Link copied!
Sign in / Sign up
26
Shares

ವೀಕ್ಷಿಸಿ : ಹೆರಿಗೆ ಮಾಡಿ ಹೊರತೆಗೆದ ಮಗುವನ್ನ ಪುನಃ ಹೊಟ್ಟೆಯೊಳಗಿಟ್ಟು ಹೊಲಿಗೆ ಹಾಕಿದರು! ಮುಂದೆ?

ನೀವು ಕ್ಲಿಷ್ಟಕರವಾದ, ವಿಚಿತ್ರವಾದ ಹೆರಿಗೆಗಳ ಬಗ್ಗೆ ಕೇಳಿರುತ್ತೀರಾ. ಆದರೆ, ಮಗುವನ್ನು ತಾಯಿಯ ಹೊಟ್ಟೆಯಿಂದ ಹೊರತೆಗೆದು ಪುನಃ ಆಕೆಯ ಹೊಟ್ಟೆಯ ಒಳಗಡೆ ಇಟ್ಟು ಹೊಲಿಗೆ ಹಾಕಿರುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?! ನೀವು ಅಂತ ಅಲ್ಲ, ಬಹುಷಃ ಯಾರು ಇಂತಹ ಪ್ರಕರಣದ ಬಗ್ಗೆ ಎಲ್ಲಿಯೂ ಕೇಳಿರುವುದಿಲ್ಲ ಅಂದುಕೊಳ್ಳುತ್ತೀನಿ. ಹೌದು ಇದರಲ್ಲಿ ಯಾವುದು ಕೂಡ ಸುಳ್ಳಲ್ಲ, ಉತ್ಪ್ರೇಕ್ಷೆ ಕೂಡ ಅಲ್ಲ. ಇದು ನಿಜವಾಗಿಯೂ ನಡೆದಿರುವ ಘಟನೆ. ಅಷ್ಟಕ್ಕೂ ಇಲ್ಲಿ ಆಗಿದ್ದೇನು, ಮುಂದೇನಾಯಿತು ಎಂದು ಕೇಳಿದರೆ ನೀವು ನಿಬ್ಬೆರಗಾಗುತ್ತೀರಾ! 

ಮಾರ್ಗರೆಟ್ ಬೊಮೇರ್ ಎಂಬ ಗರ್ಭಿಣಿ ಹೆಂಗಸು ಹೊಟ್ಟೆಯಲ್ಲಿ ತನ್ನ ಮೂರನೇ ಮಗುವನ್ನು ಹೊತ್ತಿದ್ದಳು. ವೈದ್ಯರು ಮೊದಲೇ ಹೇಳಿದಂತೆ ಆಕೆ ತನ್ನ ಗರ್ಭಧಾರಣೆಯ 13ನೇ ವಾರದಲ್ಲಿ ತಪಾಸಣೆಗೆಂದು ಆಸ್ಪತ್ರೆಗೆ ತೆರೆಳಿದಳು. ಆದರೆ ಅಲ್ಲಿ ತಪಾಸಣೆ ನಡೆಸಿದ ವೈದ್ಯರೇ ಅಚ್ಚರಿಪಡುವಂತದ್ದು ಕಾಣಿಸಿತು. ಅದೇನೆಂದರೆ, ಹೊಟ್ಟೆಯೊಳಗಿರುವ ಮಗುವಿನ ದೇಹದಲ್ಲಿ ಸ್ಯಾಕ್ರೋಕಾಚಿಗಲ್ ಟೆರಟೋಮಾ ಎಂಬ ಮಾರಣಾಂತಿಕ ಗಡ್ಡೆಯೊಂದು ಬೆಳೆದಿತ್ತು. ಈ ಗಡ್ಡೆಯು ಮಗುವು ಗರ್ಭದೊಳಗೆ ಇದ್ದಾಗ ಬೆಳೆದುಕೊಳ್ಳುತ್ತದೆ. 

ಕೆಲವೊಂದು ಗಡ್ಡೆಗಳನ್ನ ನಾವು ಮಗುವು ಹುಟ್ಟಿದ ಮೇಲೆ ತೆಗೆದು ಹಾಕಬಹುದು, ಆದರೆ ಇನ್ನೂ ಕೆಲವಷ್ಟು ಗಡ್ಡೆಗಳು ಭ್ರೂಣದ ದೇಹದಲ್ಲಿನ ರಕ್ತ ಸಂಚಾರಕ್ಕೆ ತೊಡಕನ್ನು ಉಂಟು ಮಾಡಿ ಭ್ರೂಣಕ್ಕೆ ತೊಂದರೆ ಉಂಟುಮಾಡುತ್ತವೆ. ಈ ಗಡ್ಡೆಗಳು ಮಗುವಿನ ದೇಹದಿಂದ ರಕ್ತವನ್ನು ಹೀರಿ ಗಾತ್ರದಲ್ಲಿ ಬೆಳೆಯುತ್ತಾ ಹೋಗುತ್ತವೆ. ಆದರೆ ಈ ಕಡೆ ಮಗುವಿಗೂ ಬೆಳೆಯಲು ರಕ್ತ ಬೇಕಿರುವ ಕಾರಣ, ಇದು ಮಗು ಮತ್ತು ಗಡ್ಡೆ ನಡುವೆ ಒಂದು ಸ್ಪರ್ಧೆ ಆಗಿಬಿಡುತ್ತದೆ. ಇಂತಹ ಸ್ಪರ್ಧೆಗಳಲ್ಲಿ ಕೆಲವು ಬಾರಿ ಗಡ್ಡೆಯೇ ಗೆಲ್ಲುತ್ತದೆ ಮತ್ತು ಮಗುವಿನ ಹೃದಯವು ರಕ್ತವಿಲ್ಲದೆ ಬಡಿಯುವುದು ನಿಲ್ಲಿಸಿ, ಮಗುವು ಸಾವನ್ನಪ್ಪುತ್ತದೆ.

ಹೀಗಾಗಿ ಟೆಕ್ಸಾಸ್ ಚಿಲ್ದ್ರೆನ್ಸ್ ಫೀಟಲ್ ಸೆಂಟರಿನ ವೈದ್ಯರು ಮಾರ್ಗರೆಟ್ 23 ವಾರದ ಗರ್ಭಿಣಿ ಆಗಿದ್ದಾಗ ಆಕೆಯ ಉದರವನ್ನು ಕುಯ್ದು ಫೀಟಲ್ ಸರ್ಜರಿ ಮಾಡಿದರು. ಭ್ರೂಣವನ್ನು ಹೊರತೆಗೆದು, ಅದರ ದೇಹದಿಂದ ಗಡ್ಡೆಯನ್ನು ಬೇರ್ಪಡಿಸಿದರು ವೈದ್ಯರು. ನಂತರ ಆ ಮಗುವನ್ನು ಆಕೆಯ ಹೊಟ್ಟೆಯೊಳಗಿಟ್ಟು, ಹೊಲಿಗೆ ಹಾಕಲಾಯಿತು.

ಇದಾದ 12 ವಾರಗಳ ನಂತರ ಆಕೆಯನ್ನು ಪುನಃ ಸಿಸೇರಿಯನ್ ಸರ್ಜರಿಗೆ ಒಳಪಡಿಸಲಾಯಿತು. ಈ ಬಾರಿ ಮಗುವನ್ನು ನಿರಾಯಾಸವಾಗಿ ಹೊರತೆಗೆದ ವೈದ್ಯರು, ಮಗುವು ಆರೋಗ್ಯಕರವಾಗಿದೆ ಎಂದು ತಿಳಿಸಿದರು. ಈಗ ಮಾರ್ಗರೆಟ್ ಕೂಡ ಆರೋಗ್ಯಕರ ಜೀವನ ಸಾಗಿಸುತ್ತಿದ್ದಾಳೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon