Link copied!
Sign in / Sign up
14
Shares

ನಿಮ್ಮ ಮಗುವು ತಿನ್ನಲು ಬಯಸುವ 5 ರುಚಿಕರವಾದ ಗಂಜಿಗಳು

೪-೫ ತಿಂಗಳಿಗೆ ಕಾಲಿರಿಸಿದ ಮಗುವು ಹಾಲು ಕುಡಿಯುವುದಕ್ಕಿಂತ, ಘನಾಹಾರವನ್ನು ತಿನ್ನಲು ಬಯಸುವುದು. ತನ್ನ ಪಾಲಿನ ಹಾಲು ಕುಡಿದ ಬಳಿಕವೂ ನಿಮ್ಮ ತಟ್ಟೆಗೆ ಕೈಹಾಕುವ ಕಾರಣವೂ ಇದೇ....!!

ನಿಮಿಷಾರ್ಧದಲ್ಲಿ ತಯಾರಿಸಬಹುದಾದ ಕೆಲವು ಪ್ಯೂರಿಗಳ ಬಗ್ಗೆ ತಿಳಿದುಕೊಳ್ಳೋಣ 

೧.ರಾಸ್ ಬೆರ್ರಿ ಮತ್ತು ಬಾಳೇಹಣ್ಣಿನ ಪ್ಯೂರಿ 

ಚೆನ್ನಾಗಿ ಮಿಶ್ರ ಮಾಡಿದ ರಸ್ಬೆರ್ರಿ ಹಣ್ಣು ಮತ್ತು ಬಾಳೆಹಣ್ಣಿನ ಪ್ಯೂರಿಯು ನಿಮ್ಮ ಚಿಕ್ಕ ಮಗುವಿಗೆ ಮಾತ್ರವಲ್ಲ ,ಹಿರಿಯ ಮಗುವಿಗೂ ಅಚ್ಚುಮೆಚ್ಚಾಗಬಹುದು. ಇದರ ನೈಸರ್ಗಿಕ ಸಿಹಿಯನ್ನು ನೆಚ್ಚಿಕೊಳ್ಳುವ ಮಗುವು ತನ್ನ ಪಾತ್ರೆಯೊಳಗೆ ಕೈ ಹಾಕಿದಾಗ ಮಾತ್ರ ಅದರ ಗಾಢ ರಕ್ತ ಕೆಂಪು ಬಣ್ಣದಿಂದ, ಪರಿಸ್ಥಿತಿಯು ಬಿಗಡಾಯಿಸಬಹುದು.

ನಿರ್ದೇಶಿತ ಪ್ರಾಯ : ೬-೯ ತಿಂಗಳು 

ಬೇಕಾದ ಪದಾರ್ಥಗಳು

ಬಾಳೇ ಹಣ್ಣು -೧

ಚೆನ್ನಾಗಿ ತೊಳೆದ ರಾಸ್ಬೆರ್ರಿ -೧/೨ ಲೋಟ

ತಯಾರಿಸುವ ವಿಧಾನ

ಹಣ್ಣುಗಳನ್ನು ಬ್ಲೆಂಡರಿನಲ್ಲಿ ಹಾಕಿ ಅಗತ್ಯಕ್ಕೆ ಬೇಕಾದಷ್ಟು ನುಣ್ಣಗೆ ರುಬ್ಬಿಕೊಳ್ಳಿ.ನಂತರ ಇದನ್ನು ಗಾಳಿಸಿ, ಮಗುವಿಗೆ ಸವಿಯಲು ಕೊಡಿ.

೨.ಸೇಬು ಹಣ್ಣಿನ ಪ್ಯೂರಿ

ಮಕ್ಕಳಿಗೆ ನೀಡುವ ಯಾವುದೇ ಆಹಾರದೊಂದಿಗೆ ಸುಲಭವಾಗಿ ಬೆರೆತುಕೊಳ್ಳುವುದರಿಂದ ಸೇಬು ಹಣ್ಣಿಗೆ ಅತ್ಯಂತ ಪ್ರಾಧಾನ್ಯವಿದೆ. ಪ್ಯೂರಿಯನ್ನು ತಯಾರಿಸಲು ನೈಸರ್ಗಿಕ ಸಿಹಿ ಹಾಗೂ ಮೃದುವಾಗಿರುವಂತಹ ರೆಡ್ ಡೆಲಿಷಿಯಸ್ ಮತ್ತು ಗಾಲಾ ಆಪಲ್ ಗಳು ಗ್ರಾನೀ ಸ್ಮಿತ್ ಗಳಿಗಿಂತಲೂ ಒಳ್ಳೆಯದು.

ನಿರ್ದೇಶಿತ ಪ್ರಾಯ : ೪-೬ ತಿಂಗಳು

ಬೇಕಾದ ಪದಾರ್ಥಗಳು

 ಸಿಪ್ಪೆ ಸುಲಿದು ಚಿಕ್ಕದಾಗಿ ಚೌಕಾಕಾರವಾಗಿ ತುಂಡರಿಸಿದ ಚಿಕ್ಕ ಸೇಬು ಹಣ್ಣುಗಳು -೩

ನೀರು ೧/೨ ಲೋಟ

ತಯಾರಿಸುವ ವಿಧಾನ

ನೀರು ಮತ್ತು ತುಂಡರಿಸಿದ ಸೇಬು ಹಣ್ಣನ್ನು ಸಣ್ಣ ಉರಿಯ ಮೇಲಿಟ್ಟು, ಮೆದು ಆಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಬ್ಲೆಂಡರ್ ಗೆ ವರ್ಗಾಯಿಸಿ. ಅಗತ್ಯಕ್ಕೆ ತಕ್ಕಷ್ಟು ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

೩.ಬಾಳೇಹಣ್ಣಿನ ಪ್ಯೂರಿ 

ಪೊಟೇಷಿಯಂನಿಂದ ಭರಿತವಾಗಿರುವ ಬಾಳೆಹಣ್ಣುಗಳು ಮಗುವಿನ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲ್ಪಟ್ಟಿದೆ. ಮಗುವು ಮಲಬದ್ಧತೆ ಅಥವಾ ಇನ್ಯಾವುದೇ ಉದರ ನಿಮಿತ್ತ ತೊಂದರೆಗಳಿಂದ ಬಳಲುತ್ತಿದ್ದರೂ ಬಾಳೆಹಣ್ಣಿನ ಪ್ಯೂರಿಯ ಸೇವನೆಯು ಅತ್ಯುತ್ತಮ.

ನಿರ್ದೇಶಿಸಲ್ಪಟ್ಟ ಪ್ರಾಯ : ೪-೬ ತಿಂಗಳುಗಳು

ಬೇಕಾದ ಪದಾರ್ಥಗಳು

ಕಳಿತ ಬಾಳೇಹಣ್ಣು – ೧/೨ ಭಾಗ

ದೊಡ್ಡ ಚಮಚ ನೀರು/ಎದೆ ಹಾಲು

ಮಾಡುವ ವಿಧಾನ

ಬ್ಲೆಂಡರಿನ ಸಹಾಯದಿಂದ ಅಥವಾ ಸ್ಪೂನಿನ ಸಹಾಯದಿಂದ,ಬಾಳೆಹಣ್ಣನ್ನು ಚೆನ್ನಾಗಿ ಹಿಚುಕಿದ ಬಳಿಕ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಬೆರೆಸಿ ಮಗುವಿಗೆ ತಿನ್ನಿಸಬಹುದು. ಸ್ವಲ್ಪ ಗಟ್ಟಿಯಾಗಬೇಕೆಂದಿದ್ದರೆ, ಯಾವುದಾದರೂ ಧಾನ್ಯಗಳ ಪುಡಿಗಳನ್ನೂ ಇದರೊಂದಿಗೆ ಸೇರಿಸಬಹುದು. 

೪.ಪಿಯರ್ ಪ್ಯೂರಿ

ತನ್ನ ನೈಸರ್ಗಿಕ ಸಿಹಿಯಿಂದ ಮಕ್ಕಳ ಮನಸೂರೆಗೊಳ್ಳುವ ಪಿಯರ್, ಹೇರಳ ನಾರಿನ ಅಂಶಗಳನ್ನು ಒಳಗೊಂಡಿದೆ.

ನಿರ್ದೇಶಿಸಲ್ಪಟ್ಟ ಪ್ರಾಯ : ೪-೬ ತಿಂಗಳುಗಳು 

ಬೇಕಾದ ಸಾಮಾಗ್ರಿಗಳು 

ಸಿಪ್ಪೆ ಸುಲಿದು ತುಂಡರಿಸಿದ,ಚೆನ್ನಾಗಿ ಹಣ್ಣಾದ ಪಿಯರ್ -೧

ಒಂದು ದೊಡ್ಡ ಚಮಚ ಎದೆಹಾಲು ಅಥವಾ ನೀರು

ತಯಾರಿಸುವ ವಿಧಾನ

ಅಗತ್ಯವಾದ ಮೃದುತನ ದೊರಕುವವರೆಗೆ ಬ್ಲೆಂಡರಿನಲ್ಲಿಟ್ಟು ಚೆನ್ನಾಗಿ ತುದುಕಿದ ನಂತರ, ಮಗುವು ತಿನ್ನಬಹುದಾದ ಕನ್ಸಿಸ್ಟೆನ್ಸಿ ದೊರಕುವವರೆಗೆ ನೀರು ಸೇರಿಸಿಕೊಳ್ಳಿ. 

೫.ಸಿಹಿ ಗೆಣಸಿನ ಪ್ಯೂರಿ

ಬೀಟಾ ಕೆರೋಟಿನುಗಳಿಂದ ಪೂರಕವಾಗಿರುವ ಸಿಹಿ ಗೆಣಸುಗಳು ಮಗುವಿಗೆ ನೀಡಬಹುದಾದ ಉತ್ತಮ ಆಹಾರ.

ನಿರ್ದೇಶಿಸಲ್ಪಟ್ಟ ವಯಸ್ಸು : ಆರು ತಿಂಗಳ ತರುವಾಯ 

ಬೇಕಾದ ಪದಾರ್ಥಗಳು 

ಸಿಪ್ಪೆ ಸುಲಿದು ಚಿಕ್ಕದಾಗಿ ತುಂಡರಿಸಿದ ಸಿಹಿ ಗೆಣಸುಗಳು-೧ ಅಥವಾ ೨ ನೀರು,ಹಾಲು ಅಥವಾ ಹಾಲಿನ ಪೌಡರ್ ೧ ದೊಡ್ಡ ಚಮಚ

ತಯಾರಿಸುವ ವಿಧಾನ

ಸಿಹಿ ಗೆಣಸನ್ನು ೨೦-೩೦ ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿಕೊಳ್ಳಿ. ಇದನ್ನು ಬ್ಲೆಂಡರಿನಲ್ಲಿಟ್ಟು ಚೆನ್ನಾಗಿ ಕದಡಿದ ಬಳಿಕ ಮಗುವು ಸವಿಯಲು ಅನುಗುಣವಾಗುವಂತೆ ನೀರು ಅಥವಾ ಎದೆ ಹಾಲನ್ನು ಸೇರಿಸಿ ಮೃದುವಾಗಿಸಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon