Link copied!
Sign in / Sign up
9
Shares

ಕನ್ನಡಿಗರ ನೆಚ್ಚಿನ ಆಹಾರ ರಾಗಿ ಮುದ್ದೆ ಮಾಡುವ ವಿಧಾನ..!

ರಾಗಿ ಮುದ್ದೆ ಮಾಡುವ ವಿಧಾನ ಹೀಗಿದೆ ನೋಡಿ 

ರಾಗಿ ಮುದ್ದೆ ಕನ್ನಡಿಗರು ಇಷ್ಟ ಪಡುವ ಆಹಾರ, ಮೈಸೂರು  ಪ್ರಾಂತ್ಯದಲ್ಲಂತೂ ರಾಗಿ ಮುದ್ದೆಯನ್ನು ದಿನನಿತ್ಯವೂ ಸೇವಿಸುತ್ತಾರೆ.

ರಾಗಿ ಮುದ್ದೆ ಬರೀ ಕರ್ನಾಟಕದಲ್ಲದೆ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರ ಹಾಗು ತೆಲಂಗಾಣ ರಾಜ್ಯದಲ್ಲೂ ಹೆಸರುವಾಸಿ. ಕರ್ನಾಟಕದ ಬಿಸಿಬೇಳೆ ಬಾತ್ ಕೂಡ ಹೊರ ರಾಜ್ಯದಲ್ಲಿ ಜನಪ್ರಿಯ. ಹಲವಾರು ಮಂದಿಗೆ ರಾಗಿ ಮುದ್ದೆ ಬಗ್ಗೆ ಗೊತ್ತು ಆದರೆ ಅದನ್ನು ಮಾಡುವ ಬಗೆ ಹೇಗೆಂದು ಕೆಲವರಿಗೆ ತಿಳಿದಿಲ್ಲ. ನಾವಿಂದು ರಾಗಿ ಮುದ್ದೆಯನ್ನು ಹೇಗೆ ಮಾಡಬೇಕೆಂದು ಹೇಳಿದ್ದೇವೆ ನೋಡಿ.

ರಾಗಿ ಮುದ್ದೆ ಮಾಡುವುದು ಮೊದಲು ಕಷ್ಟವಾಗುತ್ತದೆ ನಂತರ ಅಭ್ಯಾಸವಾಗುತ್ತದೆ. ಒಂದೆರೆಡು ಬಾರಿ ಮಾಡುವಾತನಕ ನಿಮ್ಮ ಹದಕ್ಕೆ ತಕ್ಕಂತೆ ಮುದ್ದೆ ಆಗದೇ ಇರಬಹುದು. ಮೊದಲು ನೀವು ಮಾಡುವ ವಿಧಾನ ನಿಮಗೆ ಕೈ ಕೊಡಬಹುದು ಆದರೆ ಮತ್ತೆ ಮತ್ತೆ ಅಭ್ಯಾಸ ಮಾಡಬೇಕು.

ರಾಗಿ ಮುದ್ದೆ ಮಾಡಲು ಬೇಕಾಗುವ ಪಧಾರ್ಥಗಳು

ರಾಗಿ ಮುದ್ದೆ ಮಾಡಲು ಬೇಕಾಗುವ ಪಧಾರ್ಥಗಳು ಯಾವುವೆಂದರೆ

ತಯಾರಿ ಸಮಯ: 2 ನಿಮಿಷ

ಅಡುಗೆ ಸಮಯ: 15 ನಿಮಿಷ.

ನಾಲ್ಕು ಜನರಿಗೆ ಬಡಿಸುವಷ್ಟು.

ರಾಗಿ ಮುದ್ದೆ ಮಾಡಲು : (ಅಳತೆ ಕಪ್ = 240 ಮಿಲಿ)

2 + 1/4 ಕಪ್ ನೀರು (1/4 ಕಪ್ ಕೊನೆಯಲ್ಲಿ ಬಳಸಲಾಗುತ್ತದೆ)

ರಾಗಿ ಮುದ್ದೆ ಮಾಡುವ ಕೋಲು ಅಥವಾ ಮರದ ಸೌಟು 

1 ಕಪ್ ರಾಗಿ ಹಿಟ್ಟು

ನಿಮ್ಮ ರುಚಿಗೆ ಅನುಗುಣವಾಗಿ ಉಪ್ಪು (ಬೇಕಾದರೆ ಬಳಸಬಹುದು)

ರಾಗಿ  ಮುದ್ದೆ ತಯಾರಿಸಲು ಸೂಚನೆಗಳು

1.ದಪ್ಪ ತಳವುಳ್ಳ ಪಾತ್ರೆಯಲ್ಲಿ 2 ಮತ್ತು 1/4 ಕಪ್ ನೀರು ತೆಗೆದುಕೊಳ್ಳಿ. 1 ಟೀಸ್ಪೂನ್ ರಾಗಿ ಹಿಟ್ಟನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಮತ್ತು ಕುದಿಯುವಂತೆ ನೋಡಿಕೊಳ್ಳಿ . ನೀವು ಸೇರಿಸಲು ಬಯಸಿದರೆ ಸ್ವಲ್ಪ ಉಪ್ಪು ಸೇರಿಸಿ.

2.ನೀರು ಕುಡಿಯಲು ಪ್ರಾರಂಭಿಸಿದಾಗ ಆ ಕುಡಿಯುವ ನೀರನ್ನು ಅರ್ಧ ಕಪ್ ತೆಗೆದು ಇಟ್ಟುಕೊಳ್ಳಿ. ನಾವು ಆ ಅರ್ಧ ಕಪ್ ನೀರನ್ನು ಕೊನೆಯಲ್ಲಿ ಬಳಸುತ್ತೇವೆ.

3 ನಂತರ ಆ ಕುಡಿಯುವ ನೀರಿಗೆ ಒಂದು ಕಪ್ ರಾಗಿ ಹಿಟ್ಟನ್ನು ಹಾಕಿ.

 

4 ರಾಗಿ ಹಿಟ್ಟನ್ನು ಹಾಕಿದ ನಂತರ ಮರದ ಸೌಟಿನಿಂದ ಮೆಲ್ಲಗೆ ರಾಗಿಹಿಟ್ಟನ್ನು ನೀರಿಗೆ ಒತ್ತಿ. ಆದರೆ ಮಿಶ್ರಣ ಮಾಡಬೇಡಿ. ರಾಗಿ ಹಿಟ್ಟನ್ನು ಹಾಕಿದನಂತರ ಹಿಟ್ಟನ್ನು ನೀರಿಗೆ ಒತ್ತಿರಿ, ಆದರೆ ಕದಡಬೇಡಿ ಅಥವಾ ಮಿಶ್ರಣಮಾಡಬೇಡಿ.

5 ಮೇಲೆ ತಿಳಿಸಿದಹಾಗೆ ಮಾಡಿದ ನಂತರ ಒಲೆಯನ್ನು ಸ್ವಲ್ಪ ಕಡಿಮೆ ಮಾಡಿ 5-6ನಿಮಿಷ ಹಾಗೆ ಬಿಡಿ.

6. 5-6 ನಿಮಿಷದ ನಂತರ ಮುದ್ದೆ ಕೋಲು (ಮರದ ಸೌಟು) ನಿಂದ ಹಿಟ್ಟನ್ನು ಬೇಗ ಮಿಶ್ರಣ ಮಾಡಿ. ನೀವು ಮಿಶ್ರಣ ಮಾಡುವುದನ್ನು ನಿಲ್ಲಿಸುವಂತಿಲ್ಲ.

7. ರಾಗಿ ಹಿಟ್ಟನ್ನು ನೀರಿನಲ್ಲಿ ಮಿಶ್ರಣ ಮಾಡಿದಮೇಲೆ ಅದರಲ್ಲಿ ಗಂಟುಗಳು ಬರದಂತೆ ನೋಡಿಕೊಳ್ಳಿ ಇದು 2-3 ನಿಮಿಷ ತೆಗೆದುಕೊಳ್ಳುತ್ತದೆ. ನೀವು ಮಾಡುವಾಗಲೇ ಗಂಟುಗಳು ಆಗದಂತೆ ನೀವು ಮಿಶ್ರಣಮಾಡಬೇಕು.ನೀವು ಮಾಡುತ್ತ ಹೋದಂತೆಲ್ಲ ಈ ವಿಧಾನ ನಿಮಗೆ ಅರ್ಥವಾಗುತ್ತದೆ.

8. ಈಗ ನೀವು ಮಿಶ್ರಣ ಮಾಡಿದ ರಾಗಿ ಮಿಶ್ರಣಕ್ಕೆ ಮೊದಲೇ ತೆಗೆದಿಟ್ಟಿದ್ದ ಅರ್ಧ ಕಪ್ ನೀರನ್ನು ನಿಮಗೆ ಎಷ್ಟು ಪ್ರಮಾಣದಲ್ಲಿ ಮೃದುವಾಗಿ ಬೇಕು ಅಷ್ಟು ಪ್ರಮಾಣದ ನೀರನ್ನು ಹಾಕಿ ಮಿಶ್ರಣಮಾಡಿ. ಈ ಸಮಯದಲ್ಲಿ ಒಲೆಯನ್ನು ಕಡಿಮೆ ಮಾಡಿಕೊಂಡು ಮಿಶ್ರಣ ಮಾಡಿ. ಈ ಹಂತದಲ್ಲಿ ನಿಮಗೆ ಎಷ್ಟು ಮೃದುಬೇಕೋ ಅಷ್ಟು ನೀರನ್ನು ನೀವು ಮಿಶ್ರಣ ಮಾಡಬೇಕು. ನಂತರ ಒಲೆಯನ್ನು ಆಫ್ ಮಾಡಿ.

9. ತಕ್ಷಣ ನೀವು ಮೇಲೆ ಕಲಸಿದ್ದ ರಾಗಿ ಹಿಟ್ಟನ್ನು ಒಂದು ಪ್ಲೇಟ್ ಅಥವಾ ಮರದ ಪ್ಲೇಟ್ ನಲ್ಲಿ ಹಾಕಿ. ಈ ಸಂದರ್ಭದಲ್ಲಿ ನಿಮ್ಮ ಕೈಯನ್ನು ನೀರಿನ್ನು ಒದ್ದೆ ಮಾಡಿಕೊಳ್ಳಿ ಯಾಕೆಂದರೆ ರಾಗಿ ಹಿಟ್ಟು ನಿಮ್ಮ ಕೈಗೆ ಅಂಟಬಾರದು ಹಾಗು ಅದನ್ನು ಚೆಂಡಿನ ಆಕಾರ ಗೊಳಿಸಲು ಪ್ಲೇಟ್ ಹಾಗು ನಿಮ್ಮ ಕೈ ಯನ್ನು ಸ್ವಲ್ಪ ಒದ್ದೆ ಮಾಡಿಕೊಳ್ಳಿ. ಹೀಗೆ ಚೆಂಡಿನ ಆಕಾರದಲ್ಲಿ ನಿಮಗೆ ಬೇಕಾದ ಗಾತ್ರಕ್ಕೆ ಮುದ್ದೆ ಮಾಡಿ.

ಇದು ರಾಗಿ ಮುದ್ದೆ ಮಾಡುವ ವಿಧಾನ

ರಾಗಿಮುದ್ದೆಯನ್ನು ಸಾಂಬಾರಿನ ಜೊತೆ ನಂಚಿಕೊಳ್ಳಬಹುದು. ಮುದ್ದೆ ಹಲ್ಲುಗಳಿಗೆ ಅಂಟುವುದರಿಂದ ಅದನ್ನು ರುಚಿಗೆ ಸಾಂಬಾರಿನಲ್ಲಿ ಅದ್ದಿ ನುಗಿದರೆ ಚೆನ್ನಾಗಿರುತ್ತದೆ.

ಕರ್ನಾಟಕದಲ್ಲಿ ರಾಗಿ ಮುದ್ದೆಯಜೊತೆ ಬಸ್ಸಾರು ಹಾಗು ಚಿಕನ್ ಸಾರಿನಲ್ಲಿ ಸಿಗುವ ರುಚಿಯೇ ಬಲು ಚಂದ. ಇದರ ಜೊತೆಗೆ ,ಮೆಣಸಿನ ಖಾರ ಇದ್ದರಂತೂ ರುಚಿ ಇನ್ನು ಚೆನ್ನಾಗಿರುತ್ತದೆ. ಹಾಗೆಯೇ ರಾಗಿ ಮುದ್ದೆಗೆ ಇಂತದ್ದೇ ಸಾಂಬಾರು ಬೇಕೆಂದೇನಿಲ್ಲ, ಯಾವ ಸಾಂಬಾರಾದರು ಅದು ಹೊಂದಿಕೊಳ್ಳುತ್ತದೆ. ರಾಗಿ ಮುದ್ದೆ ದೇಹಕ್ಕೆ ತಂಪು ತೋಳಿಗೆ ಬಕವನ್ನು ಕೊಡುತ್ತದೆ ಎಂದು ನಮ್ಮ ಪೂರ್ವಜರು ಹೇಳುತ್ತಾರೆ. 

 

 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon