Link copied!
Sign in / Sign up
13
Shares

ನಿಮ್ಮ ರಾಶಿ ನಿಮ್ಮ ಹವ್ಯಾಸಗಳ ಬಗ್ಗೆ ತಿಳಿಸುತ್ತದೆ!

ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಆದ ಹವ್ಯಾಸ ಇರುವುದು ಸಹಜ, ಅದು ಒಳ್ಳೆಯದು ಅಥವಾ ಕೆಟ್ಟ ಹವ್ಯಾಸ ಆಗಿರಬಹುದು. ಪ್ರತಿಯೊಬ್ಬರಿಗೂ ಹವ್ಯಾಸ ಇರುವುದು ಸಹಜ.

ನಿಮಗೂ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವೆಲ್ಲಾ ಹವ್ಯಾಸಗಳು ನಿಮ್ಮಲ್ಲಿ ಅಡಗಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ.

 

೧.ಮೇಷ

ಇವರು ಆತುರರು, ತಾನು ಹೇಳಿದ್ದು ಆಗ ಬೇಕು ಅದು ಹೇಳಿದ ತಕ್ಷಣ ಆಗಬೇಕು ಎನ್ನುವ ಮನಸ್ಥಿತಿಯವರು ಇವರು. ಅದು ಯಾವುದೇ ವಿಷಯ ಇರಲಿ ಅಥವಾ ಸಮಸ್ಯೆಗೆ ಪರಿಹಾರ ಇರಲಿ ಇವರು ಬೇಗನೆ ಪರಿಹಾರ ಕಂಡುಕೊಳ್ಳಲು ಬಯಸುವರು. ಇವರ ಆತುರದ ಬುದ್ದಿ ಕೆಲವೊಮ್ಮೆ ಸಮಸ್ಯೆಗೆ ದಾರಿಯಾಗುತ್ತದೆ.


೨.ವೃಷಭ


ಈ ರಾಶಿಯವರು ಊಟ, ತಿಂಡಿ ಅಥವಾ ಆಹಾರವನ್ನು ಸೇವಿಸುವ ಪರಿಯಲ್ಲಿ ನಿಯಂತ್ರಣವನ್ನು ಹೊಂದಿರುವುದಿಲ್ಲ. ಇವರಿಗೆ ತಿನ್ನುವುದು ಏನೋ ಖುಷಿ ನೀಡುತ್ತದೆ, ಆದರೆ ಇದರಿಂದ ಅವರ ಆರೋಗ್ಯದಲ್ಲಿ ಅಸಮತೋಲನವನ್ನು ಎದುರಿಸಬೇಕಾದೀತು. ಇವರು ವಿಶೇಷ ತಿಂಡಿಯನ್ನು ಸೇವಿಸುವುದರಲ್ಲಿ ಖುಷಿಯನ್ನು ಹೊಂದಿರುತ್ತಾರೆ.


೩.ಮಿಥುನ

ಈ ರಾಶಿಯವರಿಗೆ ಜ್ಞಾನದ ದಾಹ ಹೆಚ್ಚಾಗಿರುತ್ತದೆ ಎನ್ನಬಹುದು. ಇವರು ಪ್ರಪಂಚದಲ್ಲಿರುವ ವಿಚಾರವನ್ನು ತಿಳಿದುಕೊಳ್ಳುವುದು ಹಾಗೂ ಅದರಲ್ಲಿ ಹೊಸ ಪ್ರಪಂಚವನ್ನೇ ಕಾಣುವುದರ ಮೂಲಕ ಸಂತೋಷ ವ್ಯಕ್ತಪಡಿಸುತ್ತಾರೆ. ಇವರು ದಿನದಿಂದ ದಿನಕ್ಕೆ ಹೊಸ ವಿಚಾರವನ್ನು ತಿಳಿದುಕೊಳ್ಳುವುದು ಹಾಗೂ ಅದನ್ನು ಆನಂದಿಸುವುದರಲ್ಲಿಯೇ ಹೆಚ್ಚಿನ ಖುಷಿಯನ್ನು ಪಡುತ್ತಾರೆ.


೪.ಕಟಕ

ಇವರು ಎಲ್ಲಾ ವಿಚಾರಕ್ಕೂ ಅತಿಯಾದ ಚಿಂತನೆ ನಡೆಸುತ್ತಾರೆ. ಕೆಲವೊಮ್ಮೆ ಚಿಕ್ಕ ಪುಟ್ಟ ವಿಚಾರಕ್ಕೂ ಅತಿಯಾಗಿ ಚಿಂತಿಸಿದರೆ ಅದು ಅವರ ಅನಾರೋಗ್ಯಕ್ಕೂ ಕಾರಣವಾಗಬಹುದು. ಕೆಲವು ಕ್ಲಿಷ್ಟಕರವಾದ ಸಮಯದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ನಡೆಸುವ ಅತಿಯಾದ ಚಿಂತನೆ ಸಕಾರಾತ್ಮಕ ಪರಿಹಾರವನ್ನು ನೀಡಬಹುದು. ಆದರೆ ಇಲ್ಲ ಸಲ್ಲದ ವಿಷಚಾರಗಳಿಗೆ ಅತಿಯಾದ ಚಿಂತನೆಯ ಅಗತ್ಯವಿರುವುದಿಲ್ಲ ಎನ್ನುವುದನ್ನು ಅರಿಯಬೇಕು.


೫.ಸಿಂಹ

ಈ ರಾಶಿಯವರು ಅತಿಯಾದ ಸ್ವಾಭಿಮಾನವನ್ನು ಹೊಂದಿರುತ್ತಾರೆ. ತಾನೇ ಶ್ರೇಷ್ಠ ಹಾಗೂ ತನ್ನಿಂದಲೇ ಪ್ರಪಂಚ ನಡೆಯುತ್ತದೆ ಎನ್ನುವಂತಹ ಅತಿರೇಕವಾದ ಸ್ವಾಭಿಮಾನವನ್ನೂ ಸಹ ಹೊಂದಿರುವ ಸಾಧ್ಯತೆಗಳಿವೆ. ಕೆಲವೊಮ್ಮೆ ಇವರ ಈ ಗುಣವೇ ಇವರಿಗೆ ನಕಾರಾತ್ಮಕ ವರ್ತನೆಯನ್ನುಂಟುಮಾಡುವ ಸಾಧ್ಯತೆಗಳಿವೆ.


೬.ಕನ್ಯಾ

ಈ ರಾಶಿಯವರು ಅತ್ಯಂತ ಶುಚಿತ್ವದಲ್ಲಿ ಇರುವಂತೆ ಬಯಸುತ್ತಾರೆ. ಪ್ರತಿಯೊಂದು ವಿಷಯದಲ್ಲೂ ಅಚ್ಚುಕಟ್ಟನ್ನು ಬಯಸುತ್ತಾರೆ. ಇವರು ತಾವು ಇರುವ ಪ್ರದೇಶವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವರು. ಇವರ ಈ ಸ್ವಚ್ಛತೆಯ ಗುಣವು ಕೆಲವೊಮ್ಮೆ ಗೀಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳಿವೆ.


೭.ತುಲಾ

ಇವರು ವಸ್ತುಗಳನ್ನು ಖರೀದಿಸುವುದು ಹಾಗೂ ಹೆಚ್ಚಿನ ಸಮಯವನ್ನು ಶಾಪಿಂಗ್ ಮಾಡುವುದಕ್ಕಾಗಿಯೇ ಮೀಸಲಿಡುತ್ತಾರೆ. ಹಾಗಾಗಿ ಇವರನ್ನು ಖರೀದಿ ಮಾಡುವುದರಲ್ಲಿ ನಿಸ್ಸೀಮರು ಎಂದು ಪ್ರಸಿದ್ಧಿ ಪಡೆದಿರುತ್ತಾರೆ. ಕೆಲವೊಮ್ಮೆ ಇವರಿಗೆ ಇಷ್ಟವಾದ ವಸ್ತುಗಳನ್ನು ಖರೀದಿಸುವ ಹುರುಪಲ್ಲಿ ಕೈಯಲ್ಲಿ ಇರುವ ಹಣ ಖರ್ಚಾಗಿರುವ ಪರಿವೂ ಇರುವುದಿಲ್ಲ ಎಂದು ಹೇಳಬಹುದು.


೮.ವೃಶ್ಚಿಕ

ಇವರನ್ನು ಭಾವೋದ್ರಿಕ್ತ ವ್ಯಕ್ತಿಗಳು ಎನ್ನಬಹುದು. ಇವರು ಭೌತಿಕ ಸಂಪರ್ಕವನ್ನು ಹೊಂದಲು ಇಚ್ಛಿಸುತ್ತಾರೆ. ಇವರು ಲೈಂಗಿಕ ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ರಸಿಕ ಮನೋಭಾವದವರಾದ ಇವರು ಡೇಟಿಂಗ್ ಹೋಗುವುದು ಹಾಗೂ ವಿರುದ್ಧ ಲಿಂಗದವರೊಡನೆ ಸಮಯ ಕಳೆಯಲು ಬಯಸುತ್ತಾರೆ.


೯.ಧನಸ್ಸು

ಈ ರಾಶಿಯವರು ಧೈರ್ಯಶಾಲಿಯವರಾಗಿರುತ್ತಾರೆ. ಇದರಿಂದಾಗಿಯೇ ಜೀವನದಲ್ಲಿ ಕೆಲವೊಮ್ಮೆ ಒಳ್ಳೆಯ ತಿರುವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಆದರೆ ಇವರಲ್ಲಿ ಜೂಜಾಟ ಆಡುವಂತಹ ಕೆಟ್ಟ ಹವ್ಯಾಸಗಳಿರುತ್ತದೆ. ಇವರಲ್ಲಿ ಈ ಗುಣ ಮಿತಿಯಲ್ಲಿದ್ದರೆ ಅಂತಹ ಅಪಾಯವನ್ನು ಸೃಷ್ಟಿಸದೆ ಇರಬಹುದು. ಆದರೆ ಮಿತಿ ಮೀರಿದ ಜೂಜಾಟ ಹೆಚ್ಚಿನ ಅಪಾಯವನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.


೧೦.ಮಕರ

ಮಕರ ರಾಶಿಯವರು ಉತ್ಪಾದಕ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತಮ್ಮ ಪಾಲಿಗೆ ಬಂದ ಕೆಲಸವನ್ನು ಸಂಪೂರ್ಣವಾಗಿ ಮುಗಿಸುವವರೆಗೆ ಬಿಡುವುದಿಲ್ಲ. ಈ ಬಗೆಯ ಪ್ರವೃತ್ತಿ ಕೆಲವೊಮ್ಮೆ ಉಜ್ವಲ ಭವಿಷ್ಯವನ್ನು ಸೃಷ್ಟಿಸಬಹುದು. ಆದರೆ ಕೆಲವೊಮ್ಮೆ ಅದೇ ಅವರ ವಿಪತ್ತಿಗೆ ಕಾರಣವಾಗಬಹುದು.

 

೧೧.ಕುಂಭ

ಇವರು ಆಯಾಸ ಗೊಂಡಾಗ, ಬೇಸರವುಂಟಾದಾಗ ಅಥವಾ ಸ್ನೇಹಿತರೊಂದಿಗೆ ಸೇರಿರುವಾಗ ಕುಡಿಯುವುದನ್ನು ಬಯಸುತ್ತಾರೆ ಅಥವಾ ಸ್ನೇಹಿತರೊಡನೆ ಕಾಲ ಕಳೆಯಲು ಬಯಸುವರು. ಕೆಂಪು ವೈನ್‍ಗಳಂತಹ ಪಾನಿಯವನ್ನು ಹೆಚ್ಚು ಮೆಚ್ಚಿಕೊಳ್ಳುತ್ತಾರೆ. ಇದು ಅವರ ಮಿತಿ ಮೀರಿದಾಗ ಸುಧಾರಣೆ ಕಾಣದಂತಹ ಚಟವಾಗಿ ತಿರುಗುವ ಸಾಧ್ಯತೆಗಳಿವೆ.


೧೨.ಮೀನ

ಇವರು ಚಂಚಲ ಮನಸ್ಸಿನವರು, ಇವರ ಮನಸ್ಸು ಬದಲಾಗುವ ಹಾಗೆ ಹವ್ಯಾಸಗಳನ್ನು ಬದಲಿಸುವರು. ಕೆಲವೊಮ್ಮೆ ಪ್ರಯಾಣವನ್ನು ಬಯಸಿದರೆ ಕೆಲವೊಮ್ಮೆ ಮನೆಯಲ್ಲಿ ನಿದ್ರೆ ಮಾಡುವುದನ್ನು ಇಷ್ಟ ಪಡುವರು. ಇವರು ಹೆಚ್ಚು ಪ್ರಯಾಣವನ್ನು ಬಯಸುವರು ಆದರೆ ಇವರ ನಿದ್ರೆಗೆ ತೊಂದರೆ ಆದರೆ ಇವರಿಗೆ ತಲೆ ನೋವು ಕಾಣಿಸಿಕೊಳ್ಳುವುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon