Link copied!
Sign in / Sign up
4
Shares

ಪುಡಿ ಹಾಲುಣಿಸುವಾಗ ಗಮನದಲ್ಲಿರಿಸಿಕೊಳ್ಳಬೇಕಾದ ೪ ಅಂಶಗಳು

ವಾಸ್ತವವಾಗಿ ಮೊಲೆಹಾಲಿನ ಸ್ಥಾನವನ್ನು ಯಾವುದು ತುಂಬಲಾಗುವುದಿಲ್ಲ, ಅದರೂ ಆಧುನಿಕ ಜಗತ್ತಲ್ಲಿ ಪುಡಿ ಹಾಲಿನ ಬಳಕೆ ಹೆಚ್ಚಿರುವುದರಿಂದ ನಿಮ್ಮ ಮಗುವಿಗೆ ಕೆಲವು ಪುಡಿ ಹಾಲುಗಳು ಉತ್ತಮ ಆಹಾರವಾಗಬಹುದು. ನೀವು ಮೊಲೆಹಾಲುಣಿಸುವಿಕೆಯನ್ನು ಪೂರೈಸಲು ಆಯ್ಕೆ ಮಾಡಿದರೆ, ನಿಮ್ಮ ಮಗುವಿಗೆ ೩ ರಿಂದ ೪ ವಾರಗಳು ತುಂಬುವ ತನಕ ನಿರೀಕ್ಷಿಸಿ, ಹೀಗಾಗಿ ನಿಮ್ಮ ಎದೆಹಾಲು ಸರಬರಾಜು ಉತ್ತಮವಾಗಬಹುದು. ನಿಮ್ಮ ಮಗುವಿಗೆ ಎಷ್ಟು ಪುಡಿ ಹಾಲನ್ನು ನೀಡಬೇಕೆಂದು ಲೆಕ್ಕಾಚಾರ ಮಾಡುವುದು ಸ್ವಲ್ಪ ಕಷ್ಟ ಆಗಿರಬಹುದು. ನಿಮಗೆ ಗೊಂದಲವಾಗಬಹುದು: ಮಗುವು ಹೆಚ್ಚು ಸೇವಿಸುತ್ತಿದೆಯೋ? ಅಥವಾ ಕಡಿಮೆ ಸೇವಿಸುತ್ತಿದೆಯೋ? ಅಥವಾ ಅದಕ್ಕೆ ಎಷ್ಟು ಸಾಕು ಎಂದು. ಉತ್ತರ ನಿಮ್ಮ ಮಗುವಿನ ತೂಕ ಎಷ್ಟು ಮತ್ತು ಅವರು ಹೇಗೆ ಬೆಳೆಯುತ್ತಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಸಾಮಾನ್ಯವಾಗಿ ಮಕ್ಕಳು, ತಮಗೆ ಹಸಿವಾದಾಗ ಸೇವಿಸುತ್ತವೆ, ಮತ್ತು ಹೊಟ್ಟೆ ತುಂಬಿದಾಗ ಸೇವನೆ ನಿಲ್ಲಿಸುತ್ತವೆ. ಹೇಗಾದರೂ, ಬೇರೆ ಬೇರೆ ಶಿಶುಗಳ ನಡುವೆ ವ್ಯತ್ಯಾಸವಿರುತ್ತದೆ, ಮತ್ತು ಪ್ರತಿ ಮಗುವಿನ ಪೌಷ್ಟಿಕಾಂಶದ ಅಗತ್ಯತೆಗಳು ದಿನದಿಂದ ದಿನಕ್ಕೆ ಮತ್ತು ತಿಂಗಳಿಂದ ತಿಂಗಳಿಗೆ ಬದಲಾಗುತ್ತದೆ.

೧. ಲಭ್ಯವಿರುವ ವಿವಿಧ ಪುಡಿ ಹಾಲುಗಳು

ಶಿಶು ಪುಡಿ ಹಾಲುಗಳನ್ನು ನಿಮ್ಮ ಮಗುವಿನ ಪೌಷ್ಠಿಕಾಂಶದ ಅಗತ್ಯತೆಗಳನ್ನು ಪೂರೈಸಲು ತಯಾರಿಸಲಾಗುತ್ತದೆ, ಅವುಗಳನ್ನು ಮೊಲೆಹಾಲು ಮಾದರಿಯಲ್ಲೇ, ತಯಾರಿಸುತ್ತಾರೆ. ಹೆಚ್ಚಿನ ಪುಡಿ ಹಾಲುಗಳು ಮಾರ್ಪಡಿಸಿದ ಹಸುವಿನ ಹಾಲು, ಮತ್ತು ಎಲ್ಲಾ ಪ್ರಮಾಣಿತ ಛಾಪು(ಬ್ರಾಂಡ್ಸ್)ಗಳು, ಒಂದೇ ತರಹ ಇರುತ್ತವೆ. ನಿಮ್ಮ ವೈದ್ಯರು ಪುಡಿ ಹಾಲಿನ ಸೇವನೆಯನ್ನು ಸೂಚಿಸದಿದ್ದರೆ, ಕಬ್ಬಿಣದಿಂದ ಕೂಡಿರುವುದನ್ನು ಆಯ್ದುಕೊಳ್ಳಿ. ಸೂತ್ರ(ಪುಡಿ)ಹಾಲು ಮೂರು ವಿಧದ ಸಿದ್ಧತೆಗಳಲ್ಲಿ ಬರುತ್ತವೆ: ಸಿದ್ಧ-ಆಹಾರ, ದ್ರವ ಸಾರೀಕೃತ ಮತ್ತು ಪುಡಿ.

೨.ಎಷ್ಟು ಪುಡಿಹಾಲು ಸಾಕು?

ಹಲವು ಶಿಶುಗಳು ಕೆಲವು ತಾಸು ಕಳೆದಾಗಲೆಲ್ಲಾ ಆಹಾರ ಸೇವನೆಯನ್ನು ಬಯಸುತ್ತವೆ. ಮಗುವಿನ ಅಗತ್ಯಕ್ಕಿಂತ ಹೆಚ್ಚಿನ ಹಾಲನ್ನು ನೀಡಬೇಡಿ, ಇದರಿಂದ ಅವನ ತೂಕವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಶಿಶುಗಳ ಉದರವು ಸ್ವಲ್ಪ ಆಹಾರವನ್ನು ಮಾತ್ರ ಇರಿಸಿಕೊಳ್ಳಬಲ್ಲವು. ನಿಮ್ಮ ಮಗು ಬೆಳೆಯುತ್ತಿದ್ದಂತೆ, ಅವನ ಉದರದ ಗಾತ್ರ ಹೆಚ್ಚುತ್ತದೆ, ಆಗ ಅವನು ಹಾಲಿನ ಜೊತೆ ಆಹಾರವನ್ನು ಸೇವಿಸಬಲ್ಲನು. ಅವನು ೧ ತಿಂಗಳು ಕಳೆದಂತೆ ದಿನಕ್ಕೆ ೫೦೦ ಎಮ್.ಎಲ್. ನಷ್ಟು ಹಾಲನ್ನು ಸೇವಿಸುತ್ತಾನೆ. ಮಗುವು ೨ ತಿಂಗಳು ಕಳೆದಂತೆ ದಿನಕ್ಕೆ ೬ ರಿಂದ ೭ ಬಾರಿ ಹಾಲನ್ನು ಕೇಳುತ್ತಾನೆ. ಮಗುವಿಗೆ ಒಂದು ವರ್ಷ ಕಳೆದಂತೆ ಅವನು ಎರಡು ಸಮಯ ಹಾಲಿನ ಜೊತೆ, ದಿನಕ್ಕೆ ಮೂರು ಬಾರಿ ಆಹಾರ ಮತ್ತು ೨ ಬಾರಿ ತಿನಿಸುಗಳ ಸೇವನೆ ಮಾಡಲು ಆರಂಭಿಸುವನು.

೩.ನಿಮ್ಮ ಮಗುವಿಗೆ ಅಗತ್ಯವಿರುವ ಎಲ್ಲಾ ಪೌಷ್ಟಿಕಾಂಶವನ್ನು ಪಡೆಯುತ್ತಿದ್ದಾರೆ ಎಂದು ಸೂಚಿಸುವ ಚಿಹ್ನೆಗಳು

ಅ. ನಿಮ್ಮ ಮಗುವು ಮೊದಲ ಎರಡು ವಾರಗಳ ನಂತರ ತೂಕವನ್ನು ಹೆಚ್ಚಿಸಿಕೊಳ್ಳುವುದು, ಮತ್ತು ಅದೇ ರೀತಿ ತನ್ನ ತೂಕವನ್ನು ಒಂದು ವರ್ಷದವರೆಗೆ ಮುಂದುವರೆಸುವುದು. ಇದರ ಅರ್ಥ ನಿಮ್ಮ ಮಗುವಿನ ತೂಕವು ಸ್ಥಿರ ವೇಗದಲ್ಲಿದೆ.

ಬ.ದಿನಕ್ಕೆ ೫-೭ ಬಾರಿ ಮಗುವು ತನ್ನ ಬಟ್ಟೆಯನ್ನು(ಡೈಪರ್) ಒದ್ದೆ ಮಾಡಿಕೊಳ್ಳುತ್ತಿದ್ದರೆ.

ಕ. ಕೊನೆಯದಾಗಿ, ಆಹಾರದ ನಂತರ ನಿಮ್ಮ ಮಗು ವಿಶ್ರಾಂತಿ ಮತ್ತು ತೃಪ್ತಿಯನ್ನು ತೋರಿಸಿದರೆ, ಇದು ನಿಮ್ಮ ಮಗುವನ್ನು ಸಂತೋಷವಾಗಿರಿಸುತ್ತದೆ.

೪.ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳು

ಸ್ಥಾನ: ಹಾಲುಣಿಸುವಾಗ, ಮಗುವಿನ ತಲೆಯು ಸ್ವಲ್ಪ ಎತ್ತರದ ಕೋನದಲ್ಲಿ ಇಡಬೇಕು ಮತ್ತು ಬಾಟಲಿಯನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳುವಂತಿರಬೇಕು, ಹಾಗಾಗಿ ಅವನು ಹಾಲನ್ನು ಸಲೀಸಾಗಿ ಹೀರಬಹುದು.

ಮಗುವಿನ ಡೈಪರ್(ಕಚ್ಚಾ ಪಾಡ)ನ್ನು ಪರೀಕ್ಷಿಸಿ: ನಿಮ್ಮ ಮಗು ಸಾಮಾನ್ಯವಾಗಿ ಮಾಡುವುದಕ್ಕಿಂತ ಹೆಚ್ಚು ಬಟ್ಟೆಗಳನ್ನು ಒದ್ದೆ ಮಾಡಿಕೊಂಡಿದ್ದರೆ, ನಿಮ್ಮ ವೈದ್ಯರನ್ನು ಬೇಟಿ ಮಾಡಿ. ನಿಮ್ಮ ಮಗುವಿಗೆ ನೀರ್ಜಲಿಕರಣ ಅಥವಾ ಪೌಷ್ಟಿಕಾಂಶದಲ್ಲಿ ಕೊರತೆಯಾಗಿರಬಹುದು.

ಬಾಟಲಿಯ ತೊಟ್ಟುಗಳ ರಂಧ್ರವು ಸರಿಯಾದ ಗಾತ್ರದಲ್ಲಿ ಇದೆ ಎಂಬುದನ್ನು ಸ್ಪಷ್ಟಮಾಡಿಕೊಳ್ಳಿ: ರಂಧ್ರವು ದೊಡ್ಡದಾಗಿದ್ದರೆ, ಅದರಿಂದ ಹಾಲು ಬೇಗನೆ ಸರಾಗವಾಗಿ ಹರಿದು ಮಗುವು ಕುಡಿಯಲು ಹಾಗುವುದಿಲ್ಲ, ಮತ್ತು ಇದರಿಂದ ಶಿಶುವು ತಮಾಷೆಗೆ ಗುರಿಯಾಗುತ್ತದೆ. ಅಥವಾ ಸಣ್ಣದ್ದಾಗಿದ್ದರೆ, ಮಗುವು ಹಾಲನ್ನು ಹೀರಲು ಕಷ್ಟ ಪಡುತ್ತದೆ ಮತ್ತು ಹಾಲು ಮಗುವಿನ ಬಾಯಿಯನ್ನು ಪ್ರವೇಶಿಸುವುದಿಲ್ಲ ಇದರಿಂದ ಮಗುವಿನ ಹಸಿವು ಹೆಚ್ಚಾಗಿ ಅಳಲು ಆರಂಭಿಸಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon