Link copied!
Sign in / Sign up
29
Shares

ರಾಗಿ ಇಂದ ಮಾಡಬಹುದಾದ ಆರೋಗ್ಯಕರ ತಿನಿಸುಗಳು

ರಾಗಿ ತಿಂದವನು ನಿರೋಗಿ, ಎಂಬ ನಾಣ್ನುಡಿಯನ್ನು ತಿಳಿಯದವರಿಲ್ಲ. ಇತ್ತೀಚಿನ ದಿನಗಳ್ಳಲ್ಲಿ ಮಧುಮೇಹ ರೋಗಕ್ಕೆ ರಾಮಬಾಣ ಎಂದೇ  ಪ್ರಖ್ಯಾತಿ ಪಡೆದಿದೆ, ನಮ್ಮ ರಾಜ್ಯದ ಈ ಧಾನ್ಯ. ಅತೀ ಹೆಚ್ಚಿನ ನಾರಿನಂಶವನ್ನು ಹೊಂದಿರುವ ರಾಗಿಯನ್ನು ಸಂಸ್ಕರಿಸಿದರೆ, ಯಾವುದೇ ರೀತಿಯ ಪೋಷಕಾಂಶಗಳ್ಳನ್ನು ಕಳೆದುಕೊಳ್ಳದೆ, ದೇಹಕ್ಕೆ ಪೂರ್ಣಪ್ರಮಾಣದ ಪೋಷಣೆಯನ್ನು ನೀಡುತ್ತದೆ. ಇದರ ಚರಿತ್ರೆಯನ್ನು ನಾವು ಆಫ್ರಿಕಾ ಖಂಡದಿಂದ ಕಾಣಬಹುದು. ರಾಗಿಯನ್ನು ಬೆಳೆಯಲು ಫಲವತ್ತಾದ ಭೂಮಿ, ಮಣ್ಣು, ವಾತವರಣ ಕರ್ನಾಟಕ ರಾಜ್ಯದಲ್ಲಿ ಕಂಡು ಬರುವುದರಿಂದ, ಇದನ್ನು ಇಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಇದರ ಇನ್ಸುಲಿನ್ ವಿರೋಧಿ ಗುಣದಿಂದ, ದೇಶ ವಿದೇಶಗಳ್ಳಲ್ಲಿ ರಾಗಿಯ ಬೇಡಿಕೆ ಹೆಚ್ಚಾಗಿದೆ. ನೂರಕ್ಕೂ ಹೆಚ್ಚಿನ ಅಧ್ಯಯನಗಳು, ರಾಗಿಯಿಂದಾಗುವ ಪ್ರಯೋಜನಗಳ ಮೇಲೆ ನಡೆದಿದೆ. ಹಾಗಾದರೆ ಬನ್ನಿ, ರಾಗಿಯಿಂದ ತಯಾರಾಗುವ ಹಲವಾರು ಪಾಕಾವಿಧಾನವನ್ನು ತಿಳಿಯೋಣ.

೧.ರಾಗಿ ದೋಸೆ

ಬೇಕಾಗುವ ಸಾಮಗ್ರಿಗಳು

೧. ರಾಗಿ ಹಿಟ್ಟು

೨. ಆಲಿವ್ ಎಣ್ಣೆ

೩. ಕೊತ್ತಂಬರಿ ಸೊಪ್ಪು.

೪. ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ

೫. ಹೆಚ್ಚಿದ ಹಸಿ ಮೆಣಸಿನ ಕಾಯಿ.

೬. ಖಾರದ ಪುಡಿ.

ಮಾಡುವ ವಿಧಾನ

ರಾಗಿ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ನೀರನ್ನು ಹಾಕುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

ಕಲಸಿದ ಹಿಟ್ಟಿಗೆ, ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

ಖಾರವನ್ನು ಇಷ್ಟ ಪಡುವವರು ಸ್ವಲ್ಪ ಖಾರದ ಪುಡಿಯನ್ನು ಬೇಕಾದರೆ ಹಾಕಬಹುದು. ಯಾವುದೇ ರೀತಿಯ ಗಾಳಿಯ ಗುಳ್ಳೆಗಳು ಹಿಟ್ಟಿನೊಳಗೆ ಇಲ್ಲದ ಹಾಗೆ ಮಿಶ್ರಣ ಮಾಡಿ.

ಕಾದ ತವಕ್ಕೆ ಆಲಿವ್ ಎಣ್ಣೆಯನ್ನು ಹಾಕಿ, ದೋಸೆಯ ಆಕಾರದಲ್ಲಿ ಹಿಟ್ಟನ್ನು ತವಾದ ಮೇಲೆ ಹಾಕಿ.

ಸ್ವಲ್ಪ ಸಮಯ ಬೇಯಲು ಬಿಡಿ, ನಂತರ ಎಣ್ಣೆ ಸವರಿ ದೋಸೆಯನ್ನು ತಿರುವಿ ಹಾಕಿ, ಎರಡೂ ಕಡೆ ಸಮನಾಗಿ ಕಂದು ಬಣ್ಣಕ್ಕೆ ತಿರುಗುವವರೆಗೂ ೩೦-೪೦ ಸೆಕೆಂಡುಗಳು ಬೇಯಿಸಿ.

ಇದನ್ನು ತೆಂಗಿನಕಾಯಿ, ಕಡ್ಲೆ ಚಟ್ನಿಯೊಂದಿಗೆ ಬೆಳಗಿನ ಉಪಹಾರಕ್ಕೆ ಸೇವಿಸಬಹುದು.

ಆರೋಗ್ಯದ ಪ್ರಯೋಜನಗಳು

ಮಧುಮೇಹಿಗಳಿಗೆ ಶಕ್ತಿಯನ್ನು ನೀಡುವ ಮೂಲಕ, ಕಾರ್ಬೋಹೈಡ್ರೇಟ್ ಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಇದು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

೨. ರಾಗಿ ಇಡ್ಲಿ

ಬೇಕಾಗಿರುವ ಸಾಮಗ್ರಿಗಳು

ರಾಗಿ ಹಿಟ್ಟು

ಮಾಡುವ ವಿಧಾನ

ಒಂದು ಪಾತ್ರೆಗೆ ರಾಗಿ ಹಿಟ್ಟನ್ನು ತೆಗೆದುಕೊಳ್ಳಿ, ಸ್ವಲ್ಪ ನೀರನ್ನು ಮಿಶ್ರಣ ಮಾಡಿ, ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿಕೊಳ್ಳಿ.

ಇಡ್ಲಿ ಮಾಡುವ ಪಾತ್ರೆಯನ್ನು ತೆಗೆದುಕೊಂಡು ಸ್ವಲ್ಪ ತುಪ್ಪವನ್ನು ಸವರಿ, ಹಿಟ್ಟನ್ನು ಇಡ್ಲಿ ಬಟ್ಟಲಿನೊಳಗೆ ಹಾಕಿ.

೧೦-೧೧ ನಿಮಿಷ ನೀರಿನ ಹವೆಯಲ್ಲಿ ಬೇಯಿಸಿ. ನಂತರ ಇಡ್ಲಿಯನ್ನು ಒಂದೊಂದಾಗೆ ಚಮಚದಿಂದ ತೆಗೆದು ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸಿ.

೩. ರಾಗಿ ಬಾಳೆಹಣ್ಣಿನ ದೋಸೆ

ಬೇಕಾಗುವ ಸಾಮಗ್ರಿಗಳು

೧. ರಾಗಿ ಹಿಟ್ಟು

೨. ಬಾಳೆಹಣ್ಣು

೩. ಸಕ್ಕರೆ.

೪. ೧ ಮೊಟ್ಟೆಯ ಬಿಳಿ ಭಾಗ.

೫. ೧/೪ ಬಟ್ಟಲು ಮೈದಾಹಿಟ್ಟು.

ಮಾಡುವ ವಿಧಾನ

ಮೇಲೆ ಹೇಳಿರುವ ಸಾಮಗ್ರಿಗಳ್ಳನ್ನು ಒಂದು ಪಾತ್ರೆಯಲ್ಲಿ ಹಾಕಿ ದೋಸೆಯ ಹದಕ್ಕೆ ಮಿಶ್ರಣ ಮಾಡಿ.

ಬಿಸಿಯಾದ ಹಂಚಿನ ಮೇಲೆ ದೊಸೆಯಾಕಾರದ್ದಲ್ಲಿ ಹಿಟ್ಟನ್ನು ಹಾಕಿ, ಆಲಿವ್ ಎಣ್ಣೆಯನ್ನು ದೋಸೆಯ ಮೇಲೆ ಸವರಿ. ದೋಸೆಯು ಕಂದು ಬಣ್ಣಕ್ಕೆ ತಿರುಗುವವರೆಗೂ ಸಾಧಾರಣ ಉರಿಯಲ್ಲಿ ಬೇಯಿಸಿ.

ನಂತರ ಅದರ ಇನ್ನೊಂದು ಬದಿಯನ್ನು ೩೦ ಸೆಕೆಂಡುಗಳ ಕಾಲ ಬೇಯಿಸಿ.

ಇದನ್ನು ಮೇಪಲ್ ಸಿರಪ್ ಹಾಗು ಬೆಣ್ಣೆಯೊಂದಿಗೆ ಸೇವಿಸಿ.

ಆರೋಗ್ಯದ ಪ್ರಯೋಜನಗಳು

ರಾಗಿಯಲ್ಲಿ ಅತೀ ಹೆಚ್ಚಿನ ಅಂಶದ ಕ್ಯಾಲ್ಸಿಯಂ ಇರುವುದರಿಂದ, ಇದು ನಿಮ್ಮ ಮಕ್ಕಳ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

೪.ರಾಗಿ ಧೋಕ್ಲಾ

ಬೇಕಾಗುವ ಸಾಮಗ್ರಿಗಳು

೧. ೧.೫ ಬಟ್ಟಲಿನಷ್ಟು ರಾಗಿ ಹಿಟ್ಟು.

೨. ೧.೫ ಬಟ್ಟಲಿನಷ್ಟು ಕಡ್ಲೆ ಹಿಟ್ಟು.

೩. ೧ ಚಮಚ ಆಲಿವ್ ಎಣ್ಣೆ.

೪. ೩/೪ ಚಮಚದಷ್ಟು ಅರಿಶಿನ ಪುಡಿ.

೫. ೧ ಚಮಚ ಸಕ್ಕರೆ.

೬. ೩/೪ ಚಮಚ ಖಾರದ ಪುಡಿ.

೭. ೨ ಚಿಟಿಕೆ ಹಿಂಗು.

೮. ೩ ಸಣ್ಣಗೆ ಹೆಚ್ಚಿದ ಹಸಿ ಮೆಣಸು.

೯. ೦.೫ ಬಟ್ಟಲಿನಷ್ಟು ಮೊಸರು

ಮಾಡುವ ವಿಧಾನ

ಮೇಲೆ ಹೇಳಿರುವ ಸಾಮಗ್ರಿಗಳ್ಳನ್ನು ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ(ಅರಿಶಿನ ಹಾಗು ಹಿಂಗನ್ನು ಹೊರತುಪಡಿಸಿ). ೧೦-೧೫ ನಿಮಿಷದ ನಂತರ ಕಲಸಿದ ಹಿಟ್ಟಿಗೆ ಅರಿಶಿನ ಹಾಗು ಹಿಂಗನ್ನು ಹಾಕಿ.

ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ  ಗಾಳಿಯ ಗುಳ್ಳೆಗಳು ಇಲ್ಲದ ಹಾಗೆ ನೋಡಿಕೊಳ್ಳಿ

ಒಂದು ತಟ್ಟೆಗೆ ಎಣ್ಣೆ ಅಥವಾ ತುಪ್ಪವನ್ನು ಸವರಿ, ಕಲಸಿದ ಹಿಟ್ಟನ್ನು ಅದರ ಮೇಲೆ ಹಾಕಿ.

ಕುಕ್ಕರ್ ಒಳಗಡೆ ಸ್ವಲ್ಪ ನೀರನ್ನು ಹಾಕಿ, ತಟ್ಟೆ ಮುಳುಗದ ಹಾಗೆ, ಕುಕ್ಕರ್ ಒಳಗೆ ಕೂರಿಸಿ.

ನಂತರ ೮ ನಿಮಿಷದ ಕಾಲ ತಟ್ಟೆಯನ್ನು ನೀರಿನ ಹವೆಯಲ್ಲಿ ಬೇಯಿಸಿ.

ಈಗ ತಯಾರಾದ ಧೋಕ್ಲಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಇದನ್ನು ಪುದೀನ ಚಟ್ನಿಯೊಂದಿಗೆ ಸಂಜೆಯ ತಿಂಡಿಯಾಗಿ ಸೇವಿಸಿ.

ಆರೋಗ್ಯದ ಪ್ರಯೋಜನಗಳು

ರಾಗಿಯಲ್ಲಿರುವ ತ್ರ್ಯಪ್ತೊಫನ್(tryptophan) ಎಂಬ ಅಮೈನೋ ಆಮ್ಲ, ನಮ್ಮ ಹೊಟ್ಟೆಯೊಳಗೆ ಸೇರಿದಾಗ ನಮಗೆ ಹೊಟ್ಟೆ ತುಂಬಿದ  ಅನುಭವವನ್ನು ನೀಡಿ, ಹೆಚ್ಚಿನ ಆಹಾರವನ್ನು ಸೇವಿಸದಂತೆ ಮಾಡುತ್ತದೆ. ಆದ್ದರಿಂದ ರಾಗಿಯನ್ನು ಆಹಾರದಲ್ಲಿ ಹೆಚ್ಚಾಗಿ ಉಪಯೋಗಿಸಿದರೆ, ಅಧಿಕ ಆಹಾರ ಸೇವಿಸುವುದ್ದನ್ನು ತಡೆಯಬಹುದು. ಹೀಗಾಗಿ ಇದ್ದನ್ನು ಮಧುಮೇಹಿಗಳ್ಳಲ್ಲಿ ಬಳಸಲು ವೈದ್ಯರು ಸೂಚಿಸುತ್ತಾರೆ.

೫. ರಾಗಿ ಗಂಜಿ/ಅಂಬಲಿ

ಬೇಕಾಗುವ ಸಾಮಗ್ರಿಗಳು

೧. ೦.೫ ಬಟ್ಟಲಿನಷ್ಟು ರಾಗಿ ಹಿಟ್ಟು.

೨. ೧ ಬಟ್ಟಲಿನಷ್ಟು ನೀರು.

೩. ಉಪ್ಪು ರುಚಿಗೆ ತಕ್ಕಷ್ಟು.

೪. ಹಾಲು ಹಾಗು ತುಪ್ಪ.

ಮಾಡುವ ವಿಧಾನ

ಒಂದು ಪಾತ್ರೆಗೆ ಮೇಲೆ ಹೇಳಿದ ಸಾಮಾಗ್ರಿಗಳ್ಳನ್ನು ಹಾಕಿ, ಚೆನ್ನಾಗಿ ಯಾವುದೇ ಗಂಟುಗಳು ಇಲ್ಲದ ಹಾಗೆ ಕಲಸಿಕೊಳ್ಳಿ.

ಕಲಸಿದ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಸಣ್ಣ ಉರಿಯಲ್ಲಿ ಕುದಿಸಿ. ಯಾವುದೇ ಗಂಟುಗಳಾಗದ ಹಾಗೆ ಕಯ್ಯಾಡಿ.

ಮಿಶ್ರಣವು ಗಟ್ಟಿಯಾಗುತ್ತಿದೆ ಎಂದು ತಿಳಿದಾಗ ಬೆಂಕಿಯ ಉರಿಯನ್ನು ಕಡಿಮೆ ಮಾಡಿ, ಮಿಶ್ರಣಕ್ಕೆ ತುಪ್ಪ ಸೇರಿಸಿ ಸೂಪ್ ರೀತಿ ಸೇವಿಸಿ.

ಆರೋಗ್ಯದ ಪ್ರಯೋಜನ

ರಾಗಿಯಲ್ಲಿ ಕಬ್ಬಿಣದ ಅಂಶ, ವಿಟಮಿನ್ ಬಿ ೧-ಬಿ ೩ ಇರುತ್ತದೆ. ಇದನ್ನು ನಿತ್ಯ ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಸಮಸ್ಯೆಯನ್ನು ತಡೆಯಬಹುದು.

೬.ಸೇಬು ಹಾಗು ರಾಗಿಯ ಗಂಜಿ

ಬೇಕಾಗುವ ಸಾಮಗ್ರಿಗಳು

೧. ೩ ಚಮಚ ರಾಗಿ

೨. ತುಪ್ಪ

೩. ಹಾಲು

೪. ಸೇಬು

೫. ಸಕ್ಕರೆ

ಮಾಡುವ ವಿಧಾನ

ಸೇಬಿನ ಹಣ್ಣನ್ನು ಸಣ್ಣಗೆ ಕತ್ತರಿಸಿ, ಚೆನ್ನಾಗಿ ರುಬ್ಬಿಕೊಳ್ಳಿ.

ನಂತರ ಒಂದು ತವಕ್ಕೆ ತುಪ್ಪ ಹಾಕಿ, ಬಿಸಿಯಾದ ನಂತರ ೩ ಚಮಚ ರಾಗಿ, ಸಕ್ಕರೆ ಹಾಗು ನೀರನ್ನು ಬೆರೆಸಿ ಸಾಧಾರಣ ಉರಿಯಲ್ಲಿ ಕುದಿಯಲು ಬಿಡಿ.

ಮಿಶ್ರಣವನ್ನು ಚೆನ್ನಾಗಿ ಕುದಿಸಿ, ಗಂಟುಗಳಾಗದ ಹಾಗೆ ನೋಡಿಕೊಳ್ಳಿ.

ಮಿಶ್ರಣ ಸ್ವಲ್ಪ ಗಟ್ಟಿಯಾದ ನಂತರ ಪಾತ್ರೆಯನ್ನು ಕೆಳಗೆ ಇಳಿಸಿ, ೨ ನಿಮಿಷ ತಣ್ಣಗಾಗಲು ಬಿಡಿ.

ಇದಕ್ಕೆ ಸೇಬಿನ ಮಿಶ್ರಣ, ತುಪ್ಪವನ್ನು ಹಾಕಿ ಸೇವಿಸಿ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon