Link copied!
Sign in / Sign up
1
Shares

ನಿಮ್ಮ ಪುಟ್ಟ ಮಗುವಿಗೆ ಉದಾಹರಣೆಯನ್ನು ನೀಡುವುದು !

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಮಾನವರನ್ನಾಗಿ ,ಎಲ್ಲರೂ ಬಯಸುವಂತೆ ,ಆದರ್ಶೀಕರಿಸುವಂತೆ ಹಾಗೂ ವೈವಿಧ್ಯವಾಗುವಂತೆ ಬೆಳೆಸಲು ಬಯಸುತ್ತಾರೆ.ಕೇವಲ ಶೈಕ್ಷಣಿಕ ಅಥವಾ ವೃತ್ತಿಪರ ಯಶಸ್ಸು  ಒಬ್ಬ ವ್ಯಕ್ತಿಯನ್ನು  ಒಬ್ಬ ಸಂಭಾವಿತ ಅಥವಾ ಆದರ್ಶಪ್ರಾಯವನ್ನಾಗಿಸುವುದಿಲ್ಲ. ವ್ಯಕ್ತಿಯ ಚಾರಿತ್ರ್ಯವು  ಸಮನಾಗಿ ಮಹತ್ವದ್ದಾಗಿದೆ. ಮಗುವನ್ನು ಬೆಳೆಸುವುದು ಅವರ ಚಾರಿತ್ರ್ಯವನ್ನು  ರೂಪಿಸುವಲ್ಲಿ ಒಂದು ಮಹತ್ವದ  ಪಾತ್ರವನ್ನು ವಹಿಸುತ್ತದೆ. ಎಲ್ಲಾ ಮಕ್ಕಳು ತಮ್ಮ ಹೆತ್ತವರನ್ನು ಸೂಪರ್ ಹೀರೋಗಳೆಂದು  ಪರಿಗಣಿಸುತ್ತಾರೆ ಮತ್ತು ಅವರನ್ನು  ಮಾದರಿಗಳಂತೆ ನೋಡುತ್ತಾರೆ ಎಂಬುದು ರಹಸ್ಯವಲ್ಲ. ಹೀಗಾಗಿ, ಪೋಷಕರು ತಮ್ಮ ಮಕ್ಕಳ ಮುಂದೆ ಹೇಗೆ ವರ್ತಿಸುತ್ತಾರೆ ಎನ್ನುವುದು ಅವರ ಚಾರಿತ್ರ್ಯವನ್ನು  ರೂಪಿಸುವಲ್ಲಿ ಒಂದು ನಿರ್ಣಾಯಕ ಅಂಶವಾಗಿದೆ. ಪೋಷಕರು ತಮ್ಮ ಮಗುವಿನ ವ್ಯಕ್ತಿತ್ವ ಮತ್ತು ಒಟ್ಟಾರೆ ಪಾತ್ರದ ಮೇಲೆ ಧನಾತ್ಮಕ ಪ್ರಭಾವ ಬೀರಲು ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ.

ನಕಾರಾತ್ಮಕತೆಯನ್ನು ದೂರದಲ್ಲಿ  ಇರಿಸಿ:

ಮನೆಯ ಒಟ್ಟಾರೆ ಪರಿಸರವು ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಗುವಿನ ಸುತ್ತಲು  ಸಕಾರಾತ್ಮಕತೆ, ಸಂತೋಷ, ಮತ್ತು ಹರ್ಷಚಿತ್ತತೆಯನ್ನು ಕಾಪಾಡಿಕೊಳ್ಳಿ. ಮಗುವು ಹತ್ತಿರವಿದ್ದಾಗ  ದೈಹಿಕ ಹಿಂಸೆ, ಮೌಖಿಕ ನಿಂದನೆ, ಜಗಳಗಳು  ಮತ್ತು ಸಂಬಂಧಿತ ಖಿನ್ನತೆ ಕ್ರಮಗಳಿಂದ ದೂರವಿರಿ.

ನಿಮ್ಮ ಮಗುವನ್ನು ಪ್ರೀತಿಸಿ ಆದರೆ ಅವರನ್ನು ಶಿಸ್ತು ಬದ್ಧವಾಗಿ  ಮಾಡಿ:

ಪೋಷಕರು ತಮ್ಮ ಮಕ್ಕಳನ್ನು ಪ್ರೀತಿಸುವ ಮತ್ತು ಮುದ್ದಿಸುವಂತೆ ಮಾಡುವುದು ನೈಸರ್ಗಿಕವಾಗಿದೆ, ಆದರೆ ಈ ಮಾರ್ಗದ ನಡುವೆ ಎಲ್ಲಿ ಅಂತರವನ್ನು ರೂಪಿಸಬೇಕೆಂಬುವುದು  ಮುಖ್ಯವಾಗಿದೆ. ಅವರು ಏನಾದರೂ ತಪ್ಪು ಮಾಡುವಾಗ ನಿಮ್ಮ ಮಗನನ್ನು ಹಿಂತೆಗೆದುಕೊಳ್ಳಿ (ಯಾರನ್ನಾದರೂ ತಳ್ಳುವುದು ಅಥವಾ ಅವರ ಬೇಡಿಕೆಗಳು ಪೂರೈಸದಿದ್ದಾಗ ಕಿರುಚಾಡುವುದು ಅಥವಾ ಕೋಪಗೊಳ್ಳುವುದು). ಶೀಘ್ರದಲ್ಲೇ ನೀವು ನಿಮ್ಮ  ಮಗುವನ್ನು   ಶಿಸ್ತುಬದ್ಧಗೊಳಿಸಲು ಪ್ರಾರಂಭಿಸಿ,  ಇದು ದೀರ್ಘಾವಧಿಯಲ್ಲಿ aಅವರಿಗೆ ಉತ್ತಮವಾಗಿರುತ್ತದೆ . ತಮ್ಮ ತಪ್ಪುಗಳಲ್ಲಿ ಅಥವಾ ತಪ್ಪಿಗೆ ಕ್ಷಮಿಸುವ ಗುಣವನ್ನು ನಿಮ್ಮ ಮಗುವಿನಲ್ಲಿ ತುಂಬಿರಿ. ಪ್ರತಿ ಬಾರಿ ನೀವು ತಪ್ಪಾಗಿದ್ದರೆ ಕ್ಷಮೆ ಕೋರುವ  ಮೂಲಕ ನೀವು ಮುಂದಾಳತ್ವ ವಹಿಸುವುದಕ್ಕೆ  ಕಾರಣವಾಗಬಹುದು. ನಿಮ್ಮ ಮಗುವಿನ ಮೇಲೆ ಒಂದು ಚಿಕ್ಕ ಕ್ರಮವು ದೊಡ್ಡ ಮತ್ತು ಧನಾತ್ಮಕ ವ್ಯತ್ಯಾಸವನ್ನು ಮಾಡಬಹುದು.

ಪ್ರೀತಿ ಮತ್ತು ಸಹಾನುಭೂತಿ:

ನಿಮ್ಮ ಮಗುವಿನ ಹುಟ್ಟುಹಬ್ಬದ ಸಂದರ್ಭದಲ್ಲಿ ಅಥವಾ ಯಾವುದೇ ಮಂಗಳಕರ ಸಂದರ್ಭಗಳಲ್ಲಿ, ನಿಮ್ಮ ಮಗುವನ್ನು ವೃದ್ಧಾಶ್ರಮಗಳಿಗೆ ಅಥವಾ ಅನಾಥಾಶ್ರಮಗಳಿಗೆ ಕರೆದುಕೊಂಡು ಹೋಗಿ ಮತ್ತು ಆಹಾರ, ಬಟ್ಟೆ ಅಥವಾ ಅಂತಹ ಅಗತ್ಯ ವಸ್ತುಗಳನ್ನು ವಿತರಿಸಿ. ಇದು ಮಗುವನ್ನು ಹೆಚ್ಚು ಸಹಾನುಭೂತಿಯನ್ನಾಗಿ ಮಾಡುವ ಜೊತೆಗೆ, ನಿಮ್ಮ ಈ ಚಿಕ್ಕಸಂಕೇತವು   ಅವರು ಎಷ್ಟು ಅದೃಷ್ಟಶಾಲಿ ಎಂದು ಅವರಿಗೆ ಮನವರಿಕೆ ಮಾಡುವಂತಾಗುತ್ತದೆ . ಅವರು ವಿಷಯಗಳನ್ನು ಮೌಲ್ಯಮಾಪನ ಮಾಡಲು ಪ್ರಾರಂಭಿಸುತ್ತಾರೆ (ಇದು ಸಂಬಂಧಗಳು ಅಥವಾ ಭೌತಿಕ ವಸ್ತುಗಳು ಅಥವಾ ಇದಕ್ಕೂ ಹೆಚ್ಚಿನದು ಯಾವುದೂ ಆಗಿರಬಹುದು ).

ಆರೋಗ್ಯಕರ ನಿದ್ರೆಯ ಚಕ್ರವನ್ನು ಅನುಸರಿಸಿ:

ನೀವು ರಾತ್ರಿಯ ತಡವಾಗಿ ಎಚ್ಚರವಾಗಿರುವಾಗ ನಿಮ್ಮ ಮಗುವನ್ನು ನಿದ್ರಿಸಲು ನಿರೀಕ್ಷಿಸುತ್ತಿರುವುದು ತುಂಬಾ ಪರಿಣಾಮಕಾರಿಯಾಗಿರುವುದಿಲ್ಲ . ಪ್ರತಿಯೊಬ್ಬರೂ ಮಲಗುವ  ಸಮಯವನ್ನು ನಿಗದಿಪಡಿಸುವುದು ಒಂದು ಆರೋಗ್ಯಕರ ಮತ್ತು ಆದರ್ಶಪ್ರಾಯ ಅಭ್ಯಾಸ. ಪ್ರತಿ ಮಗುವೂ ತಮ್ಮ ಹೆತ್ತವರನ್ನು ಅನುಸರಿಸಲು ಮತ್ತು ಅನುಕರಿಸಲು ಇಷ್ಟಪಡುತ್ತಾರೆ, ಆದ್ದರಿಂದ ಈ ಅಭ್ಯಾಸವು ಮಗುವಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಖಚಿತವಾಗಿರುತ್ತದೆ.

ಇದೇ ಪದ್ಧತಿಯು  ಹಾರ ಮತ್ತು ಆಹಾರ ಪದ್ಧತಿಗೆ ಅಳವಡಿಸಲ್ಪಡುತ್ತದೆ .  ಪೋಷಕರು ಮತ್ತು ವಯಸ್ಕರನ್ನು ಬಿಸಿ, ಮಸಾಲೆಯುಕ್ತ, ಎಣ್ಣೆಯುಕ್ತ ಮತ್ತು ತ್ವರಿತ ಆಹಾರಗಳನ್ನು ತಿನ್ನುತ್ತಿದ್ದನ್ನು ನೋಡಿ, ಸರಳವಾದ , ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಆಹಾರಗಳಿಗಿಂತ ಹೆಚ್ಚಾಗಿ ಮಗು ಆ ಪ್ರಲೋಭನಗೊಳಿಸುವ ಆಹಾರ ಪದಾರ್ಥಗಳನ್ನು ತಿನ್ನಲು ಬಯಸುತ್ತದೆ. ನಿಮ್ಮ ಮಗುವಿನ ಆಹಾರದ ಆದ್ಯತೆಗಳ ಮೇಲೆ ಪ್ರಭಾವ ಬೀರಲು, ಇಡೀ ಕುಟುಂಬಕ್ಕೆ ಒಂದೇ ಆಹಾರವನ್ನು ತಯಾರಿಸಿ, ಊಟವನ್ನು ಒಟ್ಟಿಗೆ ಆನಂದಿಸಿ (ಕನಿಷ್ಠ ಒಂದು ಹೊತ್ತಿನ ಊಟವನ್ನು ಜೊತೆಯಾಗಿ ಸೇವಿಸಿ).

ತಾಳ್ಮೆ ಮತ್ತು  ಸಂಚಾರದ ಮೂಲಭೂತ  ನಿಯಮಗಳು:

ಅನಗತ್ಯವಾಗಿ ಸಂಚಾರಿ ಸಂಕೇತಗಳಲ್ಲಿ (ಸಿಗ್ನಲ್ ) ಹಾರ್ನ್ ಮಾಡುವುದು ನಿಮ್ಮ ಮಗುವಿಗೆ ತಾಳ್ಮೆ ಮತ್ತು ಅಶಿಸ್ತು  ಇದ್ದರೂ  ಬಗ್ಗೆ ಯಾವುದೇ ಹಾನಿ ಇಲ್ಲ ಎಂದು ತಪ್ಪಾದ ಅನಿಸಿಕೆ ನೀಡುತ್ತದೆ. ನಿಮ್ಮ ಮಗುವು ತಾಳ್ಮೆಯಿಂದಿರಲು ಬಯಸಿದರೆ, ನೀವು ಉದಾಹರಣೆಗಳ ಮೂಲಕ ಹಾಗೆ ಮಾಡಬೇಕು. ಸಂಚಾರ ಎಷ್ಟು ಕೆಟ್ಟದ್ದಾಗಿದ್ದರೂ , ಯಾವಾಗಲೂ ತಾಳ್ಮೆಯಿಂದಿರಿ. ವಿಶೇಷವಾಗಿ ಮಗುವಿನೊಂದಿಗೆ ಚಾಲನೆ ಮಾಡುವಾಗ ಮತ್ತು ಅವರು ನಿಕಟವಾಗಿ ನಿಮ್ಮನ್ನು ಗಮನಿಸುತ್ತಿರುವಾಗ ದುಡುಕು ಚಾಲನೆ , ಫೋನ್ ಅನ್ನು ಚಾಲನೆ ಮಾಡುವುದು ಅಥವಾ ಮಾತನಾಡುವುದನ್ನು ತಪ್ಪಿಸಿಕೊಳ್ಳಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon