Link copied!
Sign in / Sign up
16
Shares

ಯಾವ ರಾಶಿಯವರು ಸಂಬಂಧಗಳನ್ನು ಗೌರವಿಸುವರು ತಿಳಿಯಿರಿ..

ಎಲ್ಲರೂ ನಿಷ್ಠೆಯ ವಿಚಾರ ಬಂದಾಗ   ತಮ್ಮದೇ ಆದ ವ್ಯಾಖ್ಯಾನಗಳನ್ನು ಹೇಳುತ್ತಾರೆ. ಕೆಲವರು ತಮ್ಮ ಕೆಲಸಕ್ಕೆ ನಿಷ್ಠೆಯಿಂದಿರುತ್ತಾರೆ, ಕೆಲವರು ತಮ್ಮ ಪ್ರೀತಿಪಾತ್ರರಿಗೆ ನಿಷ್ಠೆಯಿಂದಿರುತ್ತಾರೆ.  ಜ್ಯೋತಿಷ್ಯದ ಪ್ರಕಾರ ಗುಣಗಳನ್ನಾಧರಿಸಿ ಸ್ವಲ್ಪಮಟ್ಟಿಗಾದರೂ ಅವರ ರಾಶಿಯ ಪ್ರಕಾರ ಗುಣಗಳನ್ನು ತಿಳಿಯಬಹುದು ಆದರೆ ಅದನ್ನು ನಂಬುವುದು ಬಿಡುವುದು ಅವರವರ ನಂಬಿಕೆಗೆ ಬಿಟ್ಟಿದ್ದು. ಈ ಕೆಳಗಿನ ರಾಶಿಯವರು ಸಂಬಂಧದಲ್ಲಿ ನಿಷ್ಠೆಯಿಂದ ಇರುತ್ತಾರೆ, ಅವು ಯಾವ ರಾಶಿಗಳೆಂದು ನೋಡಿ.

ಕಟಕ   

ಕಟಕ ರಾಶಿಯವರು ತುಂಬಾ ಭಾವನಾತ್ಮಕ ಜೀವಿಗಳು ಅವರು ತಮ್ಮ ಪಾಲುದಾರರಿಗೆ ತುಂಬಾ  ಗೌರವಕೊಡುತ್ತಾರೆ. ಕಟಕ ರಾಶಿಯವರು ನಿಜವಾದ ಪ್ರೀತಿ ಇದೆ ಎಂಬ ಮಾತನ್ನು ಒಪ್ಪುತ್ತಾರೆ. ಅವರು ಎಂದಿಗೂ ತಮ್ಮ ಸಂಗಾತಿಯನ್ನು  ಮನನೋಯಿಸಲು ಇಷ್ಟಪಡುವುದಿಲ್ಲ. ಒಳ್ಳೆಯ ಸ್ನೇಹಿತರನ್ನು ಸಂಪಾದಿಸುತ್ತಾರೆ.

ವೃಶ್ಚಿಕ

ವೃಶ್ಚಿಕ ರಾಶಿಯವರು ಸ್ವಭಾವತಃ ಸೂಕ್ಷ್ಮಮನಸ್ಸುಳ್ಳವರು  ಮತ್ತು ಸಂಬಂಧಕ್ಕೆ ಬದ್ಧರಾಗಲು ತಮ್ಮದೇ ಸಮಯವನ್ನು ತೆಗೆದುಕೊಳ್ಳುತ್ತಾರೆ. ಆರಂಭದಲ್ಲಿ ಅವರು ನಂಬಿಕೆಯ ಸಮಸ್ಯೆಗಳನ್ನು ಹೊಂದಿರಬಹುದು ಮತ್ತು ಅವರೊಂದಿಗೆ ವ್ಯವಹರಿಸುವಾಗ ಸಾಕಷ್ಟು ತಾಳ್ಮೆ ಅಗತ್ಯವಿರಬಹುದು. ಆದರೆ ಒಮ್ಮೆ ಅವರು ನಂಬಿದರೆ ಅವರೊಡನೆ ಎಲ್ಲಾ ವಿಚಾರಗಳನ್ನು ಹೆಂಚಿಕೊಳ್ಳುವ ಸ್ವಭಾವದವರು, ಅವರು ತುಂಬಾ ಭಾವೋದ್ರಿಕ್ತ, ಆರೈಕೆಯ ಮತ್ತು ವಿಶ್ವಾಸಾರ್ಹ  ಸಂಗತಿಯನ್ನು ಬಯಸುತ್ತಾರೆ ಹಾಗು ಅವರೂ ಸಹ ಹಾಗೆ ಇರಲು ಬಯಸುತ್ತಾರೆ.

ವೃಷಭ

ಒಮ್ಮೆ ವೃಷಭ ರಾಶಿಯವರು ಕಮಿಟ್ ಆದರೆ ಅವರು ಮಾತಿಗೆ ತಪ್ಪುವುದಿಲ್ಲ. ಅವರು ತುಂಬ ನಿಷ್ಠಾವಂತರು, ಕೆಲಸದಲ್ಲಾಗಲಿ ಅಥವಾ ಸಂಬಂಧದಲ್ಲಾಗಲಿ ನಿಷ್ಠೆಯಿಂದಿರುತ್ತಾರೆ. ಅವರು ಬೇರೆಯವರೊಡನೆ ಸಂಬಂಧಕ್ಕೆ ಯಾವುದೇ ಕುತ್ತ್ತು ಬರದಂತೆ ನೋಡಿಕೊಳ್ಳುವರು, ಅಂದರೆ ಸಂಬಂಧಗಳಇಗೆ ಅಷ್ಟೊಂದು ಪ್ರಾಮುಖ್ಯತೆ ಕೊಡುವರೆಂದರ್ಥ.

ತುಲಾ

ತುಲಾ ರಾಶಿಯವರು ಸಂಬಂಧಗಳನ್ನು ಬ್ಯಾಲೆನ್ಸ್ ಚೆನ್ನಾಗಿ ಮಾಡುವರು. ಹಾಗು ಜನರನ್ನು ತುಂಬು ಮನಸ್ಸಿನಿಂದ ಪ್ರೀತಿಸುವವರು ಹಾಗು ಶಾಂತಿ ಪ್ರಿಯರು. ಸಂಬಂಧದಲ್ಲಿ ಬಿರುಕುಮೋಡದಂತೆ ಹಪಹಪಿಸುವರು. ತುಲಾ ರಾಶಿಯವರು ಎಚ್ಚರಿಕೆಯಿಂದ ಸಂಬಂಧಗಳನ್ನು ಬೆಳೆಸುವರು ಯಾಕೆಂದರೆ ಅದರಿಂದ ಭವಿಷ್ಯದಲ್ಲಿ ಯಾವುದೇ ನೋವಾಗಬಾರದೆಂದು ಅವರು ಯೋಚಿಸಿ ನಿರ್ಧಾರ ಕೈಗೊಳ್ಳುವರು.

ಮಕರ

ಮಕರ ರಾಶಿಯವರು ಯಾರೊಂದಿಗೂ ಸುಲಭವಾಗಿ ಓಪನ್ ಆಗುವುದಿಲ್ಲ, ಅವರು ತುಂಬ ಜಾಗರೂಕರಾಗಿರುತ್ತಾರೆ.ಅದರಲ್ಲೂ ತಮ್ಮ ಸಂಗತಿಯನ್ನು ಬಿಟ್ಟು ಬೇರೆಯವರೊಡನೆ ಓಡಾಡಲು ಇಷ್ಟಪಡುವುದಿಲ್ಲ. ಸಂಬಂಧವನ್ನು ಗೌರವಿಸುವ ಇವರು ತಮ್ಮ ಸಂಗಾತಿಯು ಕೂಡ  ಹಾಗೆ ಇರಬೇಕೆಂದು ಬಯಸುವರು.

ಸಿಂಹ

ಸಿಂಹರಾಶಿಯವರಿಗೆ ಲವ್ ಎಂದರೆ ಮದುವೆ ಎಂದರ್ಥ. ಜೀವನದಲ್ಲಿ ಸೆಟ್ಟಲ್ ಆಗಿ ಸಂಸಾರದಜೊತೆ ಸುಖವಾಗಿರಬೇಕೆಂದು ಅವರು ಬಯಸುವರು. ಆದ್ದರಿಂದ ತಮ್ಮ ಸಂಗಾತಿಗೆ ಮೋಸಮಾಡಲು ಹೆದರುವರು.



Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon