Link copied!
Sign in / Sign up
4
Shares

ಪಲ್ಮನರಿ ಫೈಬ್ರೋಸಿಸ್: ಗುಣಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ (Pulmonary Fibrosis: Symptoms, Causes And Treatments in Kannada)

ಶ್ವಾಸಕೋಶದ ಪರಿಣಾಮ ಬೀರುವ ಶ್ವಾಸಕೋಶ ಸಂಬಂಧಿತ ಖಾಯಿಲೆ - ಪಲ್ಮನರಿ ಫೈಬ್ರೋಸಿಸ್. ಈ ರೀತಿಯ ಶ್ವಾಸಕೋಶದ ರೋಗ ಸಾಮಾನ್ಯವಾಗಿ ಉಸಿರಾಡುವ ಸಾಮರ್ಥ್ಯಕ್ಕೆ ತೊಂದರೆಯುಂಟುಮಾಡಿ, ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯ ರೂಪವನ್ನು ತೆಗೆದುಕೊಳ್ಳುವ ಅನೇಕ ವಿಧದ ಶ್ವಾಸಕೋಶದ ಕಾಯಿಲೆಗಳಿವೆ.  ಪಲ್ಮನರಿ ಫೈಬ್ರೋಸಿಸ್ನಿಂದ ಬಳಲುತ್ತಿರುವ ರೋಗಿಗಳು ಉಸಿರಾಡಲು ಕಷ್ಟವನ್ನು ಅನುಭವಿಸುತ್ತಾರೆ. ರೋಗಿಯು ಪಲ್ಮನರಿ ಪರಿಣತರನ್ನು ಭೇಟಿಯಾಗಲು ಇದು ತುಂಬಾ ಅವಶ್ಯಕವಾಗಿದೆ. ಏಕೆಂದರೆ ಈ ರೋಗ ಸಮಯ ಕಳೆದಂತೆ ಹೆಚ್ಚಾಗುತ್ತದೆ. ಈ ರೋಗವನ್ನು ನಿರ್ಲಕ್ಷಿಸಿದ್ದೇ ಆದಲ್ಲಿ, ಇದರ ಪರಿಣಾಮಗಳು ಗಂಭೀರವಾಗುತ್ತದೆ. ಈ ರೋಗವನ್ನು ಪಲ್ಮನರಿ ಕಾಯಿಲೆ ಮತ್ತು ನಿರ್ಬಂಧಿತ ಶ್ವಾಸಕೋಶದ ರೋಗ ಎಂದು ವಿಂಗಡಿಸಲಾಗಿದ್ದು - ಇದು ಒಂದು ಗಂಭೀರ ರೋಗವಾಗಿದೆ. ಈ ಲೇಖನವು ಪಲ್ಮನರಿ ಫೈಬ್ರೋಸಿಸ್, ಪಲ್ಮನರಿ ಫೈಬ್ರೋಸಿಸ್ ಲಕ್ಷಣಗಳು ಮತ್ತು ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. 

ಪರಿವಿಡಿ:

೧. ಪಲ್ಮನರಿ ಫೈಬ್ರೋಸಿಸ್ ಎಂದರೇನು? (What is pulmonary fibrosis? in Kannada)

೨. ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಎಂದರೇನು? (What is Idiopathic pulmonary fibrosis? in Kannada)

೩. ಪಲ್ಮನರಿ ಫೈಬ್ರೋಸಿಸ್ ಕಾರಣಗಳು (Causes of pulmonary fibrosis in Kannada)

೪. ಪಲ್ಮನರಿ ಫೈಬ್ರೋಸಿಸ್ ಗುಣಲಕ್ಷಣಗಳು (Symptoms of pulmonary fibrosis in Kannada)

೫. ಪಲ್ಮನರಿ ಫೈಬ್ರೋಸಿಸ್ ಚಿಕಿತ್ಸೆ (Treatment for pulmonary fibrosis in Kannada)

೧. ಪಲ್ಮನರಿ ಫೈಬ್ರೋಸಿಸ್ ಎಂದರೇನು? (What is pulmonary fibrosis? in Kannada)

ಪಲ್ಮನರಿ ಫೈಬ್ರೋಸಿಸ್ ಎನ್ನುವುದು ನಿರ್ಬಂಧಿತ ಶ್ವಾಸಕೋಶದ ರೋಗವಾಗಿದ್ದು, ಶ್ವಾಸಕೋಶದ ವಿಸ್ತರಿಸುವ ಸಾಮರ್ಥ್ಯವನ್ನು ಕುಂದಿಸಿ, ಶ್ವಾಸಕೋಶದ ಒಟ್ಟಾರೆ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಎಲ್ಲಾ ಪಲ್ಮನರಿ ಕಾಯಿಲೆಯ ಗುಣಲಕ್ಷಣಗಳು - ರೋಗಿಗಳು ಉಸಿರಾಟದ ತೊಂದರೆಗಳಿಂದ ಬಳಲುತ್ತಾರೆ ಮತ್ತು ಉಸಿರಾಟದಲ್ಲಿ ತೊಂದರೆ ಅನುಭವಿಸುತ್ತಾರೆ. 

ಸಾಮಾನ್ಯವಾಗಿ ಈ ರೋಗ ಶ್ವಾಸಕೋಶದ ಅಂಗಾಂಶ ಹಾನಿಗೊಳಗಾದಾಗ ಅಥವಾ ಗಾಯಗೊಂಡಾಗ ಆಗುತ್ತದೆ. ಹಾನಿಗೊಳಗಾದ ಕಾರಣದಿಂದ ಅಂಗಾಶ ದಪ್ಪಗೊಂಡು, ಶ್ವಾಸಕೋಶ ಸೂಕ್ತವಾಗಿ ಕಾರ್ಯನಿರ್ವಹಿಸಲು ಆಗುವುದಿಲ್ಲ. ಅದರೊಂದಿಗೆ ಈ ರೋಗ ಪ್ರಗತಿಪರ ಶ್ವಾಸಕೋಶವಾಗಿರುವುದರಿಂದ, ಇದನ್ನು ನಿರ್ಲಕ್ಷಿಸಬಾರದು. ರೋಗಲಕ್ಷಣಗಳು ಕಾಣತೊಡಗಿದೊಡನೆಯೇ ತಜ್ಞರನ್ನು ಭೇಟಿಯಾಗುವುದು ಒಳಿತು. 

[Back To Top]

೨. ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಎಂದರೇನು? (What is Idiopathic pulmonary fibrosis? in Kannada)

ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಅಥವಾ IPF ಎಂದು ಕರೆಯಲ್ಪಡುವ ಈ ಶ್ವಾಸಕೋಶದ ರೋಗಕ್ಕೆ ಯಾವುದೇ ಕಾರಣವಿಲ್ಲ. IPF ಸಾಮಾನ್ಯವಾಗಿ ಕಂಡುಬರುವ ಶ್ವಾಸಕೋಶದ ರೋಗವಾಗಿದ್ದು, ಪ್ರತಿವರ್ಷ ೫೦೦೦೦ ಹೊಸ ರೋಗಿಗಳು ಈ ಪಟ್ಟಿಗೆ ಸೇರುತ್ತಾರೆ. ಸಂಖ್ಯ್ಯಸಾಸ್ತ್ರೀಯವಾಗಿ ಹೇಳುವುದಾದರೆ, ಈ ನಿರ್ಬಂಧಿತ ಶ್ವಾಸಕೋಶದ ಕಾಯಿಲೆ ಸಾಮಾನ್ಯವಾಗಿ 50 ಮತ್ತು 70 ರ ವಯಸ್ಸಿನ ಜನರಲ್ಲಿ ಕಂಡುಬರುತ್ತದೆ. ಇದಲ್ಲದೆ, ಕೆಲವು ಕಾರಣಗಳಿಂದಾಗಿ, ಬಹುತೇಕ ಬಲಿಪಶುಗಳು ಪುರುಷರಾಗಿದ್ದಾರೆ.

ಪಲ್ಮನರಿ ಫೈಬ್ರೋಸಿಸ್ನಂತೆಯೇ, ಐಪಿಎಫ್ ಶ್ವಾಸಕೋಶದ ಅಂಗಾಂಶವನ್ನು ಗಾಯಗೊಳಿಸುತ್ತದೆ ಮತ್ತು ಅದರ ಒಟ್ಟಾರೆ ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಐಪಿಎಫ್ ಸಹ ಪ್ರಗತಿಶೀಲ ಶ್ವಾಸಕೋಶದ ರೋಗವಾಗಿದೆ. ಆದಾಗ್ಯೂ, ಈ ರೋಗದ ಪ್ರಗತಿಗಳ ಮಟ್ಟವನ್ನು ಊಹಿಸುವುದು ಅಸಾಧ್ಯ. ಇಂದು ಆರೋಗ್ಯವಾಗಿ ಕಾಣುವ IPF ರೋಗಿ, ನಾಳೆ ಅತ್ಯಂತ ನೋವನ್ನು ಅನುಭವಿಸಬಹುದು. 

೩. ಪಲ್ಮನರಿ ಫೈಬ್ರೋಸಿಸ್ ಕಾರಣಗಳು (Causes of pulmonary fibrosis in Kannada):

ಮೊದಲೇ ಚರ್ಚಿಸಿರುವಂತೆ ಪಲ್ಮನರಿ ಫೈಬ್ರೋಸಿಸ್ ರೋಗದ ಪ್ರಮುಖ ಕಾರಣ ಹಾನಿಗೊಂಡಿರುವ ಶ್ವಾಸಕೋಶದ ಅಂಗಾಂಶ. ಆದರೆ ಶ್ವಾಸಕೋಶದ ಅಂಗಾಂಶ ಹೇಗೆ ಹಾನಿಗೊಳಗಾಗುತ್ತದೆ? ಅದು ಹಾನಿಗೊಳ್ಳುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು, ನಾವು ಪಲ್ಮನರಿ ರೋಗದ ಕಾರಣಗಳನ್ನು ತಿಳಿದುಕೊಳ್ಳಬೇಕು. 

ಔದ್ಯೋಗಿಕ ಅಪಾಯ: ಕೆಲವು ಮಾಲಿನ್ಯಕಾರಕ ಮತ್ತು ವಿಷಕಾರಕಗಳಿಗೆ ನಿಮ್ಮ ದೇಹವನ್ನು ದೀರ್ಘಕಾಲದವರೆಗೆ ತೆರೆದಿಟ್ಟಾಗ, ಅವುಗಳು ನಿಮ್ಮ ಶ್ವಾಸಕೋಶಗಳಿಗೆ ಹಾನಿ ಉಂಟುಮಾಡುತ್ತವೆ. ಅನೇಕ ಉದ್ಯೋಗಗಳು ಉದ್ಯೋಗಿಗಳನ್ನು ಅತಿ ಕಠಿಣ ಪರಿಸ್ಥಿತಿಗೆ ಒಡ್ಡುತ್ತವೆ. 'ವಿಷಕಾರಕ ಮತ್ತು ಮಾಲಿನ್ಯಕಾರಕ' ಎಂದರೆ ಯಾವ ವಸ್ತುಗಳು ಎನ್ನುವ ಮಾಹಿತಿ ಇಲ್ಲಿದೆ:

೧. ಸಿಲಿಕಾ ಧೂಳು 

೨. ಕಲ್ಲಿದ್ದಲಿನ ಧೂಳು 

೩. ಪ್ರಾಣಿಗಳ ಮಲಮೂತ್ರಗಳು

೪. ಆಸ್ಬೆಸ್ಟೊಸ್ ಎಳೆಗಳು 

ಕಿರಣಗಳಿಗೆ ಒಡ್ಡುವುದು: ಪದೇ ಪದೇ ಕಿರಣಗಳಿಗೆ ನಿಮ್ಮ ದೇಹವನ್ನು ಒಡ್ಡುವುದರಿಂದ ನಿಮ್ಮ ಶ್ವಾಸಕೋಶ ಹಾನಿಗೊಳಗಾಗಬಹುದು. ಇದೆ ಕಾರಣದಿಂದ ಕಿಮೊತೆರಪಿ ಅಥವಾ ಈ ರೀತಿಯ ಕಿರಣಗಳನ್ನು ಉಪಯೋಗಿಸಿ ಕೊಡುವ ಚಿಕಿತ್ಸೆ ಪಡೆದವರು ಶ್ವಾಸಕೋಶಗಳ ಹಾನಿಯಿಂದ ಬಳಲುವಂತಾಗಬಹುದು. ಇಂತಹ ಪರಿಸ್ಥಿತಿಗಳಲ್ಲಿ ಹಾನಿಗೊಳಗಾದ ಶ್ವಾಸಕೋಶದ ಗುಣಲಕ್ಷಣಗಳು ತಕ್ಷಣವೇ ಕಾಣದಂತೆಯಾಗಬಹುದು. ಈ ರೋಗಗಳ ಗುಣಲಕ್ಷಣಗಳು ಹೊರಬೀಳಲು, ವರ್ಷಗಳ ಕಾಲ ತೆಗೆದುಕೊಳ್ಳಬಹುದು. 

[Back To Top]

೩. ಪಲ್ಮನರಿ ಫೈಬ್ರೋಸಿಸ್ ಕಾರಣಗಳು (Causes of pulmonary fibrosis in Kannada):

ಔಷಧಿಗಳು: ಪ್ರತಿಯೊಬ್ಬರಿಗೂ ತಿಳಿದಿರುವಂತೆ ಅಲೋಪಥಿಕ್ ಔಷಧಿಗಳಿಗೆ ತನ್ನದೇ ಆದ ಅಡ್ಡಪರಿಣಾಮಗಳಿವೆ. ಕೆಲವು ಔಷಧಿಗಳ ಅಡ್ಡಪರಿಣಾಮಗಳು ನಿಮ್ಮ ಶ್ವಾಸಕೋಶಕ್ಕೆ ಹಾನಿಯುಂಟು ಮಾಡಬಹುದು. ಆ ರೀತಿಯ ಹಲವು ಔಷಧಿಗಳ ಪಟ್ಟಿ ಇಲ್ಲಿದೆ:

೧. ಕಿಮೊತೆರಪಿ ಔಷಧಿಗಳು 

೨.  ಹೃದಯ ಸಂಬಂಧಿತ ರೋಗಗಳ ಔಷಧಿಗಳು 

೩. ಆಯ್ದ ಪ್ರತಿಜೀವಕಗಳು (ಅಂಟಿಬಿಯೋಟಿಕ್ಸ್)

೪. ಆಯ್ದ ಉರಿಯೂತದ ವಿರೋಧಿ ಔಷಧಿಗಳು (ಆಂಟಿ ಇನ್ಫ್ಲೇಮೇಟರಿ)

ವೈದ್ಯಕೀಯ ಖಾಯಿಲೆಗಳು: ಕೆಲವು ಖಾಯಿಲೆಗಳು ನಿಮ್ಮ ಶ್ವಾಸಕೋಶಗಳಿಗೆ ಗಂಭೀರ ರೀತಿಯಲ್ಲಿ ಹಾನಿಯುಂಟು ಮಾಡಬಹುದು. ಅವುಗಳು ಪಲ್ಮನರಿ ಫೈಬ್ರೋಸಿಸ್ ಸಹ ಉಂಟುಮಾಡಬಹುದು. ಅಂತಹ ಕೆಲವು ವೈದ್ಯಕೀಯ ಖಾಯಿಲೆಗಳು ಇಲ್ಲಿವೆ: 

೧. ನ್ಯುಮೋನಿಯಾ 

೨. ಕೀಲೂತ 

೩. ಸ್ಕ್ಲೆರೋಡೆರ್ಮ

೪. ಅಂಗಾಂಶಗಳಿಗೆ ಸಂಬಂಧಿತ ರೋಗಗಳು

ಪಲ್ಮನರಿ ಫೈಬ್ರೋಸಿಸ್ ರೋಗ ಉಂಟಾಗಲು ಹಲವಾರು ಸಂಭವನೀಯ ಕಾರಣಗಳಿದ್ದರೂ, ಅದರ ಸರಿಯಾದ ಕಾರಣ ಕಂಡುಕೊಳ್ಳುವುದು ಕಷ್ಟ. ಈ ನಿರ್ಬಂಧಿತ ಶ್ವಾಸಕೋಶದ ಖಾಯಿಲೆಯ ಕಾರಣ ಗೊತ್ತಾಗದೆ ಇದ್ದರೆ, ಅದನ್ನು ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಎನ್ನುತ್ತಾರೆ. ಇಲ್ಲಿಯವರೆಗೆ ಯಾವುದೇ ರೀತಿಯ ಸಂಶೋಧನೆ ರೋಗಗಳ ಕಾರಣವನ್ನು ನಿರ್ಣಯಿಸಲಾಗಿಲ್ಲ. ಆದಾಗ್ಯೂ, ಊಹಾಪೋಹಗಳು ಸಾಕಷ್ಟಿವೆ - ವೈರಸ್, ತಂಬಾಕು ಸೇವನೆ, ಧೂಮಪಾನ, ವಂಶವಾಹಿ, ಇತ್ಯಾದಿ. 

೪. ಪಲ್ಮನರಿ ಫೈಬ್ರೋಸಿಸ್ ಗುಣಲಕ್ಷಣಗಳು (Symptoms of pulmonary fibrosis in Kannada):

ಪಲ್ಮನರಿ ಫೈಬ್ರೋಸಿಸ್ ಗುಣಲಕ್ಷಣಗಳ ಗಾಂಭೀರ್ಯತೆ ಒಬ್ಬ ಮನುಷ್ಯನಿಂದ ಇನ್ನೊಬ್ಬ ಮನುಷ್ಯನಿಗೆ ಬದಲಾಗುತ್ತದೆ. ಕೆಲವರಿಗೆ ರೋಗ ಶುರುವಾದ ತಕ್ಷಣವೇ ಅದರ ಗಂಭೀರ ಗುಣಲಕ್ಷಣಗಳು ಕಾಣುತ್ತವೆ. ಆದರೆ ಅಂತಹ ಪ್ರಕರಣಗಳು ವಿರಳ. ಸಾಮಾನ್ಯವಾಗಿ ಈ ರೋಗದ ಗುಣಲಕ್ಷಣಗಳು ಸಮಯ ಕಳೆದಂತೆ ಗಂಭೀರವಾಗತೊಡಗುತ್ತವೆ. ಅದಕ್ಕೆ ಕಾರಣ ಈ ರೋಗ ಪ್ರಗತಿಪರ ರೋಗ. ಶ್ವಾಸಕೋಶದ ತಜ್ಞರು ರೋಗದ ಗಾಂಭೀರ್ಯತೆಯನ್ನು ಅದರ ಗುಣಲಕ್ಷಣಗಳನ್ನು ಗಮನಿಸಿ ನಿಶ್ಚಯಿಸಿ, ಔಷಧಿ ನೀಡುತ್ತಾರೆ. ಈ ರೋಗದಿಂದ ಬಳಲುತ್ತಿರುವ ರೋಗಗಳು ಸಾಮಾನ್ಯವಾಗಿ ಕೆಳಗೆಕೊಟ್ಟಿರುವ ಗುಣಲಕ್ಷಣಗಳನ್ನು ತೋರುತ್ತಾರೆ. 

‣ ಆಗಾಗ ಉಸಿರಾಟದಲ್ಲಿ ತೊಂದರೆ

‣ ಒಣ ಕೆಮ್ಮು

‣ ವಿಶ್ಲೇಷಿಸಲಾಗದ ಸುಸ್ತು, ಆಯಾಸ 

‣ ಅನಿರೀಕ್ಷಿತ ತೂಕ ನಷ್ಟ

‣ ತೀವ್ರವಾದ ಕೀಳು ಮತ್ತು ಸ್ನಾಯು ನೋವು

‣ ಕಾಲ್ಬೆರಳು ಮತ್ತು ಕೈ ಬೆರಳುಗಳ ಸಂಘಟನೆ 

[Back To Top]

೫. ಪಲ್ಮನರಿ ಫೈಬ್ರೋಸಿಸ್ ಚಿಕಿತ್ಸೆ (Treatment for pulmonary fibrosis in Kannada):

ಈಗ ನಾವು ತಿಳಿಸುವ ವಿಷಯ ನಿಮ್ಮಲ್ಲಿ ನೋವನ್ನುಂಟು ಮಾಡಬಹುದು. ಪಲ್ಮನರಿ ಫೈಬ್ರೋಸಿಸ್ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ! ನೀವು ಯಾವ ಶ್ವಾಸಕೋಶದ ತಜ್ಞರನ್ನು ಭೇಟಿ ಮಾಡಿದರೂ ಅವರು ಹೇಳುವುದು ಇದೆ ಮಾತನ್ನೇ! ಮತ್ತು ಅದು ಸತ್ಯ ಕೂಡಾ. ಶ್ವಾಸಕೋಶದ ಅಂಗಾಂಶಕ್ಕೆ ಹಾನಿಯುಂಟಾಗಿದ್ದರೆ, ಅದನ್ನು ಪುನರಾವರ್ತಿತಗೊಳಿಸಲು ಬರುವುದಿಲ್ಲ. ಅದಕ್ಕಿಂತ ದುಃಖಕರ ಸಂಗತಿಯೆಂದರೆ ಈ ರೋಗದ ಪ್ರಗತಿಯನ್ನು ತಡೆಗಟ್ಟಲು ಸಹ ಯಾವುದೇ ಔಷಧಿಯನ್ನು ವೈದ್ಯರು ಸಂಶೋಧಿಸಲಾಗಿಲ್ಲ. ರೋಗಿಗಳು ಯಾವುದೇ ಔಷಧಿಯನ್ನು ತೆಗೆದುಕೊಂಡರೂ ಅದು ಕೇವಲ ರೋಗದ ಗುಣಲಕ್ಷಣಗಳನ್ನು ಕಡಿಮೆಗೊಳಿಸುವ ಕಾರಣಕ್ಕಾಗಿಯೇ ವಿನಃ ಯಾವುದೇ ಇತರ ಬಗೆಯ ಚಿಕಿತ್ಸೆಗಲ್ಲ. ಈ ರೋಗದ ಗುಣಲಕ್ಷಣಗಳನ್ನು ಕಡಿಮೆಗೊಳಿಸುವುದರಿಂದ ನಿಮ್ಮ ಜೀವನದ ಗುಣಮಟ್ಟ ಸುಧಾರಿಸುತ್ತದೆ. 

ಶ್ವಾಸಕೋಶದ ತಜ್ಞರು ರೋಗಿಯ ಗುಣಲಕ್ಷಣಗಳನ್ನು ಗಮನಿಸಿ, ಸೂಕ್ತ ಚಿಕಿತ್ಸೆ ನೀಡುತ್ತಾರೆ. ಹಲವಾರು ಚಿಕಿತ್ಸೆ ಬಗೆಗಳಿವೆ: 

‣ ಔಷಧಿಗಳು: ರೋಗಿಗಳಿಗೆ ಬೇರೆ ಚಿಕಿತ್ಸೆಯೊಂದಿಗೆ, ಪ್ರಾಯಶಃ ಔಷಧಿಗಳನ್ನು ತೆಗೆದುಕೊಳ್ಳಲೂ ವೈದ್ಯರು ಹೇಳುತ್ತಾರೆ. ಪಲ್ಮನರಿ ಫೈಬ್ರೋಸಿಸ್ ರೋಗದ ಔಷಧಿಗಳೊಂದಿಗೆ, ನಿಮ್ಮ ಹೊಟ್ಟೆಯ ಆಮ್ಲೀಯತೆ ವಿರುದ್ಧ ಹೋರಾಡುವ ಔಷಧಿಗಳನ್ನು ತೆಗೆದುಕೊಳ್ಳಲು ನಿಮ್ಮ ವೈದ್ಯರು ಸಲಹೆ ನೀಡಬಹುದು. 

‣ ಚಿಕಿತ್ಸೆ/ಥೆರಪಿ: ಆಮ್ಲಜನಕದ ಥೆರಪಿ ಪಲ್ಮನರಿ ಫೈಬ್ರೋಸಿಸ್ ರೋಗದಿಂದ ಬಳಲುತ್ತಿರುವವರಲ್ಲಿ ಜನಪ್ರಿಯತೆಯನ್ನು ಪಡೆದಿದೆ. ಈ ಥೆರಪಿ ಆಗಿರುವ ಹಾನಿಯನ್ನು ಸರಿ ಮಾಡುವುದಿಲ್ಲ. ಆದರೆ, ಉಸಿರಾಟವನ್ನು ತಕ್ಕ ಮಟ್ಟಿಗೆ ಸುಲಭಗೊಳಿಸುತ್ತದೆ. ಇದು ರಕ್ತೋಡಿತ್ತಡವನ್ನು ಸಾಮಾನ್ಯ ಮಟ್ಟಕ್ಕೆ ತರುವುದಷ್ಟೇ ಅಲ್ಲದೇ, ನಿದ್ರೆಯ ಗುಣಮಟ್ಟವನ್ನೂ ಸುಧಾರಿಸುತ್ತದೆ.

[Back To Top]

‣ ಪುನರ್ವಸತಿ ಕಾರ್ಯಕ್ರಮಗಳು: ಶ್ವಾಸಕೋಶದ ರೋಗಗಳಿಂದ ಚೇತರಿಸಿಕೊಳ್ಳುತ್ತಿರುವವರು ಅಗತ್ಯವಾಗಿ ಪುನರ್ವಾಸಾತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮದ ಉದ್ದೇಶ, ಪಲ್ಮನರಿ ಫೈಬ್ರೋಸಿಸ್ ಗುಣಲಕ್ಷಣಗಳನ್ನು ಕಡಿಮೆಗೊಳಿಸಿ, ದೈನಂದಿನ ಕಾರ್ಯಾಚರಣೆಯಲ್ಲಿ ಸಕಾರಾತ್ಮಕ ಸುಧಾರಣೆ ತಂದುಕೊಡುವುದು. ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಕೆಳಗಿನವುಗಳು ಒಳಗೊಂಡಿರುತ್ತವೆ:

     * ನಿಯಮಿತವಾದ ದೈಹಿಕ ವ್ಯಾಯಾಮ 

     * ವಿವಿಧ ರೀತಿಯ ಉಸಿರಾಟದ ವಿಧಾನಗಳನ್ನು ಅಭ್ಯಸಿಸುವುದು

     * ಪೌಷ್ಟಿಕಾಂಶದ ಸಲಹೆ 

‣ ಶ್ವಾಸಕೋಶ ಸ್ಥಳಾಂತರಿಸುವುದು: ರೋಗದ ಗುಣಲಕ್ಷಣಗಳು ತೀವ್ರಗೊಂಡು, ನಿಮ್ಮ ಜೀವವನ್ನು ಇಕ್ಕಟ್ಟಿಗೆ ಸಿಲುಕಿಸಿದಾಗ ನಿಮ್ಮ ವೈದ್ಯರು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಶ್ವಾಸಕೋಶವನ್ನು ವರ್ಗಾಯಿಸಬೇಕೇ? ಅಥವಾ ಬೇಡವೇ? ಎಂದು! ಶ್ವಾಸಕೋಶವನ್ನು ವರ್ಗಾಯಿಸುವುದು ಒಂದು ಸಂಕೀರ್ಣವಾದ ಶಾಸ್ತ್ರಚಿಕಿತ್ಸೆಯಾಗಿರುವುದರಿಂದ ಅದನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸುತ್ತಾರೆ. ಹಾಗಾಗಿ ಅನೇಕ ವೈದ್ಯರು ಈ ಶಸ್ತ್ರಚಿಕಿತ್ಸೆಯನ್ನು ತಡೆಯಲು ಪ್ರಯತ್ನಿಸುತ್ತಾರೆ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon