Link copied!
Sign in / Sign up
37
Shares

ರುಚಿಕರ, ತ್ವರಿತ, ಸುಲಭ ರಾಗಿ ದೋಸೆ ರೆಸಿಪಿ!

ರಾಗಿಯು ಪ್ರತಿಯೊಂದು ಕನ್ನಡ ಮನೆಯಲ್ಲೂ ಇರಲೇಬೇಕು. ಹಿಟ್ಟಂ ತಿಂದಂ ಬೆಟ್ಟಂ ಕಿತ್ತಂ ಎಂಬ ಮಾತನ್ನು ನೀವು ಕೇಳಿರುತ್ತೀರಾ. ರಾಗಿ ಮುದ್ದೆಯ ಬಗ್ಗೆಯ ಮಾತಿದು. ಆದರೆ ರಾಗಿಯ ಯಾವುದೇ ತಿನಿಸು ಇರಲಿ, ಅದು ಪೌಷ್ಟಿಕ ಗುಣಮಟ್ಟದಲ್ಲಿ ಬಹಳ ಉತ್ತಮವಾಗಿರುತ್ತದೆ. ಈ ದಿನ ನಾವು ನಿಮಗೆ ಅಂತದ್ದೇ ಒಂದು ಅತ್ಯಂತ ಆರೋಗ್ಯಕರವಾದ ರಾಗಿ ತಿನಿಸು ಒಂದನ್ನು ತಯಾರಿಸುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಅಂದಹಾಗೆ ನಾವು ಮಾತಾಡುತ್ತಿರುವುದು ರಾಗಿ ದೋಸೆಯ ಬಗ್ಗೆ.

ಬೇಕಿರುವ ಸಾಮಗ್ರಿಗಳು

 

1 ಕಪ್ ರಾಗಿ ಹಿಟ್ಟು

1 ಕಪ್ ರವೆ

ಅರ್ಧ ಕಪ್ ಅಕ್ಕಿ ಹಿಟ್ಟು

ಅರ್ಧ ಕಪ್ ಮೊಸರು

ಸ್ವಲ್ಪ ತುರಿದ ಶುಂಠಿ

ಚಿಕ್ಕ ತುಂಡುಗಳಾಗಿ ಕತ್ತರಿಸಿದ 1 ಮೆಣಸಿನಕಾಯಿ

ಸಣ್ಣದಾಗಿ ಕತ್ತರಿಸಿರುವ ಕರಿಬೇವು

ಸಣ್ಣದಾಗಿ ಕತ್ತರಿಸಿರುವ ಕೊತ್ತಂಬರಿ

ಸಣ್ಣದಾಗಿ ಕತ್ತರಿಸಿದ 1 ಈರುಳ್ಳಿ

1 ಸ್ಪೂನ್ ಜೀರಿಗೆ

ಅರ್ಧ ಸ್ಪೂನ್ ಮೆಣಸಿನ ಪುಡಿ

1 ಸ್ಪೂನ್ ಉಪ್ಪು

3.5 ಕಪ್ ನೀರು

ಉರಿಯಲು ಎಣ್ಣೆ

 

ಮಾಡುವ ವಿಧಾನ

೧. ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ 1 ಕಪ್ ರಾಗಿ ಹಿಟ್ಟು, 1 ಕಪ್ ರವೆ, ಅರ್ಧ ಕಪ್ ಅಕ್ಕಿ ಹಿಟ್ಟು ಹಾಕಿಕೊಳ್ಳಿ.

೨. ನಂತರ ಅವುಗಳಿಗೆ ಅರ್ಧ ಕಪ್ ಮೊಸರು, ತುರಿದ ಶುಂಠಿ, ಕತ್ತರಿಸಿದ ಮೆಣಸಿನಕಾಯಿ, ಸ್ವಲ್ಪ ಕರಿಬೇವು, ಎರಡು ಚಮಚ ಕೊತ್ತಂಬರಿ, ಈರುಳ್ಳಿ, ಜೀರಿಗೆ, ಮೆಣಸು ಮತ್ತು ಉಪ್ಪು ಹಾಕಿ.

೩. ಈ ಪಾತ್ರೆಗೆ 1-2 ಲೋಟದಷ್ಟು ನೀರು ಹಾಕಿ ಗಂಟುಗಳು ಇಲ್ಲದಂತೆ,ಚೆನ್ನಾಗಿ ಬೆರೆಸಿ.

೪. ಒಂದು 15-20 ನಿಮಿಷಗಳಷ್ಟು ಕಾಲ ಹಿಟ್ಟು ನೆನೆಯಲು ಬಿಡಿ.

೫. ನಿಮಗೆ ಇನ್ನಷ್ಟು ತಿಳಿಯಾದ ಹಿಟ್ಟು ಬೇಕೆಂದರೆ, ಅರ್ಧ ಕಪ್ ಅಷ್ಟು ನೀರನ್ನು ಬೆರೆಸಿ. ಇಲ್ಲವಾದರೆ ಹಾಗೆಯೇ ಬಿಡಿ.

೬. ಈಗ ಮೆಲ್ಲನೆ ಹಿಟ್ಟನ್ನು ತವಾ ಮೇಲೆ ಉಯ್ಯಿರಿ.

೭. ಈಗ ಮೇಲಿನಿಂದ ಅರ್ಧ ಅಥವಾ ಒಂದು ಚಮಚದಷ್ಟು ಎಣ್ಣೆಯನ್ನು ಹಾಕಿ.

೮. ದೋಸೆಯು ಗೋಲ್ಡನ್ ಹಳದಿ ಬಣ್ಣಕ್ಕೆ ತಿರುಗಿದ ನಂತರ, ಅದನ್ನು ತಿರುವಿ ಹಾಕಿ.

೯. ನಂತರ ದೋಸೆಯನ್ನು ಮಡಚಿ ಪುದೀನಾ ಚಟ್ನಿ ಅಥವಾ ಕಾಯಿ ಚಟ್ನಿಯೊಂದಿಗೆ ಸವಿಯಲು ನೀಡಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon