Link copied!
Sign in / Sign up
29
Shares

ನಿಮ್ಮ ರಾಶಿಯ ಪ್ರಕಾರ ಜನರು ನಿಮ್ಮಲ್ಲಿ ಈ ಗುಣಗಳನ್ನು ಬದಲಿಸಲು ಪ್ರಯತ್ನಿಸುವರು !

ನಾವೇಲ್ಲರೂ ನಮ್ಮದೇ ಆದ ಕೆಲವು ತಪ್ಪು ಅಥವಾ ದುರ್ನಡತೆಯನ್ನು ಹೊಂದಿರುವೆವು, ಕೆಲವು ಕೆಲವರಿಗೆ ತೊಂದರೆ ನೀಡಬಹುದು, ಕೆಲವು ತೊಂದರೆಯಾಗದೆ ಇರಬಹುದು. ಈ ದುರ್ಗುಣಗಳು ನಿಜವಾಗಿಯೂ ನಮ್ಮ ಪ್ರೀತಿಪಾತ್ರರಿಗೆ ಕೆಲವೊಮ್ಮೆ ಚಿಂತೆತರುವಂತೆ ಅಥವಾ ತೊಂದರೆಯನ್ನು ಮಾಡುವುದು ಎಂದು ನಿಮಗೆ ತಿಳಿದಿದೆಯೇ?

ಜನರು ನಿಮ್ಮಲ್ಲಿ ಈ ಗುಣಗಳನ್ನು ಬದಲಿಸಿಕೊಳ್ಳಲು ಬಯಸುವರು

೧.ಮೇಷ ರಾಶಿ

ನಿಮ್ಮ ನಿರೀಕ್ಷೆಗಳು. ಏಕೆಂದರೆ, ನೀವು ಪ್ರಬಲವಾಗಿರುವಿರಿ, ಮಹತ್ವಾಕಾಂಕ್ಷೆ ಮತ್ತು ದೃಢವಾಗಿರುವಿರಿ, ಮತ್ತು ನೀವು ಹೆಚ್ಚಿನ ಮೌಲ್ಯದಲ್ಲಿದ್ದು ಜನರು ಅದನ್ನು ತಲುಪುವುದು ಕಷ್ಟವಾಗಿರುತ್ತದೆ. ನೀವು ನ್ಯಾಯ ಸಮ್ಮತವಾಗಿಲ್ಲ ಎಂದು ಕೆಲವರು ಭಾವಿಸುತ್ತಾರೆ, ಏಕೆಂದರೆ ನಿಮ್ಮ ನಿರೀಕ್ಷೆಯನ್ನು ತಲುಪಲು ತುಂಬಾ ಕಷ್ಟವಾಗಿರುವುದರಿಂದ.

೨.ವೃಷಭ ರಾಶಿ

ನಿಮ್ಮ ಮೊಂಡುತನ. ನಿಮ್ಮ ಮನಸ್ಸಿನಲ್ಲಿ ಒಮ್ಮೆ ನಿರ್ಧಾರ ಮಾಡಿದ ಮೇಲೆ ನೀವು ಬೇರೆಯವರ ಮಾತನ್ನು ಆಲಿಸುವುದಿಲ್ಲ. ಕೆಲವೊಮ್ಮೆ ನಿಮ್ಮ ಸ್ನೇಹಿತರು ನಿಮ್ಮನ್ನು ಅವರ ಸ್ಥಿತಿಗೆ ಹೊಂದಿಕೊಳ್ಳಲು ಬಯಸುವರು ಆದರೆ ನೀವು ನಿಮ್ಮ ಹಠವನ್ನು ಬಿಡದ ಕಾರಣ ಅವರಿಗೆ ಬೇಸರವಾಗುವುದು, ನೀವು ಅವರ ಸಂದರ್ಭಕ್ಕೆ ಕೆಲವೊಮ್ಮೆ ಹೊಂದಿಕೊಳ್ಳಿ, ಅಥವಾ ನಿಮ್ಮ ಮನಸ್ಥಿತಿಯನ್ನು ಅವರಿಗೆ ಅರ್ಥ ಮಾಡಿಸಿ.

೩.ಮಿಥುನ ರಾಶಿ

ನಿಮ್ಮ ಅತಿಯಾದ ಸ್ನೇಹಪರತೆ. ನೀವು ಯಾರಾದರೂ ಮತ್ತು ಎಲ್ಲರ ಜೊತೆ ಸ್ನೇಹವನ್ನು ಮಾಡಿಕೊಳ್ಳುವಿರಿ, ಮತ್ತು ನಿಮ್ಮ ಅಮೂಲ್ಯ ಸಮಯವನ್ನು ಅವರೊಡನೆ ಮಾತನಾಡಲು ಅಥವಾ ಕಾಲ ಕಳೆಯಲು ಶುರುಮಾಡುವಿರಿ ಏಕೆಂದರೆ ನೀವು ಅಪರಿಚಿತರ ಜೊತೆ ಮಾತನಾಡುವುದನ್ನು ದಿಡೀರ್ ಆಗಿ ನಿಲ್ಲಿಸುವಿರಿ, ಇದು ನಿಮ್ಮ ಸ್ನೇಹಿತರು ನಿಮ್ಮ ಜೊತೆ ಹೆಚ್ಚು ಸಮಯ ಕಳೆಯಲು ಇಚ್ಛಿಸಿದರು ಸಿಗುವುದಿಲ್ಲ.

೪.ಕಟಕ ರಾಶಿ

ನಿಮ್ಮ ಮೌನ, ಅಥವಾ ಶಾಂತತೆ. ನೀವು ಎಷ್ಟು ಭಾವನಾತ್ಮಕ ಮತ್ತು ಸೂಕ್ಷ್ಮ ಎಂದು ಎಲ್ಲರಿಗು ಗೊತ್ತು, ಇನ್ನು, ನೀವು ನಿಮಗೆ ಕಾಡಿಸುವ ಅಥವಾ ಚಿಂತೆ ತರಿಸುವ ವಿಷಯವನ್ನು ಹೊರಗಿನ ಪ್ರಪಂಚಕ್ಕೆ ನೀವು ತಿಳಿಸುವುದಿಲ್ಲ. ನಿಮ್ಮ ಭಾವನಾತ್ಮಕ ವಿಷಯಕ್ಕೆ ಬಂದಾಗ ನೀವು ತುಂಬಾ ಖಾಸಗಿತನ ತೋರುವಿರಿ, ಇದರಿಂದ ನಿಮ್ಮ ಬಗ್ಗೆ ನಿಮಗೆ ತುಂಬಾ ಹತ್ತಿರವಾಗಿರುವವರು ಸಹ ತಿಳಿಯಲು ಕಷ್ಟವಾಗುವುದು.

೫.ಸಿಂಹ ರಾಶಿ

ನಿಮ್ಮ ಪ್ರಾಧಾನ್ಯ. ಹೌದು, ಜನರನ್ನು ಮುಂದೆ ನಡೆಸುವುದು ಹೇಗೆ ಎಂಬುದು ನಿಮಗೆ ತಿಳಿದಿದೆ, ಮತ್ತು ಬೇರೆಯವರಿಗಿಂತ ಅದನ್ನು ನೀವು ಉತ್ತಮವಾಗಿ ಮಾಡುತ್ತಿರುವಿರಿ, ಆದರೆ ಕೆಲವೊಮ್ಮೆ ನೀವು ಅದನ್ನು ಬೇರೆಯವರಿಗೆ ಅಸಮರ್ಪಕ ಆಗುವ ರೀತಿಯಲ್ಲಿ ತೋರಿಸಬಹುದು.

೬.ಕನ್ಯಾ ರಾಶಿ

ನಿಮ್ಮ ಉದಾಸೀನತೆ ಅಥವಾ ತಾತ್ಸಾರ. ನೀವು ಮಂಜುಗಡ್ಡೆಯ ರೀತಿಯಲ್ಲಿ ಕರುಗುವಿರಿ, ಆದರೆ ಕೆಲವೊಮ್ಮೆ ಅವರ ಬಗ್ಗೆ ಗಮನ ನೀಡುವುದಿಲ್ಲ, ಇದು ಅವರಲ್ಲಿ ನೀವು ನಮ್ಮ ಬಗ್ಗೆ ಒಲವು ತೋರುವುದಿಲ್ಲ ಅಥವಾ ನಮ್ಮನ್ನು ಕಂಡರೆ ನಿನಗೆ ಇಷ್ಟವಿಲ್ಲ ಎಂಬ ಭಾವನೆ ಬರುವಂತೆ ಮಾಡುತ್ತದೆ. ಅದು ಅವರ ಬಗ್ಗೆ ನೀವು ಹೆಚ್ಚು ಒಲವನ್ನು ತೋರಿದರು ಸಹ.

೭.ತುಲಾ ರಾಶಿ

ನಿಮ್ಮ ರಾಜತಾಂತ್ರಿಕತೆ. ನೀವು ಅತಿ ರಾಜತಂತ್ರ ಮತ್ತು ರಾಜಕೀಯವಾಗಿ ಸರಿಯಾಗಿರುವಿರಿ, ಆದರೆ ಇದು ಕೆಲವರಲ್ಲಿ ಕೆಲವೊಮ್ಮೆ ನೀವು ಎಷ್ಟು ಪ್ರಾಮಾಣಿಕ ಎಂಬ ಪ್ರಶ್ನೆಯನ್ನು ಮೂಡುವಂತೆ ಮಾಡುವುದು. ನೀವು ಯಾವಾಗಲು ಸರಿಯಾದ ನಿರ್ಣಯವನ್ನು ಸರಿಯಾದ ಸಮಯಕ್ಕೆ ಹೇಳುವಿರಿ, ಇದು ಹಲವರಲ್ಲಿ ಇವರಿಂದ ಇದು ಹೇಗೆ ಸಾಧ್ಯ ಎಂದು ಅಚ್ಚರಿ ಮೂಡಿಸಬಹುದು.

೮.ವೃಶ್ಚಿಕ ರಾಶಿ

ನಿಮ್ಮ ಅಹಂಕಾರ. ನೀವು ಚತುರರು ಮತ್ತು ವರ್ಚಸ್ವಿಗಳು ಮತ್ತು ಅದು ನಿಮಗೆ ಗೊತ್ತು, ಮತ್ತು ಕೆಲವೊಮ್ಮೆ ನಿಮಗೆ ತಿಳಿದಿರುವ ಸತ್ಯವನ್ನು ನೀವು ಬಚ್ಚಿಡುವುದಿಲ್ಲ, ಇದು ನನಗೆ ಮಾತ್ರ ಎಲ್ಲ ಗೊತ್ತು ನಾನೆ ಶ್ರೇಷ್ಠ ಎಂಬ ಭಾವನೆ ಬೇರೆಯವರಲ್ಲಿ ಬರುವಂತೆ ಮಾಡುತ್ತದೆ.

೯.ಧನಸ್ಸು ರಾಶಿ

ನಿಮ್ಮ ಅಜಾಗರೂಕತೆ. ನೀವು ಬೇಗನೆ ಜನರನ್ನು ನಂಬುವಿರಿ. ತಿದ್ದುಪಡಿ: ನೀವು ಅಪರಿಚಿತರನ್ನು ಸುಲಭವಾಗಿ ನಂಬುವಿರಿ. ಅಪರಿಚಿತರು ನಿಮ್ಮ ಜೊತೆ ನಂಬಿಕೆ ಇರುವವರಂತೆ ಮಾತನಾಡಿದರೆ ನೀವು ನಿಮ್ಮ ರಹಸ್ಯಗಳನ್ನು ಅವರ ಬಳಿ ಹೇಳುಬಿಡುವಿರಿ, ಅದು ಅವರು ಸತ್ಯ ಹೇಳುತ್ತಿರುವಂತೆ ನಟಿಸುತ್ತಿದ್ದರು ಸಹ. ಏಕೆಂದರೆ ನೀವು ಮೋಸದ ವ್ಯಕ್ತಿಗಳನ್ನು ನಂಬಿರುವಿರಿ.

೧೦.ಮಕರ ರಾಶಿ

ನಿಮ್ಮ ಸ್ವಾರ್ಥತೆ. ನಿಮಗೆ ಗೊತ್ತು ನಿಮಗೆ ಏನು ಬೇಕು ಮತ್ತು ಅದನ್ನು ಹೇಗೆ ಪಡೆಯಬೇಕು ಎಂಬುದು ಮತ್ತು ನಿಮ್ಮನ್ನು ಮೊದಲಿಗರಾಗಿ ಮಾಡಿಕೊಳ್ಳುವುದು ಹೇಗೆ ಎಂಬುದು ನಿಮಗೆ ತಿಳಿದಿದೆ. ಕೆಲವೊಮ್ಮೆ ನಿಮ್ಮ ಸ್ನೇಹಿತರು ಅಥವಾ ಬಂದುಗಳು ನೀವು ಹೊಂದಾಣಿಕೆ ಮಾಡಿಕೊಳ್ಳಲು ಅದರಲ್ಲೂ ನಿಮ್ಮ ದಾರಿಯಲ್ಲಿ ಇರುವುದನ್ನು ರಾಜಿ ಮಾಡಿಕೊಳ್ಳಲು ಬಯಸುವರು.

೧೧.ಕುಂಭ ರಾಶಿ

ನಿಮ್ಮ ಚಿತ್ತಸ್ಥಿತಿ(ಮೂಡಿ). ನೀವು ಕ್ಷಣಗಳಲ್ಲಿ ನಗುತ್ತಿರುವ ಮುಖದಿಂದ ಮುಖ ಗಂಟು ಹಾಕಿಕೊಳ್ಳುವ ರೀತಿಗೆ ಬದಲಾಗುವಿರಿ, ಇದು ನಿಮ್ಮ ಸುತ್ತಲು ಇರುವ ಜನರಿಗೆ ಆಶ್ಚರ್ಯ ಮತ್ತು ಭಯವನ್ನು ಉಂಟುಮಾಡುವುದು ನಾನೇನಾದರೂ ಇವರಿಗೆ ಹಾನಿಯಾಗುವ ಅಥವಾ ಬೇಸರ ಆಗುವ ವಿಷಯವನ್ನು ಮಾಡಿದನೇ ಎಂದು. ನಿಮ್ಮ ಮುಖದ ಭಾವನೆ ಕೆಲವೊಮ್ಮೆ ನಿಮ್ಮ ಸುತ್ತಲಿರುವ ಜನರಿಗೆ ಅಹಿತಕರ ಆಗುವಂತೆ ಮಾಡುತ್ತದೆ.

೧೨.ಮೀನ ರಾಶಿ

ನಿಮ್ಮ ನಯವಾದಿಕೆ(ಮೈಗಳ್ಳತನ). ನೀವು ನಾನು ಮಾಡುವೆ ಅಥವಾ ಸಿದ್ದ ಇರುವೆ ಎಂದಾಗ ನಿಮ್ಮ ಸ್ನೇಹಿತರು ತಮ್ಮ ಎಲ್ಲಾ ಯೋಜನೆಗಳನ್ನು ಬಿಟ್ಟು ಸಮಯ ಎಣಿಸದೆ ನಿಮಗಾಗಿ ತಯಾರಗುವರು ಮತ್ತು  ನೀವು ಕೊನೆಯ ಕ್ಷಣದಲ್ಲಿ ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದು. ನೀವು ವಿಷಯಗಳಿಗೆ ಬದ್ಧರಾಗುವುದು ಮತ್ತು ಕೊನೆಯ ಕ್ಷಣಗಳಲ್ಲಿ ಅಥವಾ ಅದನ್ನು ಮಾಡಬೇಕಾದಾಗ ಅದನ್ನು ಮಾಡದೇ ನಿಮ್ಮ ಮನಸ್ಸನ್ನು ಬದಲಿಸಿಕೊಳ್ಳುವುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon