Link copied!
Sign in / Sign up
2
Shares

ಗರ್ಭಧಾರಣೆ ಬಗ್ಗೆ ನೀವು ಎಲ್ಲಿಯೂ ಕೇಳಿರದ 9 ಸಂಗತಿಗಳು

ಮಾನವನ ದೇಹದ ಒಳಗೆ ಅನೇಕಾನೇಕ ಕಾರ್ಯಗಳು, ಚಟುವಟಿಕೆಗಳು ನಡೆಯುವ ಕಾರಣ ಮಾನವನ ದೇಹವು ತುಂಬಾ ವಿಚಿತ್ರವೆಂದು ಹೇಳಲಾಗುತ್ತದೆ. ಅದಕ್ಕಿಂತ ವಿಚಿತ್ರವೆನಿಸುವುದು ಏನು ಅಂದರೆ ನಿಮ್ಮ ದೇಹದ ಒಳಗಡೆಯೇ ಮತ್ತೊಂದು ಪುಟ್ಟ ಜೀವ ಬೆಳೆಯುತ್ತಿದೆ ಎಂಬುದನ್ನ ಅರಿಯುವುದು! ಅದ್ಭುತ ಹಾಗು ಸ್ವಲ್ಪ ಆತಂಕಕಾರಿ ಅಲ್ವ? !

ನೀವು ಇಷ್ಟಪಡುವಂತ, ನಿಮಗೆ ತಿಳಿಯದ ಗರ್ಭಧಾರಣೆ ಬಗೆಗಿನ ೧೦ ಸಂಗತಿಗಳಳನ್ನ ನಾವು ಕಲೆ ಹಾಕಿದ್ದೇವೆ. ಓದಿ :

೧. ನಾಯಿಗಳು, ಮೊಲಗಳು, ತಿಮಿಂಗಿಲಗಳು ಮತ್ತು ಮಾನವರು - ಎಲ್ಲಾರು ಒಂದೇ ಗಾತ್ರದ ಅಂಡಾಣು ಆಗಿ ಜೀವ ತಾಳುವುದು! ಅಂದರೆ ನಾವೆಲ್ಲಾ ಶುರು ಮಾಡುವುದು 0.2 ಮಿಲಿಮೀಟರ್ ಇಂದಲೇ! ನಿಜಾ !

೨. ಪೂರ್ವಜರು ಹೇಳುವ ಪ್ರಕಾರ ಗರ್ಭಧಾರಣೆ ವೇಳೆ ಹೆಚ್ಚು ಎದೆ ಉರಿ ಅನುಭವಿಸುವ ತಾಯಿಯರು ತಲೆ ಮೇಲೆ ತುಂಬಾ ಕೂದಲಿರುವ ಮಗುವಿಗೆ ಜನ್ಮ ನೀಡುತ್ತಾರಂತೆ.

೩. ನಿಮಗೆ ಗೊತ್ತಿರುವ ಹಾಗೆ, ನಿಮ್ಮ ದೇಹದಲ್ಲಿ ಜರಾಯು ಅಥವ ಗರ್ಭಚೀಲದ ಬೆಳವಣಿಗೆ ಆಗುತ್ತದೆಂದು. ಆದರೆ ಮಾನವ ಜಾತಿ ಮಾತ್ರ ಜನ್ಮ ನೀಡಿದ ನಂತರ ತನ್ನ ಜರಾಯುವನ್ನ ತಾನೇ ಸೇವಿಸದೆ ಇರುವುದು!

೪. ಅಪ್ಪಂದಿರು ಕೂಡ ಗರ್ಭಧಾರಣೆಯ ಲಕ್ಷಣಗಳನ್ನ ತೋರಿಸಬಹುದು! ಹಾಗೆಂದ ಮಾತ್ರಕ್ಕೆ ಅವರ ಹೊಟ್ಟೆಯಿಂದ ಮಗು ಬರುತ್ತದೆ ಎಂದಲ್ಲ. ಅವರಲ್ಲೂ ಕೂಡ ಬೆಳಗಿನ ಬೇನೆ, ತೂಕ ಹೆಚ್ಚಳ, ಹೊಟ್ಟೆಯ ಕೆಳಭಾಗದಲ್ಲಿ ಸೆಡೆತ ಆಗುವುದು ಕಾಣಿಸಿಕೊಳ್ಳಬಹುದು. ಇದನ್ನು “ಸಿಂಪಥೆಟಿಕ್ ಪ್ರೆಗ್ನನ್ಸಿ” ಎನ್ನುತ್ತಾರೆ.

೫. ನೀವು ಎತ್ತರವಾದ ತಾಯಿ ಅಥವಾ ಸ್ವಲ್ಪ ಹೆಚ್ಚು ತೂಕ ಇರುವ ತಾಯಿ ಆಗಿದ್ದರೆ, ನೀವು ಅವಳಿ-ಜವಳಿ ಹೆರುವ ಸಾಧ್ಯತೆಗಳು ಜಾಸ್ತಿ ಇರುತ್ತವೆ.

೬. ನಿಮ್ಮ ಹೃದಯ ದೊಡ್ಡದು! ಹೌದು, ನೀವು ಗರ್ಭ ಧರಿಸಿದ್ದಾಗ ನಿಮ್ಮ ಹೃದಯದ ವಿಸ್ತಾರತೆ ಹೆಚ್ಚುತ್ತದೆ. ನಿಮ್ಮ ಹೃದಯದ ಕುಹರಗಳು(ventricles) ನಿಮ್ಮ ಇಡೀ ದೇಹಕ್ಕೆ ಹಾಗು ಮಗುವಿಗೆ ರಕ್ತ ಒದಗಿಸಲು ದಪ್ಪ ಆಗುತ್ತವೆ.

೭. ಹೆಣ್ಣು ಶಿಶುವು ಗರ್ಭದಲ್ಲಿ ಇದ್ದಾಗಲೇ ಸಂತಾನ ಕಾರ್ಯಕ್ಕೆ ಬೇಕಾದ ಅಂಡಾಣುಗಳನ್ನ ಉತ್ಪತ್ತಿ ಮಾಡುತ್ತದೆ, ಆದರೆ ಗಂಡು ಮಕ್ಕಳ ವಿಷಯದಲ್ಲಿ ಅವರು ಪ್ರಾಯಕ್ಕೆ ಬರುವವರೆಗೂ ವೀರ್ಯ ಉತ್ಪತ್ತಿ ಮಾಡುವುದಿಲ್ಲ.

೮. ಬಯಕೆಗಳು ಮತ್ತೇನನ್ನೋ ಸೂಚಿಸಬಹುದು. ನಿಮಗೆ ಒಮ್ಮೊಮ್ಮೆ ಐಸ್ ಕ್ರೀಂ ಅನ್ನು ಉಪ್ಪಿನಕಾಯಿ ಜೊತೆ ತಿನ್ನಬೇಕು ಅನ್ನೋ ವಿಚಿತ್ರ ಬಯಕೆ ಬರಬಹುದು, ಇದು ಏಕೆ ಆಗುತ್ತದೆ ಎಂಬುದಕ್ಕೆ ಕಾರಣ ತಿಳಿದಿಲ್ಲ. ಅಕಸ್ಮಾತ್ ನಿಮಗೆ ಯಾವುದಾದರು ಕಬ್ಬಿಣದ ಕಂಬಿಯನ್ನ ಅಗಿದು ತಿನ್ನಬೇಕು ಎಂದೆನಿಸಿದರೆ ಅದು ನಿಮ್ಮಲ್ಲಿನ ಪೋಷಕಾಂಶಗಳ ಕೊರತೆಯನ್ನ ಸೂಚಿಸುತ್ತದೆ.

೯. ನಿಮಗೆ ಎಲ್ಲರು ಗರ್ಭಿಣಿ ಆಗಿದ್ದಾಗ ಒಳ್ಳೆಯದನ್ನೇ ಕೇಳಬೇಕು, ಮಾತಾಡಬೇಕು ಎನ್ನುವರು. ಅದಕ್ಕೆ ಕಾರಣ ಏನೆಂದರೆ ನಿಮ್ಮ ಹೊಟ್ಟೆಯೊಳಗಿನ ಮಗುವಿನ ನಿಮ್ಮ ಗರ್ಭಧಾರಣೆಯ ಅವಧಿಯ ಅರ್ಧದಲ್ಲೇ ಸಂಪೂರ್ಣವಾಗಿ ರೂಪುಗೊಂಡು ಕಾರ್ಯ ನಿರ್ವಹಿಸುವುದರಿಂದ ನಿಮ್ಮ ಮಗು ಅವುಗಳನ್ನ ಕೇಳಿಸಿಕೊಳ್ಳಬಹುದು ಎಂದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon