Link copied!
Sign in / Sign up
21
Shares

ನಿಮ್ಮ ರಾಶಿಯ ಪ್ರಕಾರ ನೀವು ಗರ್ಭಧರಿಸಲು ಅತ್ಯಂತ ಸೂಕ್ತ ವಯಸ್ಸು ಯಾವುದೆಂದು ತಿಳಿಯಿರಿ!

ನಂಬಿದರೆ ನಂಬಿ ಇಲ್ಲವಾದರೆ ಬಿಡಿ, ಆದರೆ ಜ್ಯೋತಿಷ್ಯಶಾಸ್ತ್ರ ಪ್ರತಿಯೊಂದು ರಾಶಿಯವರು ಯಾವ ಸಮಯದಲ್ಲಿ ಗರ್ಭಧರಿಸುವುದು ಉತ್ತಮ ಎಂಬುದನ್ನು ಯಶಸ್ವಿಯಾಗಿ ಸಾಭೀತು ಪಡಿಸಿದ್ದಾರೆ, ಮತ್ತು ಯಾವ ವಯಸ್ಸು ಅತ್ಯಂತ ಕೆಟ್ಟದಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿದ್ದಾರೆ. ನಿಮ್ಮ ರಾಶಿ ನೀವು ಯಾವ ವಯಸ್ಸಿಗೆ ಗರ್ಭಧರಿಸುವುದು ಒಳ್ಳೆಯದು ಎಂಬುದನ್ನು ಹೇಗೆ ತಿಳಿಸುತ್ತದೆ ಎಂಬುದು ನಿಮ್ಮಲ್ಲಿ ಅಚ್ಚರಿ ಎನಿಸಬಹುದು, ಮತ್ತು ನೀವು ಅದನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿರುವಿರಿ. ಆದರೆ ನಿಮ್ಮ ರಾಶಿಯು ನಿಮ್ಮ ವೈಯಕ್ತಿಕ ವ್ಯಕ್ತಿತ್ವ ಮತ್ತು ನಡವಳಿಕೆ ಬಗ್ಗೆ ಹಲವು ಸತ್ಯ ಸಂಗತಿಗಳನ್ನು ತಿಳಿಸುತ್ತದೆ, ಮತ್ತು ನೀವು ಯಾವಾಗ ಮಕ್ಕಳನ್ನು ಹೊಂದಬಹುದು ಎಂಬುದನ್ನು ತಿಳಿಸುವ ಬಲವಾದ ಸೂಚಕವಾಗಿದೆ.

ಆದ್ದರಿಂದ ಈ ಲೇಖನದಲ್ಲಿ, ನೀವು ಗರ್ಭವತಿಯಾಗಲು ನಿಮ್ಮ ರಾಶಿಯ ಪ್ರಕಾರ ಯಾವ ವಯಸ್ಸು ಉತ್ತಮ ಎಂಬುದನ್ನು ನಿಮಗೆ ತಿಳಿಸುತ್ತಿದ್ದೇವೆ. ಇಲ್ಲಿ ೧೨ ರಾಶಿಯನ್ನು ವಿವರಿಸಲಾಗಿದೆ.

೧.ಮೇಷ ರಾಶಿ

ಮೇಷ ರಾಶಿಯನ್ನು ಹೊಂದಿರುವ ಮಹಿಳೆಯರು ಸಾಮನ್ಯವಾಗಿ ದೊಡ್ಡ ಕುಟುಂಬ ಅಥವಾ ಅವಿಭಕ್ತ ಕುಟುಂಬದಲ್ಲಿ ಮದುವೆ ಆಗುವ ಸಾಧ್ಯತೆಗಳು ಅಥವಾ ಒಲವನ್ನು ತೋರುವ ಅವಕಾಶಗಳಿರುತ್ತವೆ. ಇವರು ೬ಮಕ್ಕಳ ತನಕ ಮಗುವನ್ನು ಮಾಡಿಕೊಳ್ಳುವ ಪ್ರಯತ್ನ ಮಾಡಿದರು ಅಚ್ಚರಿ ಇಲ್ಲ. ಇವರು ಸಾಮಾನ್ಯವಾಗಿ ಲವಲವಿಕೆಯ ವ್ಯಕ್ತಿಗಳು ಮತ್ತು ಇವರು ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದಿಲ್ಲ. ಮೇಷ ರಾಶಿಯ ಮಹಿಳೆಯರು ತಮ್ಮ ಮೊದಲ ಮಗುವನ್ನು ತಮ್ಮ ೨೦ನೇ ವಯಸ್ಸಿನಲ್ಲೆ ಪಡೆಯುತ್ತಾರೆ, ಇದು ನಿಮಗೆ ಆಶ್ಚರ್ಯವಾಗಬಹುದು, ಅಷ್ಟು ಚಿಕ್ಕವಯಸ್ಸಿನಲ್ಲೇ ಹೇಗೆ ಸಾಧ್ಯ ಎಂದು, ಆದರೆ ಅವರ ದೇಹ ಮಗುವನ್ನು ಭೂಮಿಗೆ ಪರಿಚಯಿಸಲು ಆಗಲೇ ಸಂಪೂರ್ಣವಾಗಿ ತಯಾರಾಗಿರುತ್ತದೆ. ಮೇಷ ರಾಶಿಯವರು ತಮ್ಮ ಅತಿ ಚಿಕ್ಕ ವಯಸ್ಸಿನಲ್ಲೇ ಪ್ರಬುದ್ಧತೆಯನ್ನು ಪಡೆಯುವರು, ಮತ್ತು ಆತ್ಮವಿಶ್ವಾಸವನ್ನು ಹೊಂದಿರುವರು.

 

೨.ಮಿಥುನ

ಇವರು ತಮಾಷೆಯ ವ್ಯಕ್ತಿಗಳು, ಮತ್ತು ದೈವಿಕ ಹಾಗು ಅಧ್ಯಾತ್ಮದ ಕಡೆಗೆ ಸ್ವಲ್ಪ ಒಲವನ್ನು ತೋರುವರು, ಇವರು ಕೂಡ ತಮ್ಮ ಯವ್ವನದಲ್ಲಿ ಮಗುವನ್ನು ಪಡೆಯುವರು. ವಾಸ್ತವವಾಗಿ, ಮಿಥುನ ರಾಶಿಯವರು ಮಗುವನ್ನು ಪಡೆಯಲು ಸೂಕ್ತ ವಯಸ್ಸು ಎಂದರೆ ಅದು ಅವರ ೨೩ನೇ ವಯಸ್ಸು. ಇವರು ಒತ್ತಡ, ಖಿನ್ನತೆ ಮತ್ತು ಭಾವನೆಯನ್ನು ಹೇಗೆ ನಿಭಾಹಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿರುತ್ತಾರೆ. ಇವರು ಇದರಲ್ಲಿ ಯಾವುದೇ ಸಮಸ್ಯೆ ಅಥವಾ ತೊಂದರೆಯನ್ನು ಅನುಭವಿಸುವುದಿಲ್ಲ, ಇವರಿಗೆ ಈ ಸಮಯದಲ್ಲಿ ಹೇಗೆ ನಡೆದುಕೊಳ್ಳಬಕು, ಹೇಗೆ ಎಲ್ಲವನ್ನು ನಿಭಾಹಿಸಬೇಕು ಎಲ್ಲವನ್ನು ಸಂಪೂರ್ಣವಾಗಿ ಅರಿತಿರುತ್ತಾರೆ. ನೀವು ಮಿಥುನ ರಾಶಿಯವರಾಗಿದ್ದರೆ, ನಿಮಗೂ ಕೂಡ ನನಗೆ ಪುರುಷನ ಅಗತ್ಯವಿದೆ ಎಂದು ಭಾವಿಸುವಿರಿ, ಆದರೆ ನಿಮಗೆ ಮಗುವಾದ ಮೇಲೆಯೇ ಅದು ನಿಜವಾಯಿತು ಎಂದು ನಿಮಗೆ ಅನಿಸುವುದು.

 

೩.ತುಲಾ ರಾಶಿ

ತುಲಾ ರಾಶಿಯವರು ಯಾವಾಗಲು ಸಮತೋಲನದಲ್ಲಿರುವ ವ್ಯಕ್ತಿಗಳು, ಇವರು ಯಾವಾಗಲು ಶಾಂತ ಮನೋಭಾವ ಮತ್ತು ವಿವೇಚನಾತ್ಮಕಾಗಿ ಯೋಚಿಸುವ ವ್ಯಕ್ತಿಗಳು ಹಾಗು ಇವರಲ್ಲಿ ನೈಸರ್ಗಿಕವಾಗಿ ನಾಯಕತ್ವದ ಗುಣ ಇರುತ್ತದೆ. ನೀವು ತುಲಾ ರಾಶಿಯವರಾಗಿದ್ದರೆ ಮಗುವನ್ನು ಪಡೆಯಲು ಸೂಕ್ತ ವಯಸ್ಸು ೨೬-೨೭. ನಿಮ್ಮ ಮಗುವಿಗೆ ಹೇಳಿಕೊಡಲು ನಿಮ್ಮ ಬಳಿ ಸಾಕಷ್ಟು ಜ್ಞಾನ ಇರುವುದು ಮತ್ತು ಮಕ್ಕಳಿಗೆ ಸರಿಯಾಗಿ ಹೇಳಿಕೊಡಲು ತಾಳ್ಮೆ ಇರುವುದು ನಿಮ್ಮ ಮಕ್ಕಳು ಕಲಿಯಲು ಮತ್ತು ಉತ್ತಮವಾಗಿ ಬೆಳೆಯಲು ಸಹಾಯವಾಗುತ್ತದೆ. ನಿಮ್ಮ ಮಕ್ಕಳಿಗೆ ನೀವು ತಾಳ್ಮೆ, ಗೌರವ ಮುಂತಾದ ಒಳ್ಳೆಯ ವ್ಯಕ್ತಿತ್ವ ಗುಣಗಳನ್ನು ಸುಲಭವಾಗಿ ಕಲಿಸುವ ಸಾಮರ್ಥ್ಯವನ್ನು ಹೊಂದಿರುವಿರಿ.

೪.ವೃಷಭ ರಾಶಿ

ಇವರು ಸ್ವತಂತ್ರವಾಗಿರುವುದಕ್ಕಿಂತ ಹೆಚ್ಚು ಬೇರೆಯವರನ್ನು ಅಥವಾ ಬೇರೆಯವರ ಮೇಲೆ ಅವಲಂಬಿತವಾಗಿರುತ್ತಾರೆ, ಇವರು ಬೇರೆಯವರ ಸಮ್ಮತಿಗಾಗಿ ಎದುರು ನೋಡುವರು ಮತ್ತು ಬೇರೆಯವರ ಮಾರ್ಗದರ್ಶನವನ್ನು ಬಯಸುವರು, ಆದರೆ ಇದು ಅವರ ಪೋಷಕತ್ವ ಶೈಲಿಯ ಮೇಲೆ ಪರಿಣಾಮ ಬೀರುವುದಿಲ್ಲ. ಇವರು ಮಕ್ಕಳನ್ನು ಹೆಚ್ಚು ಪ್ರೀತಿ ಮತ್ತು ಕಾಳಜಿ ಮಾಡುವರು. ಇವರು ತಮ್ಮ ೨೨ನೇ ವಯಸ್ಸಿನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವರು. ಇವರು ಎಲ್ಲರಲ್ಲೂ ಒಳ್ಳೆಯದನ್ನೇ ಕಾಣುವರು. ಇವರು ಎರಡು ಅಥವಾ ಮೂರು ಮಕ್ಕಳನ್ನು ಹೊಂದಲು ಇಚ್ಛಿಸುವರು.

 

೫.ಕುಂಭ ರಾಶಿ

ಇವರ ಮನಸ್ಸಿನಲ್ಲಿ ಒಂದು ಮಗು ಇರುತ್ತದೆ ಆದರೆ ಅದನ್ನು ತೋರಿಸಿಕೊಳ್ಳಲು ಮುಜುಗರ ಪಡುತ್ತಾರೆ, ಅಂದರೆ ಇವರ ಮಗುವಿನಂತಹ ಮನಸ್ಸನ್ನು ವ್ಯಕ್ತಪಡಿಸಲು ಅವರು ಹಿಂಜರಿಯುತ್ತಾರೆ. ಏಕೆಂದರೆ ಅವರು ತಾನು ಇನ್ನು ಮಗು ಅಥವಾ ಚಿಕ್ಕವರು ಎಂದು ಭಾವಿಸಿರುತ್ತಾರೆ. ಇವರು ಇನ್ನು ಚಿಕ್ಕವರಂತೆ ಆಡುವುದರಿಂದ ಇವರು ಮಗುವನ್ನು ಪಡೆಯಲು ೨೮ - ೩೦ನೇ ವಯಸ್ಸು ಸರಿಯಾಗಿರುತ್ತದೆ. ಅಲ್ಲಿಯವರೆಗೆ ಅವರು ಸ್ವಲ್ಪ ಪ್ರಭುತ್ವವನ್ನು ಹೊಂದುವರು.

೬.ವೃಶ್ಚಿಕ ರಾಶಿ

ಇವರು ಭಾವೋದ್ರಿಕ್ತ ವ್ಯಕ್ತಿಗಳು, ಮತ್ತು ಅವರ ಬಳಿ ಇರುವ ಎಲ್ಲವನ್ನು ಅವರು ಪ್ರೀತಿಸುವರು. ಇವರು ಅಷ್ಟು ಬೇಗ ಯಾರನ್ನು ಪ್ರೀತಿಸುವುದಿಲ್ಲ ಆದರೆ ಒಂದು ಬಾರಿ ಪ್ರೀತಿಸಲು ಶುರುಮಾಡಿದರೆ, ಅವಳ ಪ್ರೀತಿಯನ್ನು ಬಿಡಿಸಲು ಸಾಧ್ಯವಿಲ್ಲ. ಇವರ ಪ್ರೀತಿಗೆ ಸರಿಸಾಟಿ ಇರುವುದಿಲ್ಲ, ಇಂತಹ ಪ್ರೀತಿಯ ಗುಣ ಅವರ ಮಕ್ಕಳಿಗೆ ಉಡುಗೊರೆಯಾಗುತ್ತದೆ. ನೀವು ಮಗುವನ್ನು ಹೊಂದಲು ಸೂಕ್ತ ವಯಸ್ಸು ೨೬, ಇದು ವೈಜ್ಞಾನಿಕವಾಗಿಯೂ ಮಗುವನ್ನು ಪಡೆಯಲು ಸೂಕ್ತ ವಯಸ್ಸು. ಮತ್ತು ಈ ಸಮಯದಲ್ಲಿ ದೇಹವು ಕೂಡ ಹೊಂದಿಕೊಳ್ಳುತ್ತದೆ.

 

೭.ಕಟಕ ರಾಶಿ

ನಿಮ್ಮ ಜೀವನ ಪೂರ್ತಿ ನೀವು ಅತ್ಯುತ್ತಮ ತಾಯಿಯಾಗಿರಲು ಬಯಸುವಿರಿ, ಇದನ್ನು ತಾಯಿ ರಾಶಿ ಎಂದು ಕೂಡ ಕರೆಯುವರು. ನೀವು ತುಂಬಾ ಕರುಣೆ, ತಾಳ್ಮೆ ಮತ್ತು ಸಹನೆಯನ್ನು ಹೊಂದಿರುವ ವ್ಯಕ್ತಿಗಳು, ಹಾಗು ನೀವು ನಿಮ್ಮ ಮಗುವಿನ ಅಳುವನ್ನು ನೋಡಲು ಇಷ್ಟ ಪಡುವುದಿಲ್ಲ. ನೀವು ಮಗುವನ್ನು ಪಡೆಯಲು ಸೂಕ್ತ ವಯಸ್ಸು ೨೧. ಕೆಲವರಿಗೆ ಇದು ಚಿಕ್ಕ ವಯಸ್ಸು ಎಂದು ಅನಿಸಬಹುದು ಆದರೆ ನೀವು ತಾಯಿಯಾಗಲು ಬೇಕಾದ ಎಲ್ಲಾ ಅರ್ಹತೆಗಳನ್ನು ಆಗಲೇ ಗಳಿಸಿಕೊಂಡಿರುವಿರಿ.

 

೮.ಸಿಂಹ ರಾಶಿ

ನೀವು ಒಂದು ಹೆಣ್ಣು ಸಿಂಹ ಇದ್ದಂತೆ, ನೀವು ಬಲಿಷ್ಠ ಸ್ವತಂತ್ರ ಮಹಿಳೆ, ನೀವು ನಿಮ್ಮದೇ ಆಗಬೇಕೆಂದು ಕೆಲವೊಮ್ಮೆ ನಡೆದುಕೊಳ್ಳುವುದು ಸಹಜ, ಮತ್ತು ನೀವು ನಿಮ್ಮ ಪತಿಯ ಮೇಲೆ ಮೇಲುಗೈ ಸಾದಿಸಬಹುದು. ನಿಮ್ಮ ಜೊತೆ ನೀವು ಹೆಚ್ಚು ಸಮಯ ಕಳೆಯಲು ಬಯಸುವಿರಿ. ನಿಮಗೆ ಬೇಕಾಗಿರುವುದನ್ನು ನೀವೇ ಮಾಡಿಕೊಳ್ಳುವಿರಿ, ನೀವು ರಾಣಿಯಂತೆ ಕಾಣುವಿರಿ, ನೋಡಲು ಅಲ್ಲದಿದ್ದರೂ ನಿಮ್ಮ ಜೀವನ ಶೈಲಿ ಮತ್ತು ನಡವಳಿಕೆಯಲ್ಲಿ ಹಾಗೆ ಕಾಣಿಸುವಿರಿ. ನೀವು ಗರ್ಭಧರಿಸಲು ಸೂಕ್ತ ವಯಸ್ಸು ೨೭ - ೨೯.

 

೯.ಧನಸ್ಸು ರಾಶಿ

ಧನಸ್ಸು ರಾಶಿಯಾಗಿರುವುದರಿಂದ ನೀವು ಗರ್ಭವಾಸ್ಥೆಯನ್ನು ಭಯಂಕರವಾಗಿ ಕಾಣಬಹುದು, ನೀವು ಹೆಜ್ಜೆಯನ್ನು ಹಿಂದೆ ಹಾಕುವುದಿಲ್ಲ ಆದರೆ, ನನ್ನ ಜೀವನ ಎತ್ತ ಸಾಗುತ್ತಿದೆ ಎಂಬುದನ್ನು ತಿಳಿಯಲು ಪರದಾಡುವಿರಿ ಮತ್ತು ಆಶ್ಚರ್ಯಚಕಿತವಾಗುವಿರಿ. ನಿಮ್ಮ ಜೀವನದಲ್ಲಿ ನೀವು ಏನು ಮಾಡಬೇಕೆಂಬುದನ್ನು ತಿಳಿಯುದರಲ್ಲಿ ಅಥವಾ ನಾನು ಇದನ್ನು ಮಾಡಬೇಕು ಎಂಬುದರ ಬಗ್ಗೆ ಗೊಂದಲವನ್ನು ಹೊಂದಿರುವಿರಿ. ನಿಮ್ಮ ೨೫ನೇ ವಯಸ್ಸಿನಲ್ಲಿ ನೀವು ಮಗುವನ್ನು ಪಡೆಯಲು ಪ್ರಯತ್ನಿಸುವುದು ಒಳ್ಳೆಯದು.

 

೧೦.ಕನ್ಯಾ ರಾಶಿ

ಮಗುವನ್ನು ಪಡೆಯುವ ವಿಷಯ ಬಂದಾಗ ನೀವು ಒತ್ತಡಕ್ಕೆ ಒಳಗಾಗುವಿರಿ ಮತ್ತು ಆತಂಕವನ್ನು ಅನುಭವಿಸುವಿರಿ. ಇವರು ಮೂಲಭೂತವಾಗಿ ಶ್ರಮ ಪಡುವ ವ್ಯಕ್ತಿಗಳು, ಮತ್ತು ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನವನ್ನು ನೀಡುವರು. ಇವರಿಗೆ ಬೇರೆಯವರಂತೆ ಸಾಮಾನ್ಯವಾಗಿ ಮಾತೃತ್ವ ಬರುವುದಿಲ್ಲ, ಆದರೆ ಇವರ ರೀತಿಯಲ್ಲೇ ಇವರು ಉತ್ತಮವಾಗಿ ಅದನ್ನು ಅವರ ತಾಯಿಯ ಅನುಭವ ಮತ್ತು ಸಲಹೆಗಳನ್ನು ಪಡೆದು ಚೆನ್ನಾಗಿ ನಿಭಾಯಿಸುವರು. ಇವರು ಮಗುವನ್ನು ಪಡೆಯಲು ತಮ್ಮ ೨೫ ಅಥವಾ ೨೬ನೇ ವಯಸ್ಸಿನಲ್ಲಿ ಪ್ರಯತ್ನಿಸಬಹುದು. ಇವರು ಸಾಂಪ್ರದಾಯಿಕವನ್ನು ಇಷ್ಟಪಡುವರು.

 

೧೧.ಮಕರ ರಾಶಿ

ಇವರು ಪರಿಶ್ರಮ ಜೀವಿ ಮತ್ತು ಅದರಲ್ಲಿ ಯಶಸ್ವಿಯಾಗುವ ವ್ಯಕ್ತಿಗಳು, ಇವರು ತಾವು ಅಂದುಕೊಂಡಿರುವ ಕೆಲಸ ಎಷ್ಟೇ ಕಠಿಣವಾಗಿದ್ದರು ಅದನ್ನು ಪೂರ್ಣವಾಗಿ ಮಾಡುವವರೆಗೂ ಬಿಡುವುದಿಲ್ಲ, ಅದನ್ನು ಯಶಸ್ವಿಯಾಗಿಸುವಲ್ಲಿ ಇವರು ಯಶಸ್ವಿಯಾಗುವರು. ಮಗುವನ್ನು ಪಡೆಯಲು ಉತ್ತಮ ವಯಸ್ಸು ೨೧. ಏಕೆಂದರೆ ಇವರು ವಿವೇಕವಾಗಿ ಯೋಚಿಸುವ ಸಾಮರ್ಥ್ಯವನ್ನು ಹೊಂದಿರುವರು ಮತ್ತು ತಾಳ್ಮೆ, ಸಹನೆ, ಪ್ರಭುತ್ವವನ್ನು ನೈಸರ್ಗಿಕವಾಗಿ ಪಡೆದಿರುವರು.

 

೧೨.ಮೀನ ರಾಶಿ

ನಿಮ್ಮ ಸ್ವಾತಂತ್ರ್ಯವನ್ನು ಖುಷಿಯಿಂದ, ತಮಾಷೆಯಾಗಿ ಅನುಭವಿಸುವಲ್ಲಿ ನೀವು ನಿರತವಾಗಿರುವಿರಿ, ಮತ್ತು ಮಗುವನ್ನು ಪಡೆಯುವ ಯೋಚನೆಯು ಕೂಡ ನಿಮ್ಮ ತಲೆಯಲ್ಲಿ ಅಷ್ಟು ಬೇಗ ಬಂದಿರುವುದಿಲ್ಲ. ನಿಮ್ಮ ಪತಿಯು ಮಗುವನ್ನು ಪ್ರೀತಿಸುವ ಮೊದಲು ನಿಮ್ಮನ್ನು ರಾಣಿಯಂತೆ ಕಾಣಬೇಕೆಂಬ ಬಯಕೆ ನಿಮ್ಮದಾಗಿರುತ್ತದೆ. ನೀವು ಮಗುವನ್ನು ಪಡೆಯಲು ಸೂಕ್ತ ವಯಸ್ಸು ೨೭, ಅಥವಾ ನಿಮ್ಮ ೨೮ನೇ ವಯಸ್ಸಿನ ಪ್ರಾರಂಭದಲ್ಲಿ ನಿಮ್ಮ ಮನೆಯವರಿಗೆ ಮತ್ತು ಸ್ನೇಹಿತರಿಗೆ ನೀವು ಗರ್ಭಧರಿಸಿರುವ ವಿಷಯವನ್ನು ಖುಷಿಯಿಂದ ಹಂಚಿಕೊಳ್ಳುವಿರಿ. ನಿಮ್ಮ ಮೊದಲ ಮಗುವನ್ನು ಪಡೆದ ಒಂದು ವರ್ಷದ ಬಳಿಕ ನೀವು ಎರಡನೇ ಮಗುವಿನ ಗರ್ಭಾವಸ್ಥೆಯನ್ನು ಖುಷಿಯಿಂದ ಅನುಭವಿಸುವಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon