Link copied!
Sign in / Sign up
1
Shares

ಪಿರಿಯಡ್ ಮಿಸ್ ಆಯಿತು, ನಾನು ಗರ್ಭಿಣಿಯೇ? ಹಲವು ಮಹಿಳೆಯರ ಪ್ರಶ್ನೆ!

ಋತುಚಕ್ರ ಮಿಸ್ ಆದರೆ, ಅದರಲ್ಲೂ ನೀವು ನಿಯಮಿತವಾದ ಋತುಮತಿ ಅಥವಾ ಪಿರಿಯಡ್ ಅನ್ನು ಅನುಭವಿಸುತ್ತಿದ್ದು, ಋತುಚಕ್ರವನ್ನು ಮಿಸ್ ಮಾಡಿಕೊಂಡರೆ ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಮೂಡುವ ಗಮನಾರ್ಹ ಗೊಂದಲ ಎಂದರೆ ಅಥವಾ ನಿಮ್ಮಲ್ಲಿ ನೀವು ಕೇಳಿಕೊಳ್ಳುವ ಪ್ರಶ್ನೆ ಎಂದರೆ, ನಾನು ಗರ್ಭಿಣಿಯೇ? ನಾನು ನನ್ನ ಪಿರಿಯಡ್ ಅನ್ನು ಮಿಸ್ ಮಾಡಿಕೊಂಡಿರುವೆ!

ಎಲ್ಲ ಮಹಿಳೆಯರ ಸಾಮಾನ್ಯ ಮತ್ತೊಂದು ಪ್ರಶ್ನೆ ಎಂದರೆ ನಾನು ಎಷ್ಟು ಬೇಗ ಗರ್ಭಿಣಿ ಎಂದು ತಿಳಿದುಕೊಳ್ಳಬಹುದು, ಅಥವಾ ನಾನು ಗರ್ಭಿಣಿ ಎಂದು ಎಷ್ಟು ಬೇಗ ಖಚಿತಪಡಿಸಿಕೊಳ್ಳಬಹುದು. ಗರ್ಭ ನಿಂತಿರುವುದನ್ನು ನಾವು ಖಚಿತಪಡಿಸಿಕೊಳ್ಳಲು ಇರುವ ಪ್ರಮುಖ ಪೂರ್ವ ಸೂಚನೆಗಳೆಂದರೆ, ಪಿರಿಯಡ್ ಮಿಸ್ ಆಗುವುದು, ಗರ್ಭಾವಸ್ಥೆಯ ಕೆಲವು ಲಕ್ಷಣಗಳ ಮೂಲಕ ಮತ್ತು ಗರ್ಭಧಾರಣೆಯ ಪರೀಕ್ಷೆ ಮೂಲಕ.

ಗರ್ಭಿಣಿ ಮಹಿಳೆಯರು ಋತುಚಕ್ರವನ್ನು ಅನುಭವಿಸುವುದಿಲ್ಲ. ಆದರೆ, ಪಿರಿಯಡ್ ಮಿಸ್ ಮಾಡಿಕೊಂಡ ಎಲ್ಲಾ ಮಹಿಳೆಯರು ಗರ್ಭಿಣಿಯರಲ್ಲ. ನೀವು ನಿಮ್ಮ ಋತುಚಕ್ರವನ್ನು ಅನುಭವಿಸುತ್ತಿಲ್ಲ ಎಂದರೆ, ಈ ಕೆಳಗಿನ ನಾಲ್ಕು ವಿಷಯಗಳನ್ನು ಮೊದಲು ಖಚಿತಮಾಡಿಕೊಳ್ಳಿ.

೧.ನೀವು ಗರ್ಭಧರಿಸಲು ಪ್ರಯತ್ನ ನಡೆಸುತ್ತಿದ್ದಿರೆ?

೨.ನಿಮ್ಮ ಫಲವತ್ತತೆಯ ದಿನದಲ್ಲಿ ನೀವು ಸಂಭೋಗದಲ್ಲಿ ಭಾಗಿಯಾಗಿದ್ದೀರಾ? (ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿರುವಿರಾ?)

೩.ಗರ್ಭನಿರೋಧಕವನ್ನು ತೆಗೆದುಕೊಂಡಿಲ್ಲ?

೪.ಅಂಡೋತ್ಪತ್ತಿ ಆಗಿದೆಯೇ?

ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ, ನೀವು ಗರ್ಭಧರಿಸಿರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ಗರ್ಭದಾರಣೆ ಪರೀಕ್ಷೆ ಮಾತ್ರ ಇದನ್ನು ದೃಢಿಕರಿಸಲು ಸಾಧ್ಯ.

ಗರ್ಭಾವಸ್ಥೆಯ ಪರೀಕ್ಷೆ?

ನೀವು ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ, ನೀವು ನಿಮ್ಮ ಋತುಚಕ್ರವನ್ನು ಅನುಭವಿಸಿಲ್ಲ ಎಂದರೆ, ನೀವು ಗರ್ಭಿಣಿ ಆಗಿರಬಹುದೆಂದು ಕುತೂಹಲ ಹೊಂದಿರುವುದು ತುಂಬಾ ಸಾಮಾನ್ಯ. ಆದರೂ, ನೀವು ಗರ್ಭಾವಸ್ಥೆಯ ಪರೀಕ್ಷೆ ಮಾಡಿಸುವವರೆಗೂ ಗರ್ಭಿಣಿ ಎಂದು ಹೇಳುವುದು ಸೂಕ್ತವಲ್ಲ. ಪಿರಿಯಡ್ ಮಿಸ್ ಆಗಿ, ಸ್ತನ ಮೃದುವಾಗುತ್ತಿದ್ದು, ಮತ್ತು ಉಬ್ಬುವುದನ್ನು(ದಪ್ಪವಾಗುವುದನ್ನು) ಅನುಭವಿಸಿದರೆ ನೀವು ಗರ್ಭಧರಿಸಿರುವ ಸಾಧ್ಯತೆಗಳು ಶೇಖಡಾ ೯೫ರಷ್ಟು ನಿಜವಾಗಿದ್ದು, ನೀವು ವೈದ್ಯರ ಬಳಿ ಹೋಗಿ ಪರೀಕ್ಷಿಸುವ ಸಮಯವಾಗಿದೆ.

ಋತುಚಕ್ರ ಅನುಭವಿಸದೇ ಗರ್ಭದಾರಣೆ ಪರೀಕ್ಷೆಯಲ್ಲಿ ನಕಾರಾತ್ಮಕ ವರದಿ ಬಂದರೆ ಏನು ಅರ್ಥ?

ನೀವು ಋತುಚಕ್ರವನ್ನು ಅನುಭವಿಸದೇ, ಗರ್ಭಿಣಿ ಅಲ್ಲ ಎಂದು ವರದಿ ಬಂದರೆ ಇವುಗಳನ್ನು ನೆನಪಿನಲ್ಲಿಡಿ,

೧.ತುಂಬಾ ಬೇಗನೆ ಗರ್ಭದಾರಣೆ ಪರೀಕ್ಷೆ ಮಾಡಿಸಿರುವಿರಿ

ನೀವು ತುಂಬಾ ಬೇಗನೆ ಪರೀಕ್ಷೆ ಮಾಡಿಸಿದ್ದರೆ, ನಿಮ್ಮ ವಿರುದ್ಧ ವರದಿ ಬರುವ ಸಾಧ್ಯತೆಗಳಿವೆ. ಒಂದು ನಿರ್ದಿಷ್ಟ ಹಂತವನ್ನು ತಲುಪಿದ ಮೇಲೆ ಮನೆಯ ಗರ್ಭದಾರಣೆ ಪರೀಕ್ಷೆಗಳು ನೀವು ಗರ್ಭಿಣಿ ಎಂಬುವುದನ್ನು ಸಾಭೀತುಪಡಿಸುತ್ತವೆ. ಏಕೆಂದರೆ HCG ಮಟ್ಟ ಇನ್ನು ಅಷ್ಟಾಗಿ ಇಲ್ಲದೆ ಇರುವ ಸಮಯದಲ್ಲಿ ನೀವು ಪರೀಕ್ಷೆ ಮಾಡಿಸಿರುವುದು ಇದಕ್ಕೆ ಕಾರಣ. HCG ಮಟ್ಟವು ಪ್ರತಿ ೪೮ ಗಂಟೆಗೆ ಹೆಚ್ಚಾಗುವುದರಿಂದ, ನೀವು ಗರ್ಭಧರಿಸಲು ಪ್ರಯತ್ನ ಮಾಡಿದ್ದು, ನಕಾರಾತ್ಮಕ ವರದಿ ಬಂದಿದ್ದರೆ, ೩ ದಿನಗಳ ನಂತರ ಪುನಃ ಪರೀಕ್ಷೆ ಮಾಡಿಸುವುದು ಉತ್ತಮ.

೨.ಪೂರ್ವ ಗರ್ಭಪಾತ

ಕೆಲವೊಮ್ಮೆ ಅತಿ ಪೂರ್ವ ಗರ್ಭಪಾತ ಆಗುವ ಸಾಧ್ಯತೆಗಳಿರುತ್ತವೆ, ಇದನ್ನು ಕೆಲವೊಮ್ಮೆ ರಾಸಾಯನಿಕ ಗರ್ಭದಾರಣೆ ಎಂದು ಕರೆಯುವರು. ನೀವು ಗರ್ಭಧರಿಸಿದ್ದು, ನೀವು ಪಿರಿಯಡ್ ಮಿಸ್ ಮಾಡಿಕೊಳ್ಳುವ ಮೊದಲು ಗರ್ಭ ಬೆಳವಣಿಗೆಯನ್ನು ನಿಲ್ಲಿಸಿರಬಹುದು. ಇದು ಸಂಭವಿಸಿದ್ದರೆ, ನೀವು ತೀವ್ರ ಋತುಚಕ್ರ ಅಥವಾ ಕೆಲವು ದಿನಗಳು ನಿಧಾನವಾಗಿ ಋತುಚಕ್ರವನ್ನು ಅನುಭವಿಸುವಿರಿ.

೩.ಒತ್ತಡ, ಕಾಯಿಲೆ, ಆಹಾರದ ಅಸ್ವಸ್ಥತೆ, ಮತ್ತು ತೂಕದಲ್ಲಿ ಬದಲಾವಣೆ

ಒತ್ತಡ, ಕಾಯಿಲೆ, ಅನಿಯಮಿತ ಅಥವಾ ಕ್ರಮವಲ್ಲದ ಆಹಾರ ವಿಧಾನ ಮತ್ತು ತೂಕದಲ್ಲಿ ದಿಡೀರ್ ಬದಲಾವಣೆ ಕೂಡ ನೀವು ಋತುಚಕ್ರವನ್ನು ಮಿಸ್ ಮಾಡಿಕೊಳ್ಳಲು ಕಾರಣ ಇರಬಹುದು.

ನೀವು ಆಗಾಗ್ಗೆ ನಿಮ್ಮ ಋತುಚಕ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ, ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

ಗರ್ಭಧಾರಣೆಯ ಪರೀಕ್ಷೆಯನ್ನು ಮನೆಯಲ್ಲಿ ಮಾಡುವುದು ಹೇಗೆ?

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon