Link copied!
Sign in / Sign up
5
Shares

ಪಿರಿಯಡ್ ಮಿಸ್ ಆಗಲು ಕಾರಣಗಳು !

ಪಿರಿಯಡ್(ಋತುಚಕ್ರ) ತಪ್ಪಿತು ಎಂದರೆ ಮಹಿಳೆಯರು ಸಾಮಾನ್ಯವಾಗಿ ತಿಳಿದುಕೊಳ್ಳುವುದು ಗರ್ಭ ನಿಂತಿದೆ ಎಂದು, ಅದರಲ್ಲೂ ನೀವು ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ, ನೀವು ತುಂಬಾ ಉತ್ಸುಕರಾಗುವುದು ಸಹಜ, ಆದರೆ ನಿಮಗೆ ಮಗುವು ಬೇಡವಾಗಿದ್ದರೆ, ನೀವು ಭಯ ಅಥವಾ ಬೇಸರವನ್ನು ಅನುಭವಿಸಬಹುದು. ಆದರೆ ಪಿರಿಯಡ್ ಮಿಸ್ ಆಯಿತು ಎಂದ ತಕ್ಷಣ ನೀವು ಗರ್ಭಿಣಿ ಆಗಿರುವಿರಿ ಎಂದು ಅರ್ಥವಲ್ಲ. ಮಹಿಳೆಯರು ತಮ್ಮ ಋತುಚಕ್ರವನ್ನು ಅನುಭವಿಸಿಲ್ಲ ಎಂದರೆ, ಅದಕ್ಕೆ ಕಾರಣಗಳು ಹಲವಾರಿವೆ, ನೀವು ತಕ್ಷಣವೇ ಗರ್ಭಿಣಿ ಎಂದು ಹೇಳುವ ಬದಲು ಇದನ್ನು ತಿಳಿಯಿರಿ.

ಪಿರಿಯಡ್ ಮಿಸ್ ಆಗಲು ಕೆಲವು ಸಾಮಾನ್ಯ ಕಾರಣಗಳು
೧.ಗರ್ಭಧರಿಸಿರುವುದು

ಕೆಲವೊಮ್ಮೆ ಪಿರಿಯಡ್ ಮಿಸ್ ಆಯಿತು ಎಂದರೆ ನೀವು ಊಹಿಸಿರುವುದು ನಿಜವಾಗಿರುತ್ತದೆ, ಅದುವೇ ನೀವು ಗರ್ಭಿಣಿಯಾಗಿರುವುದು. ಈ ಸಮಯದಲ್ಲಿ ನೀವು ಪ್ರಾರಂಭಿಕ ಗರ್ಭಧಾರಣೆ ಚಿಹ್ನೆಗಳಾದ ವಾಕರಿಕೆ, ಸೆಳೆತ, ಆಯಾಸ, ಸ್ತನ ಮೃದುವಾಗುವುದು, ಊದಿಕೊಳ್ಳುವುದು, ಕೆಲವು ಆಹಾರಗಳ ಮೇಲೆ ಬಯಕೆ ಬರುವುದು ನಿಮ್ಮ ಸಾಮಾನ್ಯ ಋತುಚಕ್ರಕ್ಕೆ ಮುಂಚೆ ನೀವು ಈ ಸಲ ನಿಮ್ಮ ಋತುಚಕ್ರವನ್ನು ಅನುಭವಿಸುವುದಿಲ್ಲ ಗರ್ಭಿಣಿ ಆಗುತ್ತಿರುವಿರಿ ಎಂದು ಸೂಚನೆ ನೀಡುತ್ತದೆ. ಆದರೆ ಕೆಲವು ದಿನಗಳು ತಡವಾಗಿ ನಿಮ್ಮ ಋತುಚಕ್ರ ಆಗುವುದು ನೀವು ಗರ್ಭಿಣಿ ಎಂದು ಹೇಳಲು ಸಾಧ್ಯವಿಲ್ಲ.

ಈ ಸಮಯದಲ್ಲಿ ನೀವು ಮನೆಯಲ್ಲೇ ಗರ್ಭಧಾರಣೆಯ ಪರೀಕ್ಷೆ ಮಾಡಿಕೊಳ್ಳುವುದು ಸೂಕ್ತ.

೨.ಒತ್ತಡ

ನಿಮಗೆ ಗೊತ್ತಿರುವಂತೆ ಒತ್ತಡವು ಹಲವು ಅಹಿತಕರ ಅಡ್ಡ ಪರಿಣಾಮಗಳನ್ನು ಮಾಡುತ್ತದೆ, ಅದು ತಲೆನೋವು, ತೂಕದಲ್ಲಿ ಏರುಪೇರು, ಮೊಡವೆ ಮತ್ತು ನಿಮ್ಮ ಋತುಚಕ್ರದ ಮೇಲು ಪ್ರಭಾವ ಬೀರುತ್ತದೆ. ನೀವು ಮಾನಸಿಕ ಅಥವಾ ದೈಹಿಕ ಒತ್ತಡದಲ್ಲಿ ಸಿಲುಕಿದರೆ, ನಿಮ್ಮ ದೇಹವು ಒತ್ತಡ ಹಾರ್ಮೋನುಗಳಾದ, ಅಡ್ರಿನಲಿನ್ ಮತ್ತು ಕಾರ್ಟಿಸೋಲ್ ಎಂಬ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ರಕ್ತ ಸಂಚಲನ ಮತ್ತು ಆಮ್ಲಜನಕ ಶ್ವಾಸಕೋಶಕ್ಕೆ ಸಂಚಾರವಾಗುವುದು ಹೆಚ್ಚಾಗುತ್ತದೆ, ಹಾಗೆಯೆ, ಜೀರ್ಣಕ್ರಿಯೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆ ತತ್ಕಾಲಕವಾಗಿ ಕಾರ್ಯವನ್ನು ನಿಲ್ಲಿಸುತ್ತವೆ. ಯಾವಾಗ ನಿಮ್ಮ ಸಂತಾನೋತ್ಪತ್ತಿ ಕ್ರಿಯೆ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಆಗ ನಿಮ್ಮ ಪಿರಿಯಡ್ ಕೂಡ ತಡವಾಗುತ್ತದೆ.

೩.ಅನಾರೋಗ್ಯ

ನಿಮ್ಮ ಅಂಡೋತ್ಪತ್ತಿ ದಿನವನ್ನು ನೀವು ನೆನಪಿಸಿಕೊಳ್ಳಿ, ಆ ಸಮಯದಲ್ಲಿ ನೀವು ಅನಾರೋಗ್ಯದಿಂದ ಬಳಲಿದ್ದರೆ, ಅದು ಸಣ್ಣ ಶೀತ, ನೆಗಡಿ ಅಥವಾ ಗಂಭೀರ ಸಮಸ್ಯೆ ಆಗಿದ್ದರು ಸಹ ನಿಮ್ಮ ದೇಹದಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ನಿಮ್ಮ ದೇಹ ಒತ್ತಡಕ್ಕೆ ಒಳಗಾಗಿದ್ದಾರೆ, ನೀವು ಈ ಸಮಯದಲ್ಲಿ ತಡವಾಗಿ ಅಂಡೋತ್ಪತ್ತಿ ಮಾಡುವಿರಿ ಅಥವಾ ಅಂಡೋತ್ಪತ್ತಿ ಅನ್ನು ಮುಂದಿನ ತಿಂಗಳಿಗೆ ತಳ್ಳುವಿರಿ ಈ ಕಾರಣ ನಿಮ್ಮ ಋತುಚಕ್ರ ಕೂಡ ತಡವಾಗಿ ಅಥವಾ ಮುಂದಿನ ತಿಂಗಳು ಸಂಭವಿಸುವುದು.

೪.ತೂಕ

ನಿಮ್ಮ ತೂಕ ನಿಮ್ಮ ಹೈಪೊಥಾಲಮಸ್ ಮೇಲೆ ಪರಿಣಾಮ  ಬೀರಬಹುದು, ಹೈಪೋಥಲಾಮಸ್ ಇದು ಮೆದುಳಿನಲ್ಲಿರುವ ಒಂದು ಗ್ರಂಥಿ ಇದು ಋತುಚಕ್ರದ ಜೊತೆಗೆ ದೇಹದ ಹಲವು ಕಾರ್ಯಗಳನ್ನು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ನೀವು ಅತಿ ಹೆಚ್ಚು ತೂಕವನ್ನು ಕಳೆದುಕೊಳ್ಳುವುದು, ಕಡಿಮೆ ಕ್ಯಾಲೋರಿಗಳನ್ನು ಸೇವಿಸುವುದು, ನಿಗದಿತ ತೂಕಕ್ಕಿಂತ ಕಡಿಮೆ ತೂಕ ಹೊಂದಿರುವುದು ನಿಮ್ಮ ಮೆದುಳಿನ ಹೈಪೋಥಲಾಮಸ್ ಮೇಲೆ ಒತ್ತಡವನ್ನು ಹೇರುತ್ತದೆ ಇದರಿಂದ ದೇಹವು ಗರ್ಭಾಶಯದಲ್ಲಿ ಅಂಡೋತ್ಪತ್ತಿ ಆಗಲು ಬೇಕಿರುವ ಈಸ್ಟ್ರೋಜೆನ್ ಹಾರ್ಮೋನನ್ನು ಬಿಡುಗಡೆ ಮಾಡುವುದಿಲ್ಲ, ಹಾಗೆಯೆ ನೀವು ಅಧಿಕ ತೂಕವನ್ನು ಪಡೆಯುವುದರಿಂದ ನಿಮ್ಮ ದೇಹ ಹೆಚ್ಚು ಈಸ್ಟ್ರೋಜೆನ್ ಅನ್ನು ಬಿಡುಗಡೆ ಮಾಡುತ್ತದೆ, ಅಧಿಕ ತೂಕ ನೀವು ಸರಿಯಾಗಿ ಅಂಡೋತ್ಪತ್ತಿ ಮಾಡಲು ಸಹಕರಿಸುವುದಿಲ್ಲ. ಇದರಿಂದ ನೀವು ಸರಿಯಾಗಿ ಋತುಚಕ್ರವನ್ನು ಅನುಭವಿಸುವುದಿಲ್ಲ, ಈ ಕಾರಣ ನೀವು ಅನಿಯಮಿತ ಋತುಚಕ್ರವನ್ನು ಅನುಭವಿಸುವಿರಿ, ಮತ್ತು ಆಗಾಗ್ಗೆ ನಿಮ್ಮ ಪಿರಿಯಡ್ ಅನ್ನು ಮಿಸ್ ಮಾಡಿಕೊಳ್ಳುವಿರಿ.

೫.ಅತಿಯಾದ ವ್ಯಾಯಾಮ

ಖಂಡಿತವಾಗಿ, ವ್ಯಾಯಾಮ ನಮಗೆ ಒಳ್ಳೆಯದು, ಆದರೆ ಅದು ನಿಮ್ಮ ದೇಹಕ್ಕೆ ತೀವ್ರ ಕಷ್ಟಕರವಾಗಿ ಅತಿಯಾಗಿ ಮಾಡಿದರೆ ನಿಮ್ಮ ದೇಹ ಖಂಡಿತ ಕೆಲವು ಬದಲಾವಣೆಗೆ ಒಳಗಾಗುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಅವಶ್ಯ ಇರುವ ಈಸ್ಟ್ರೋಜೆನ್ ಕೂಡ ಸರಿಯಾಗಿ ಉತ್ಪತ್ತಿ ಆಗದೆ, ನೀವು ನಿಮ ಋತುಚಕ್ರವನ್ನು ಮಿಸ್ ಮಾಡಿಕೊಳ್ಳುವಿರಿ. ನೀವು ವ್ಯಾಯಾಮ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ, ಆದರೆ ವ್ಯಾಯಾಮ ಮಾಡಿದ ನಂತರ ನಿಮ್ಮ ದೇಹಕ್ಕೆ ಬೇಕಿರುವ ಅಗತ್ಯ ಪೌಷ್ಟಿಕಾಂಶಗಳನ್ನು ನೀವು ತೆಗೆದುಕೊಳ್ಳಲಿಲ್ಲ ಎಂದರೆ ಖಂಡಿತ ಅಲ್ಲಿ ನೀವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

೬.ನಿಮ್ಮ ಸಮಯದಲ್ಲಿ ಬದಲಾವಣೆ

ನೀವು ನಂಬಿ ಅಥವಾ ಬಿಡಿ, ನೀವು ಬೆಳಗ್ಗೆ ಮಾಡುತ್ತಿದ್ದ, ಕೆಲಸವನ್ನು ದಿಡೀರ್ ಆಗಿ ರಾತ್ರಿ ಮಾಡಲು ಪ್ರಾರಂಭಿಸಿದರೆ ಅಥವಾ ಹೆಚ್ಚು ಕಾಲ ತ್ವರಿತವಾಗಿ ಪ್ರಯಾಣ ಮಾಡಿದರೆ ಅದು ಕೂಡ ನಿಮ್ಮ ಹಾರ್ಮೋನುಗಳ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಇದರ ಫಲಿತಾಂಶ ನಿಮ್ಮ ಋತುಚಕ್ರದಲ್ಲಿ ಏರುಪೇರು ಅಂದರೆ ತಡವಾಗಿ ನಿಮ್ಮ ಮುಟ್ಟನ್ನು ಅನುಭವಿಸುವುದು.

೭.ಎದೆಹಾಲುಣಿಸುವುದು

ಎದೆಹಾಲುಣಿಸುವಾಗ ನೀವು ನಿಮ್ಮ ಪಿರಿಯಡ್ ಅನ್ನು ಅನುಭವಿಸುವುದಿಲ್ಲ, ಏಕೆಂದರೆ ಎದೆಹಾಲು ಉತ್ಪತ್ತಿ ಮಾಡುವ ಪ್ರೊಲಾಕ್ಟಿನ್ ಹಾರ್ಮೋನು ಎದೆಹಾಲುಣಿಸುವ ಸಮಯದಲ್ಲಿ ಅಂಡೋತ್ಪತ್ತಿ ಆಗದಂತೆ ತಡೆಯುತ್ತದೆ. ಹಲವು ತಾಯಿಯಂದಿರು ತಮ್ಮ ಪಿರಿಯಡ್ ಅನ್ನು ಎದೆಹಾಲುಣಿಸುವ ಸಮಯದಲ್ಲಿ ಕಾಣುವುದಿಲ್ಲ. ಆದರೆ ಈ ಸಮಯದಲ್ಲಿ ನೀವು ಮತ್ತೆ ಗರ್ಭ ಧರಿಸಬಹುದು. ನೀವು ನಿಮ್ಮ ಮುಟ್ಟನ್ನು ಅನುಭವಿಸುತ್ತಿಲ್ಲ ಎಂದರು ಕೂಡ ಮಗುವು ಇಷ್ಟು ಬೇಗ ಬೇಡ ಎಂದರೆ ಸುರಕ್ಷಿತ ಕ್ರಮ ಉಪಯೋಗಿಸಿ ಸಂಭೋಗದಲ್ಲಿ ತೊಡಗಿಕೊಳ್ಳುವುದು ಉತ್ತಮ.

೮.ಔಷಧಿ

ಪ್ರಮುಖವಾಗಿ ನೀವು ಜನನ ನಿಯಂತ್ರಣಕ್ಕೆಂದು ಮಾತ್ರೆಯನ್ನು ಅಥವಾ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದು ನಿಮ್ಮ ಋತುಚಕ್ರದ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ ಇವುಗಳು ನಿಮ್ಮ ದೇಹದಲ್ಲಿ ಅಂಡೋತ್ಪತ್ತಿ ಆಗುವುದನ್ನು ತಡೆಯುತ್ತವೆ. ಇವುಗಳನ್ನು ಸೇವಿಸುವಾಗ ನೀವು ನಿಮ್ಮ ಋತುಚಕ್ರವನ್ನು ಕಾಣದೆ ಇರುವುದು ತುಂಬಾ ಸಾಮಾನ್ಯವಾಗುತ್ತದೆ.

೯.ಹಾರ್ಮೋನುಗಳ ಅಸಮತೋಲನ

ಪೋಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್(PCOS) - ಇದು ಮಹಿಳೆಯ ಲೈಂಗಿಕ ಹಾರ್ಮೋನುಗಳ ಅಸಮತೋಲನದ ಒಂದು ಸ್ಥಿತಿ. ಇದು ಗರ್ಭಾಶಯದಲ್ಲಿ ಚೀಲಗಳನ್ನು ಮಾಡಿ, ಅಂಡೋತ್ಪತ್ತಿ ಆಗದಂತೆ ತಡೆಯುತ್ತದೆ. ಇದರಿಂದ ನೀವು ಅನಿಯಮಿತ ಋತುಚತ್ರವನ್ನು ಅನುಭವಿಸುವಿರಿ. PCOS ನಿಮ್ಮಲ್ಲಿ ಹೆಚ್ಚು ಕೂದಲ ಬೆಳವಣಿಗೆ, ಮೊಡವೆ, ತೂಕ ಹೆಚ್ಚಳ, ಮತ್ತು ಕೆಲವು ಸಂದರ್ಭಗಳಲ್ಲಿ ಬಂಜೆತನ ಉಂಟಾಗಲು ಕೂಡ ಕಾರಣವಾಗುತ್ತದೆ.

೧೦.ಥೈರಾಯಿಡ್

ನಿಮ್ಮ ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆಗೆ ಗ್ರಂಥಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಹೆಚ್ಚಿದ ಥೈರಾಯಿಡ್ ಮಟ್ಟ ಕಡಿಮೆ ಪ್ರಮಾಣದ ಋತುಚಕ್ರ ಅನುಭವಿಸುವಂತೆ ಮಾಡುವುದು. ಇದರ ಲಕ್ಷಣಗಳು, ತೂಕ ಕಡಿಮೆ ಆಗುವುದು, ಹೃದಯ ಬಡಿತ ದಿಡೀರ್ ಜಾಸ್ತಿಯಾಗುವುದು, ಬೆವರುವುದು ಮತ್ತು ನಿದ್ರೆಯಲ್ಲಿ ತೊಂದರೆ ಅನುಭವಿಸುವುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon