Link copied!
Sign in / Sign up
44
Shares

ರಾತ್ರಿ ಹೊತ್ತು ಬಿಚ್ಚಿ ಹಾಕಲೇಬೇಕು ಬ್ರಾ : ಏಕೆಂದು ತಿಳಿಯಿರಿ ಇಲ್ಲಿ !

ಬ್ರಾ ಸ್ತನಗಳಿಗೆ ಬೆಂಬಲ ನೀಡಿ, ನಮ್ಮ ಒಟ್ಟಾರೆ ಬಾಹ್ಯನೋಟಕ್ಕೆ ಬೆಡಗು ನೀಡುತ್ತದೆ ಎಂಬುದು ನಿಜವೇ. ಆದರೆ, ದಿನವೆಲ್ಲಾ ಬ್ರಾ ಧರಿಸಬೇಕು ಎಂದರೆ ಅದು ಇರಿಸುಮುರಿಸು ಮತ್ತು ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. ಈ ಕಾರಣಕ್ಕಾಗಿಯೇ ಹೆಂಗಸರು ಮನೆಗೆ ಬಂದೊಡನೆ ಬ್ರಾ ಕಿತ್ತೆಸೆಯುತ್ತಾರೆ. ಬ್ರಾ ಬಗ್ಗೆ ಹೇಳಬೇಕು ಎಂದರೆ, ಬಹುತೇಕ ತಜ್ಞರು ಹೆಂಗಸರಿಗೆ ಮಲಗುವ ಮುನ್ನ ಬ್ರಾ ಕಳಚಿ ಹಾಕಬೇಕೆಂದು ಶಿಫಾರಸು ಮಾಡುತ್ತಾರೆ. ಬ್ರಾ ಧರಿಸಿಯೇ ಮಲಗುವುದರಿಂದ ವೈದ್ಯಕೀಯ ಸಹಾಯ ಬೇಕಾಗಬಹುದಾದಂತಹ ಅರೋಗ್ಯ ಅಸ್ವಸ್ತತೆಗಳು ಉಂಟಾಗಬಹುದು. ಕೆಳಗೆ ನಾವು ತಿಳಿಸಿರುವ ವಿಷಯಗಳೇ ನಿಮಗೆ ರಾತ್ರಿ ಹೊತ್ತು ಬ್ರಾ ಧರಿಸಿ ಮಲಗದಿರಲು ಪ್ರೇರಣೆ ನೀಡುತ್ತವೆ.


೧. ರಕ್ತಸಂಚಾರಕ್ಕೆ ಅಡಚಣೆ

ಬ್ರಾ ಧರಿಸುವುದು (ಮುಖ್ಯವಾಗಿ ಕೆಳಗೆ ವೈರ್ ಇರುವಂತಹ ಬ್ರಾ) ರಕ್ತದ ಮುಕ್ತವಾದ ಮತ್ತು ಆರೋಗ್ಯಕರವಾದ ಸಂಚರಣೆಗೆ ಅಡಚಣೆ ಉಂಟುಮಾಡುತ್ತದೆ. ಇದರಿಂದ ಸ್ತನಗಳ ಸ್ನಾಯುಗಳಿಗೆ ಹಾನಿ ಆಗಬಹುದು, ಅಹಿತವೆನಿಸಬಹುದು ಮತ್ತು ನೋವು ಉಂಟುಮಾಡಬಹುದು. ಅಷ್ಟೇ ಅಲ್ಲ ಇದರಿಂದ ನಿಮ್ಮ ಕೈಗಳ ನರಗಳ ಮೇಲೆಯೂ ಈ ಪರಿಣಾಮಗಳನ್ನೇ ಬೀರಬಹುದು. ಇದರೊಂದಿಗೆ ಸಂಶೋಧನೆಗಳ ಪ್ರಕಾರ ಬ್ರಾ ಧರಿಸಿ ಮಲಗುವ ಹೆಂಗಸರಲ್ಲಿ ಹೆಚ್ಚಾಗಿ ಕತ್ತು ಮತ್ತು ಭುಜದ ನೋವು ಕಾಣಿಸಿಕೊಳ್ಳುತ್ತವೆ ಎಂಬುದು ತಿಳಿದುಬಂದಿದೆ.


೨. ಫಂಗಲ್ ಸೋಂಕು ಮತ್ತು ಹೈಪರ್-ವರ್ಣದ್ರವ್ಯ ಉಂಟಾಗುವಿಕೆ

ಟೈಟ್, ವೈರ್ಡ್ ಅಥವಾ ಪ್ಯಾಡೆಡ್ ಬ್ರಾಗಳನ್ನ ಧರಿಸಿದರೆ, ಅತಿಯಾದ ಬೆವರುವಿಕೆ ಮತ್ತು ಚರ್ಮಕ್ಕೆ ಇರಿಸುಮುರಿಸು ಉಂಟಾಗಿ, ಫಂಗಸ್ ಬೆಳೆಯಲು ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ. ಇದು ಸ್ತನಗಳಲ್ಲಿ ಫಂಗಲ್ ಸೋಂಕು ಉಂಟಾಗಲಿಕ್ಕೆ ದಾರಿ ಮಾಡಿಕೊಡುತ್ತದೆ. ಮಲಗುವಾಗ ಬ್ರಾ ಧರಿಸಿದರೆ ಸ್ತನಗಳಲ್ಲಿ ನೋವು, ಕೆಂಪಾಗುವಿಕೆ, ಚರ್ಮ ದದ್ದುಗಳು ಮತ್ತು ಚರ್ಮ ಬಣ್ಣ ಬಿಡುವುದು ಕಾಣಿಸಿಕೊಳ್ಳುತ್ತವೆ. ಇದು ನಿಮ್ಮ ಮೇಲೆ ಊಹಿಸಲಾಗದಂತಹ ಪರಿಣಾಮ ಬೀರುತ್ತದೆ. ಅದಲ್ಲದೆ ಬ್ರಾ ನಿಮ್ಮ ನಿದ್ರೆಗೆ ಕೂಡ ಭಂಗ ತರಬಹುದು.


೩. ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳನ್ನ ಹೆಚ್ಚಿಸುತ್ತದೆ

ಬಹಳಷ್ಟು ಅರೋಗ್ಯ ತಜ್ಞರು ಮತ್ತು ವೈಜ್ಞಾನಿಕ ಸಂಶೋಧನೆಗಳು ಯಾವೆಲ್ಲಾ ಹೆಂಗಸರು ದಿನದ ಎಲ್ಲಾ ಸಮಯದಲ್ಲೂ ಬ್ರಾ ಧರಿಸಿಯೇ ಇರುತ್ತಾರೆಯೋ, ಅಂತವರಲ್ಲಿ ಕ್ಯಾನ್ಸರ್, ಅದರಲ್ಲೂ ಮುಖ್ಯವಾಗಿ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬುದನ್ನ ತಿಳಿಸಿವೆ. ಬ್ರಾ ಇಂದ ರಕ್ತಸಂಚಾರಕ್ಕೆ ಅಡಚಣೆ ಆಗುತ್ತದೆ ಅಲ್ಲದೆ, ಅದರಿಂದ ಲಿಂಫ್ ನೋಡ್ ಕೂಡ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಸರಿಯಾಗಿ ನಿರ್ವಹಿಸಿಲ್ಲ ಎಂದರೆ, ಹೊರಹೋಗಬೇಕಿದ್ದ ದ್ರವ್ಯಗಳು ಸ್ತನದಲ್ಲಿಯೇ ಉಳಿದುಬಿಡುತ್ತವೆ. ಹೀಗೆ ಹೆಚ್ಚೆಚ್ಚು ಟಾಕ್ಸಿನ್ ಮತ್ತು ಇನ್ನಿತರೇ ಬೇಡದ ದ್ರವ್ಯಗಳು ಸ್ತನಗಳಲ್ಲಿಯೇ ಉಳಿದುಕೊಂಡರೆ, ಇದು ಭವಿಷ್ಯದಲ್ಲಿ ಲಿವರ್ ಮತ್ತು ಕಿಡ್ನಿ ತೊಂದರೆಗಳನ್ನ ಹುಟ್ಟು ಹಾಕುತ್ತದೆ.


೪. ಜೋತುಬಿದ್ದ ಸ್ತನಗಳು

ಬಹಳಷ್ಟು ಜನರಿಗೆ ಗೊತ್ತಿರದ ವಿಷಯ ಎಂದರೆ ಅದು ಸರಿ ಹೊಂದದ ಬ್ರಾ ಅಥವಾ ಟೈಟ್ ಆಗಿರುವ ಬ್ರಾವನ್ನು ದಿನವೆಲ್ಲಾ ಧರಿಸಿದರೆ, ಸ್ತನಗಳಲ್ಲಿನ ಸ್ನಾಯುಗಳ ಮೇಲೆ ಸದಾ ಒತ್ತದು ಬಿದ್ದು, ಸ್ತನಗಳಲ್ಲಿನ ಲಿಗಮೆಂಟ್ ಗಳು ಸರಿಯಾದ ಬೆಳವಣಿಗೆ ಹೊಂದದೆ, ನಿಮ್ಮ ಸ್ತನಗಳು ಜೋತುಬೀಳುತ್ತವೆ.

ಒಂದು ವೇಳೆ ನೀವು ಧರಿಸಿಯೇ ಮಲಗಬೇಕು ಎಂದರೆ ಬ್ರಾ ಧರಿಸಲು ಹಿತಕರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon