Link copied!
Sign in / Sign up
3
Shares

ಪ್ರೆಗ್ನನ್ಸಿ ಸಮಯದಲ್ಲಿ ಉಂಟಾಗಬಹುದಾದ 5 ಮುಜುಗರ ಮೂಡಿಸುವ ತೊಂದರೆಗಳು!

ಗರ್ಭಧಾರಣೆ ಅಂದರೆ ಪ್ರೆಗ್ನನ್ಸಿಯ ಸುತ್ತ ಇರುವ ಉತ್ಸಾಹ ಮತ್ತು ಕುತೂಹಲದ ಮಧ್ಯದಲ್ಲಿ ನಾವೆಲ್ಲರೂ ಮಾತಾಡಲು ಮರೆತುಬಿಡುವ ಒಂದು ವಿಷಯ ಎಂದರೆ - ಪ್ರೆಗ್ನನ್ಸಿ ಪ್ರಾಬ್ಲೆಮ್ಸ್. ಅಮ್ಮಂದಿರು ಗರ್ಭಧಾರಣೆ ಸಮಯದಲ್ಲಿ ಬಹಳಷ್ಟು “ಅಯ್ಯೋ” ಎನ್ನುವ ಕ್ಷಣಗಳು ಬಹಳವಿದ್ದು, ಗರ್ಭಿಣಿ ಹೆಂಗಸರು ಪೇಚಾಟಕ್ಕೆ ಸಿಲುಕಬಹುದು.

ಇದಲ್ಲದೆ ಬಹಳಷ್ಟು ದೈಹಿಕ ಬದಲಾವಣೆಗಳು ಉಂಟಾಗುವ ಕಾರಣ, ಇದರಿಂದ ಮುಜುಗರಕ್ಕೆ ತುತ್ತಾಗಿ ಇವುಗಳ ಬಗ್ಗೆ ಮಾತನಾಡದೆಯೇ ನಾವು ಉಳಿದುಬಿಡುತ್ತೇವೆ. ಹಾಗಿದ್ದರೆ ಅಂತವು ಯಾವುದೆಂದು ಹೇಳುತ್ತೀವಿ ಬನ್ನಿ :

 

೧. ಗ್ಯಾಸ್ ಸ್ಫೋಟ

ಬಹಳಷ್ಟು ಅಮ್ಮಂದಿರು ಎದುರಿಸುವ ಒಂದು ಸಾಮಾನ್ಯ ತೊಂದರೆ ಎಂದರೆ ಅದು ಸಮಯವಲ್ಲದ ಸಮಯದಲ್ಲಿ ತೇಗುವುದು ಅಥವಾ ಹೂಸು ಬಿಡುವುದು ಮತ್ತು ಅದನ್ನು ನಿಯಂತ್ರಿಸಲು ಆಗದೆ ಇರುವುದು. ಚಿಂತಿಸಬೇಡಿ, ನೀವು ಏಕಾಂಗಿಯಲ್ಲ, ಅಲ್ಲದೆ ನೀವು ಗರ್ಭಿಣಿ ಆಗಿರುವ ಕಾರಣ ಜನರಿಗೆ ಇದು ಅರ್ಥವಾಗುತ್ತದೆ. ಆದರೆ ಸ್ವಲ್ಪ ಇರಿಸುಮುರಿಸನ್ನು ಎದುರು ನೋಡುತ್ತಿರಿ.

 

೨. ಬೆವರು

ನಿಮ್ಮ ದೇಹವು ಈ ಸಮಯದಲ್ಲಿ ಮಾಡುವ ಹೆಚ್ಚುವರಿ ಕೆಲಸಗಳಿಂದ, ಹೆಚ್ಚುವರಿ ಶಾಖ ಉತ್ಪತ್ತಿ ಆಗುತ್ತದೆ. ಹೀಗಾಗಿ ಹೆಚ್ಚು ಬೆವರು ಹರಿಯುತ್ತದೆ. ಇದು ಇರಿಸುಮುರಿಸು ಉಂಟು ಮಾಡಬಹುದು, ಆದರೆ ಮೆಲ್ಲನೆ ನೀವು ಇದಕ್ಕೆ ಹೊಂದಿಕೊಳ್ಳುತ್ತೀರಿ.

 

೩. ಎಲ್ಲೆಡೆ ಮೂತ್ರ

ಮೂತ್ರನಾಳ ನಿಯಂತ್ರಿಸಲಾಗುವುದು ಬಹಳ ಹೆಂಗಸರು ಗರ್ಭಧಾರಣೆಯ ಸಮಯದಲ್ಲಿ ಅನುಭವಿಸುವಂತಹ ತೊಂದರೆ. ಗರ್ಭಿಣಿ ಆಗಿರುವ ಸಮಯದಲ್ಲಿ ನೀವು ಕೆಮ್ಮಿದಾಗ, ಸೀನಿದಾಗ, ಬಿಕ್ಕಳಿಕೆ ಅಥವಾ ನಕ್ಕಾಗ ಸೋರಿಕೆಯನ್ನು ಅನುಭವಿಸಬೇಕು. ನೀವು ಪ್ಯಾಂಟಿ ಲೈನರ್ಸ್ ಅನ್ನು ಬಳಸಬೇಕಾಗಿ ನಾವು ಶಿಫಾರಸು ಮಾಡುತ್ತೇವೆ. ಇದು ನೀವು ಹೊರಗಡೆ ಇದ್ದಾಗ ತುಂಬಾ ಎಚ್ಚರಿಕೆ ಇಂದ ಇರಬೇಕಾಗುವುದನ್ನು ತಪ್ಪಿಸುತ್ತದೆ.

 

೪. ಜೊಲ್ಲು ತುಂಬಿದ ಬಾಯಿ

ಪ್ರೆಗ್ನನ್ಸಿಯ ಒಂದು ವಿಚಿತ್ರವಾದ ಲಕ್ಷಣ ಎಂದರೆ ಅದು ಹೆಚ್ಚುವರಿ ಬಾಯಲ್ಲಿನ ಲಾಲಾರಸದ ಉತ್ಪಾದನೆ. ನಿಮಗೇ ಉಗಿದು ಉಗಿದು ಸಾಕಾಗುತ್ತದೆ. ಹೌದು, ಇದು ನಿಜ. ಆದರೆ, ಇದು ಒಂದು ಸಾಮಾನ್ಯವಾದ ಸಮಸ್ಯೆ ಆಗಿರುವುದರಿಂದ ನೀವಾಗಿಯೇ ಇದರೊಂದಿಗೆ ಬದುಕಿಕೊಂಡು ಹೋಗುವುದನ್ನು ಕಲಿಯುತ್ತೀರಿ.

 

೫. ಮೈಯೆಲ್ಲಾ ಕೂದಲು

ಕೂದಲ ಬೆಳವಣಿಗೆ ಗರ್ಭಧಾರಣೆಯಲ್ಲಿ ಹೆಚ್ಚು ಸಕ್ರಿಯವಾಗಿ ಆಗುವುದರಿಂದ, ಇದೆ ಕಾರಣಕ್ಕೆ ನಿಮಗೆ ಗರ್ಭಧಾರಣೆ ಸಮಯದಲ್ಲಿ ಹೊಳೆಯುವ ಮೀಸೆ ನಿಮ್ಮ ಮುಖದ ಮೇಲೆ ಮೂಡಬಹುದು. ದೇಹದ ಮೇಲಿನ ಹೆಚ್ಚುವರಿ ಕೂದಲನ್ನ ಸುರಕ್ಷಿತವಾಗಿ ತೆಗೆಯಲು ಸೂಕ್ತ ದಾರಿಗಳು ಎಂದರೆ ಅವು ವಾಕ್ಸಿಂಗ್ ಮತ್ತು ಟ್ವೀಸಿಂಗ್. ಆದರೆ ಇನ್ನೊಂದು ಒಳ್ಳೆಯ ವಿಷಯ ಎಂದರೆ, ನಿಮ್ಮ ಕೂದಲು ಇನ್ನಷ್ಟು ಎದ್ದು ಕಾಣುತ್ತವೆ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon