Link copied!
Sign in / Sign up
0
Shares

ಒಂದು "ಪವಾಡ" ಶಿಶು ತನ್ನ ದೇಹದಲ್ಲಿ ರಕ್ತಕ್ಕಿಂತ ಹೆಚ್ಚು ನೀರು ತುಂಬಿದ್ದರೂ ಬದುಕುಳಿದಿದೆ..


ಯಾವುದು ಆ ಮಗು?

ಹೌದು ಆ ಮಗುವಿನ ಹೆಸರು ಫ್ರಾಂಕಿ, ಮಗು ಫ್ರಾಂಕಿ ತಾಯಿಯ ಹೊಟ್ಟೆಯಲ್ಲಿರುವಾಗ, ತಾಯಿಯು ಡಾಕ್ಟರ್ ಬಳಿ ಪರೀಕ್ಷೆಗೆಂದು ಹೋಗುವಳು, ಆಗ ಅವಳನ್ನು ಪರೀಕ್ಷಿಸಿದ ವೈದ್ಯರು ಹೊಟ್ಟೆಯೊಳಗಿದ್ದ ಮಗು ಚಲಿಸುತ್ತಿಲ್ಲವೆಂದು ತಿಳಿಸಿದರು ನಂತರ ಅಪಾಯವನ್ನರಿತ ವೈದ್ಯರು ತಕ್ಷಣ ಆಪರೇಷನ್ ಮೂಲಕ ಮಗುವನ್ನು ಹೊರತೆಗೆಯಲು ನಿರ್ಧರಿಸಿದರು. ಆಪರೇಷನ್ ಮಾಡಿದಮೇಲೆ ವೈದ್ಯರಿಗೆ ಗಾಬರಿಯಾಯಿತು, ಕಾರಣ ಹೊಟ್ಟೆಯಲ್ಲಿದ್ದ ಮಗುವಿನ ದೇಹದಲ್ಲಿ ಬರಿ 35ml ರಕ್ತವಿತ್ತು, ಅಂದರೆ 2 ಚಮಚದಷ್ಟು ರಕ್ತ ಮಾತ್ರ ಆ ಮಗುವಿನ ದೇಹದಲ್ಲಿತ್ತು. ಅಂದರೆ ಆ ಮಗುವಿನ ದೇಹದಲ್ಲಿ ರಕ್ತಕ್ಕಿಂತ ಹೆಚ್ಚು ನೀರೇ ತುಂಬಿತ್ತು. ಇದನ್ನು ವೈದ್ಯರು ಅವರ ತಂದೆ ತಾಯಿಗೆ ತಿಳಿಸಿದಕೂಡಲೇ ಮಗು ಬದುಕುವುದಿಲ್ಲವೆಂದು ಎಲ್ಲರೂ ತಿಳಿದಿದ್ದರು, ಆದರೆ ಆ ಮಗು ತುಂಬ ಅದೃಷ್ಟ ಶಾಲಿ, ಆ ಮಗು ವೈದ್ಯರ ಚಿಕಿಸ್ಥೆಯಿಂದ ಪವಾಡ ರೀತಿಯಲ್ಲಿ ಬದುಕುಳಿದಿದೆ. ಮತ್ತು ಈಗ ತನ್ನ ಮೊದಲನೇ ವರ್ಷದ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದೆ.

ಮಗುವನ್ನು ನೋಡಿದ ತಂದೆ ತಾಯಿಗೆ ಈ ಘಟನೆಯನ್ನು ನಂಬಲು ಸಾಧ್ಯವಿಲ್ಲ, ತಮ್ಮ ಮುಂದೆ ಓಡಾಡುವ ಮತ್ತು ಆಡುವಾಗ ಮಗುವನ್ನು ನೋಡಿದರೆ ನಾವೇ ಜಗತ್ತಿನಲ್ಲಿ ಅದೃಷ್ಟವಂತರು ಎಂದು ಮಗುವಿನ ಪೋಷಕರು ಹೇಳುತ್ತಾರೆ. ಏನೇ ಆಗಲಿ ಇದು ವೈದ್ಯಕೀಯ ಜಗತ್ತಿನಲ್ಲಿ ಅಚ್ಚರಿಯ ಸಂಗತಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon