ನಿಮಗೆ ಬೇಕಾದ ಅನುಭವ ಅವರು ನೀಡಲು ಆಗುವುದಿಲ್ಲ. ಹೀಗಾಗಿ ನೀವು ನಿಮ್ಮ ಸಂಗಾತಿಯನ್ನ ಚೆನ್ನಾಗಿ ನೋಡಿಕೊಂಡು, ಅವರ ಮೂಡ್ ಅನ್ನು ಕೂಡ ಖುಷಿಯಾಗಿಟ್ಟರೆ, ಕೆಲಸ ಇನ್ನಷ್ಟು ಮಜವಾಗುತ್ತದೆ.

೨. ನಿಮ್ಮ ಧೋರಣೆ

ಕೇವಲ ನಿಮ್ಮ ಸಂಗಾತಿಯ ವ್ಯಕ್ತಿತ್ವ ಅಥವಾ ಧೋರಣೆ ಮಾತ್ರ ಇಲ್ಲಿ ಮುಖ್ಯವಲ್ಲ. ನೀವು ಕೂಡ ಸಕಾರಾತ್ಮಕ ಧೋರಣೆ ಹೊಂದಿರಬೇಕು. ನೀವು ಆ ಕ್ಷಣದಲ್ಲಿ ತಲ್ಲೀನರಾಗಿರಬೇಕು, ಪ್ರತಿಯೊಂದು ಸ್ಪರ್ಶ, ಪ್ರತಿಯೊಂದು ಗಂಧವನ್ನು ಅನುಭವಿಸಬೇಕು. ನೀವು ಆ ಕೆಲಸವನ್ನ ಮಾಡುವಾಗ, ಯಾರೋ ಇನ್ನೊಬ್ಬರ ಜೊತೆ ಇನ್ನೊಂದು ಜಾಗದಲ್ಲಿ ಮಾಡುತ್ತಿರುವುದನ್ನು ಕಲ್ಪಿಸಿಕೊಳ್ಳಬಾರದು. ಆ ಕ್ಷಣದಲ್ಲಿ ನೀವು ನಿಮ್ಮ ಸಂಗಾತಿಯೊಡನೆ ತಲ್ಲೀನರಾಗಿ, ಆಗ ಸೆಕ್ಸ್ ಇನ್ನಷ್ಟು ಉಲ್ಲಾಸದಾಯಕವಾಗುತ್ತದೆ.

೩. ನಿಮ್ಮ ಮುಂಕೇಳಿ

ಫೊರ್ ಪ್ಲೇ ಎನ್ನುವುದು ಲೈಂಗಿಕ ಅನುಭವದ ಒಂದು ಅತಿಮುಖ್ಯ ಅಂಶ. ನೀವು ತೀವ್ರವಾದ ಲೈಂಗಿಕ ಪರಾಕಾಷ್ಠೆ ಹೊಂದಬೇಕೆಂದರೆ ನೀವು ಸ್ವಲ್ಪ ಹೆಚ್ಚಿನ ಸಮಯದವರೆಗೆ ಈ ಫೋರ್ ಪ್ಲೇ ಅಲ್ಲಿ ತೊಡಗಿಕೊಳ್ಳಬೇಕು. ಇದನ್ನು ನೀವು ದಿನದ ಆರಂಭದಲ್ಲಿ ನಿಮ್ಮ ಸಂಗಾತಿಗೆ ಒಂದು ತುಂಟ ಮೆಸೇಜ್ ಕಲಿಸುವುದರಿಂದಲೂ ಶುರು ಮಾಡಬಹುದು. ನೀವಿಬ್ಬರು ಮನೆಗೆ ಬಂದು ಭೇಟಿ ಆಗುವಷ್ಟರಲ್ಲಿ ಇಬ್ಬರು ಕಾತುರದಲ್ಲಿ ಬೆವೆತು ನೀರಾಗಿರುತ್ತೀರಾ!

೪. ನಿಮ್ಮ ಸೃಜನಶೀಲತೆ

ಒಂದೇ ಥರದ ಸೆಕ್ಸ್ ಬೋರಿಂಗ್ ಆಗುತ್ತದೆ. ಇದಕ್ಕಾಗಿಯೇ ನೀವು ಪ್ರತಿಯೊಂದು ಬಾರಿ ಹೊಸತನ್ನು ಪ್ರಯೋಗಿಸಿ ಸೃಜನಶೀಲತೆ ವ್ಯಕ್ತಪಡಿಸಬೇಕು. ಮನೆಯ ಬೇರೆ ಜಾಗದಲ್ಲಿ, ಬೇರೆ ಭಂಗಿಯಲ್ಲಿ, ಅಥವಾ ದಿನದ ಬೇರೆ ಸಮಯದಲ್ಲಿ ಆ ಕಾರ್ಯದಲ್ಲಿ ತೊಡಗಿಸಿಕೊಳ್ಳ ಬೇಕು. ಕೆಲವೊಂದು ಚಿಕ್ಕ ಚಿಕ್ಕ ಬದಲಾವಣೆಯೇ ದೊಡ್ಡ ಕಿಕ್ ಕೊಡಬಹದು !

೫. ನಿಮ್ಮ ಟೈಮಿಂಗ್

ಟೈಮಿಂಗ್, ಅಂದರೆ ನೀವು ನಿಮ್ಮ ಸಂಗಾತಿಯು ಒಳ್ಳೆಯ ಮೂಡಿನಲ್ಲಿ ಇಲ್ಲದಿದ್ದಾಗ ಅಥವಾ ಬೇರೆ ಯಾವುದೋ ಚಿಂತೆಯಲ್ಲಿ ಮುಳುಗಿರುವಾಗ ಲೈಂಗಿಕ ಕ್ರಿಯೆಗೆ ಚಾಲನೆ ಕೊಡಬಾರದು. ನೀವು ಇದನ್ನ ಸರಿಯಾದ ಸಮಯದಲ್ಲಿ ಮಾಡಬೇಕು. ಅಂದರೆ, ನೀವಿಬ್ಬರೂ ಖುಷಿಯಲ್ಲಿ ಇದ್ದಾಗ ತೊಡಗಿಕೊಂಡರೆ, ನಿಮ್ಮ ಈ ಕ್ರಿಯೆಯ ಸಂಪೂರ್ಣ ರಸಮಯ ಅನುಭವ ನಿಮ್ಮದಾಗಿಸಿಕೊಳ್ಳಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon