Link copied!
Sign in / Sign up
30
Shares

ನಿಮ್ಮ ರಾಶಿಯು ನಿಮ್ಮ ದುರ್ಬಲತೆಯ ಸುಳಿವನ್ನು ನೀಡುತ್ತದೆ

ರಾಶಿಚಕ್ರದ ಚಿಹ್ನೆಗಳು ಪ್ರತಿಯೊಂದು ವಿಶಿಷ್ಟವಾದ ವ್ಯಕ್ತಿತ್ವ ಗುಣಲಕ್ಷಣಗಳನ್ನು ಹೊಂದಿದ್ದು, ಅದು ಉಳಿದ ಅಥವಾ ಬೇರೆ ರಾಶಿಗಿಂತ ವಿಭಿನ್ನವಾಗಿದ್ದು ಪ್ರತ್ಯೇಕಗೊಳ್ಳುತ್ತದೆ. ಜೋತಿಷ್ಯಶಾಸ್ತ್ರ ಇದರ ಬಗ್ಗೆ ತಿಳಿದುಕೊಳ್ಳಲು ಹಲವು ಅನ್ವೇಷಣೆಯನ್ನು ಮಾಡಿದೆ, ಪ್ರತಿಯೊಂದು ರಾಶಿಯು ಏನು ಸೂಚಿಸುತ್ತದೆ ಎಂಬುದನ್ನು ಅವರು ಕಂಡುಹಿಡಿದಿದ್ದಾರೆ. ನಿಮ್ಮ ರಾಶಿಯ ಪ್ರಕಾರ ನಿಮ್ಮ ದೌರ್ಬಲ್ಯತೆ ಯಾವುದು ಎಂದು ತಿಳಿಯಲು ಮುಂದೆ ಓದಿ.

೧.ಮೇಷ ರಾಶಿ

ಹೆಣ್ಣಾಗಲಿ ಅಥವಾ ಗಂಡಾಗಲಿ ಅನ್ಯಾಯ ಎಂದು ತಿಳಿದರೆ ಅದೇ ತಕ್ಷಣ ಅದರ ವಿರುದ್ಧ ಇವರು ಧ್ವನಿ ಎತ್ತುವರು ಮತ್ತು ಹೋರಾಡುವರು, ಮತ್ತು ಅವರು ಅವರ ಅನಿಸಿಕೆಯನ್ನು ಹೇಳಲು ಎಂದು ನಾಚಿಕೆ ಅಥವಾ ಭಯವನ್ನು ಪಡುವುದಿಲ್ಲ.

ಇವರ ದುರ್ಬಲತೆ ಸ್ವಾರ್ಥ : ಇವರು ಇವರ ಬಗ್ಗೆ ಮಾತ್ರ ಜಾಗೃತರಾಗಿರುವರು, ಇವರು ಬೇರೆಯವರನ್ನು ನೋಡಿಕೊಳ್ಳುವುದು ಅಥವಾ ಅವರ ಬಗ್ಗೆ ಕಾಳಜಿವಹಿಸುವುದು ಅವರಿಂದ ಇವರಿಗೆ ಪ್ರಯೋಜನ ಅಥವಾ ಲಾಭ ಇದೆ ಎಂದರೆ ಮಾತ್ರ.

೨.ವೃಷಭ ರಾಶಿ

ಅತ್ಯಂತ ಹಠಗಾರರು ಮತ್ತು ಮೊಂಡುತನ ಇರುವವರು. ಇವರ ಮನಸ್ಸು ಸ್ಥಿರ ಮತ್ತು ಗಟ್ಟಿಯಾಗಿದ್ದು ಇವರ ಶಾಂತಿಯನ್ನು ಯಾರು ಬಂಗಪಡಿಸಲು ಸಾಧ್ಯವಿಲ್ಲ. ಅವರು ಮನಸ್ಸಿನಲ್ಲಿ ಒಂದು ಬಾರಿ ನಿರ್ಧರಿಸಿದರೆ, ಅದನ್ನು ಅಲುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಇವರು ಸೋಮಾರಿ ಆಗಿರುವುದು ನಿಜ ಆದರೆ ಇವರನ್ನು ಪೀಡಿಸಬೇಡಿ ಅಥವಾ ಸೋಮಾರಿ ಎಂದು ಆರೋಪಿಸಬೇಡಿ.

೩.ಮಿಥುನ ರಾಶಿ

ಚಂಚಲ ಮನಸ್ಸಿನವರು. ಇವರು ಕೆಲವೊಮ್ಮೆ ಮುಂದಾಲೋಚನೆ ಮಾಡುವರು ಕೆಲವೊಮ್ಮೆ ದುರಾಲೋಚನೆ ಮಾಡುವರು. ಇವರ ಅತಿ ದೊಡ್ಡ ದುರ್ಬಲತೆ ಎಂದರೆ ಚಂಚಲ ಮನಸ್ಸು, ಒಂದು ಸಮಯ ಇದ್ದ ಹಾಗೆ ಇವರ ಮನಸ್ಸು ಮತ್ತೊಮ್ಮೆ ಇರುವುದಿಲ್ಲ. ಮತ್ತು ಇವರು ಸರಿಯದಾ ಸಮಯಕ್ಕೆ ಎಂದು ಬರುವುದಿಲ್ಲ, ಇವರು ತುಂಬಾ ಬೇಗ ಬಂದು ಕಾಯುವರು ಅಥವಾ ತಡವಾಗಿ ಬರುವರು, ಆದರೆ ಸರಿಯಾದ ಸಮಯಕ್ಕೆ ಅಪರೂಪಕ್ಕೆ ಮಾತ್ರ ಬರುವರು.

೪.ಕಟಕ ರಾಶಿ

ನಿರಾಶಾವಾದಿಗಳು. ಇವರು ಸುಂದರ ಕ್ಷಣಗಳನ್ನು ನಾಶಮಾಡುವುದಕ್ಕೆ ಸದಾ ಸಿದ್ಧರಾಗಿರುವರು. ಇವರು ನಕ್ಷತ್ರ ಹತ್ತಿರ ಹೋಗುವಂತಹ ಕನಸುಗಳನ್ನು ಕಾಣುವರು. ಇವರು ನಿಮ್ಮ ಮೇಲೆ ಕೋಪ ಮಾಡಿಕೊಂಡಿಲ್ಲ ಆದರೆ ಅವರ ಜೀವನದ ಬಗ್ಗೆ ಬೇಸರವಿದೆ. ಇವರ ಮನಸ್ಥಿತಿ ಬದಲಾದಂತೆ ಎಲ್ಲವು ಬದಲಾಗುತ್ತ್ತದೆ. ಕೆಲವೊಮ್ಮೆ ಇವರು ಬೇರೆಯವರ ಬಗ್ಗೆ ಅಸೂಹೆ ಪಡುವರು.

೫.ಸಿಂಹ

ದುಡ್ಡಿಗೆ ಬೆಲೆ ಕೊಡುವುದಿಲ್ಲ. ಕೇವಲ ಕೆಲವು ಸಿಂಹ ರಾಶಿಯವರು ಮಾತ್ರ ದುಡ್ಡಿಗೆ ಬೆಲೆ ನೀಡುವರು. ಅವರು ಹೃದಯದಲ್ಲಿ ನಯನಮನೋಹರ ಅತಿರಂಜಿತ ಕಲೆಗಾರ ಮತ್ತು ಮೋಜುಗಾರ. ಇವರು ವೈಭವವಾಗಿ ಬದುಕಲು ಇಚ್ಛಿಸುವರು ಮತ್ತು ತಮಾಷೆಯ ಕ್ಷಣಗಳನ್ನು ಕಳಿಯಲು ಸಂತೋಷದಿಂದ ಭಾಗಿಯಾಗುವರು. ಇವರು ಹಣವನ್ನು ಯಾರಿಗೆ ಬೇಕಾದರೂ ನೀಡುವರು, ಅವರ ಬಳಿ ಹಣ ಇಲ್ಲ ಎಂದರು, ಸಮಯಕ್ಕೆ ಬೇಕು ಎಂದು ಕೇಳಿದಾಗ, ಬೇರೆಯವರ ಬಳಿಯಾದರೂ ತಂದು ಹಣ ನೀಡುವರು.

೬.ಕನ್ಯಾ ರಾಶಿ

ತನ್ನ ಬಗ್ಗೆ ಟೀಕೆಯನ್ನು ತಮಾಷೆಗೂ ಸಹಿಸುವುದಿಲ್ಲ. ಇವರ ದುರ್ಬಲವನ್ನು ತಿಳಿದುಕೊಳ್ಳಲು ಬಯಸುವರು ಮತ್ತು ಕೆಲವೊಮ್ಮೆ ಅದೇ ಇವರ ದುರ್ಬಲವಾಗುತ್ತದೆ. ಮದುವೆ ಆಗಿರಲಿ ಅಥವಾ ಆಗದಿರಲಿ ಇವರನ್ನು ಸಾರ್ವಜನಿಕವಾಗಿ ಗುರುತಿಸುವುದು ಸುಲಭ ಏಕೆಂದರೆ ಇವರು ಅಷ್ಟು ಸದ್ದು ಮಾಡುವುದಿಲ್ಲ, ಮೌನ ಮತ್ತು ಶಾಂತವಾಗಿರುವರು.

೭.ತುಲಾ ರಾಶಿ

ಇವರು ಸೋಮಾರಿಗಳು. ಇವರ ರಾಶಿಯೆ ಹಾಗೆ ಮತ್ತು ಅಸಮಂಜಸತೆ ಇವರ ಮತ್ತೊಂದು ದುರ್ಬಲತೆ. ಕೆಲವು ವಿಷಯಗಳ ಬಗ್ಗೆ ಇವರು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ.

೮.ವೃಶ್ಚಿಕ ರಾಶಿ

ಇವರು ಒಂದು ವಿಷಯವನ್ನು ಮರೆಯುವಲ್ಲಿ ಅಥವಾ ಕ್ಷಮಿಸುವಲ್ಲಿ ಅಸಮರ್ಥರಾಗುವರು. ಇವರು ನೇರ ನುಡಿಗಾರಾರು ನೀವು ಸೂಕ್ಹ್ಮ ವ್ಯಕ್ತಿಗಳಾಗಿದ್ದಾರೆ ಇವರನ್ನು ಏನು ಕೇಳಬೇಡಿ, ಇದರಿಂದ ಕಟುಸತ್ಯ ತಿಳಿದು ನಿಮ್ಮ ಮನಸ್ಸಿಗೆ ಬೇಸರವಾಗಬಹುದು.

೯.ಧನಸ್ಸು

ಇವರು ಹುಟ್ಟಿನಿಂದ, ಸಂಪ್ರದಾಯವಾದಿ, ಜೂಜುಕೋರ ಮನಸ್ಸಿನವರು. ಭಕ್ತಿ ಮತ್ತು ನಂಬಿಕೆಯ ಮೇಲೆ ಎಲ್ಲದರಲ್ಲೂ ಮುಂದಾಗುವರು. ಭಕ್ತಿಯ ಆಧಾರದ ಮೇಲೆ ಕಡಿಮೆ ಕೆಲಸ ಮಾಡಿ ಕಡಿಮೆ ಸಮಯದಲ್ಲಿ ಹೆಚ್ಚಿನ ಫಲಿತಾಂಶವನ್ನು ಬಯಸುವರು.

೧೦.ಮಕರ

ಇವರು ಮಾಡಿದ ಕೆಲಸಕ್ಕೆ ನೀವು ಅವರನ್ನು ಪ್ರಶಂಸಿಸಿ ಮತ್ತು ಅವರ ಮುಖದಲ್ಲಿ ಬರುವ ಭಾವನೆಯನ್ನು ನೋಡಿ, ತ್ವರಿತವಾಗಿ ಅವರು ನಿಮ್ಮ ಮೇಲೆ ಪ್ರೀತಿಯಲ್ಲಿ ಬೀಳುವರು. ಇದರಿಂದ ಕೆಲವೊಮ್ಮೆ ಅವರನ್ನು ಮೋಸಮಾಡಬಹುದು. ಇವರ ಮನಸ್ಥಿತಿ ಸ್ಥಿರವಾಗಿರುವುದಿಲ್ಲ, ಇದು ಕೂಡ ಇವರ ದುರ್ಬಲತೆ.

೧೧.ಕುಂಭ ರಾಶಿ

ಇವರು ಎಲ್ಲದರಲ್ಲೂ ಗುಣಮಟ್ಟಕ್ಕಿಂತ ಪ್ರಮಾಣವನ್ನು ಗಮನಿಸುವರು. ಇವರು ಕಡಿಮೆ ಸಮಯದಲ್ಲಿ ಅತಿಯಾದ ಪ್ರೀತಿ ವಿಶ್ವಾಸಕ್ಕೆ ತಲೆಬಾಗುವರು, ಮತ್ತು ಸ್ಥಿರವಾದ ಸಂಬಂಧ ಹೊಂದುವರು. ಇವರು ಸಾಮಾನ್ಯ ವ್ಯಕ್ತಿತ್ವವನ್ನು ಹೊಂದಿರುವರು.

೧೨.ಮೀನ

ತಪ್ಪಿಸಿಕೊಳ್ಳುವವರು, ಮನುಷ್ಯತ್ವದ ಬಗ್ಗೆ ಮತ್ತು ಮಾನವರು ಹೇಗೆ ನಡೆದುಕೊಳ್ಳುವರು ಎಂಬುದರ ಬಗ್ಗೆ ಇವರಿಗೆ ಅರಿವಿದೆ. ಆದರೆ ಇವರು ಇವರದೆ ದಾರಿಯಲ್ಲಿ ಬದುಕಲು ಇಚ್ಛಿಸುವರು. ಇವರು ಅಷ್ಟು ಸುಲಭವಾಗಿ ಬೇರೆಯವರ ಕೈಗೆ ಸಿಗುವುದಿಲ್ಲ, ಮೀನಿನಂತೆ ತಪ್ಪಿಸಿಕೊಳ್ಳುವರು. ತನ್ನ ಭ್ರಮೆಗಳ ಹಿಂದೆ ಎಲ್ಲವನ್ನು ಮರೆಮಾಡಲು ಇವರು ಬಯಸುವರು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon