Link copied!
Sign in / Sign up
5
Shares

ನಿಮ್ಮ ಮಗುವಿನ ರಾಶಿ ಅವರು ಸಂಬಂಧಗಳನ್ನ ಹೇಗೆ ಬೆಳೆಸಿಕೊಳ್ಳುತ್ತಾರೆ ಎಂದು ಹೇಳುವುದು ಹೀಗೆ

ಹೌದು, ನಿಮ್ಮ ಮಗು ಜನರೊಂದಿಗೆ ಯಾವ ರೀತಿಯ ಸಂಬಂಧಗಳನ್ನ ರೂಪಿಸಿಕೊಳ್ಳುತ್ತದೆ ಮತ್ತು ಎಷ್ಟು ಸ್ವಾವಲಂಬಿಗಳು ಆಗುತ್ತಾರೆ ಎಂಬುದು ಹಲವಾರು ವಿಷಯಗಳ ಮೇಲೆ ಆಧಾರಿತ ಆಗಿರುತ್ತದೆ - ನೀವು ಅವರನ್ನು ಹೇಗೆ ಬೆಳೆಸುತ್ತೀರಾ, ಅವರ ಸಂಸ್ಕೃತಿ ಮತ್ತು ಸ್ವಾಭಿವಿಕವಾಗಿ ಹೇಗಿರುತ್ತಾರೆ ಎಂಬುದು ಮತ್ತು ಇನ್ನೂ ಹಲವು. ಆದರೆ ನಿಮ್ಮ ಮಗು ಹುಟ್ಟಿದ ದಿನದಂದು ಗ್ರಹಗಳು, ನಕ್ಷತ್ರಗಳು ಯಾವ ಸ್ಥಾನಗಳಲ್ಲಿ ಇದ್ದವು ಮತ್ತು ಅವು ಕೂಡ ನಿಮ್ಮ ಮಗುವಿನ ಧೋರಣೆ ಮೇಲೆ ಪ್ರಭಾವ ಬೀರಬಹುದಾ ಎಂದು ಊಹಿಸುವುದರಲ್ಲಿ ತಪ್ಪೇನಿಲ್ಲ. ನಂಬುವವರಿಗೆ ಜ್ಯೋತಿಷ್ಯವು ಹಲವಾರು ಸಂಗತಿಗಳನ್ನ ತೆರೆದಿಡುತ್ತದೆ. ಅಂಥವುಗಳಲ್ಲಿ ಇದು ಕೂಡ ಒಂದು. ನಿಮ್ಮ ಮಗುವಿನ ರಾಶಿಯ ಆಧಾರದ ಮೇಲೆ ಅವರು ಸಂಬಂಧಗಳನ್ನು ಹೇಗೆ ಕಾಣುತ್ತಾರೆ  ಎಂಬುದನ್ನು ಓದಿ :

೧. ಮೇಷ

ನೀವು ನಿಮ್ಮ ಮಗುವಿನೊಂದಿಗೆ ಮಾಡಬೇಕು ಅಂದುಕೊಂಡಿರುವ ಕೆಲಸಗಳ, ಸಾಹಸಗಳ ಪಟ್ಟಿಯೇ ಮಾಡಿಕೊಂಡಿರುತ್ತೀರಿ. ಆದರೆ, ನಿಮ್ಮ ಮಗುವು ಬೆಳೆದು ತನ್ನ ಕಾಲುಗಳ ಮೇಲೆ ನಿಂತ ಮೇಲೆ, ಅವನು/ಳು ತನ್ನ ಕನಸುಗಳನ್ನ ಅರಸುತ್ತಾ ಹೋಗುತ್ತಾರೆ. ಅದು ಅವರ ಕ್ರೀಡಾ ತಂಡವನ್ನ ಯಶಸ್ಸಿನ ಮುಗಿಲೆತ್ತರಕ್ಕೆ ಕರೆದೊಯ್ಯಲು ಆಗಲಿ ಅಥವಾ ರಾಜಕೀಯವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಆಗಲಿ. ಏಕೆಂದರೆ ಇವರು ಗುಣವೇ ಅಂತದ್ದು. ಇವರಿಗೆ ಸ್ಪಷ್ಟ ಗುರಿಗಳು, ಕನಸುಗಳು ಇದ್ದು, ಅವುಗಳನ್ನ ತಲುಪುವ ದಾರಿಯಲ್ಲಿ ಇವರಿಗೆ ಬೇರೇನೂ ಕಾಣದು.

೨. ವೃಷಭ

ನೀವು ಗೂಳಿಗಳನ್ನ ನೋಡಿರಬಹುದು. ಅವುಗಳು ಹುಲ್ಲಿನ ಹಾಸಿಗೆ ಮೇಲೆ ಹುಲ್ಲನ್ನು ಅಗೆಯುತ್ತಾ, ಹೂವಿನ ವಾಸನೆ ಹೀರುತ್ತಾ ಹಾಯಾಗಿ ಕುಳಿತುಕೊಂಡು ಬಿಡುತ್ತವೆ. ರಾಶಿಗಳ ಗೂಳಿ ಆದ ವೃಷಭ ರಾಶಿಯವರು ಅಷ್ಟೇ. ಇವರಿಗೆ ಅಮ್ಮನ ಮುದ್ದು ಎಂದರೆ ಇಷ್ಟ, ಮನೆಯವರೊಡನೆ ಮಾತಾಡುವುದೆಂದರೆ ಇಷ್ಟ, ಸಮಯ ಕಳೆಯುವುದೆಂದರೆ ಇಷ್ಟ. ಎಷ್ಟು ಇಷ್ಟ ಎಂದರೆ ಇವರಿಗೆ ಮನೆಯಿಂದ ಹೊರಹೋಗಿ ಮೈದಾನದಲ್ಲಿ ಆಟ ಆಡುವುದಕ್ಕಿಂತ ಅಮ್ಮನ ಉಪಸ್ಥಿತಿಯೇ ಹೆಚ್ಚು.

೩. ಮಿಥುನ

ಮಿಥುನ ರಾಶಿಯವರು ಹೀಗೇ ಇರುತ್ತಾರೆ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಅವರ ವೈಶಿಷ್ಟ್ಯ ವೇ ಅದು. ಜನರೊಂದಿಗೆ ಚೆನ್ನಾಗಿ ಬೆರೆಯುವ ಇವರು, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ, ಒಂದು ಗುಂಪಿನಿನಿಂದ ಇನ್ನ್ನೊಂದು ಗುಂಪಿಗೆ, ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಚಿಟ್ಟೆ ರೀತಿ ಹಾರುತ್ತಾರೆ. ಇವರ ಒಂದೇ ಧ್ಯೇಯ ಎಂದರೆ ಎಲ್ಲರಿಂದಲೂ, ಎಲ್ಲದರಿಂದಲೂ ಹೊಸ ಹೊಸ ಅನುಭವಗಳನ್ನ ಪಡೆಯಬೇಕೆಂಬುದು. ಇಲ್ಲವೆಂದರೆ, ಅವರಿಗೆ ಬೇಸರವಾದ ದಿನ ಅಥವಾ ಆತಂಕಕ್ಕೆ ಒಳಗಾದ ದಿನ, ಅವರು ನಿಮ್ಮ ನೆರಳನ್ನು ಬಿಟ್ಟು ಕೂಡ ಹೋಗುವುದಿಲ್ಲ.

೪. ಕಟಕ

ಇವರು ನಾಚಿಕೆ ಸ್ವಭಾವದವರಾಗಿದ್ದು, ಒಬ್ಬರೇ ಇರಲು ಇಷ್ಟಪಡುವರು ಮತ್ತು ಸೂಕ್ಷ್ಮ ಮನಸ್ಸಿನವರು ಆಗಿರುತ್ತಾರೆ. ಇವರು ಹೊರಗಿನ ಜಗತ್ತಿಗೆ ತೆರೆದುಕೊಂಡಾಗ ಇವರು ನಿಮ್ಮಿಂದ ಹೆಚ್ಚಿನ ಕಾಳಜಿ ಮತ್ತು ಅನುಕೂಲ ಅಪೇಕ್ಷಿಸುತ್ತಾರೆ. ಅಲ್ಲದೆ, ಇವರು ತಂದೆ ತಾಯಿಯೊಂದಿಗೆ ತುಂಬಾನೇ ಬಾಂಧವ್ಯ ಹೊಂದಿರುತ್ತಾರೆ, ಮುಖ್ಯವಾಗಿ ಇವರು ಅಮ್ಮನನ್ನು ಬಿಟ್ಟು ಇರುವುದಿಲ್ಲ. ಅವರು ಸುರಕ್ಷೆ ಮತ್ತು ಭದ್ರತೆಯನ್ನು ಇಷ್ಟ ಪಡುತ್ತಾರೆ. ಹೀಗಾಗಿ ನೀವು ಅವರ ಅಮ್ಮನಾಗಿ ಅವರಿಗೆ ಶಕ್ತಿ ತುಂಬಬೇಕು.

೫. ಸಿಂಹ

ಇವರು ಎಲ್ಲರ ಗಮನ ತಮ್ಮ ಮೇಲೆ ಇರಬೇಕೆಂದು ಬಯಸುತ್ತಾರೆ. ನೀವು ಇವರ ಕಡೆ ಹೆಚ್ಚು ಗಮನವಹಿಸಿದಷ್ಟು ನಿಮಗೂ ಒಳ್ಳೆಯದು ಅವರಿಗೂ ಒಳ್ಳೆಯದು. ಒಂದು ವೇಳೆ ಮನೆಯಲ್ಲಿ ಕೇವಲ ನೀವು ಮತ್ತು ನಿಮ್ಮ ಮಗು ಇದ್ದರೆ, ಆ ಮಗುವು ಅದು ಮಾಡುವುದನ್ನೆಲ್ಲಾ, ಹೇಳುವುದನ್ನೆಲ್ಲಾ ನೀವು ಗಮನಿಸುತ್ತಿದ್ದೀರಾ ಅಥವಾ ಇಲ್ಲವ ಎಂದು ನೋಡುತ್ತಲೇ ಇರುತ್ತದೆ. ಆದರೆ ಮನೆಗೆ ಯಾವುದಾದರು ಸಂಬಂಧಿಕರ ಗುಂಪು ಬಂದರೆ, ಆಗ ಅವರು ನಿಮ್ಮ ಕೈಗೆ ಸಿಗುವುದಿಲ್ಲ.

೬. ಕನ್ಯಾ

ಇವರು ಎಲ್ಲದರಲ್ಲೂ ಅಚ್ಚುಕಟ್ಟುತನ ಬಯಸುತ್ತಾರೆ ಮತ್ತು ಸಹಾಯ ಹಸ್ತ ಚಾಚಲು ಯಾವಾಗಲು ಮುಂದಿರುತ್ತಾರೆ. ಹೀಗಾಗಿ ತಮ್ಮ ಅಗತ್ಯ ಎಲ್ಲಿ ಹೆಚ್ಚು ಇದೆಯೋ, ಇವರು ಅಲ್ಲಿ ಹೋಗುತ್ತಾರೆ. ಅವರು ದೊಡ್ಡವರಾದ ಮೇಲೆ ಅವರು ನಿಮ್ಮೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಲು ಕಾರಣ ಅವರಿಗೆ ನೀವು ಬೇಕು ಎಂದುಕೊಳ್ಳುವಿರಿ. ಆದರೆ, ವಾಸ್ತವದಲ್ಲಿ ಅವರು ನಿಮಗೆ ಅವರ ಅಗತ್ಯವಿದೆ ಎಂದು ನಿಮ್ಮ ಜೊತೆ ಇರುತ್ತಾರೆ. ಅಲ್ಲದೆ ಇವರು ಅಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡುವುದರಲ್ಲಿ ಇತರ ಮಕ್ಕಳಿಗೆ ಮಾದರಿ ಆಗಿರುತ್ತಾರೆ.

೭. ತುಲಾ

ಇವರು ತಮ್ಮದೇ ಆದ ನಿಯಮಗಳನ್ನ ರೂಪಿಸಿಕೊಂಡು, ಪಾಲಿಸುವರು. ಇವರು ಯಾವುದರಲ್ಲೂ ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ ಅಂತ ಇರದೆ, ಎಲ್ಲವನ್ನೂ ತುಲನೆಯಲ್ಲಿ ಇಟ್ಟಿರುತ್ತಾರೆ. ಇವರು ನಿಮ್ಮನ್ನು ತುಂಬಾ ಹಚ್ಚಿಕೊಳ್ಳುತ್ತಾರೋ ಅಥವಾ ಅನುಭಂದವೇ ಇಲ್ಲದೆ ಬೆಳೆಯುತ್ತಾರೋ ಎಂದು ಯೋಚಿಸುವುದು ಬೇಡ. ಒಬ್ಬರನ್ನು ಹಚ್ಚಿಕೊಳ್ಳುವ ವಿಷಯ ಬಂದಾಗ ಈ ರಾಶಿಯ ಮಕ್ಕಳು ತುಂಬಾ ಹೆಚ್ಚಾಗಿ ಒಬ್ಬರಿಗೂ ಮುಗಿ ಬೀಳುವುದೂ ಇಲ್ಲ ಅಥವಾ ದೂರ ಸರಿಸುವುದೂ ಇಲ್ಲ.

೮. ವೃಶ್ಚಿಕ

ವೃಶ್ಚಿಕ ರಾಶಿಯವರು ಯಾವಾಗಲೂ ತಮ್ಮ ಇಚ್ಚೆಯಂತೆ ಬಾಳುವರು. ಯಾರೇ ಕೂಗಾಡಲಿ,ಊರೇ ಹೋರಾಡಲಿ, ಅವರ ಮನ್ನಸ್ಸಿಗೆ ತೋಚಿದ್ದೇ ಅವರು ಮಾಡೋದು. ಇದರ ಹೊರತಾಗಿ ವೃಶ್ಚಿಕ ರಾಶಿಯವರು ತುಂಬಾ ಸ್ವಾಮ್ಯಸೂಚಕ ಸ್ವಭಾವ ಕೂಡ ಹೊಂದಿರುತ್ತಾರೆ. ಅಂದರೆ, ಇವರು ತಮ್ಮದು ಎಂದು ಯಾವ ವ್ಯಕ್ತಿಯನ್ನ ಅಥವಾ ವಸ್ತುವನ್ನ ಅಂದುಕೊಳ್ಳುತ್ತಾರೋ, ಅವುಗಳು ಯಾವಾಗಲು ಇವರ ಜೊತೆಯೇ ಇರಬೇಕು. ಬೇರೆಯವರು ಅದರ ಮೇಲೆ ಕಣ್ಣು ಕೂಡ ಹಾಕೋ ಹಾಗಿಲ್ಲ. ಹೀಗಾಗಿ, ಅವರು ಎಷ್ಟು ಸ್ವಾತಂತ್ರ್ಯವನ್ನ ಬಯಸುತ್ತಾರೋ, ನೀವು ಅವರೊಂದಿಗೆ ಎಂತಹ ಸಮಯದಲ್ಲಿ ಆದರೂ ಇರಬೇಕೆಂದು ಕೂಡ ಅಪೇಕ್ಷಿಸುತ್ತಾರೆ.

೯. ಧನು

ಇವರು ಸ್ವಾವಲಂಬಿಗಳು, ಸಹಾನುಭೂತಿಗಳು ಮತ್ತು ಗುರುತಿಸಿಕೊಳ್ಳಲು ಇಷ್ಟ ಪಡುವಂತವರು. ಇವರು ಹೊರ ಜಗತ್ತಿಗೆ ಕಾಲಿಡಲು ಎಷ್ಟು ಆತುರದಿಂದ, ಉತ್ಸಾಹದಿಂದ ಇರುತ್ತಾರೋ, ಅವರಿಗೆ ಅಷ್ಟೇ ಪ್ರಮಾಣದ ಊರ್ಜಿತಗೊಳಿಸುವಿಕೆ, ಪ್ರೋತ್ಸಾಹ, ಕಾಳಜಿ ಮತ್ತು ಪ್ರಶಂಸೆ ನಿಮ್ಮಿಂದ ಬೇಕು. ಹೀಗಾಗಿ ಅವರು ನಿಮಗೆ ಗಂಟು ಬೀಳುವುದಿಲ್ಲ, ಆದರೆ ನೀವು ಆಗಾಗ್ಗೆ ಅವರ ನಡೆ ಮೇಲೆ ಗಮನಹರಿಸುತ್ತಾ, ಅವರು ತಪ್ಪುಗಳನ್ನ ಮಾಡಿದಾಗ ತಿದ್ದಬೇಕು ಮತ್ತು ಒಳ್ಳೆಯ ಕೆಲಸಗಳನ್ನ ಮಾಡಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು.

೧೦. ಮಕರ

ಇವರು ಕಣ್ಣಿಗೆ ಕಾಣಿಸುವುದಕ್ಕಿಂತ ಜಾಸ್ತಿ ಒಬ್ಬರನ್ನು ಹಚ್ಚಿಕೊಂಡಿರುತ್ತಾರೆ. ಇವರು ಯಾವಾಗಲು ತಮ್ಮ ಗುರಿಗಳ ಬಗ್ಗೆ ಚಿಂತಿಸುತ್ತಿರುತ್ತಾರೆ ಮತ್ತು ಅವುಗಳನ್ನ ತಲುಪಲು ಶ್ರಮ ಹಾಕುತ್ತಲೇ ಇರುತ್ತಾರೆ. ಇವರು ಹೊಸ ದಾರಿಯಲ್ಲಿ ನಡೆಯಲು ಹೆದರುವುದಿಲ್ಲ. ಆದರೆ ಇವರು ಕೆಲವೊಂದು ವಿಷಯಗಳು ಇದ್ದ ಹಾಗೆಯೇ ಇರಲಿ ಎಂದು ಬಯಸುವರು : ಕುಟುಂಬ, ಮನೆ, ಸಂಪ್ರದಾಯ ಇತ್ಯಾದಿ. ಅವರು ಇವುಗಳಲ್ಲೇ ತಾಳ್ಮೆ ಮತ್ತು ಶಕ್ತಿ ಕಂಡುಕೊಳ್ಳುತ್ತಾರೆ. ಹೀಗಾಗಿ ಅವರು ನಿಮ್ಮಿಂದ ದೂರ ಇರಬಹುದು, ಆದರೆ ಆಗಾಗ ನಿಮ್ಮ ಬಳಿಯೇ ಬಂದು ರಿಚಾರ್ಜ್ ಆಗಬೇಕು!

೧೧. ಕುಂಭ

ಕುಂಭ ರಾಶಿಯವರು ಎಂದರೆ ಎಲ್ಲರಿಗು ಇಷ್ಟ. ಚತುರರು, ಲವಲವಿಕೆ ಮತ್ತು ವಿನೋದದಿಂದ ಕೂಡಿರುವವರು. ಇವರು ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಜಿಗಿಯಲು ಸದಾ ಸಿದ್ಧರಿರುತ್ತಾರೆ ಮತ್ತು ಇವರು ಹೋಗಿದೆಲ್ಲೆಡೆ ತಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಾರೆ. ಆದರೆ ಪರಿಸ್ಥಿತಿ ಕೆಟ್ಟು,  ವಿಕೋಪಕ್ಕೆ ಹೋದಾಗ ಅವರು ಏಕಾಂತ ಬಯಸುತ್ತಾರೆ. ಇವರು ಏಕಾಂಗಿ ಆಗಿ ಇರಲು ಬಯಸುತ್ತಾರೆಂದು ನೀವು ಬೇಸರ ಪಟ್ಟುಕೊಳ್ಳುವ ಅಗತ್ಯ ಇಲ್ಲ. ಅವರು ತಮಗೆ ಏಕಾಂತ ಬೇಕಾಗಿದೆ ಎಂದು ಸೂಚಿಸಲೇ ಕೆಲವೊಂದು ಸಂದರ್ಭಗಳಲ್ಲಿ ನಿಮ್ಮಿಂದ ದೂರವಿರುತ್ತಾರೆ. ಇದರ ಅರ್ಥ ಅವರು ನಿಮ್ಮನ್ನು ಇಷ್ಟ ಪಡುವುದಿಲ್ಲ ಎಂದಲ್ಲ. ಬದಲಿಗೆ ಅವರು ತಮ್ಮ ಬಗ್ಗೆ ತಾವು ಎಲ್ಲಿ ಎಲ್ಲವನ್ನೂ ಹೇಳಿಕೊಂಡು ಬಿಡುತ್ತೇನೋ, ತುಂಬಾ ತೆರೆದುಕೊಳ್ಳುವೆನೋ ಎಂಬ ಭಯದಿಂದ ದೂರವಿರುತ್ತಾರೆ.

೧೨. ಮೀನಾ

ಈ ರಾಶಿಯವರು ಸಿಕ್ಕಾಪಟ್ಟೆ ಭಾವನಾತ್ಮಕ ಜೀವಿಗಳು. ಇವರ ಮನಸ್ಸು ತುಂಬಾ ದೊಡ್ಡದು ಮತ್ತು ಇವರು ತುಂಬಾನೇ ಸಹಾನುಭೂತಿ ಉಳ್ಳವರು ಆಗಿರುತ್ತಾರೆ. ಇದು ಅವರು ಬಾಂಧವ್ಯ ಬೆಳೆಸಿಕೊಳ್ಳುವುದರ ಬಗ್ಗೆ ಏನು ಹೇಳುತ್ತದೆ? ಒಂದು ಅವರು ತಮ್ಮ ಕಾರ್ಯಗಳಲ್ಲಿ ಮಗ್ನರಾಗಿ ಎಲ್ಲರಿಂದ ಸ್ವಲ್ಪ ದೂರವಿರಬಹದು, ಇಲ್ಲವೆಂದರೆ ಎಲ್ಲವನ್ನೂ ನಿಮ್ಮ ಜೊತೆಯಿದ್ದೆ ಮಾಡುವರು. ಇವರಲ್ಲಿ ಬ್ಯಾಲೆನ್ಸ್ ಇಲ್ಲ, ಒಂದು ತುಂಬಾ ಜಾಸ್ತಿ ಹಚ್ಚಿಕೊಳ್ಳುತ್ತಾರೆ ಇಲ್ಲ ಎಂದರೆ ಹಚ್ಚಿಕೊಳ್ಳುವುದೇ ಇಲ್ಲ.    

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon