Link copied!
Sign in / Sign up
0
Shares

ಸುಲಭ, ಆರೋಗ್ಯಕರ ಮತ್ತು ರುಚಿಕರ ಗಂಜಿ : ನಿಮ್ಮ ಮಗು ತಾನಾಗೇ ಇಷ್ಟ ಪಟ್ಟು ಸೇವಿಸುವಂತದ್ದು

ನಿಮ್ಮ ಮಗುವಿಗೆ ನೀವು ಎದೆಹಾಲಿನ ಜೊತೆಗೆ ಬೇರೆ ಆಹಾರ ಪದಾರ್ಥಗಳನ್ನು ಪರಿಚಯಿಸಲು ಶುರು ಮಾಡುತ್ತಿದ್ದೀರಾ? ಹಾಗಿದ್ದರೆ ನೀವು ಇದನ್ನು ಪ್ರಯತ್ನಿಸಲೇಬೇಕು. ನಿಮ್ಮ ಮಗುವಿಗೆ ನೇರವಾಗಿ ಘನ ಪದಾರ್ಥವನ್ನು ನೀಡುವುದರ ಬದಲು ಘನ ಪದಾರ್ಥವನ್ನು ಗಂಜಿಯಾಗಿ ಮಾಡಿ ಕೊಡುವುದರಿಂದ ಮಗುವು ಅದರಲ್ಲಿರುವ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳುವುದು ಮತ್ತು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯವಾಗುತ್ತದೆ. ನೀವು ಪ್ರಯತ್ನಿಸಲೇಬೇಕಾದ ರುಚಿಕರ ಪೌಷ್ಟಿಕಾಂಶವುಳ್ಳ ಸುಲಭವಾಗಿ ತಯಾರಿಸಬಹುದಾದ ಕೈ ರುಚಿಗಳು.

೧.ಬಾಳೆಹಣ್ಣು ಮತ್ತು ಮಾವಿನಹಣ್ಣು ಗಂಜಿ

ಬಾಳೆಹಣ್ಣಿನಲ್ಲಿ ಪೌಷ್ಟಿಕಾಂಶಗಳು ಹೆಚ್ಚಾಗಿದ್ದು ಬೆಳೆಯುತ್ತಿರುವ ಮಕ್ಕಳಿಗೆ ಇದು ತುಂಬಾ ಅವಶ್ಯಕವಾದ ಹಣ್ಣಾಗಿದೆ. ಇವುಗಳು ಮಕ್ಕಳ ಸಣ್ಣ ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತವೆ.

ಪದಾರ್ಥಗಳು

೧ ಬಾಳೆಹಣ್ಣು

೧ ಸಣ್ಣ ಮಾವಿನ ಹಣ್ಣು

ತಯಾರಿಸುವ ವಿಧಾನ

ಬಾಳೆಹಣ್ಣು ಮತ್ತು ಮಾವಿನ ಹಣ್ಣಿನ ಸಿಪ್ಪೆಯನ್ನು ತೆಗೆಯಿರಿ. ಇದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.

ಇದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅಥವಾ ನಿಮ್ಮ ಮಗುವು ಅಗಿಯಲು ಹಲ್ಲು ಬೆಳೆದಿದ್ದರೆ ಅಗಿಯಲು ಸಿಗುವಷ್ಟು ಸಣ್ಣಗೆ  ಕತ್ತರಿಸಿರುವುದೇ ಸಾಕು.

ಇದಕ್ಕೆ ಸ್ವಲ್ಪ ನೀರು, ಎದೆಹಾಲು(೫ ತಿಂಗಳ ಮಗುವಾಗಿದ್ದರೆ), ಅಥವಾ ಹಸು ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಹಣ್ಣುಗಳು ಸಿಹಿಯಾಗಿರುವುದರಿಂದ ಇದಕ್ಕೆ ಸಕ್ಕರೆ ಅಥವಾ ಬೆಲ್ಲ ಹಾಕುವ ಅವಶ್ಯಕತೆ ಇಲ್ಲ.

ಇದು ಸಿಹಿಯಾಗಿರುವ ಕಾರಣ ನಿಮ್ಮ ಮಗುವಿಗೆ ಇಷ್ಟವಾಗುತ್ತದೆ(ಇದನ್ನು ಏರ್ ಟೈಟ್ - ಗಾಳಿ ಆಡದ ಡಬ್ಬಿಯಲ್ಲಿ ಮುಚ್ಚಿ ಫ್ರಿಡ್ಜ್ ನಲ್ಲಿ ಮಡಗಿ ಮೂರು ದಿನಗಳವರೆಗೆ ನೀಡಬಹುದು).

೨.ಸಿಹಿ ಗೆಣಸು ಗಂಜಿ

ವಿಟಮಿನ್ A, C ಬೀಟಾ ಕ್ಯಾರೋಟಿನ್, ಫೈಬರ್ ಮುಂತಾದ ದೇಹದ ಬೆಳವಣಿಗೆಗೆ ಅವಶ್ಯವಿರುವ ಪೌಷ್ಟಿಕಾಂಶಗಳು ಇದರಲ್ಲಿ ಅಡಕವಾಗಿವೆ, ಮತ್ತು ಇವು ಮೃದುವಾಗಿ ರುಚಿಕರವಾಗಿವೆ. ನಿಮ್ಮ ಮಗುವಿಗೆ ತಿನಿಸಲು ಇದು ಉತ್ತಮ ಆಹಾರವಾಗಿದೆ.

ಬೇಕಾಗಿರುವುದು

ಸಿಹಿ ಗೆಣಸು

ತಯಾರಿಸುವುದು

ಗೆಣಸನ್ನು ಚೆನ್ನಾಗಿ ತೊಳೆದು, ಒಂದು ಪಾತ್ರೆಗೆ ಹಾಕಿ, ಅದರ ತುಂಬಾ ನೀರು ಹಾಕಿ(ಗೆಣಸು ಮುಳುಗುವಂತೆ).

ನಂತರ ಇದನ್ನು ಮಧ್ಯಮ ಉರಿಯಲ್ಲಿ ಬೇಯಿಸಿ. ಅದು ಮೃದುವಾಗುವವರೆಗೆ ಬೇಯಿಸಿ.

ನಂತರ ಇದನ್ನು ಆರಲು ಬಿಡಿ. ಆರಿದ ನಂತರ ಇದರ ಸಿಪ್ಪೆಯನ್ನು ತೆಗೆದು, ಅದನ್ನು ಚೆನ್ನಾಗಿ ಕಿವುಚಿ.

ಇದಕ್ಕೆ ಸ್ವಲ್ಪ ನೀರು, ಎದೆಹಾಲು ಅಥವಾ ಹಸುವಿನ ಹಾಲನ್ನು ಸೇರಿಸಿ ಗಂಜಿ ರೀತಿಯಲ್ಲಿ ಮಾಡಿಕೊಳ್ಳಿ.

ನಂತರ ಇದನ್ನು ನಿಮ್ಮ ಮಗುವಿಗೆ ಸೇವಿಸಲು ನೀಡಿ. ಗೆಣಸು ಸಿಹಿಯಾಗಿರುವುದರಿಂದ ಸಕ್ಕರೆಯ ಅವಶ್ಯಕತೆ ಇರುವುದಿಲ್ಲ.

ಗೆಣಸನ್ನು ನೀರಿನಲ್ಲಿ ಬೇಯಿಸುವಾಗ ಸ್ವಲ್ಪ ಕಲ್ಲುಪ್ಪನ್ನು ಹಾಕಿದರೆ ತಿನ್ನುವಾಗ ರುಚಿ ನೀಡುತ್ತದೆ. ನಿಮ್ಮ ಮಗುವು ಇದನ್ನು ಇಷ್ಟಪಡುತ್ತದೆ.

ಗೆಣಸು ಮಾನವನ ದೇಹಕ್ಕೆ ತುಂಬಾ ಒಳ್ಳೆಯದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon